ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ (Sri Siddeshwara Swamiji) ಅನಾರೋಗ್ಯ ಹಿನ್ನೆಲೆ ನಡೆದಾಡುವ ದೇವರಿಗೆ ಆಶ್ರಮದ ಮೊದಲ ಮಹಡಿಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ದೇವರ ಅನಾರೋಗ್ಯದ ವಿಷಯ ತಿಳಿಯುತ್ತಲೇ ಆಶ್ರಮದತ್ತ (Ashrama) ಅಪಾರ ಸಂಖ್ಯೆಯಲ್ಲಿ ಭಕ್ತರು (Devotees) ಆಗಮಿಸುತ್ತಿದ್ದಾರೆ. ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ದರ್ಶನ ಪಡೆಯಲು ಉರಿ ಬಿಸಿನಲ್ಲಿಯೇ ಕುಳಿತಿದ್ದಾರೆ. ಮಠ ಆಡಳಿತಾಧಿಕಾರಿಗಳು ವೆಬ್ಸೈಟ್ನಲ್ಲಿ ಶ್ರೀಗಳನ್ನು ಕಾಣಬಹುದು ಎಂದು ಹೇಳಿದ್ರೂ ಭಕ್ತರು ಮಾತ್ರ ಒಪ್ಪಿಕೊಳ್ಳುತ್ತಿಲ್ಲ. ಇಂದು ಸಿದ್ದೇಶ್ವರ ಸ್ವಾಮೀಜಿಗಳ ದರ್ಶನಕ್ಕೆ ಮೈಸೂರಿನ ಸುತ್ತೂರು ಮಠದ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿ ಆಗಮಿಸಿದ್ದರು. ಸುತ್ತೂರು ಶ್ರೀಗಳ ಜೊತೆ ವಿವಿಧ ಮಠಾಧೀಶರು ಸಹ ಆಗಮಿಸಿದ್ದರು.
ನಿನ್ನೆ ಸಿಎಂ ಬಸವರಾಜ್ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವ ಗೋವಿಂದ ಕಾರಜೋಳ ಆಶ್ರಮಕ್ಕೆ ಆಗಮಿಸಿ ಸಿದ್ದೇಶ್ವರ ಶ್ರೀಗಳ ಆರೋಗ್ಯ ವಿಚಾರಿಸಿ, ಆಶೀರ್ವಾದ ಪಡೆದುಕೊಂಡರು. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿದ ಪ್ರಹ್ಲಾದ್ ಜೋಶಿ ಅವರು ಶ್ರೀಗಳ ಆರೋಗ್ಯದ ಮಾಹಿತಿ ನೀಡಿದರು ಎಂದು ವರದಿಯಾಗಿದೆ.
ಜ್ಞಾನಯೋಗಿ ನಡೆದಾಡುವ ದೇವರೆಂದೇ ಖ್ಯಾತರಾದ ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಿದ್ದು, ಜ್ಞಾನಯೋಗಾಶ್ರಮಕ್ಕೆ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದೆನು.
ಭಗವಂತನ ಕೃಪೆಯಿಂದ ಶ್ರೀಗಳು ಶೀಘ್ರವೇ ಗುಣಮುಖರಾಗಲಿ ಎಂದು ಭಕ್ತಿಯಿಂದ ಪ್ರಾರ್ಥಿಸುತ್ತೇನೆ. pic.twitter.com/kaxJesMo1x
— Pralhad Joshi (@JoshiPralhad) December 31, 2022
ಡಿಸೆಂಬರ್ 30ರಂದು ದರ್ಶನ ನೀಡಿದ್ದ ಶ್ರೀಗಳು
ಅನಾರೋಗ್ಯದ ಹಿನ್ನೆಲೆ ಭಕ್ತರು ಆತಂಕಕ್ಕೆ ಒಳಗಾಗಗಿರುವ ಹಿನ್ನೆಲೆ ಡಿಸೆಂಬರ್ 30ರಂದು ಮೊದಲ ಮಹಡಿಯಿಂದಲೇ ಸಾವಿರಾರು ಭಕ್ತರಿಗೆ ದರ್ಶನ ನೀಡಿದರು. ಮೊದಲ ಮಹಡಿಯ ಗೋಡೆ ತೆರವು ಮಾಡಿ ಭಕ್ತರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ವೀಲ್ ಚೇರ್ನಲ್ಲಿಯೇ ಬಂದ ಸ್ವಾಮೀಜಿಗಳ ಭಕ್ತರಿಗೆ ದರ್ಶನ ನೀಡಿದ್ದರು.
ಜ್ಞಾನಯೋಗಿ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಪ್ರಧಾನಮಂತ್ರಿ ಶ್ರೀ @narendramodi ಯವರು ನನಗೆ ಕರೆ ಮಾಡಿ ನನ್ನ ಮೂಲಕ ಶ್ರೀಗಳ ಜೊತೆ ಮಾತನಾಡಿ ಆರೋಗ್ಯ ವಿಚಾರಿಸಿದರು. pic.twitter.com/gwF1FjeR1K
— Pralhad Joshi (@JoshiPralhad) January 1, 2023
ಇದನ್ನೂ ಓದಿ: Karnataka Politics: ಎಸ್ಡಿಪಿಐ ಜೊತೆ ಬಿಜೆಪಿ ಒಳ ಒಪ್ಪಂದ; ಶೀಘ್ರವೇ ದಾಖಲೆ ಬಿಡುಗಡೆ ಎಂದ ಮಾಜಿ ಸಿಎಂ
ಅಮಿತ್ ಶಾ ವಿರುದ್ಧ ಸಿದ್ದರಾಮಯ್ಯ ಕಿಡಿ
ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Union Minister Amit Shah) ಭೇಟಿ ಬಿಜೆಪಿ ಕಾರ್ಯಕರ್ತರಲ್ಲಿ (BJP Activist) ಹುಮ್ಮುಸ್ಸು ತಂದಿರೋದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಹಳೆ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಬಿಜೆಪಿ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಿರುವ ಅಮಿತ್ ಶಾ, ಕಾಂಗ್ರೆಸ್ ಮತ್ತು ಜೆಡಿಎಸ್ (Congress And JDS) ವಿರುದ್ಧ ವಾಗ್ದಾಳಿ ನಡೆಸಿದ್ದರು.
ಅಮಿತ್ ಶಾ ಹೇಳಿಕೆ ಮತ್ತು ಆರೋಪಗಳಿಗೆ ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ತಿರುಗೇಟು ನೀಡಿದ್ದಾರೆ. ಪಿಎಫ್ಐ (PFI) ಮೇಲಿನ ಕೇಸುಗಳನ್ನು ನಮ್ಮ ಸರ್ಕಾರ ವಾಪಸ್ಸು ತೆಗೆದುಕೊಂಡಿದೆ ಎಂದು ನಾಜಿ ಸರ್ಕಾರದ ಪ್ರೊಪಗಾಂಡ ಸಚಿವ, ಗೋಬೆಲ್ಸ್ನ ಅಪರಾವತಾರವಾದ ಗೃಹ ಸಚಿವ ಅಮಿತ್ ಶಾ ಸುಳ್ಳು ಉಗುಳಿ ಹೋಗಿದ್ದಾರೆ.
ಸನ್ಮಾನ್ಯ ಗೃಹ ಸಚಿವ ಅಮಿತ್ ಶಾ ಅವರು ಒಂದೋ ತಮ್ಮ ಸುಳ್ಳು ಆರೋಪವನ್ನು ಸಾಬೀತುಪಡಿಸಬೇಕು, ಇಲ್ಲವೇ ತಾವು ಹೇಳಿದ್ದು ಸುಳ್ಳು ಎಂದು ಕ್ಷಮೆ ಕೇಳಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ