• Home
  • »
  • News
  • »
  • state
  • »
  • Resort Politics: ಕೊನೆಗೂ ಫಲಿಸಿತು ಗ್ರಾಮ ಪಂಚಾಯತಿ ರೆಸಾರ್ಟ್ ಪಾಲಿಟಿಕ್ಸ್; ವಿಮಾನದಲ್ಲಿ ಬಂದು ಮತ ಹಾಕಿದ್ದ ಸದಸ್ಯರು

Resort Politics: ಕೊನೆಗೂ ಫಲಿಸಿತು ಗ್ರಾಮ ಪಂಚಾಯತಿ ರೆಸಾರ್ಟ್ ಪಾಲಿಟಿಕ್ಸ್; ವಿಮಾನದಲ್ಲಿ ಬಂದು ಮತ ಹಾಕಿದ್ದ ಸದಸ್ಯರು

ರೆಸಾರ್ಟ್​ ಪಾಲಿಟಿಕ್ಸ್​

ರೆಸಾರ್ಟ್​ ಪಾಲಿಟಿಕ್ಸ್​

ಒಟ್ಟು 13 ಜನ ಗ್ರಾ.ಪಂ ಸದಸ್ಯರಲ್ಲಿ 9 ಸದಸ್ಯರು ಸಂತೋಷ್ ಭಟ್ ಗುರೂಜಿ ಬಣದವರು,ಇನ್ನುಳಿದಂತೆ ನಾಲ್ವರು ಬಿಜೆಪಿ ಸದಸ್ಯರಾಗಿದ್ದರು. ದೇವರಗುಡ್ಡ ಮಾಲತೇಶ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರಾಗಿರುವ ಸಂತೋಷ ಭಟ್ ಗುರೂಜಿ, ನಮ್ಮ ಊರು ನಮ್ಮ ಗುರಿ ಸಂಘಟನೆ ಸ್ಥಾಪಿಸಿದ್ದರು.

  • News18 Kannada
  • Last Updated :
  • Haveri, India
  • Share this:

ಹಾವೇರಿ: ಜಿಲ್ಲೆಯ ರಾಣೆಬೆನ್ನೂರು (Ranebennuru, Haveri) ತಾಲೂಕಿನ ದೇವರಗುಡ್ಡ ಗ್ರಾಮ ಪಂಚಾಯತಿ (Devargudda Gram Panchayat) ರೆಸಾರ್ಟ್ (Resort Politics) ರಾಜಕೀಯ ಮೇಲಾಟ ಕೊನೆಗೂ ಸಕ್ಸಸ್​ ಕಂಡಿದೆ. ಗ್ರಾಮ  ಪಂಚಾಯತಿ ಮಟ್ಟದಲ್ಲಿ ನಡೆದಿದ್ದ ರೆಸಾರ್ಟ್ ಪಾಲಿಟಿಕ್ಸ್​ ರಾಜ್ಯಾದ್ಯಂತ ಸದ್ದು ಮಾಡಿತ್ತು. ರೆಸಾರ್ಟ್ ಸೇರಿದ್ದ ಸದಸ್ಯರ ಬಣ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಾಲತೇಶ ದುರಗಪ್ಪ ನಾಯರ್ (Malatesh Duragappa Nayar) ಅವರನ್ನು ಖುರ್ಚಿಯಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾಗಿದೆ. ಸಂತೋಷ್ ಭಟ್ ಗುರೂಜಿ ಬಣದ ಒಟ್ಟು 9 ಜನ ಸದಸ್ಯರು 40 ದಿನ ಬೆಂಗಳೂರಿನ ರೆಸಾರ್ಟ್​ನಲ್ಲಿ (Bengaluru Resort) ಕಳೆದಿದ್ದರು. ಬೆಂಗಳೂರಿನಿಂದ ವಿಮಾನದಲ್ಲಿ (Plane) ಬಂದಿದ್ದ ಸದಸ್ಯರು ಅವಿಶ್ವಾಸ ಗೊತ್ತುವಳಿಯಲ್ಲಿ ಭಾಗಿಯಾಗಿ ಮಾಲತೇಶ್ ದುರಗಪ್ಪ ನಾಯರ್ ವಿರುದ್ಧ ಮತ ಚಲಾಯಿಸಿದ್ದರು. ಇದೀಗ ಆಪರೇಷನ್ ಕಮಲದ ಮಾದರಿಯಲ್ಲೇ ನಡೆದ ಆಪರೇಷನ್ ಗ್ರಾಮ ಪಂಚಾಯಿತಿ ಯಶಸ್ಸಿಯಾಗಿದೆ.


ಒಟ್ಟು 13 ಸದಸ್ಯರನ್ನೊಳಗೊಂಡು ಗ್ರಾಮ ಪಂಚಾಯ್ತಿಗೆ 15 ತಿಂಗಳ ಒಪ್ಪದಂತೆ ಮಾಲತೇಶ ದುರಗಪ್ಪ ನಾಯರ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಆದರೆ 15 ತಿಂಗಳ ಬಳಿಕ ಮಾಲತೇಶ್ ಅಧ್ಯಕ್ಷ ಸ್ಥಾನ ಬಿಟ್ಟು ಕೊಟ್ಟಿರಲಿಲ್ಲ. ಹೀಗಾಗಿ ಗ್ರಾ.ಪಂ ಅದ್ಯಕ್ಷ ಮಾಲತೇಶ್ ವಿರುದ್ಧ ಸದಸ್ಯರು ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ್ದರು.


ರೆಸಾರ್ಟ್​ ಪಾಲಿಟಿಕ್ಸ್ ಹಿಂದೆ ಗುರೂಜಿ


ಒಟ್ಟು 13 ಜನ ಗ್ರಾ.ಪಂ ಸದಸ್ಯರಲ್ಲಿ 9 ಸದಸ್ಯರು ಸಂತೋಷ್ ಭಟ್ ಗುರೂಜಿ ಬಣದವರು,ಇನ್ನುಳಿದಂತೆ ನಾಲ್ವರು ಬಿಜೆಪಿ ಸದಸ್ಯರಾಗಿದ್ದರು. ದೇವರಗುಡ್ಡ ಮಾಲತೇಶ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರಾಗಿರುವ ಸಂತೋಷ ಭಟ್ ಗುರೂಜಿ, ನಮ್ಮ ಊರು ನಮ್ಮ ಗುರಿ ಸಂಘಟನೆ ಸ್ಥಾಪಿಸಿದ್ದರು.


devaragudda gram panchayat resort politics finally wins mrq
ರೆಸಾರ್ಟ್​ ಪಾಲಿಟಿಕ್ಸ್​


ಅವಿಶ್ವಾಸ ನಿರ್ಣಯ ಮಂಡನೆ


ಗ್ರಾ.ಪಂ ಅದ್ಯಕ್ಷ ಮಾಲತೇಶ್ ಮಾತಿಗೆ ತಪ್ಪಿದ ಕಾರಣ ಅವಿಶ್ವಾಸ ನಿರ್ಣಯ ಮಂಡಿಸಲಾಗಿತ್ತು.  ಆದ್ರೆ ಮಾಲತೇಶ್ ಗ್ರಾ.ಪಂ ಸದಸ್ಯರನ್ನು ಹೈಜಾಕ್ ಮಾಡಬಹುದು ಎಂಬ ಆತಂಕದ ಹಿನ್ನೆಲೆ ತಮ್ಮ ಬಣದ 9 ಸದಸ್ಯರನ್ನು ಸಂತೋಷ್ ಭಟ್ ಗುರೂಜಿ ಬೆಂಗಳೂರಿನ ರೆಸಾರ್ಟ್​​ಗೆ ಕಳುಹಿಸಿದ್ದರು. ಹಾವೇರಿ ಉಪ ವಿಭಾಗಾಧಿಕಾರಿ ಶಿವಾನಂದ್ ಉಳ್ಳಾಗಡ್ಡಿ ಅವಿಶ್ವಾಸ ನಿರ್ಣಯ ಮಂಡನೆ ಪ್ರಕ್ರಿಯೆ ನಡೆಸಿದ್ದರು.


ಅಧ್ಯಕ್ಷರಾಗಿ ಆಯ್ಕೆಯಾದ ಸುರೇಶ್ ಚಳಗೇರಿ


ಇಂದು ದೇವರಗುಡ್ಡ ಗ್ರಾಮ‌ ಪಂಚಾಯತಿಗೆ ಸುರೇಶ್ ಚಳಗೇರಿ ಅವರನ್ನು ಹೊಸ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. 7 ಮತ ಪಡೆದು ಸುರೇಶ್ ಚಳಗೇರಿ ಅದ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.


ಸಂತೋಷ್ ಭಟ್ ಗುರೂಜಿ ಪ್ರತಿಕ್ರಿಯೆ


ನೂತನ ದೇವರುಗುಡ್ಡ ಗ್ರಾಮ ಅಧ್ಯಕ್ಷರಿಗೆ ಶುಭ ಹಾರೈಸಿ ಮಾಧ್ಯಮಗಳ ಜೊತೆ ಮಾತನಾಡಿದ ಸಂತೋಷ್ ಭಟ್ ಗುರೂಜಿ, ದೇವರಗುಡ್ಡ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಸುರೇಶ್ ಅವರು ಆಯ್ಕೆಯಾಗಿದ್ದಾರೆ. ಇದಕ್ಕೆ ಶ್ರಮವಹಿಸಿದ ಆರು ಜನ ಗ್ರಾಮ ಪಂಚಾಯತಿ ಸದಸ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.


devaragudda gram panchayat resort politics finally wins mrq
ರೆಸಾರ್ಟ್​ ಪಾಲಿಟಿಕ್ಸ್​


ಗ್ರಾಮ ಪಂಚಾಯತಿಯಲ್ಲಿ ಸುವ್ಯವಸ್ಥಿತ ಆಡಳಿತ ನಡೆಸಿ, ಪ್ರಣಾಳಿಕೆಯಲ್ಲಿಯ ಯೋಜನೆಗಳನ್ನು ಜಾರಿಗೆ ತನ್ನಿ. ಮಾದರಿ ಗ್ರಾಮವನ್ನಾಗಿ ಮಾಡಿ ಎಂದು ನೂತನ ಅಧ್ಯಕ್ಷರಿಗೆ ಸೂಚಿಸಿದರು. ಇದರ ಜೊತೆಗೆ ಉತ್ತಮ ಆಡಳಿತ ಮಾಡೋಕೆ ಹಾಗೂ ಅಭಿವೃದ್ಧಿ ಮಾಡುವ ಕೆಲಸಗಳಿಗೆ ನಾನು ಬೆನ್ನಲುಬಾಗಿ ಇರುತ್ತೇನೆಂದು ಎಂದು ಹೇಳಿದರು.


ಇದನ್ನೂ ಓದಿ: Udupi: ಬಲೆಗೆ ಬಿತ್ತು 2 ಲಕ್ಷಕ್ಕೂ ಅಧಿಕ ಮೌಲ್ಯದ ಗೋಳಿ ಮೀನು


ಸುರೇಶ್ ಚಳಗೇರಿ ಮೊದಲ ಪ್ರತಿಕ್ರಿಯೆ


ಮಾಧ್ಯಮಗಳ ಜೊತೆ ಮಾತನಾಡಿದ ನೂತನ ಅಧ್ಯಕ್ಷ ಸುರೇಶ್ ಚಳಗೇರಿ, ನಮ್ಮ ಸದಸ್ಯರ ಬೆಂಬಲದಿಂದಾಗಿ ಇಂದು ನಾನು ಅಧ್ಯಕ್ಷನಾಗಿದ್ದೇನೆ. ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಕೆಲಸಗಳಲ್ಲಿ ತೊಡಗಿಕೊಳ್ಳುತ್ತೇನೆ ಎಂದು ಹೇಳಿದರು.


ಎಲ್ಲಾ ವಾರ್ಡ್​ಗಳಲ್ಲೂ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುತ್ತೇನೆ ಎಂದು ನೂತನ ಅಧ್ಯಕ್ಷರು ಭರವಸೆ ನೀಡಿದರು.

Published by:Mahmadrafik K
First published: