ಬೆಂಗಳೂರು: ನಾಡಿನೆಲ್ಲೆಡೆ ಮಹಾಶಿವರಾತ್ರಿ (Maha Shivaratri) ಸಂಭ್ರಮ ಕಳೆಗಟ್ಟಿದೆ. ಭಕ್ತರು ದೇವಾಲಯಗಳಲ್ಲಿ (Temples) ಸರತಿ ಸಾಲಿನಲ್ಲಿ ನಿಂತು ಶಿವ ದರ್ಶನ ಪಡೆದು ಪುನೀತರಾದರು. ಬೆಂಗಳೂರಿನ ಗವಿಗಂಗಾಧರ ದೇವಸ್ಥಾನಕ್ಕೆ (Gavigangadhara Temple) ಭಕ್ತರ ದಂಡೇ ಹರಿದು ಬಂದಿತ್ತು. ರಾತ್ರಿಯಿಡೀ ಗಂಗಾಧರೇಶ್ವರನಿಗೆ ವಿಶೇಷ ಪೂಜೆ, ಅಭಿಷೇಕ ಮಾಡಲಾಯ್ತು. ಭಕ್ತರು ಜಾಗರಣೆ ಮಾಡುತ್ತಾ ಶಿವನಾಮ ಸ್ಮರಣೆ (Shivanama Chants) ಮಾಡಲಾಯ್ತು. ಕಾಡುಮಲ್ಲೇಶ್ವರ ದೇವಸ್ಥಾನಕ್ಕೆ (Kadu Malleshwara Temple) ಸಾಗರೋಪಾದಿಯಲ್ಲಿ ಭಕ್ತರು ಆಗಮಿಸಿ ಶಿವನ ದರ್ಶನ ಪಡೆದರು. ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಜಾಗರಣೆಯಲ್ಲಿ ಭಾಗಿಯಾದ್ರು. ಕಿಲೋಮೀಟರ್ ಗಟ್ಟಲೇ ಸಾರತಿ ಸಾಲಿನಲ್ಲಿ ನಿಂತು ಶಿವನ ದರ್ಶನ ಪಡೆದ್ರು. ರಾತ್ರಿಪೂರ್ತಿ ಯಕ್ಷಗಾನ ಹಾಗೂ ಸಂಗೀತ ಕಾರ್ಯಕ್ರಮ ನಡೆಯಿತು. ರಾತ್ರಿ ನೇರವೇರಿದ ಕಲ್ಯಾಣೋತ್ಸವದಲ್ಲಿ ಭಕ್ತರು ಭಾಗಿಯಾಗಿ ಪುನೀತರಾದ್ರು.
ಶಿವರಾತ್ರಿ ಹಿನ್ನೆಲೆ ಬಂಡೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಲಂಕಾರ ಮಾಡಲಾಗಿದೆ. ದೇವಸ್ಥಾನಕ್ಕೆ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ. ರಾತ್ರಿ ಜಾಗರಣೆ, ಶಿವನಾಮ ಸ್ಮರಣೆ ನಡೆಯಲಿದೆ. ಕೊರೋನಾ ಗೆದ್ದು ದೇಶ ಸುಭೀಕ್ಷವಾಗಿದೆ.. ಎಲ್ಲರೂ ಸಾಮರಸ್ಯದಿಂದ ಬಾಳೋಣ ಎಂದು ಏಕದಳ ಬಿಲ್ವಾ ಬಂಡೆಮಠದ ಹಿರಿಯ ಶ್ರೀಸ್ವಾಮೀಜಿ ಶ್ರೀ ಸಚ್ಚಿದಾನಂದ ಸ್ವಾಮೀಜಿ ಹೇಳಿದ್ದಾರೆ.
ಓಲ್ಡ್ ಏರ್ಪೋರ್ಟ್ ರೋಡ್ನಲ್ಲಿರೋ ಶಿವೋಂ ಶಿವ ದೇವಸ್ಥಾನದಲ್ಲಿ ಶಿವರಾತ್ರಿ ಸಂಭ್ರಮ ಜೋರಾಗಿತ್ತು. 65 ಅಡಿಯ ಶಿವನ ಮೂರ್ತಿಗೆ ಸಾರ್ವಜನಿಕರು ಸಾಮೂಹಿಕ ಮಂಗಳಾರತಿ ಪೂಜೆ ಮಾಡಲಾಯ್ತು. ರಸ್ತೆಯುದ್ದಕ್ಕೂ ಕ್ಯೂನಲ್ಲಿ ನಿಂತು ರಾತ್ರಿಯಿಡೀ ಶಿವನ ಆರಾಧನೆ ಮಾಡಿದ್ರು.
ಶಿವನ ಹಾಡು ಹಾಡಿದ ಪ್ರಹ್ಲಾದ್ ಜೋಶಿ
ಹುಬ್ಬಳ್ಳಿಯಲ್ಲಿ ಮಹಾ ಶಿವರಾತ್ರಿ ಸಡಗರ ಕಳೆಕಟ್ಟಿತ್ತು. ಶಿವರಾತ್ರಿ ಹಿನ್ನೆಲೆ ಹುಬ್ಬಳ್ಳಿ - ಜಿಮ್ ಖಾನಾ ಮೈದಾನದಲ್ಲಿ ಶಿವರಾತ್ರಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹುಬ್ಬಳ್ಳಿಯಲ್ಲಿ ಈ ಬಾರಿ ಮೋದಿ ಅವರ ಪ್ರೇರಣೆಯಿಂದ ಕೇದಾರನಾಥ ಶಿವಲಿಂಗ ದೇಗುಲ ನಿರ್ಮಾಣ ಮಾಡಿದ್ದೇವೆ ಅಂತಾ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ರು.
ಶಿವರಾತ್ರಿ ಹಿನ್ನೆಲೆ ಸಾಂಸ್ಕೃತಿಕ, ಆಧ್ಯಾತ್ಮಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಖ್ಯಾತ ಗಾಯಕಿ ಅನನ್ಯ ಭಟ್ ಮತ್ತು ನವೀನ್ ಹಾಡಿಗೆ ಭಕ್ತರು ಫಿದಾ ಆದ್ರು. ಅಲ್ಲಿ ನೆರೆದಿದ್ದವರು ಅಪ್ಪು ಅಜರಾಮರ ಹಾಡಿಗೆ ಮೊಬೈಲ್ ಟಾರ್ಚ್ ಹಾಕಿ ನಮನ ಸಲ್ಲಿಸಿದ್ರು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಜೊತೆ ಸಿಎಂ ಬೊಮ್ಮಾಯಿ ಸಂಗೀತ ಕಾರ್ಯಕ್ರಮ ವೀಕ್ಷಿಸಿದರು. ಇದೇ ವೇಳೆ ಪ್ರಹ್ಲಾದ್ ಶಿವನ ಹಾಡು ಹೇಳಿದರು.
ಧರ್ಮಸ್ಥಳದಲ್ಲಿ ಮಹಾಶಿವರಾತ್ರಿ ಸಂಭ್ರಮ
ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಮಹಾಶಿವರಾತ್ರಿಯನ್ನ ಸಂಭ್ರಮದಿಂದ ಆಚರಿಸಲಾಯ್ತು. ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸಿ ದೇವರ ದರ್ಶನ ಪಡೆದ್ರು ಶಿವಪಂಚಾಕ್ಷರಿ ಪಠಣಕ್ಕೆ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಚಾಲನೆ ನೀಡಿದ್ರು.
ನಿನ್ನೆ ಸಂಜೆ 6 ಗಂಟೆಯಿಂದ ರಾತ್ರಿಯಿಡಿ ಶ್ರೀ ಕ್ಷೇತ್ರದಲ್ಲಿ ಶಿವಜಾಗರಣೆ ಮಾಡಲಾಯ್ತು. ಪಾದಯಾತ್ರೆ ಮೂಲಕವೂ 50 ಸಾವಿರಕ್ಕೂ ಅಧಿಕ ಭಕ್ತರು ಆಗಮಿಸಿ ಮಧ್ಯರಾತ್ರಿ ನಡೆದ ಮಂಜುನಾಥ ಸ್ವಾಮಿ ಬೆಳ್ಳ ರಥೋತ್ಸವದಲ್ಲಿ ಭಾಗಿಯಾದ್ರು. ಸ್ವಾಮಿಗೆ ಆಹೋರಾತ್ರಿ ಶತರುದ್ರಾಭಿಷೇಕ, ಎಳನೀರು ಅಭಿಷೇಕ ಮಾಡಲಾಯ್ತು. ಜಾಗರಣೆಯಲ್ಲಿ ಲಕ್ಷಾಂತರ ಭಕ್ತರು ಭಾಗಿಯಾಗಿದ್ರು.
ಮಹದೇಶ್ವರ ಬೆಟ್ಟಕ್ಕೆ ಒಂದೂವರೆ ಲಕ್ಷ ಭಕ್ತರು
ಚಾಮರಾಜನಗರ ಮಲೆಮಹದೇಶ್ವರ ಬೆಟ್ಟದಲ್ಲಿ ಮಹಾ ಶಿವರಾತ್ರಿ ಸಡಗರ ಮನೆ ಮಾಡಿದೆ. ಈ ಹಿನ್ನೆಲೆ ಭಕ್ತರ ದಂಡು ಹರಿದು ಬಂದಿದೆ. ಮೂರು ದಿನಗಳಿಂದ ಪಾದಯಾತ್ರೆ ಮೂಲಕವೇ ಒಂದೂವರೆ ಲಕ್ಷ ಭಕ್ತರು ಬಂದಿದ್ದು, ಇಂದು ಸಹ ಒಂದು ಲಕ್ಷ ಭಕ್ತರು ಆಗಮಿಸಿದ್ದಾರೆಂದು ಮಹದೇಶ್ವರಬೆಟ್ಟದಲ್ಲಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಭಕ್ತರಿಗೆ ಕುಡಿಯುವ ನೀರು, ದಾಸೋಹದ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಸಮಸ್ಯೆ ಆಗದಂತೆ ಕ್ರಮ ವಹಿಸಲಾಗಿದೆ ಅಂತ ಹೇಳಿದ್ರು.
ಶ್ರೀ ಭೋಗನಂದೀಶ್ವರಸ್ವಾಮಿ ದೇವಾಲಯಕ್ಕೆ ರಾಜ್ಯಪಾಲರು
ಮಹಾಶಿವರಾತ್ರಿ ಹಿನ್ನೆಲೆ ಚಿಕ್ಕಬಳ್ಳಾಫುರ ತಾಲೂಕಿನ ನಂದಿಯ ಶ್ರೀ ಭೋಗನಂದೀಶ್ವರಸ್ವಾಮಿ ದೇವಾಲಯಕ್ಕೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಭೇಟಿ ನೀಡಿದ್ದಾರೆ. ಕುಟುಂಬ ಸಮೇತ ಆಗಮಿಸಿ ದೇವರ ದರ್ಶನ ಪಡೆದಿದ್ದಾರೆ. ರಾಜ್ಯಪಾಲರಿಗೆ ಸಚಿವ ಡಾ.ಕೆ.ಸುಧಾಕರ್ ಸಾಥ್ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ