ಧಾರವಾಡ(ಫೆ.25): ಅದು ಜ.15 ರಂದು ಮುಂಜಾನೆ ಆ ರಸ್ತೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 12 ಜನರ ಬಲಿ ಪಡೆದಿತ್ತು. ಈ ಅಪಘಾತದ ಸುದ್ದಿ ರಾಷ್ಟ್ರವ್ಯಾಪಿ ಹಬ್ಬಿತ್ತು. ಆ ಆ್ಯಕ್ಸಿಡೆಂಟ್ ಸುದ್ದಿ ಎಲ್ಲರಲ್ಲಿ ನಡುಕ ಹುಟ್ಟಿಸಿದ್ದಲ್ಲದೇ ಆ ರಸ್ತೆಯಲ್ಲಿ ಸಂಚರಿಸಲು ಹಿಂದೇಟು ಹಾಕುವಂತೆ ಸಹ ಮಾಡಿತ್ತು. ಬೈಪಾಸ್ ರಸ್ತೆ ಇಕ್ಕಟ್ಟಿನಿಂದಲೇ ಈ ಅಪಘಾತ ನಡೆದಿದೆ ಎಂದು ಎಲ್ಲರ ಆರೋಪ ಸಹ ಮಾಡಿದರು. ಅಲ್ಲದೇ ರಸ್ತೆ ಅಗಲೀಕರಣ ಮಾಡುವಂತೆ ಬಿದಿಗಿಳಿದು ಪ್ರತಿಭಟನೆ ನಡೆಸಿದರು. ಆದ್ರೆ ಈ ಅಪಘಾತದ ಬಗ್ಗೆ ಸುಪ್ರೀಂಕೋರ್ಟ್ ಗೆ ವರದಿ ನೀಡುವಂತೆ ಕೇಳಿತ್ತು. ಆದ್ರೆ ವರದಿ ನೋಡಿದ್ರೆ ಎಂತವರೂ ಅಚ್ಚರಿಪಡುತ್ತಾರೆ. ಹೌದು ರಸ್ತೆ ಸರಿ ಇದೆ, ಆದ್ರೆ ವಾಹನ ಚಾಲಕನ ತಪ್ಪಿನಿಂದ ಈ ಅಪಘಾತವಾಗಿದೆ ಎಂದು ವರದಿ ನೀಡಲಾಗಿದೆ. ಅಲ್ಲದೇ ಈ ಬೈಪಾಸ್ ನಲ್ಲಿ ಯಾರೂ ಮೃತಪಟ್ಟಿಲ್ಲ ಎಂದು ವರದಿ ನೀಡಲಾಗಿದೆ.
ಅವರೆಲ್ಲ ದಾವಣಗೆರೆಯಿಂದ ಗೋವಾಕ್ಕೆ ಟೆಂಪೋ ಟ್ರಾವೆಲರ್ ನಲ್ಲಿ ಪ್ರಯಾಣ ಮಾಡುತ್ತಿದ್ದ ಪ್ರತಿಷ್ಠಿತ ವೈದ್ಯರು ಹಾಗೂ ವೈದ್ಯರ ಪತ್ನಿ ಸೇರಿದಂತೆ ರಾಜಕೀಯ ಕುಟುಂಬ ಹಿನ್ನೆಲೆ ಮಹಿಳೆಯರು. ಅವರು ಅಂದುಕೊಂಡಂತೆ ನಡೆದಿದ್ರೆ ಗೋವಾ ತಲುಪುತ್ತಿದ್ರು. ಆದ್ರೆ ವಿಧಿಯಾಟದಿಂದವೇ ಬೇರೆಯಾಗಿತ್ತು. ಧಾರವಾಡ ತಲುಪುವ ಮುನ್ನವೇ ಹುಬ್ಬಳ್ಳಿ-ಧಾರವಾಡ ಬೈಪಾಸ್ ನಲ್ಲಿ ಟೆಂಪೊ ಟ್ರಾವೆಲರ್ ಗೆ ಎದುರಿಗೆ ಬಂದ ಟಿಪ್ಪರ್ ಡಿಕ್ಕಿ ಹೊಡೆದು ಭೀಕರ ಅಪಘಾತವಾದ ಹಿನ್ನೆಲೆ 12 ಜನರು ಸಾವನ್ನಪ್ಪಿದ್ರು. ಈ ಘಟನೆ ನಡೆದದ್ದು ಜನವರಿ 15 ರಂದು ಬೆಳಗಿನ ಜಾವ. ಭೀಕರ ರಸ್ತೆ ಅಪಘಾತವಾದ ಬಳಿಕ ಮೃತರ ಸಂಬಂಧಿಗಳು ದಾವರಗೆರೆಯಿಂದ ಬಂದು ಬೈಪಾಸ್ ರಸ್ತೆ ತಡೆದು ರಸ್ತೆ ಅಗಲಿಕರಣ ಮಾಡುವಂತೆ ಪ್ರತಿಭಟನೆ ನಡೆಸಿದ್ರು. ರಸ್ತೆಯ ಇಕ್ಕಟ್ಟಿನಿಂದಲೇ ಈ ಅಪಘಾತವಾಗಿದೆ ಎಂದು ಹೋರಾಟಗಾರರು ಹಾಗೂ ಮೃತರ ಸಂಬಂಧಿಗಳಿಂದ ಆರೋಪಗಳು ಕೇಳಿ ಬಂದಿದ್ದವು.
ರಾಜ್ಯದ ಅಕ್ರಮ ಕಲ್ಲುಗಣಿಗಾರಿಕೆ ತಡೆಯಲು ಸರ್ಕಾರದಿಂದ ಸಾಧ್ಯವೇ?; ವಾಟಾಳ್ ನಾಗರಾಜ್ ಪ್ರಶ್ನೆ
ಈ ಹಿನ್ನೆಲೆಯಲ್ಲಿ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಸುಪ್ರೀಂ ಕೋರ್ಟ್, ಘಟನೆ ಬಗ್ಗೆ ಮತ್ತು ರಸ್ತೆಯ ಬಗ್ಗೆ ಫೆಬ್ರವರಿ 15ರೊಳಗೆ ವರದಿ ನೀಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸುಪ್ರಿಂ ಕೋರ್ಟ್ ಗೆ ವರದಿ ನೀಡಿದೆ. ಅದರಲ್ಲಿ ಪ್ರಸ್ತಾಪಿಸಲಾದ ಅಂಶಗಳನ್ನು ನೋಡಿದರೆ ಎಂತವರಿಗೂ ಶಾಕ್ ಆಗುತ್ತೆ. ಹೌದು ರಸ್ತೆ ಸರಿಯಾಗಿದೆ, ಆದ್ರೆ ಟೆಂಪೊ ಟ್ರಾವೆಲರ್ ವಾಹನ ಚಾಲಕನ ನಿರ್ಲಕ್ಷ್ಯದಿಂದ ಈ ಅಪಘಾತವಾಗಿದೆ ಅಂತಾ ಹೇಳಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಜನವರಿ 15 ರಂದು ನಡೆದ ಅಪಘಾತದ ಸ್ಥಳದಲ್ಲಿ 20 ವರ್ಷಗಳಲ್ಲಿ ಯಾವುದೇ ಅಪಘಾತ ಸಂಭವಿಸಿಲ್ಲ ಎಂದಿದ್ದಾರೆ. ಆದ್ರೆ ಬೈಪಾಸ್ ರಸ್ತೆ ನಿರ್ಮಾಣವಾದ 23 ವರ್ಷದಲ್ಲಿ 1200 ಜನ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆ ಇಕ್ಕಟಿನಿಂದ ಕೂಡಿದೆ ಇದರಿಂದಲೇ ಹಲವು ಅಪಘಾತವಾಗಿವೆ. ಅಲ್ಲದೇ ಬೆಂಗಳೂರಿನಿಂದ ಪುಣೆವರೆಗೆ 6 ಪಥ ರಸ್ತೆ ಇದೆ. ಆದ್ರೆ ಈ ಬೈಪಾಸ್ನಲ್ಲಿ ಮಾತ್ರ ದ್ವಿಪಥ ರಸ್ತೆ ಇದೆ. ಆದ್ರೆ ವಾಹನ ಸವಾರರು ವೇಗ ಹಾಗೂ ರಸ್ತೆಯ ಇಕ್ಕಟ್ಟನ್ನು ಅರಿತರೂ ಸಹ ಹಲವಾರು ಅಪಘಾತಗಳಾಗಿವೆ. ಆದ್ರೆ ಸುಪ್ರೀಂ ಕೋರ್ಟ್ ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿ ನೀಡಿರುವ ವರದಿ ನೋಡಿದ್ರೆ. ಈ ರಸ್ತೆಯ ಗುತ್ತಿದಾರನ ಪರವಾದ ವರದಿ ಎಂದು ಕಾಣುತ್ತಿದೆ ಎಂದು ಹೋರಾಟಗಾರರು ಹಾಗೂ ನ್ಯಾಯವಾದಿ ಪಿ.ಎಚ್. ನೀರಲಕೇರಿ ಆರೋಪ ಮಾಡುತ್ತಿದ್ದಾರೆ.
ಈ ರಸ್ತೆ ಅಪಘಾತವಾದ ಬಳಿಕ ರಸ್ತೆ ಅಗಲೀಕರಣಕ್ಕೆ ಕೇಂದ್ರ ಸರಕಾರ 1200 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ ಎನ್ನಲಾಗುತ್ತಿದೆ. ಆದ್ರೆ ರಸ್ತೆ ಸರಿ ಇದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸುಪ್ರೀಂ ಕೊರ್ಟ್ ಗೆ ವರದಿ ನೀಡಿದೆ ಅಂದ್ರೆ, ಮತ್ತೇಕೆ ರಸ್ತೆ ಅಗಲಿಕರಣಕ್ಕೆ ಕೋಟಿ ಕೋಟಿ ಹಣ ಖರ್ಚು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಕಾಡುತ್ತಿದೆ. ಇಂತಹ ದೊಡ್ಡ ಘಟನೆ ನಡೆದು ಸಾವಿರಾರು ಕೋಟಿ ಹಣ ಖರ್ಚು ಮಾಡಿ ರಸ್ತೆ ಅಗಲೀಕರಣ ಮಾಡಲು ಕೇಂದ್ರ ಸಚಿವರು ಮುಂದಾಗಿರುವುದು ನಮ್ಮ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ಗೆ ಗೊತ್ತಿಲ್ಲ ಅಂತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ