ನಾಡಿನ ಪ್ರಸಿದ್ಧ ಸುತ್ತೂರು ಜಾತ್ರೆಯಲ್ಲಿ ಮೇಳೈಸಿದ ಭಕ್ತಿಭಾವದ ರಥೋತ್ಸವ, ಗ್ರಾಮೀಣ ಕ್ರೀಡೆಗಳ ಕಲರವ..!

ಸುತ್ತೂರು ಜಾತ್ರೆ ಅಂದ್ರೆ ಅಲ್ಲಿ ಗ್ರಾಮೀಣ ಸೊಗಡು ಇಲ್ಲದೆ ಇರಲು ಸಾಧ್ಯವೇ ಇಲ್ಲ. ಈ ಬಾರಿ ಸಹ ಜಾತ್ರ ವಿಶೇಷವಾಗಿ ಹಗ್ಗಜಗ್ಗಾಟ, ಕೆಸರುಗದ್ದೆ ಓಟ, ಗೊಬ್ಬರದ ಮೂಟೆ ಹೆಗಲ ಮೇಲೆ ಹೊತ್ತು ಓಡುವ ಆಟಗಳು ನೋಡುಗರನ್ನ ರಂಜಿಸಿತು. ಅಪರೂಪದ ಗ್ರಾಮೀಣ ಆಟಗಳನ್ನ ಆಡಿದ ಈ ಭಾಗದ ಜನರು ಈ ಮೂಲಕ ಜಾತ್ರೆಗೆ ಮತ್ತಷ್ಟು ಮೆರುಗು ತಂದರು. 

ಮೈಸೂರಿನ ಸುತ್ತೂರು ಜಾತ್ರಾ ಮಹೋತ್ಸವ.

ಮೈಸೂರಿನ ಸುತ್ತೂರು ಜಾತ್ರಾ ಮಹೋತ್ಸವ.

  • Share this:
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಸುತ್ತೂರಿನಲ್ಲಿ ನಡೆಯುತ್ತಿರೋ  ಆದಿಜಗದ್ಗುರು ಶವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ ಮೂರನೇ ದಿನವಾದ ಇಂದು ಸಂಭ್ರಮದ ರಥೋತ್ಸವ ನೇರವೇರಿದೆ. ಭಕ್ತಿ ಭಾವದ ರಥೋತ್ಸವದಲ್ಲಿ ಹಣ್ಣು ಜವನ ಎಸೆದು ಪ್ರಾರ್ಥಿಸಿದ ನವ ಜೊಡಿಗಳು ಸುತ್ತೂರು ಸಂಪ್ರದಾಯವನ್ನ ಮುಂದುವರೆಸಿದ್ದಾರೆ. ರಥೋತ್ಸವಕ್ಕೆ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳೂ ಚಾಲನೆ ನೀಡಿದ್ದರೆ, ಮತ್ತೊಂದು ಕಡೆ ಕೆಸರು ಗದ್ದೆ ಓಟದ ಮೂಲಕ ಗ್ರಾಮೀಣ ಕ್ರೀಡೆ ದನಗಳ ಜಾತ್ರೆಯೂ ರಂಗು ಪಡೆದುಕೊಂಡಿತ್ತು ಮೂರನೆ ದಿನ ಸುತ್ತೂರು ಜಾತ್ರೆ  ಹೇಗಿತ್ತು? ಇಲ್ಲಿದೆ ಅದರ ಸೊಬಗಿನ ವೈಭವ..!

ಮೈಸೂರು ಜಿಲ್ಲೆಯ ನಂಜನಗೂಡಿನ ಸುತ್ತೂರಿನಲ್ಲಿ ಇವತ್ತು ರಥೋತ್ಸವದ ಸಂಭ್ರಮ ಮನೆ ಮಾಡಿತ್ತು. 6 ದಿನಗಳ ಜಾತ್ರೆಯಲ್ಲಿ ಮೂರನೇ ದಿನವಾದ ಇಂದು ಹಲವು ಕಾರ್ಯಕ್ರಮಗಳು ಕಣ್ಮನ ಸೆಳೆಯಿತು. ಇತ್ತ ಗ್ರಾಮೀಣ ಕ್ರೀಡೆಗಳು ಯುವಕರನ್ನ ಆಕರ್ಷಣೆ ಮಾಡಿ ನೋಡುಗರನ್ನ ರಂಜಿಸಿದರೆ.ದನಗಳ ಜಾತ್ರೆಯಲ್ಲಿ ಕಂಡ ಅಪರೂಪದ ದನಗಳು ಎಲ್ಲರನ್ನ ಹುಬ್ಬೆರಿಸುವಂತೆ ಮಾಡಿದವು.

ಇದಕ್ಕು ಮುನ್ನ ಬೆಳಗ್ಗೆ 10.30ಕ್ಕೆ ಸರಿಯಾಗಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು,  ಆದಿಜಗದ್ಗುರು ಶ್ರೀ ಶಿವರಾತ್ರಿ ಶಿವಯೋಗಿಗಳ ಉತ್ಸವ ಮೂರ್ತಿಯನ್ನ ರಥದಲ್ಲಿರಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ರಥೋತ್ಸವಕ್ಕೆ ಕೈಮುಗಿದು ನಮಿಸಿದ್ರೆ, ಇತ್ತ ಡೊಳ್ಳು ಕುಣಿತ, ನಗಾರಿ, ಗಾರುಡಿ ಗೊಂಬೆಗಳು ಮೆರವಣಿಗೆಯಲ್ಲಿ ಸಾಗಿ ನೋಡುಗರ ಕಣ್ಮನ ಸೆಳೆಯುವಂತೆ ಮಾಡಿತು. ಬಳಿಕ ವೇದಿಕೆ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಸರ್ವ ಧರ್ಮದ ಗುರುಗಳು ಭಾಗಿಯಾಗಿ ಎಲ್ಲರು ಒಂದೇ ಎಂಬ ಸಂದೇಶ ಸಾರಿದರು.

ವೈಭವದ ಸುತ್ತೂರು ಜಾತ್ರೆಗೆ ಆಗಮಿಸಿದ್ದ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ನಮಗು ಈ ಜಾತ್ರೆಗೂ ಅವಿನಾಭಾವ ಸಂಬಂಧ ಇದೆ  ಮೆಚ್ಚುಗೆ ವ್ಯಕ್ತಪಡಿಸಿದರು.

ಜಾತ್ರೆಯಲ್ಲಿ ಮೇಳೈಸಿದ ಗ್ರಾಮೀಣ ಆಟಗಳ ಸೊಗಡು : 

ಸುತ್ತೂರು ಜಾತ್ರೆ ಅಂದ್ರೆ ಅಲ್ಲಿ ಗ್ರಾಮೀಣ ಸೊಗಡು ಇಲ್ಲದೆ ಇರಲು ಸಾಧ್ಯವೇ ಇಲ್ಲ. ಈ ಬಾರಿ ಸಹ ಜಾತ್ರ ವಿಶೇಷವಾಗಿ ಹಗ್ಗಜಗ್ಗಾಟ, ಕೆಸರುಗದ್ದೆ ಓಟ, ಗೊಬ್ಬರದ ಮೂಟೆ ಹೆಗಲ ಮೇಲೆ ಹೊತ್ತು ಓಡುವ ಆಟಗಳು ನೋಡುಗರನ್ನ ರಂಜಿಸಿತು. ಅಪರೂಪದ ಗ್ರಾಮೀಣ ಆಟಗಳನ್ನ ಆಡಿದ ಈ ಭಾಗದ ಜನರು ಈ ಮೂಲಕ ಜಾತ್ರೆಗೆ ಮತ್ತಷ್ಟು ಮೆರುಗು ತಂದರು.

ಜಾತ್ರೆಯಲ್ಲಿ ಗ್ರಾಮೀಣ ಆಟಗಳನ್ನು ಆಡುವುದು ಸುತ್ತೂರಿನಲ್ಲಿ ದಶಕಗಳಿಂದ ಒಂದು ಶ್ರೀಮಂತ ಸಂಪ್ರದಾಯದಂತೆ ಆಚರಿಸಿಕೊಂಡು ಬರಲಾಗುತ್ತಿದೆ. ಗ್ರಾಮೀಣ ಆಟಗಳನ್ನು ಮುಂದಿನ ಪೀಳಿಗೆಗೆ ಧಾಟಿಸುವುದು ಮತ್ತು ನಗರವಾಸಿ ಜನರಿಗೆ ಈ ಆಟಗಳನ್ನು ಪರಿಚಯಿಸುವುದು ಈ ಸಂಪ್ರದಾಯದ ಉದ್ದೇಶ. ಇದೇ ಕಾರಣಕ್ಕೆ ರಾಜ್ಯದಲ್ಲೇ ಪ್ರಸಿದ್ಧ ಜಾತ್ರೆ ಎಂದು ಕೊಂಡಾಡಲ್ಪಡುವ ಸುತ್ತೂರು ಜಾತ್ರೆ ಮತ್ತಷ್ಟು ಮಹತ್ವ ಪಡೆದುಕೊಂಡಿದೆ. ಅಲ್ಲದೆ, ರಾಜ್ಯದ ಪ್ರಮುಖ ಜಾತ್ರೆಗಳಲ್ಲೊಂದಾಗಿ ಸ್ಥಾನ ಪಡೆದುಕೊಂಡಿದೆ ಎಂದರೂ ತಪ್ಪಾಗಲಾರದು.

ಇದನ್ನೂ ಓದಿ : ವರ್ಗಾವಣೆಯಾದರೂ ಕುರ್ಚಿ ಬಿಡದ ಅಧಿಕಾರಿ, ರಾಯಚೂರಿನಲ್ಲಿ ಒಂದೇ ಹುದ್ದೆಗೆ ಇಬ್ಬರು ಅಧಿಕಾರಿಗಳು..!
First published: