ವಿಧಿ ತುಮಕೂರಿಗೆ ಎಳೆದುಕೊಂಡು ಬಂದು ಚುನಾವಣೆಯಲ್ಲಿ ಸೋಲುವಂತೆ ಮಾಡಿತು; ದೇವೇಗೌಡ

ಸೋಲಿನ ಬಳಿಕ ನಾನು ಎಂದು ಕಂಗೆಟ್ಟಿಲ್ಲ. ಮತ್ತೆ ಪಕ್ಷ ಕಟ್ಟುವ ಉತ್ಸಾಹ ಮೂಡಿದೆ, ದೇವೇಗೌಡರು ಭೀಷ್ಮನಂತೆ ಶಸ್ತ್ರ ತ್ಯಾಗ ಮಾಡುವುದಿಲ್ಲ. ಮತ್ತೆ ಹೋರಾಟ ಮಾಡಿ ಪಕ್ಷ ಉಳಿಸುತ್ತೇನೆ. ಉಪಚುನಾವಣೆಯಲ್ಲಿ ಏಕಾಂಕಿಯಾಗಿ ಸ್ಪರ್ಧಿಸುತ್ತೇವೆ. 11 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ.

Seema.R | news18-kannada
Updated:November 8, 2019, 6:11 PM IST
ವಿಧಿ ತುಮಕೂರಿಗೆ ಎಳೆದುಕೊಂಡು ಬಂದು ಚುನಾವಣೆಯಲ್ಲಿ ಸೋಲುವಂತೆ ಮಾಡಿತು; ದೇವೇಗೌಡ
ಹೆಚ್.ಡಿ. ದೇವೇಗೌಡ
  • Share this:
ತುಮಕೂರು (ನ.08): ಚುನಾವಣೆಯಲ್ಲಿ ಸ್ಪರ್ಧಿಸುವುದೇ ಬೇಡ ಎಂದು ನಿರ್ಧರಿಸಿದ್ದ ನನ್ನನ್ನು ವಿಧಿ ತುಮಕೂರಿಗೆ ಎಳೆದುಕೊಂಡು ಬಂದು ಸೋಲುವಂತೆ ಮಾಡಿತು. ಇಂತಹ ಅವಮಾನಆಗಬೇಕಿತ್ತಾ ಎಂದು ಜೆಡಿಎಸ್​ ವರಿಷ್ಠ ದೇವೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ. 

ಜಿಲ್ಲೆಯ ಅರೇಹಳ್ಳಿಯಲ್ಲಿ ದೇವಾಲಯ ಉದ್ಘಾಟನೆ ಮಾಡಿಲ ಮಾತನಾಡಿದ ಅವರು, ನಾನು 59 ವರ್ಷ ರಾಜಕಾರಣ ಮಾಡಿ ವಿವಿಧ ಹುದ್ದೆ ನಿಭಾಯಿಸಿದ್ದೇನೆ. ತುಮಕೂರಿನಿಂದ ಸ್ಪರ್ಧಿಸುವ ಆಸೆ ಇರಲಿಲ್ಲ. ಆದರೆ, ವಿಧಿ ನಿರ್ಣಯದಿಂಣದ ನಾನು ಬರುವಂತೆ ಆಯಿತು. ಚುನಾವಣೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಆದರೆ, ಚಕ್ರವ್ಯೂಹದಲ್ಲಿ ನಾನು ಸಿಲುಕಿ ಸೋತೆ ಎಂದು ಭಾವುಕರಾದರು. 

ಸೋಲಿನ ಬಳಿಕ ನಾನು ಎಂದು ಕಂಗೆಟ್ಟಿಲ್ಲ. ಮತ್ತೆ ಪಕ್ಷ ಕಟ್ಟುವ ಉತ್ಸಾಹ ಮೂಡಿದೆ, ದೇವೇಗೌಡರು ಭೀಷ್ಮನಂತೆ ಶಸ್ತ್ರ ತ್ಯಾಗ ಮಾಡುವುದಿಲ್ಲ. ಮತ್ತೆ ಹೋರಾಟ ಮಾಡಿ ಪಕ್ಷ ಉಳಿಸುತ್ತೇನೆ. ಉಪಚುನಾವಣೆಯಲ್ಲಿ ಏಕಾಂಕಿಯಾಗಿ ಸ್ಪರ್ಧಿಸುತ್ತೇವೆ. 11 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ.

ನನ್ನ ಮಗನನ್ನು ಸಿಎಂ ಮಾಡಿ ಎಂದು ಯಾರನ್ನು ಕೇಳಿಲ್ಲ. ನಾನು ಯಾರ ಮನೆಮುಂದೆಯೂ ಹೋಗಿಲ್ಲ. ಅವರೇ ನಿಮ್ಮ ಮಗನೇ ಸಿಎಂ ಆಗಬೇಕು ಎಂದರು. ಅದಕ್ಕೆ ಒಪ್ಪಿದೆವು. 14 ತಿಂಗಳು ಕಾಲ ಮುಖ್ಯಮಂತ್ರಿಗೆ ಅವರು ಹಿಂಸೆ ನೀಡಿದರು. ರಾಷ್ಟ್ರಮಟ್ಟದಲ್ಲಿಯೂ ಈ ರೀತಿ ಹಿಂಸೆ ಕೊಟ್ಟ ಇತಿಹಾಸವಿಲ್ಲ ಎಂದು ಕಾಂಗ್ರೆಸ್​ ನಾಯಕರ ವಿರುದ್ದ ವಾಗ್ದಾಳಿ ನಡೆಸಿದರು.

ಇದನ್ನು ಓದಿ: ಇತ್ತ ಚುನಾವಣೆ, ಅತ್ತ ಸುಪ್ರೀಂ ತೀರ್ಪು ಅನಿಶ್ಚಿತ: ಅತಂತ್ರಗೊಂಡ ಅನರ್ಹ ಶಾಸಕರಿಗೆ ಮುಂದಿನ ದಾರಿಗಳೇನು?ಯಡಿಯೂರಪ್ಪ ಅಧಿಕಾರಕ್ಕೆ ಬಂದ ಬಳಿಕ ದ್ವೇಷ ರಾಜಕಾರಣ ಮಾಡಲ್ಲ ಎಂದಿದ್ದರು. ಆದರೆ, ಅವರ ಮಾತು ತಪ್ಪಿದ್ದಾರೆ. ವಿಪಕ್ಷಗಳ ಶಾಸಕರ ಕ್ಷೇತ್ರಗಳಿಗೆ ನೀಡಿದ್ದ ಅನುದಾನ ತಡೆಹಿಡಿಯುವ ಮೂಲಕ ದ್ವೇಷ ರಾಜಕಾರಣ ಮಾಡಿದ್ದಾರೆ. ಈ ರೀತಿಯ ದ್ವೇಷ ರಾಜಕಾರಣ ಸರಿಯಲ್ಲ ಎಂದು ಟೀಕಿಸಿದರು.

First published:November 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ