ಧಾರವಾಡ(ಮಾ.31): ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆಸಿಗದ ಕಾರಣ ಬೆಳೆಗಳಿನ್ನು ದಲ್ಲಾಳಿಗಳಿಗೆ ಮಾರಾಟ ಮಾಡುತ್ತಿದ್ದರು. ಇದರಿಂದ ರೈತ ವರ್ಗ ನಷ್ಟಕ್ಕೆ ಸಿಲುಕುತ್ತಿದೆ ಎಂದು ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಿದೆ. ಸದ್ಯ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ರೈತರು ಬೆಳೆದ ಕಡಲೆ ಬೆಳೆಗಳ ನೋಂದಣಿ ಹಾಗೂ ಮಾರಾಟಕ್ಕೆ ಧಾರವಾಡ ಜಿಲ್ಲೆಯಲ್ಲಿ ಒಟ್ಟು 16 ಕೇಂದ್ರಗಳನ್ನು ತೆರೆಲಾಗಿದೆ. ಆದರೆ, ಜಿಲ್ಲೆಯ ರೈತರು ಮಾತ್ರ ಬೆಂಬಲ ಬೆಲೆ ಯೋಜನೆಯಡಿ ಮಾರಾಟಕ್ಕೆ ಹಿಂದೆಟು ಹಾಕುತ್ತಿದ್ದಾರೆಯೇ ಎಂಬ ಪ್ರಶ್ನೆ ಮೂಡುತ್ತಿದೆ.
ಧಾರವಾಡ ಜಿಲ್ಲೆಯಲ್ಲಿ 2019-2002 ನೇ ಸಾಲಿನಲ್ಲಿ 24 ಸಾವಿರಕ್ಕೂ ಅಧಿಕ ರೈತರು ಬೆಂಬಲ ಬೆಲೆ ಯೋಜನೆಯಡಿ ಕಡಲೆ ಮಾರಾಟಕ್ಕೆ ನೋಂದಣಿ ಮಾಡಿಸಿದ್ದರು. ಇದರಿಂದ 2.08 ಲಕ್ಷ ಕ್ವಿಂಟಲ್ ಕಡಲೆ ಖರೀದಿ ಮಾಡುವ ಜೊತೆಗೆ ರೈತರಿಗೆ ರೂ.101 ಕೋಟಿ ಖಾತೆಗೆ ಪಾವತಿ ಮಾಡಿತ್ತು.
ಕಳೆದ ಎರಡು ವರ್ಷಗಳಿಂದ ಅತಿವೃಷ್ಟಿಯಿಂದ ರೈತ ವರ್ಗ ಅಕ್ಷರಶಃ ನಲುಗಿದೆ. ಕೇಂದ್ರ ಸರ್ಕಾರವು ರೈತರ 16 ಬೆಳೆಗಳಿಗೆ ಬೆಂಬಲ ಬೆಲೆ ಯೋಜನೆ ಘೋಷಣೆ ಮಾಡಿದೆ. ಅದರಲ್ಲಿ ಕಡಲೆ ಬೆಳೆಯೂ ಸಹ ಒಂದು. ಆದರೆ ಈ ಬೆಳೆ ಮಾರಾಟಕ್ಕೆ ಪ್ರಸಕ್ತ ರೈತರು ನಿರುತ್ಸಾಹ ಕಾಣಿಸುತ್ತಿದೆ. ಕಡೆಲೆ ಖರೀದಿ ನೋಂದಣಿ ಕಾರ್ಯ ಫೆ.15 ರಿಂದ ಆರಂಭಿಸಿದೆ. ಪ್ರಸ್ತುತ ಈವರೆಗೆ 8000 ಕ್ಕೂ ಅಧಿಕ ರೈತರು ಕಡಲೆ ಮಾರಾಟಕ್ಕೆ ನೋಂದಣಿ ಮಾಡಿಸಿದ್ದಾರೆ.
ಸದ್ಯ ಎಫ್‌ಎಕ್ಯೂ ಗುಣಮಟ್ಟದ ಕಡಲೆ ಕಾಳುಗಳನ್ನು ಮಾತ್ರವೇ ಕೇಂದ್ರದಲ್ಲಿ ಖರೀದಿಸುತ್ತಿದೆ. ಬೆಂಬಲ ಬೆಲೆ ಯೋಜನೆಯಡಿ ಕ್ವಿಂಟಲ್‌ಗೆ ರೂ. 5100 ರಂತೆ ಪ್ರತಿ ಎಕರೆಗೆ ನಾಲ್ಕು ಕ್ವಿಂಟಲ್ ನಂತೆ ಓರ್ವ ರೈತನಿಂದ ( ಖಾತೆಯಿಂದ ) 15 ಕ್ವಿಂಟಲ್‌ವರೆಗೆ ಖರೀದಿಸಲಾಗುತ್ತಿದೆ.
Coronavirus: ಬೆಂಗಳೂರಿನಲ್ಲಿ ಕೊರೋನಾ ಸೋಂಕು ಹೆಚ್ಚಾಗಲು ಕಾರಣವೇನು ಗೊತ್ತಾ?
ಸರ್ಕಾರ ಖರೀದಿ ಮಾನದಂಡ ಗುರಿಪಡಿಸಿದೆ. ಅದರನ್ವಯ ಕಡಲೆ ಬೆಳೆಯನ್ನು ಖರೀದಿಸಲಸಲಾಗುತ್ತಿದೆ. ಜಿಲ್ಲೆಯ ಕೆಲವಡೆ ಸುರಿದ ಅಕಾಲಿಕ ಮಳೆ ಸುರಿದಿದೆ. ಇಂಥ ಸಂದರ್ಭದಲ್ಲಿ ಕಡಲೆ ಬೆಳೆ ಮೇಲೆ ಕೊಂಚ ಪರಿಣಾಮ ಬಿರಿದೆ. ಹೀಗಾಗಿ ರೈತರು ನೋಂದಣಿ ಮಾಡಿಸಿಲ್ಲ ಎಂಬುದು ರೈತ ಮುಖಂಡರ ವಾದವಾಗಿದೆ.
ಕಡಲೆ ಬೆಳೆಯನ್ನು ಹೆಚ್ಚು ದಿನ ಸಂಗ್ರಹಿಸಿಡುವುದು ಕಷ್ಟ. ರಾಶಿ ಮಾಡಿದಾಕ್ಷಣ ರೈತರು ಮಾರಾಟಕ್ಕೆ ತರುತ್ತಾರೆ. ಅದರಲ್ಲೂ ಖರೀದಿ ಕೇಂದ್ರಲ್ಲಿ ಗುಣಮಟ್ಟದ ಕಾಳುಗಳನ್ನು ಮಾತ್ರ ಖರೀದಿಸುವುದರಿಂದ ಸಣ್ಣ ರೈತರು ಖರೀದಿ ಕೇಂದ್ರಗಳಿಗೆ ಕಡಲೆ ಮಾರಾಟದ ಗೋಜಿಗೆ ಹೋಗುವುದಿಲ್ಲೆಂಬ ಮಾತು ರೈತ ವರ್ಗದ್ದಾಗಿದೆ.
ಬೆಂಬಲ ಬೆಲೆಯಡಿ ಕ್ವಿಂಟಲ್‌ಗೆ ರೂ.5.100 ಖರೀದಿಸಲಾಗುತ್ತಿದೆ. ಆದರೆ, ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ 4100 ರಿಂದ 5000 ರವರೆಗೆ ಬೆಲೆ ಇದೆ. ಬೆಂಬಲ ಬೆಲೆಯಡಿ ಕಡಲೆ ಮಾರಾಟ ಮಾಡಿದರೆ, ಹಣ ಪಡೆಯಲು ಕನಿಷ್ಠ ಎರಡು ತಿಂಗಳು ಕಾಯಬೇಕು. ಆದರೆ, ಮಾರುಕಟ್ಟೆಯಲ್ಲಿ ಮಾರಾಟ ಮಾಡಿದರೆ, ಕ್ಷಣದಲ್ಲಿ ಹಣ ಲಭಿಸುತ್ತದೆ. ಹೀಗಾಗಿ ಸಾಕಷ್ಟು ರೈತರು ಕೃಷಿ ಉತ್ಪನ್ನ ಮಾರುಕಟ್ಟೆ ಹಾಗೂ ಬೇರೆ ವ್ಯಾಪಾರಿಗಳಿಗೆ ಮಾರುತ್ತಿದ್ದಾರೆ ಎನ್ನುತ್ತಾರೆ ರೈತ ಲಚ್ಚಪ್ಪ ಹೊಂಬಳ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ