Savadatti Yallamma: ಬೆಳಗಾವಿ ವಿಭಜಿಸುವಂತೆ ಸಿಎಂ ಬೊಮ್ಮಾಯಿಗೆ ಒಳ್ಳೆ ಬುದ್ದಿ ಕೊಡು; ಸವದತ್ತಿಯ ಯಲ್ಲಮ್ಮ ದೇವಿಗೆ ಭಕ್ತನ ಪತ್ರ

ಬೆಳಗಾವಿ ಜಿಲ್ಲೆಯ ಸವದತ್ತಿಯ ಯಲ್ಲಮ್ಮದೇವಿ ದೇವಸ್ಥಾನ ಕಾಣಿಕೆ ಹುಂಡಿಯಲ್ಲಿ ಪತ್ರವೊಂದು ಸಿಕ್ಕಿದೆ. ಪತ್ರದಲ್ಲಿ ಬೆಳಗಾವಿ ಜಿಲ್ಲೆಯನ್ನು ನಾಲ್ಕು ಜಿಲ್ಲೆಯಾಗಿ ವಿಭಜಿಸುವಂತೆ ಮನವಿ ಮಾಡಲಾಗಿದೆ.

ಬೆಳಗಾವಿ ಜಿಲ್ಲೆಯ ಸವದತ್ತಿಯ ಯಲ್ಲಮ್ಮದೇವಿ ದೇವಸ್ಥಾನ ಕಾಣಿಕೆ ಹುಂಡಿಯಲ್ಲಿ ಪತ್ರವೊಂದು ಸಿಕ್ಕಿದೆ. ಪತ್ರದಲ್ಲಿ ಬೆಳಗಾವಿ ಜಿಲ್ಲೆಯನ್ನು ನಾಲ್ಕು ಜಿಲ್ಲೆಯಾಗಿ ವಿಭಜಿಸುವಂತೆ ಮನವಿ ಮಾಡಲಾಗಿದೆ.

ಬೆಳಗಾವಿ ಜಿಲ್ಲೆಯ ಸವದತ್ತಿಯ ಯಲ್ಲಮ್ಮದೇವಿ ದೇವಸ್ಥಾನ ಕಾಣಿಕೆ ಹುಂಡಿಯಲ್ಲಿ ಪತ್ರವೊಂದು ಸಿಕ್ಕಿದೆ. ಪತ್ರದಲ್ಲಿ ಬೆಳಗಾವಿ ಜಿಲ್ಲೆಯನ್ನು ನಾಲ್ಕು ಜಿಲ್ಲೆಯಾಗಿ ವಿಭಜಿಸುವಂತೆ ಮನವಿ ಮಾಡಲಾಗಿದೆ.

  • Share this:
ಬೆಳಗಾವಿ (ಸೆ.23): ರಾಜ್ಯದಲ್ಲಿ ದೊಡ್ಡ ಜಿಲ್ಲೆಯಾಗಿರೋ ಬೆಳಗಾವಿ ಜಿಲ್ಲೆ ವಿಭಜನೆ (Belgaum Partition) ಮಾಡಬೇಕು ಎಂದು ಅನೇಕ ವರ್ಷಗಳ ಬೇಡಿಕೆ ಇದೆ. ರಾಜಕೀಯ ಹಿತಾಸಕ್ತಿ, ಗಡಿ ವಿವಾದ (Border Dispute) ಜೀವಂತ ಇರೋ ಹಿನ್ನೆಲೆಯಲ್ಲಿ ಇದು ಸಾಧ್ಯವಾಗಿಲ್ಲ. ಗೋವಾ ರಾಜ್ಯಕ್ಕಿಂತ ದೊಡ್ಡದಿರೋ ಜಿಲ್ಲೆಯಿಂದ ಜನರಿಗೆ ಅನೇಕ ಸಮಸ್ಯೆಗಳ ಸಹ ಇವೆ. ಆದರೇ ರಾಜಕೀಯ (Politics) ಇಚ್ಛಾಶಕ್ತಿ ಪ್ರದರ್ಶನ ಮಾಡುವಲ್ಲಿ ಜಿಲ್ಲೆಯ ನಾಯಕರು ವಿಫಲರಾಗಿದ್ದಾರೆ. ವೈಯಕ್ತಿಕ ಪ್ರತಿಷ್ಠೆ ಹಾಗೂ ರಾಜಕೀಯ ಗುದ್ದಾಟದಲ್ಲಿ ಜನರ ಸಂಕಷ್ಟ ಅರ್ಥವಾಗಿಲ್ಲ. ಬೆಳಗಾವಿ ಜಿಲ್ಲೆ ವಿಭಜನೆ ಮಾಡುವಂತೆ ಭಕ್ತನೊಬ್ಬ (Devotee) ಸವದತ್ತಿ ಯಲ್ಲಮ್ಮನ (Savadatti Yallamma) ಮೊರೆ ಹೋಗಿದ್ದಾನೆ. ದೇವಿಗೆ ಸುದೀರ್ಘ ನಾಲ್ಕು ಪುಟಗಳ ಪತ್ರ ಬರೆದಿದ್ದು, ಬೆಳಗಾವಿಯನ್ನು 4 ಜಿಲ್ಲೆಗಳಾಗಿ ವಿಭಜಿಸಲು ಸಿಎಂ ಬೊಮ್ಮಾಯಿ (CM Basavaraj Bommai) ಅವರಿಗೆ ಒಳ್ಳೆ ಬುದ್ದಿ ನೀಡಲೆಂದು ಬೇಡಿಕೆ ಇಟ್ಟಿದ್ದಾನೆ.

ಬೆಳಗಾವಿ ವಿಭಜಿಸಲು ಸಿಎಂಗೆ ಬುದ್ದಿಕೊಡು

ಬೆಳಗಾವಿ ಜಿಲ್ಲೆಯ ಸವದತ್ತಿಯ ಯಲ್ಲಮ್ಮದೇವಿ ದೇವಸ್ಥಾನ ಕಾಣಿಕೆ ಹುಂಡಿಯಲ್ಲಿ ಪತ್ರವೊಂದು ಸಿಕ್ಕಿದೆ. ಪತ್ರದಲ್ಲಿ ಬೆಳಗಾವಿ ಜಿಲ್ಲೆಯನ್ನು ನಾಲ್ಕು ಜಿಲ್ಲೆಯಾಗಿ ವಿಭಜಿಸುವಂತೆ ಮನವಿ ಮಾಡಲಾಗಿದೆ. ಬೆಳಗಾವಿಯನ್ನು 4 ಜಿಲ್ಲೆಗಳಾಗಿ ವಿಭಜಿಸಲು ಸಿಎಂಗೆ ಒಳ್ಳೆ ಬುದ್ದಿ ನೀಡಲೆಂದು ಬೇಡಿಕೆ. ಬೆಳಗಾವಿ, ಗೋಕಾಕ್​, ಚಿಕ್ಕೋಡಿ, ಬೈಲಹೊಂಗಲ ಜಿಲ್ಲೆ ಮಾಡುವಂತೆ ಹರಕೆ. ದೇವರ ಕಾಣಿಕೆ ಹುಂಡಿಯಲ್ಲಿ  ಪತ್ತೆಯಾಯ್ತು ವಿಚಿತ್ರ ಹರಕೆ ಚೀಟಿಗಳು. ಐದ‌ನೇ ದಿನ ಮುಂದುವರಿದ ಸವದತ್ತಿ ಯಲ್ಲಮ್ಮ  ದೇವಸ್ಥಾನ ಹುಂಡಿ ಎಣಿಕೆ ಕಾರ್ಯನಡೆಯುತ್ತಿದೆ.

ಬೆಳಗಾವಿಯನ್ನು 4  ಜಿಲ್ಲೆಗಳನ್ನಾಗಿ ಮಾಡಲಿ

ಈ ಹಿಂದೆ ಜೆ ಹೆಚ್‌ ಪಟೇಲ್ ಸಿಎಂ ಆಗಿದ್ದಾಗ ಬೆಳಗಾವಿ ಜಿಲ್ಲೆಯಲ್ಲಿ 10 ತಾಲೂಕು ಇದ್ದವು. 1997 ರಲ್ಲಿ ಬೆಳಗಾವಿ, ಚಿಕ್ಕೋಡಿ, ಗೋಕಾಕ ಸೇರಿ ಮೂರು ಜಿಲ್ಲೆಗಳಾಗಿ ಘೋಷಣೆ ಮಾಡಿದ್ದರು. ಈಗ 14 ತಾಲೂಕು ಆಗಿವೆ, ಈಗ ನಾಲ್ಕು ಜಿಲ್ಲೆಗಳನ್ನಾಗಿ ಮಾಡಿ. ಯಾದಗಿರಿ ಮೂರು ತಾಲೂಕು ಇದ್ದು, ಜಿಲ್ಲೆ ಮಾಡಿದ್ದಾರೆ. ಕೊಡಗು 2 ವಿಧಾನ ಸಭಾ ಕ್ಷೇತ್ರ ಇದ್ದು ಜಿಲ್ಲೆ ಮಾಡಿದ್ದಾರೆ.

people worshiped the face of the goddess yallamma on the wall of the house in yadagiri

ಹಾಗೇ ನಮ್ಮ ಜಿಲ್ಲೆಯಲ್ಲಿ 14 ತಾಲೂಕು, 18 ವಿಧಾನ ಸಭಾ ಕ್ಷೇತ್ರ ಇದ್ದು ನಾಲ್ಕು ಜಿಲ್ಲೆಗಳನ್ನಾಗಿ ಮಾಡಿ ಎಂದು ಮನವಿ ಮಾಡಿದ್ದಾನೆ ಭಕ್ತ. ನಾಲ್ಕು ಜಿಲ್ಲೆ ಮಾಡಿ ಎರಡು ಪ್ರತ್ಯೇಕ ಉಪವಿಭಾಗಾದಿಕಾರಿ ಆಫಿಸ್ ಮಾಡುವಂತೆ ಮಾಡು, ಹುಂಡೇಕರ್, ವಾಸುದೇವ, ಗದ್ದಿಗೌಡರ ಸಮಿತಿ ಗೋಕಾಕ ಜಿಲ್ಲೆಗೆ ಶಿಫಾರಸು ಮಾಡಿವೆ. ಈ ಶಿಫಾರಸ್ಸು ಶೀಘ್ರದಲ್ಲಿಯೇ ಈಡೇರಲಿ ಎಂದು ಭಕ್ತನ ಆಗ್ರಹವಾಗಿದೆ.

ಇದನ್ನೂ ಓದಿ: Kukke Subrahmanya Tample: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸರ್ಪ ಸಂಸ್ಕಾರ ಸೇವಾ ದರದಲ್ಲಿ ಭಾರೀ ಹೆಚ್ಚಳ!

ಯಲ್ಲಮ್ಮನ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ‌

ಸವದತ್ತಿ ಯಲ್ಲಮ್ಮನ ಹುಂಡಿಯಲ್ಲಿ ವಿದೇಶಿ ಕರೆನ್ಸಿ ಹಾಕಿರುವ ಭಕ್ತರು
ಬೆಳಗಾವಿ ಜಿಲ್ಲೆ ಸವದತ್ತಿ ಯಲ್ಲಮ್ಮನ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ‌ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿದೆ. ಹುಂಡಿ ಎಣಿಕೆ ಕಾರ್ಯ ವೇಳೆ ಹುಂಡಿಯಲ್ಲಿ ವಿದೇಶಿ ಕರೆನ್ಸಿಗಳು ಪತ್ತೆ ಆಗಿವೆ. ಅರಬ್ ದೇಶದ  ಕರೆನ್ಸಿ ಪತ್ತೆ Central Bank of the united Arab Emirates ಎಂದು ಹೆಸರು ಇರುವ ಕರೆನ್ಸಿ ಪತ್ತೆ‌ಯಾಗಿದೆ. ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರು,  ಸದಸ್ಯರು ಹುಂಡಿ ಎಣಿಕೆ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಒಟ್ಟು ದೇವಸ್ಥಾನದ ಹುಂಡಿಯಲ್ಲಿ ಸಂಗ್ರಹವಾಗಿರುವ ಒಟ್ಟು ಹಣದ ಕುರಿತು ಸಂಜೆ ದೇವಸ್ಥಾನ ಆಡಳಿತ ಮಂಡಳಿಯಿಂದ ಅಧಿಕೃತ ಮಾಹಿತಿ ಬಿಡುಗಡೆ ಮಾಡಬೇಕಿದೆ.
Published by:ಪಾವನ ಎಚ್ ಎಸ್
First published: