ಕಾಂಗ್ರೆಸ್​​-ಜೆಡಿಎಸ್​​ಗೆ ಸಂಕಷ್ಟ: ‘ಮೈತ್ರಿ ಸರ್ಕಾರ ಬೀಳುವ ಮಾತೇ ಇಲ್ಲ’ ಎಂದು ಹೆಚ್​ಡಿ ದೇವೆಗೌಡ ಸ್ಪಷ್ಟನೆ


Updated:September 14, 2018, 5:55 PM IST
ಕಾಂಗ್ರೆಸ್​​-ಜೆಡಿಎಸ್​​ಗೆ ಸಂಕಷ್ಟ: ‘ಮೈತ್ರಿ ಸರ್ಕಾರ ಬೀಳುವ ಮಾತೇ ಇಲ್ಲ’ ಎಂದು ಹೆಚ್​ಡಿ ದೇವೆಗೌಡ ಸ್ಪಷ್ಟನೆ

Updated: September 14, 2018, 5:55 PM IST
ನ್ಯೂಸ್​-18 ಕನ್ನಡ

ಬೆಂಗಳೂರು(ಸೆಪ್ಟೆಂಬರ್​​.14): ಕಾಂಗ್ರೆಸ್​​-ಜೆಡಿಎಸ್​ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ಕೆಲ ಶಕ್ತಿಗಳು ಯತ್ನಿಸುತ್ತಿವೆ. ಸರ್ಕಾರ ಉಳಿಸಲು ದೇವರ ಅನುಗ್ರಹ ಪಡೆಯಲು ಹೋಗಿದ್ದೆ. ಹೀಗಾಗಿ ಶಿವಮೊಗ್ಗಕ್ಕೆ ಬರಲು ತಡವಾಯಿತು. ಸರ್ಕಾರ ಬೀಳಿಸಲು ಮುಂದಾಗಿದ್ದವರಿಗೆ  ನಿರಾಶೆಯಾಗಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಬಿಜೆಪಿ ಕಾಲೆಳೆದಿದ್ದಾರೆ.

ಸಿಎಂ ಹೆಚ್ಡಿಕೆ 48 ಸಾವಿರ ಕೋಟಿ ರೈತರ ಸಾಲಮನ್ನಾ ಮಾಡಿದ್ದಾರೆ. ಇಷ್ಟು ದೊಡ್ಡಮೊತ್ತದ ಸಾಲಮನ್ನಾವಾದಾಗ ಅಭಿವೃದ್ಧಿ ಕುಂಠಿತವಾಗಬಾರದು. ಅದನ್ನು ಸರಿದೂಗಿಸಿಕೊಂಡು ಹೋಗುವ ಕೆಲಸ ಸಿಎಂ ಮಾಡ್ತಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ಸಹಕಾರ ಪಡೆದು ಸಾಲಮನ್ನಾ ಮಾಡಲಾಗಿದೆ. ನಮ್ಮಲ್ಲಿ ಎಲ್ಲವೂ ಸರಿಯಾಗಿದೆ ಎಂದು ಮಾಜಿ ಪ್ರಧಾನಿಗಳು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಒಂದು ದೊಡ್ಡ ಪಕ್ಷ, ಸಣ್ಣ ಪುಟ್ಟ ಗೊಂದಲಗಳಿವೆ. ಅವರಲ್ಲಿರುವ ಗೊಂದಲಗಳನ್ನು ಸರಿ ಪಡಿಸಿಕೊಳ್ಳುತ್ತಾರೆ. ಕಳೆದ 3 ತಿಂಗಳಿನಿಂದ ಸರ್ಕಾರ ಬೀಳಲಿದೆ ಎಂದು ಕೆಲವರು ಕಾಯುತ್ತಿದ್ದಾರೆ. ಸರ್ಕಾರ ಬೀಳಲಿದೆ ಎಂದು ಮಹೂರ್ತ ದಿನಾಂಕ ಫಿಕ್ಸ್ ಮಾಡಿರುವವರಿಗೆ ನಿರಾಸೆ ಕಾದಿದೆ ಎಂದರು.

ಇನ್ನು ಹತ್ತು ಗಂಟೆಗಳ ಕಾಲ ರಾಜ್ಯದ ಮುಖ್ಯಮಂತ್ರಿಯೋರ್ವ ಜನತಾ ದರ್ಶನ ಮಾಡಲು ಸಾಧ್ಯವಿಲ್ಲ. ಈ ಕೆಲಸವನ್ನ ಕುಮಾರಸ್ವಾಮಿಯವರು ಮಾಡುತ್ತಿದ್ದಾರೆ. ನಾನು ವಾತ್ಸಲ್ಯದಿಂದ ಹೇಳುತ್ತಿಲ್ಲ. ಬದಲಿಗೆ ವಾಸ್ತವ ನುಡಿಯುತ್ತಿದ್ದೇನೆ ಎಂದು ಮಲೆನಾಡು ಕ್ರೆಡಿಟ್ ಕೊ ಅಪರೇಟಿವ ಸೂಸೈಟಿ ಆಯೋಜಿಸಿದ್ದ ರಜತ ಮಹೊತ್ಸವದ ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭದಲ್ಲಿ ಹೇಳಿದ್ಧಾರೆ.

ಈ ಬೆನ್ನಲೇ ದೇವೆಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ಮಾಜಿ ಡಿಸಿಎಂ, ನಾವ್ಯಾರು ಆ ಪ್ರಯತ್ನಕ್ಕೆ ಕೈ ಹಾಕಲ್ಲ. ಅವರಾಗಿ ಅವರೇ ಸರ್ಕಾರ ಬೀಳಿಸುತ್ತಾರೆ. ಅವರ ಒಳಜಗಳದಿಂದ ಸರ್ಕಾರ ಬೀಳುತ್ತೆ. ಹೀಗಾಗಿ ನಾವ್ಯಾರು ಆ ಪ್ರತಯ್ನ ಮಾಡಬೇಕಿಲ್ಲ ಎಂದು ಆರ್​. ಅಶೋಕ್​ ತಿರುಗೇಟು ನೀಡಿದರು.
Loading...

ಪ್ರತಿಕೆಗಳಲ್ಲಿ ದಿನಾ ನೋಡುತ್ತಲೇ ಇದ್ದೇನೆ. ಕಾಂಗ್ರೆಸ್​ ಜಗಳವನ್ನು ನಮ್ಮ ತಲೆ ಮೇಲೆ ಹಾಕುತ್ತಿದೆ. ಮೊದಲು ಅವರ ಮನೆ ಜಗಳ ಸರಿ ಮಾಡಿಕೊಳ್ಳಲಿ. ನಂತರ ನಮ್ಮ ಮನೆಯವರಿಗೆ ಹೇಳಲಿ. ನನಗೂ ಯಾರ ಜೊತೆಯೂ ಸಂಪರ್ಕವಿಲ್ಲ. ಆಪರೇಷನ್​ ಕಮಲ ನಾನೂ ಮಾಡ್ತಿಲ್ಲ, ನಮ್ಮವರು ಯಾರೂ ಮಾಡ್ತಿಲ್ಲ ಎಂದು ಸ್ಪಷ್ಟೀಕರಣ ನೀಡಿದರು.

ಕಾಂಗ್ರೆಸ್​​ ಪಾರ್ಟಿಯಲ್ಲಿನ ಜಗಳ ನಾವು ಹೇಗೆ ಮುಗಿಸಲು ಸಾಧ್ಯ. ಈ ಸರ್ಕಾರ ಜನಪರ ಕೆಲಸ ಮಾಡಬೇಕೆಂಬುದು ನಮ್ಮ ಆಶಯ. ಅದನ್ನು ಬಿಟ್ಟು ಅವರು ಬೀದಿಯಲ್ಲಿ ಜಗಳ ಮಾಡಿಕೊಳ್ಳುತ್ತಿದ್ದಾರೆ. ಇವೆಲ್ಲವನ್ನೂ ಬಿಟ್ಟು ಸರ್ಕಾರ ಜನರತ್ತ ಕೆಲಸ ಮಾಡಲಿ ಎಂದು ನ್ಯೂಸ್​ 18 ಕನ್ನಡಕ್ಕೆ ಮಾಜಿ ಡಿಸಿಎಂ ಆರ್​.ಅಶೋಕ್​ ಹೇಳಿದರು.
First published:September 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...