ಯರಿ ದೊರೆ ಅಕ್ಕತಲೆ, ದೈವ ದರ್ಬಾರ ಅಕ್ಕತಲೆ ಪರಾಕ್: ಕಾರ್ಣಿಕದ ನುಡಿಯ ರಾಜಕೀಯ ವಿಶ್ಲೇಷಣೆ ಹೇಗಿದೆ ಗೊತ್ತಾ.?

ದಸರಾ ಹಬ್ಬದ (dasara) ಸಂದರ್ಭದಲ್ಲಿ ಒಂಬತ್ತು ದಿನಗಳ ಕಾಲ ಉಪವಾಸ ವೃತ ಮಾಡೋ ಗೊರವಯ್ಯ ನಾಗಪ್ಪ ಉರ್ಮಿ, ಆಯುಧ ಪೂಜೆ (Ayudhapuja) ದಿನದಂದು ಇಪ್ಪತ್ತೊಂದು ಅಡಿಯ ಬಿಲ್ಲನ್ನೇರಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸದ್ದಲೆ ಅನ್ನುತ್ತಲೆ ಕಾರ್ಣಿಕವಾಣಿ ನುಡಿಯುತ್ತಾನೆ

ಗೊರವಯ್ಯ ನಾಗಪ್ಪ ಉರ್ಮಿ

ಗೊರವಯ್ಯ ನಾಗಪ್ಪ ಉರ್ಮಿ

 • Share this:
  ಹಾವೇರಿ (ಅ.14):  ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡದಲ್ಲಿ   ದೇವರಗುಡ್ಡದ ಮಾಲತೇಶ ದೇವಸ್ಥಾನ (malatesh temple devaragudda) ಐತಿಹಾಸಿಕ ದೇವಸ್ಥಾನದಲ್ಲಿ ಸುಮಾರು ವರ್ಷಗಳಿಂದ  ಆಯುಧ ಪೂಜೆ ದಿನದಂದು ಮಾಲತೇಶ ದೇವರ ಕಾರ್ಣಿಕೋತ್ಸವ ನಡೆಯುತ್ತದೆ. ಈ ಕಾರ್ಣಿಕವಾಣಿಯನ್ನ (Karnikavani) ವರ್ಷದ ಭವಿಷ್ಯವಾಣಿ ಅಂತಲೆ ಜನರು ನಂಬಿಕೊಂಡು ಬಂದಿದ್ದಾರೆ. ದಸರಾ ಹಬ್ಬದ (dasara) ಸಂದರ್ಭದಲ್ಲಿ ಒಂಬತ್ತು ದಿನಗಳ ಕಾಲ ಉಪವಾಸ ವೃತ ಮಾಡೋ ಗೊರವಯ್ಯ ನಾಗಪ್ಪ ಉರ್ಮಿ, ಆಯುಧ ಪೂಜೆ (Ayudhapuja) ದಿನದಂದು ಇಪ್ಪತ್ತೊಂದು ಅಡಿಯ ಬಿಲ್ಲನ್ನೇರಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸದ್ದಲೆ ಅನ್ನುತ್ತಲೆ ಕಾರ್ಣಿಕವಾಣಿ ನುಡಿಯುತ್ತಾನೆ. ಪ್ರತಿ ವರ್ಷದಂತೆ ಈ ವರ್ಷವೂ ಬಿಲ್ಲನ್ನೇರಿ ಗೊರವಯ್ಯ ನಾಗಪ್ಪ ಕಾರ್ಣಿಕವಾಣಿ ನುಡಿದಿದ್ದಾನೆ.

  ರಾಜ್ಯ ರಾಜಕೀಯ ಕುರಿತು ಭವಿಷ್ಯ

  ಈ ಬಾರಿ ಯರಿ ದೊರೆ ಅಕ್ಕತಲೆ, ದೈವ ದರ್ಬಾರ್ ಅಕ್ಕತಲೆ ಅಂತಾ ಕಾರ್ಣಿಕವಾಣಿಯನ್ನ ನುಡಿದಿದ್ದಾನೆ. ರೈತರ ಬೆಳೆಗಳು ಉತ್ತಮ ಫಸಲು ಬಂದು, ರೈತರ ಬದುಕು ಸಮೃದ್ಧ ಆಗುತ್ತದೆ. ರೋಗ ರುಜಿನಗಳು ಬರದಂತೆ, ಮೂರನೆ ಅಲೆ ಬರದಂತೆ ಜನರ ಮೇಲೆ ದೈವ ಕೃಪೆ ಇರುತ್ತದೆ ಎಂದು ಕಾರ್ಣಿಕವಾಣಿ ವಿಶ್ಲೇಷಿಸಿದ ಮಾಲತೇಶ ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ ಭಟ್, ರಾಜಕೀಯವಾಗಿ‌ ಪಕ್ಷೇತರರ ಸಹಕಾರದಿಂದ ಮುಂದಿನ ರಾಜಕೀಯ ಭವಿಷ್ಯ ಇರುತ್ತದೆ. ದೇವರಿಗೆ ಪ್ರೀತಿಯಾದಂಥಾ ಆಡಳಿತವನ್ನ ಮುಂದಿನ ಸರಕಾರಗಳು ಕೊಡುತ್ತವೆ ಅಂತಾ ಕಾರ್ಣಿಕವಾಣಿ ವಿಶ್ಲೇಷಿಸಿದ್ರು  ಮಾಲತೇಶ ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ ಭಟ್.

  ನೆರೆ ರಾಜ್ಯದಿಂದಲೂ ಭವಿಷ್ಯ ಕೇಳಲು ಆಗಮಿಸುತ್ತಾರೆ ಭಕ್ತರು

  ವಿಶೇಷವಾಗಿ ಮಾತಲೇಶ ದೇವರ ಕಾರ್ಣಿಕವನ್ನ ಕೇಳಿಯೇ ರೈತರು ಮಳೆ, ಬೆಳೆಯನ್ನ ನಿರ್ಧಾರ ಮಾಡ್ತಾರೆ. ಸುಮಾರು ವರ್ಷಗಳಿಂದಲೂ ನಡೆಯೋ ಮಾಲತೇಶ ದೇವರ ಕಾರ್ಣಿಕವಾಣಿ ಸತ್ಯವಾಗಿವೆ ಎಂಬ ನಂಬಿಕೆ ಇಲ್ಲಿಗೆ ಬರೋ ಭಕ್ತರಲ್ಲಿ ಬಲವಾಗಿದೆ. ಇನ್ನು ಕಳೆದ ವರ್ಷ ನಡೆದಿದ್ದ ವ್ಯಾದಿ ಬೂದಿಯಾತಲೆ ಪರಾಕ್ ಎಂಬ ಕಾರ್ಣಿಕವಾಣಿಯಂತೆ ಮಹಾಮಾರಿ ಕೊರೊನಾ ಬೂದಿಯಾಗಿ ಹೋಯ್ತು. ಹೀಗಾಗಿ ವರ್ಷದ ಭವಿಷ್ಯವಾಣಿ ಎಂದು ನಡೆಯೋ ಮಾಲತೇಶ ದೇವರ ಕಾರ್ಣಿಕವಾಣಿ ಕೇಳಲು ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ಬೇರೆ ಬೇರೆ ರಾಜ್ಯಗಳಿಂದಲೂ ಜನರು ಬರ್ತಾರೆ.

  ಇದನ್ನು ಓದಿ: ಅ.18ಕ್ಕೆ 10, 12ನೇ ತರಗತಿ ಪರೀಕ್ಷೆ ದಿನಾಂಕ ಪ್ರಕಟ: ಈ ಬಾರಿ ಪ್ರಮುಖ ವಿಷಯಗಳಿಗೆ ಮಾತ್ರ ನಡೆಯಲಿದೆ ಎಕ್ಸಾಂ

  ಕಾರ್ಣಿಕ ವಾಣಿ ಅನುಸಾರವೇ ಮಳೆ ಬೆಳೆ ನಿರ್ಧಾರ

  ಆಯುಧ ಪೂಜೆ ದಿನದಂದು ಸಂಜೆಯಾಗುತ್ತಲೆ ದೇವರಗುಡ್ಡದ ಕರಿಯಾಲದ ಬಳಿ ಕಾರ್ಣಿಕೋತ್ಸವ ನಡೆಯುತ್ತದೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತರ ದಂಡೆ ಕಾರ್ಣಿಕವಾಣಿ ಕೇಳಲು ಬಂದಿರ್ತಾರೆ. ಸಾವಿರಾರು ಸಂಖ್ಯೆಯ ಜನರ ಗದ್ದಲ ಜೋರಾಗಿದ್ರೂ ಕಾರ್ಣಿಕವಾಣಿ ನುಡಿಯೋ ಗೊರವಯ್ಯ ಬಿಲ್ಲನ್ನೇರಿ ಸದ್ದಲೇ ಅನ್ನುತ್ತಲೆ ನೆರೆದಿದ್ದ ಜನರ ದಂಡು ಒಂದು ಕ್ಷಣ ಶಾಂತರಾಗ್ತಾರೆ. ಆಗ ಗೊರವಯ್ಯ ನಾಗಪ್ಪ ಉರ್ಮಿ ಕಾರ್ಣಿಕವಾಣಿ ನುಡಿದು ಕೆಳಕ್ಕೆ ಬೀಳುತ್ತಾನೆ. ಕಾರ್ಣಿಕವಾಣಿ ಆಲಿಸಿದ ಜನರು ಕಾರ್ಣಿಕ ವಿಶ್ಲೇಷಣೆ ಮಾಡ್ತಾ ವರ್ಷದ ಮಳೆ, ಬೆಳೆ ನಿರ್ಧರಿಸುತ್ತಾ ಊರಿನತ್ತ ವಾಪಸ್ ಆಗುತ್ತಾರೆ.

  ಇದನ್ನು ಓದಿ: ಐಟಿ ಉದ್ಯೋಗಕ್ಕೆ ಗುಡ್ ಬೈ ಹೇಳಿ ಸಗಣಿ ಗೊಬ್ಬರ ಮಾರಾಟಕ್ಕೆ ಮುಂದಾದ ಯುವಕ

  ರೈತರ ಕಾರ್ಣಿಕವಾಣಿ

  ಸುಮಾರು ವರ್ಷಗಳ‌ ಇತಿಹಾಸ ಹೊಂದಿರೋ‌ ಮಾಲತೇಶ ದೇವರ ಕಾರ್ಣಿಕವಾಣಿ ರೈತಾಪಿ ವರ್ಗದ ಜನರಲ್ಲಿ ವರ್ಷದ ಭವಿಷ್ಯವಾಣಿ ಅಂತಲೆ ನಂಬಿಕೆ ಮೂಡಿದೆ. ವಿಶೇಷವಾಗಿ ರೈತರು ಕಾರ್ಣಿಕವಾಣಿಯನ್ನ ಬಲವಾಗಿ ನಂಬಿಕೊಂಡು ಬಂದಿದ್ದಾರೆ. ರೈತರ ಜೊತೆಗೆ ಕಾರ್ಣಿಕವಾಣಿಯನ್ನ ರಾಜಕೀಯವಾಗಿಯೂ ವಿಶ್ಲೇಷಣೆ ಮಾಡಿಕೊಂಡು ಬರಲಾಗ್ತಿದೆ. ಒಟ್ನಲ್ಲಿ ವರ್ಷದ ಭವಿಷ್ಯವಾಣಿ ಮಾಲತೇಶ ದೇವರ ಕಾರ್ಣಿಕವಾಣಿ ಕೇಳಲು ಜನರ ದಂಡೆ ದೇವರಗುಡ್ಡಕ್ಕೆ ಆಗಮಿಸಿ, ಕಾರ್ಣಿಕವಾಣಿ ಆಲಿಸಿ, ಮಳೆ ಬೆಳೆ ನಿರ್ಧರಿಸುತ್ತಾ ಊರಿಗೆ ವಾಪಸ್ ಆಗುತ್ತಾರೆ.

  ವರದಿ: ಮಂಜುನಾಥ್ ತಳವಾರ 
  Published by:Seema R
  First published: