ದಕ್ಷಿಣ ಕನ್ನಡ(ಅ.12): ಆಶ್ಲೇಷ ನಕ್ಷತ್ರ ಹಿನ್ನಲೆಯಲ್ಲಿ ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇಂದು ಭಕ್ತರ ಜಂಗುಳಿ ಕಂಡು ಬಂದಿದೆ. ಆಶ್ಲೇಷ ನಕ್ಷತ್ರದ ದಿನ ಕ್ಷೇತ್ರದಲ್ಲಿ ಆಶ್ಲೇಷ ಬಲಿ ಸೇವೆ ನೆರವೇರಿಸಿದರೆ, ಇಷ್ಟಾರ್ಥಗಳು ಪೂರ್ಣಗೊಳ್ಳುತ್ತದೆ ಎನ್ನುವ ನಂಬಿಕೆಯ ಹಿನ್ನಲೆಯಲ್ಲಿ ಭಕ್ತಾಧಿಗಳು ಇಂದು ಕ್ಷೇತ್ರದಲ್ಲಿ ಆಶ್ಲೇಷ ಸೇವೆಗಾಗಿ ಮುಗಿಬಿದ್ದಿದ್ದಾರೆ. ಕೊರೊನಾ ಲಾಕ್ ಡೌನ್ ಮಾರ್ಗಸೂಚಿ ಹಿನ್ನಲೆಯಲ್ಲಿ ಕ್ಷೇತ್ರದ ಪ್ರಮುಖ ಸೇವೆಗಳಾದ ಆಶ್ಲೇಷ ಹಾಗೂ ಸರ್ಪ ಸಂಸ್ಕಾರ ಸೇವೆಗಳನ್ನು ನಿಗದಿತ ಸಂಖ್ಯೆಯಲ್ಲಿ ಮಾತ್ರ ನೆರವೇರಿಸಲಾಗುತ್ತಿದೆ. ದಿನಕ್ಕೆ ಕೇವಲ 150 ಆಶ್ಲೇಷ ಬಲಿ ಸೇವೆಯನ್ನು ಕ್ಷೇತ್ರದಲ್ಲಿ ಇದೀಗ ನೆರವೇರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಸೇವೆಯ ಚೀಟಿ ಪಡೆಯಲು ಭಕ್ತರು ನಿನ್ನೆ ರಾತ್ರಿಯಿಂದಲೇ ಸೇವಾ ಕೌಂಟರ್ ನಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದರು.
3 ದಿನಗಳ ಹಿಂದೆ ಕಾಣೆಯಾಗಿದ್ದ ಯುವತಿ ಶವವಾಗಿ ಪತ್ತೆ; ಸಾವಿನ ಸುತ್ತ ಅನುಮಾನದ ಹುತ್ತ
ಮೊದಲ 150 ಜನರಿಗೆ ಮಾತ್ರ ಸೇವೆ ನೆರವೇರಿಸುವ ಅವಕಾಶವಿದ್ದ ಕಾರಣ ಭಕ್ತರು ಕೌಂಟರ್ ತೆರಯುವ ಮೊದಲೇ ಸರತಿ ಸಾಲಿನಲ್ಲಿ ನಿಂತು ತನ್ನ ಸರತಿಗಾಗಿ ಕಾದಿದ್ದಾರೆ. ಇಂದು ಮುಂಜಾನೆ ಮತ್ತೆ ಭಕ್ತರು ದೂರದೂರುಗಳಿಂದ ಆಶ್ಲೇಷ ಸೇವೆ ನೆರವೇರಿಸಲು ಕ್ಷೇತ್ರಕ್ಕೆ ಬಂದಿದ್ದರೂ, ನಿಗದಿತ ಸೇವೆಗಳು ಅದಾಗಲೇ ಬುಕ್ ಆದ ಪರಿಣಾಮ ದೇವರ ದರ್ಶನ ಮಾಡಿ ಭಕ್ತರು ತೆರಳಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ