ಪಕ್ಷದ ಬಲವರ್ಧನೆಗೆ ದೇವೇಗೌಡರ ಕುಟುಂಬದಿಂದ ಚಂಡಿಕಾಯಾಗ; ಮತ್ತೊಮ್ಮೆ ಶೃಂಗೇರಿ ಶಾರದಾಂಬೆ ಮೊರೆ

ಲೋಕಸಭಾ ಚುನಾವಣೆ ಬಳಿಕ ಈಗ ಮತ್ತೊಮ್ಮೆ ಪಕ್ಷ ಬಲವರ್ಧನೆಗಾಗಿ ದೊಡ್ಡ ಗೌಡರ ಕುಟುಂಬ ದೇವರ ಮೊರೆಹೋಗಿದ್ದು, ಪಕ್ಷ ಬಲಗೊಳಿಸುವಂತೆ ದೇವರಲ್ಲಿ ಪ್ರಾರ್ಥಿಸಿದ್ದಾರೆ ಎನ್ನಲಾಗಿದೆ. 

ಶೃಂಗೇರಿಯಲ್ಲಿ ದೇವೇಗೌಡರು

ಶೃಂಗೇರಿಯಲ್ಲಿ ದೇವೇಗೌಡರು

  • Share this:
ಚಿಕ್ಕಮಗಳೂರು (ಜ.17): ಮಾಜಿ ಪ್ರಧಾನಿ ದೇವೇಗೌಡ ಅವರು ಮತ್ತೊಮ್ಮೆ ತಮ್ಮ ಆರಾಧ್ಯ ದೈವರಾರ ಶಕ್ತಿ ದೇವತೆ ಶಾರದಾಂಬೆ ಮೊರೆ ಹೋಗಿದ್ದಾರೆ. ಈ ಹಿಂದೆ ಇದೇ ದೇಗುಲದಲ್ಲಿ ಹಲವು ಯಾಗಗಳನ್ನು ಮಾಡಿದ ಅವರು, ಈ ಬಾರಿ ಚಂಡಿಯಾಗ ನಡೆಸುತ್ತಿದ್ದಾರೆ. 

ಇನ್ನು ಯಾಗದ ಸಂಕಲ್ಪಕ್ಕಾಗಿ ಈಗಾಗಲೇ ದೇವೇಗೌಡರು ಹಾಗೂ ಅವರ ಪತ್ನಿ ಚೆನ್ನಮ್ಮ ಶೃಂಗೇರಿಗೆ ಆಗಮಿಸಿದ್ದು, ಐದು ದಿನಗಳ ಕಾಲ ಇಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಇನ್ನು ಈ ಯಾಗದಲ್ಲಿ ಇಂದು ರೇವಣ್ಣ ಅವರು ಕೂಡ ಭಾಗಿಯಾಗಲಿದ್ದು, ಮಂಗಳವಾರ ಪೂರ್ಣಾಹುತಿ ನಡೆಯಲಿದ್ದು, ಕುಮಾರಸ್ವಾಮಿ, ರೇವಣ್ಣ, ಅನಿತಾ ಕುಮಾರಸ್ವಾಮಿ, ಭವಾನಿ ರೇವಣ್ಣ, ನಿಖಿಲ್ ಹಾಗೂ ಪ್ರಜ್ವಲ್ ಕೂಡ ಈ ವೇಳೆ  ಪಾಲ್ಗೊಳ್ಳಲಿದ್ದಾರೆ.ಕಳೆದ ಎರಡು ವರ್ಷಗಳಿಂದ ವಿವಿಧ ಕಾರಣಕ್ಕಾಗಿ ದೇವೇಗೌಡರ ಕುಟುಂಬ ಕ್ಷೇತ್ರದಲ್ಲಿ ವಿವಿಧ ಹೋಮ-ಹವನಗಳನ್ನು ಸೇರಿದಂತೆ ವಿಶೇಷ ಪೂಜೆಯಲ್ಲಿ ಭಾಗಿಯಾಗುತ್ತಲೇ ಇದೆ. ಕುಮಾರಸ್ವಾಮಿ ಸಿಎಂ ಆದಾಗಲೂ ಕೂಡ ಅತಿ ರದ್ರಯಾಗ, ಏಕ ಚಂಡಿಕಾಯಾಗ, ಅಮವಾಸ್ಯೆ ಪೂಜೆ, ಶತ ಚಂಡಿಕಾಯಾಗ, ಪ್ರತಿ ಶೂಲಿನಿಯಾಗ ಸೇರಿದಂತೆ ವಿವಿಧ ಪೂಜೆ ನಡೆಸಿದ್ದರು.

ಇದನ್ನು ಓದಿ: ಕೆಪಿಸಿಸಿ ಅಧ್ಯಕ್ಷ ಸ್ಥಾನ ಬಹುತೇಕ ಖಚಿತ; ಅಧಿಕೃತ ಘೋಷಣೆಗೂ ಮುನ್ನ ಟೆಂಪಲ್​ ರನ್​ ನಡೆಸಿದ ಡಿಕೆ ಶಿವಕುಮಾರ್

ಲೋಕಸಭಾ ಚುನಾವಣೆ ಬಳಿಕ ಈಗ ಮತ್ತೊಮ್ಮೆ ಪಕ್ಷ ಬಲವರ್ಧನೆಗಾಗಿ ದೊಡ್ಡ ಗೌಡರ ಕುಟುಂಬ ದೇವರ ಮೊರೆಹೋಗಿದ್ದು, ಪಕ್ಷ ಬಲಗೊಳಿಸುವಂತೆ ದೇವರಲ್ಲಿ ಪ್ರಾರ್ಥಿಸಿದ್ದಾರೆ ಎನ್ನಲಾಗಿದೆ.

 
First published: