ದೇವನಹಳ್ಳಿ: ವಿಧಾನಸಭಾ ಚುನಾವಣೆ (Assembly Elections ) ಹಿನ್ನೆಲೆಯಲ್ಲಿ ಬೆಂಗಳೂರಿಗೆ (Bengaluru) ಕೇಂದ್ರ ಸಚಿವ ಅಮಿತ್ ಶಾ (Amit Shah) ಆಗಮಿಸಿದ್ದಾರೆ. ದೇವನಹಳ್ಳಿಯಲ್ಲಿ (Davanahalli) ಮಳೆ ಬರುತ್ತಿರುವ ಹಿನ್ನೆಲೆ ರೋಡ್ಶೋ ರದ್ದಾಗಿದೆ. ಹೀಗಾಗಿ ಏರ್ಪೋರ್ಟ್ನಿಂದ ಬೆಂಗಳೂರಿನ ತಾಜ್ವೆಸ್ಟ್ ಎಂಡ್ ಹೋಟೆಲ್ ಕಡೆ ಅಮಿತ್ ಶಾ ಪ್ರಯಾಣ ಬೆಳೆಸಿದ್ದಾರೆ. ರಾತ್ರಿ 7.45ರಿಂದ 9ರವರೆಗೆ ರಾಜ್ಯ ಬಿಜೆಪಿ ನಾಯಕರ ಜೊತೆ ಅಮಿತ್ ಶಾ ಸಭೆ ನಡೆಸಲಿದ್ದಾರೆ. ರಾತ್ರಿ ರೇಸ್ಕೋರ್ಸ್ ರಸ್ತೆಯ (Race Course Road ) ಹೋಟೆಲ್ನಲ್ಲೇ ವಾಸ್ತವ್ಯ ಹೂಡಲಿದ್ದಾರೆ. ನಾಳೆ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ನಂತರ ನಾಳೆ ಮಧ್ಯಾಹ್ನ 12 ಗಂಟೆಗೆ ದೆಹಲಿಗೆ (Delhi) ವಾಪಸಾಗಲಿದ್ದಾರೆ.
11 ಮಂದಿಗೆ ಗಾಯ, ಆಸ್ಪತ್ರೆಗೆ ದಾಖಲು
ಇತ್ತ, ಬಿಜೆಪಿ ಅಮಿತ್ ಶಾ ರೋಡ್ ಶೋಗೆ ಆಗಮಿಸಿದವರ ವಾಹನ ಅಪಘಾತಕ್ಕೆ ಒಳಗಾಗಿ 11 ಮಂದಿ ಗಾಯಗೊಂಡಿರುವ ಘಟನೆ ದೇವನಹಳ್ಳಿ ತಾಲೂಕು ವಿಜಯಪುರ ಮಾರ್ಗದ ಕುರುಬರಕುಂಟೆ ಬಳಿ ನಡೆದಿದೆ. ರೋಡ್ ಶೋ ಗೆ ಬಂದಿದ್ದವರ ಟಾಟಾ ಏಸ್ ವಾಹನ ಅಪಘಾತಕ್ಕೆ ಒಳಗಾಗಿದ್ದು, ದೇವನಹಳ್ಳಿ ತಾಲೂಕಿನ ದೊಡ್ಡಚೀಮನಹಳ್ಳಿ ಗ್ರಾಮದಿಂದ ಆಗಮಿಸಿದ್ದ 11 ಜನರು ಅಪಘಾತದಲ್ಲಿ ಗಾಯಗೊಂಡಿದ್ದಾರೆ.
ಟಾಟಾ ಏಸ್ ನಲ್ಲಿ ಹೆಚ್ಚಿನ ಜನ ಬಂದ ಕಾರಣ ಸ್ಕಿಡ್ ಆಗಿ ಅಪಘಾತಕ್ಕೆ ಒಳಗಾಗಿರುವ ಶಂಕೆ ವ್ಯಕ್ತವಾಗಿದ್ದು, ಅಪಘಾತದಲ್ಲಿ ಗಾಯಗೊಂಡವರಿಗೆ ದೇವನಹಳ್ಳಿ ಸರ್ಕಾರಿ ಆಸ್ವತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಟಾಟಾ ಏಸ್ ವಾಹನ ಚಾಲಕ ಹಾಗೂ ಹಿಂಭಾಗ ಇದ್ದವರು ಗಾಯಗೊಂಡಿದ್ದಾರೆ.
ಆ್ಯಪಲ್ಗಾಗಿ ಮುಗಿಬಿದ್ದ ಜನರು
ಇನ್ನು, ಅಮಿತ್ ಶಾ ಅವರ ರೋಡ್ ಶೋ ರದ್ದಾಗುತ್ತಿದ್ದಂತೆ ಅಮಿತ್ ಶಾ ಅವರಿಗೆ ಹಾಕಲು ತಂದಿದ್ದ ಆ್ಯಪಲ್ ಹಾರಕ್ಕೆ ಜನರು ಮುಗಿದ್ದ ಘಟನೆಯೂ ನಡೆದಿದೆ. ಅಮಿತ್ ಶಾ ರೋಡ್ ಶೋ ರದ್ದಾದ ಹಿನ್ನೆಲೆ ಕ್ರೇನ್ ನಲ್ಲಿ ನೇತು ಹಾಕಲಾಗಿದ್ದ ಆ್ಯಪಲ್ ಹಾರವನ್ನು ಕೆಳಗಿಳಿಸಲಾಯಿತು. ಈ ವೇಳೆ ಸ್ಥಳದಲ್ಲಿ ನೆರೆದಿದ್ದ ಕಾರ್ಯಕರ್ತರು ತಾ ಮುಂದು ನಾ ಮುಂದು ಎಂದು ಆ್ಯಪಲ್ ಕಿತ್ತು ಕೊಳ್ಳಲು ಮುಗಿಬಿದ್ದರು. ಕ್ಷಣ ಮಾತ್ರದಲ್ಲಿ ಆ್ಯಪಲ್ ಹಾರ ಮಾಯವಾಯ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ