ಗಡಿಯಾಚೆಗೂ ಗೌಡರ ದೈವಭಕ್ತಿ; ನೇಪಾಳದ ಪಶುಪತಿನಾಥನ ದರ್ಶನಕ್ಕೆ ಮುಂದಾದ ಮಾಜಿ ಪ್ರಧಾನಿ

news18
Updated:September 6, 2018, 12:41 PM IST
ಗಡಿಯಾಚೆಗೂ ಗೌಡರ ದೈವಭಕ್ತಿ; ನೇಪಾಳದ ಪಶುಪತಿನಾಥನ ದರ್ಶನಕ್ಕೆ ಮುಂದಾದ ಮಾಜಿ ಪ್ರಧಾನಿ
news18
Updated: September 6, 2018, 12:41 PM IST
-ನ್ಯೂಸ್​ 18 ಕನ್ನಡ

ಬೆಂಗಳೂರು,(ಸೆ.06): ಮಹಾನ್​ ದೈವ ಭಕ್ತರಾಗಿರುವ ಮಾಜಿ ಪ್ರಧಾನಿ ದೇವೇಗೌಡರು ಆಗಾಗ್ಗೆ ದೇವಸ್ಥಾನಗಳಿಗೆ ಭೇಟಿ ನೀಡುತ್ತಲೇ ಇರುತ್ತಾರೆ. ಇದೀಗ ಕುಟುಂಬ ಸಮೇತ ಪಶುಪತಿನಾಥನ ದರ್ಶನ ಪಡೆಯಲು ನೇಪಾಳದ ಕಠ್ಮಂಡುಗೆ ತೆರಳಲು ಸಿದ್ಧರಾಗಿದ್ದಾರೆ.

ದೆಹಲಿಯ ಜ್ಯೋತಿಷಿಯೊಬ್ಬರು ಪಶುಪತಿನಾಥನ ದರ್ಶನ ಪಡೆಯುವಂತೆ ಸಲಹೆ ನೀಡಿದ್ದರಿಂದ ದೇವೇಗೌಡರು ನೇಪಾಳಕ್ಕೆ ತೆರಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗುರುವಾರ ಸಂಜೆ ನವದೆಹಲಿಯಿಂದ ಕಠ್ಮಂಡುವಿಗೆ ಹೊರಡಲಿರುವ ಅವರು, ಶುಕ್ರವಾರ ಪಶುಪತಿನಾಥ ಮಂದಿರಕ್ಕೆ ಭೇಟಿ ನೀಡಲಿದ್ದಾರೆ. ದೇವರ ದರ್ಶನದ ಬಳಿಕ ಪ್ರಧಾನಿ ಶನಿವಾರ ಬೆಂಗಳೂರಿಗೆ ವಾಪಸ್​ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಮೊನ್ನೆಯಷ್ಟೇ ದೇವೇಗೌಡರು ತಮ್ಮ ಮನೆಯಲ್ಲಿ ಕಾಶಿ ವಿಶ್ವನಾಥನ ಫೋಟೋವೊಂದನ್ನು ದೇವರ ಮನೆಯಲ್ಲಿ ಇರಿಸಿದ್ದರು. ಅವರ ಮಗ ಎಚ್.ಡಿ. ಕುಮಾರಸ್ವಾಮಿ ಸಿಎಂ ಆದ ನಂತರ ಆಂಧ್ರಪ್ರದೇಶಕ್ಕೆ ತೆರಳಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದರು. ಅಷ್ಟೇ ಅಲ್ಲದೇ ಆಗಾಗ್ಗೆ ಹೋಮ-ಹವನ ನಡೆಸುವ ಅವರು, ಶೃಂಗೇರಿ ಶಾರದಾಂಜೆ ಹಾಗೂ ಕುಕ್ಕೆ ಸುಬ್ರಹ್ಮಣ್ಯಕ್ಕೂ ಭೇಟಿ ನೀಡಿ ದರುಶನ ಪಡೆದಿದ್ದರು.

ಕೇದಾರನಾಥ ದೇವಾಲಯಕ್ಕೆ ಹೋಗಲು ನಿರ್ಧರಿಸಿದ್ದ ಅವರು, ಮಳೆಯ ಕಾರಣದಿಂದಾಗಿ ಮುಂದೂಡಿದ್ದರು. ಇದೀಗ ಗಡಿಯಾಚೆ ಇರುವ ನೇಪಾಳಕ್ಕೂ ಭೇಟಿ ನೀಡಲು ಮುಂದಾಗಿರುವ ದೇವೇಗೌಡರ ದೈವಭಕ್ತಿ ಎಷ್ಟಿರಬಹುದೆಂದು ತಿಳಿಯಬಹುದಾಗಿದೆ.
First published:September 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ