HOME » NEWS » State » DETENTION OF ACCUSED OF ROBBERY ON BANGLORE HIGHWAY ANLM MAK

Crime News: ಹೆದ್ದಾರಿಯಲ್ಲಿ ದರೋಡೆ ಮಾಡುತ್ತಿದ್ದ ಆರೋಪಿಗಳ ಬಂಧನ

ಈ ನಡುವೆ ಆರೋಪಿಗಳು ಬರುತ್ತಿರುವ ಮಾಹಿತಿಯನ್ನ ವಕೀಲ ಮಹಂತೇಶ್ ಪೊಲೀಸರಿಗೆ ತಿಳಿಸಿದ ಹಿನ್ನೆಲೆ ಪೊಲೀಸರು ಮಹಂತೇಶ್ ತಿಳಿಸಿದ ಜಾಗಕ್ಕೆ ಬಂದು ಆರೋಪಿಗಳ ಬಂಧಿಸಿ ಜೈಲಿಗಟ್ಟಿದ್ದಾರೆ. ಬಂದಿತರಿಂದ 50 ಸಾವಿರ ನಗದು, ಮೊಬೈಲ್ ಹಾಗೂ ಮಾರಕಾಸ್ತ್ರ ಗಳನ್ನ ವಶಕ್ಕೆ ಪಡೆಯಲಾಗಿದೆ.

news18-kannada
Updated:March 14, 2021, 8:40 PM IST
Crime News: ಹೆದ್ದಾರಿಯಲ್ಲಿ ದರೋಡೆ ಮಾಡುತ್ತಿದ್ದ ಆರೋಪಿಗಳ ಬಂಧನ
ಬಂಧಿತ ಆರೋಪಿ.
  • Share this:
ಬೆಂಗಳೂರು (ಮಾರ್ಚ್​ 14); ಇಬ್ಬರು ಸ್ನೇಹಿತರು ಶೋಕಿ ಜೀವನಕ್ಕಾಗಿ ದರೋಡೆಗೆ ಮಾಡೋ ಪ್ಲಾನ್ ಮಾಡಿದ್ದಾರೆ. ಹೆದ್ದಾರಿ ಬದಿಯಲ್ಲಿ ನಿಲ್ಲುವ ವಾಹನಗಳನ್ನ ಟಾರ್ಗೆಟ್ ಮಾಡಿ ಕ್ಷಣಾರ್ಧದಲ್ಲಿ ದರೋಡೆ ಮಾಡ್ತಾರೆ. ಕೇಳಿದ್ದನ್ನ ಕೊಡೋದಿಲ್ಲ ಅನ್ನೋರ ಎದೆ ಬಗೆಯೋಕೂ ಇವರು ಏಸೋದಿಲ್ಲ. ನೆಲಮಂಗಲದ ಹೆದ್ದಾರಿಯಲ್ಲಿ ಈ ಇಬ್ಬರೂ ಸಾಕಷ್ಟು ದರೋಡೆ ನಡೆಸಿದ್ದಾರೆ. ಈ ಸಂಬಂಧ ಹಲವಾರು ಪ್ರಕರಣಗಳು ದಾಖಲಾಗಿದ್ದವು. ಇವರನ್ನು ಬಂಧಿಸಲು ಪೊಲೀಸರು ಸಹ ಬಲೆ ಬೀಸಿದ್ದರು. ಆದರೆ, ಇಷ್ಟು ದಿನ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಕಣ್ತಪ್ಪಿಸಿ ಅಡ್ಡಾಡುತ್ತಿದ್ದ, ದರೋಡೆ ಮಾಡುತ್ತಿದ್ದ ಆರೋಪಿಗಳು ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾರೆ. ದರೋಡೆ ಮಾಡಿದ್ದ ಆ ಇಬ್ಬರು ಆರೋಪಿಗಳನ್ನ ಬಾಗಲಗುಂಟೆ ಪೊಲೀಸರು ಇಂದು ಬಂದಿಸಿದ್ದಾರೆ. 

ಶೋಕಿಗಾಗಿ ದರೋಡೆ:

ಒಬ್ಬರು ಸಂತ್ರಸ್ತ್ರರಿಗೆ ನ್ಯಾಯ ಒದಗಿಸುವ ನ್ಯಾಯವಾದಿ ಮಹಂತೇಶ್, ಮತ್ತೊಬ್ಬರು ಊರಿಂದ ಊರಿಗೆ ರಾಜ್ಯದಿಂದ ರಾಜ್ಯಕ್ಕೆ ಜನರಿಗೆ ಬೇಕಾದ ಅಗತ್ಯ ವಸ್ತುಗಳನ್ನ ಪೂರೈಕೆ ಮಾಡೊ ಲಾರಿ ಚಾಲಕ ಭರತ್ ಕಾಂಬ್ಳೆ. ಈ ಇಬ್ಬರನ್ನ ಅಡ್ಡಗಟ್ಟಿ ದರೋಡೆ ಮಾಡಿದ್ದ ಇಬ್ಬರು ಆರೋಪಿಗಳನ್ನ ಬಾಗಲಗುಂಟೆ ಪೊಲೀಸರು ಬಂದಿಸಿದ್ದಾರೆ. ಬೆಂಗಳೂರಿನ ಮಲ್ಲಸಂದ್ರ ನಿವಾಸಿಯಾದ ತಿಪ್ಪೆಸ್ವಾಮಿ ಅಲಿಯಾಸ್ ಸ್ವಾಮಿ ಹಾಗೂ ಶೆಟ್ಟಿಗಳ್ಳಿ ನಿವಾಸಿಯಾದ ಭರತ್ ಬಂದಿತ ಆರೋಪಿಗಳು.

ಕೆಲಸ ಕಾರ್ಯ ಇಲ್ಲದ ಈ ಇಬ್ಬರು ಆರೋಪಿಗಳು ತಮ್ಮ ಶೋಕಿ ಜೀವನಕ್ಕಾಗಿ ಹಣ ಬೇಕಾದ ಕಾರಣ ರಸ್ತೆಯಲ್ಲಿ ಸಿಕ್ಕ ಸಿಕ್ಕವರ ಬಳಿ ಹಣ ದರೋಡೆ ಮಾಡುತ್ತಿದ್ದರು ಎನ್ನಲಾಗಿದೆ. ದರೋಡೆ ಮಾಡಿದ ದುಡ್ಡಿನಿಂದ ಹೈಫೈ ಮೊಬೈಲ್‌ಗಳು, ಬ್ರ್ಯಾಂಡೆಡ್ ಬಟ್ಟೆಗಳು ತಗೆದುಕೊಂಡು ಶೋಕಿ ಜೀವನ ನಡೆಸುತ್ತಿದ್ದ ಈ ಖತರ್ನಾಕ್ ಕಿಲಾಡಿಗಳು ಸದ್ಯ ಪೊಲೀಸರ ಅತಿಥಿಯಾಗಿದ್ದಾರೆ.

ಹೆದ್ದಾರಿಯಲ್ಲಿ ದರೋಡೆ:

ಮಾರ್ಚ್ 7 ರಂದು ತ್ಯಾಮಗೊಂಡ್ಲು ಪೊಲೀಸ್ ಠಾಣ ವ್ಯಾಪ್ತಿಯ ಕುಲುವನಹಳ್ಳಿ ಬಳಿ ಹೆದ್ದಾರಿಯಲ್ಲಿ ದರೋಡೆಗೆ ಇಳಿದಿದ್ದ ಈ ಗ್ಯಾಂಗ್ ಲಾರಿ ಚಾಲಕ ಭರತ್ ಕಾಂಬ್ಳೆಯನ್ನ ಅಡ್ಡಗಟ್ಟಿ ಹಣ ಕೇಳಿದ್ದರು. ಹಣ ನೀಡಲು ಒಲ್ಲೆ ಎಂದ ಚಾಲಕನ ಕುತ್ತಿಗೆಗೆ ಚಾಕು ಇರಿದು ಹತ್ತು ಸಾವಿರ ಹಣ ಪೀಕಿದ್ದಾರೆ. ತದನಂತರ ಮಾರ್ಚ್ 8 ರಂದು ವಕೀಲ ಮಹಂತೇಶ್ ಚಿತ್ರದುರ್ಗದ ಜಿಲ್ಲೆಯಿಂದ ಬೆಂಗಳೂರಿನ ಅಂಚೆಪಾಳ್ಯ ನಿವಾಸಕ್ಕೆ ತೆರಳುತ್ತಿದ್ದ ವೇಳೆ ಮೂತ್ರ ವಿಸರ್ಜನೆಗೆಂದು ಬೇಗೂರಿನ ಬಳಿ ಕಾರು ನಿಲ್ಲಿಸಿದ್ದ ವೇಳೆ ಕಾರಿನಲ್ಲಿ ಬಂದಿದ್ದ ಆರೋಪಿಗಳು ವಕೀಲರನ್ನ ಹೈಜಾಕ್ ಮಾಡಿ, ಕಾರಿನಲ್ಲಿ ಕೂರಿಸಿಕೊಂಡು ಎಟಿಎಂ ನಲ್ಲಿ ಹಣ ಡ್ರಾ ಮಾಡಲು ಬೆದರಿಕೆ ಒಡ್ಡಿದ್ದಾರೆ.

ಆದರೆ, ವಕೀಲರು ಎಟಿಎಂ ಪಿನ್ ನೆನಪಿಲ್ಲ ಎಂದಿದ್ದಕ್ಕೆ ವಕೀಲ ಮಹಂತೇಶ್‌ಗೆ ಬಳಿ 5000 ಹಣ ಕಸಿದುಕೊಂಡು ಮನಬಂದಂತೆ ಥಳಿಸಿ ನಾಳೆ ಹಣ ಕೊಡಬೇಕೆಂದು ಒತ್ತಾಯಿಸಿ ಮೊಬೈಲ್ ನಂಬರ್ ಪಡೆದುಕೊಂಡಿದ್ದಾರೆ. ಮರುದಿನ ಆರೋಪಿಗಳು ಫೋನ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ಕಾರಣ ವಕೀಲ  ಮಹಂತೇಶ್ ಬಾಗಲಗುಂಟೆ ಪೊಲೀಸರಿಗೆ ದೂರು ನೀಡಿದ್ದಾರೆ‌.ಸಿನಿಮೀಯ ರೀತಿಯಲ್ಲಿ ಅರೆಸ್ಟ್:

ಹೌದು ವಕೀಲರಿಗೆ 10000 ಹಣಕ್ಕೆ ಬೇಡಿಕೆ ಇಟ್ಟ ಬಳಿಕ ಪದೇ ಪದೇ ಫೋನ್ ಮಾಡಿ ಹಣಕ್ಕೆ ದುಂಬಾಲು ಬಿದ್ದಿದ್ದಾರೆ. ಆದರೆ ತಮ್ಮ ಬುದ್ದಿ ಉಪಯೋಗಿಸಿದ ವಕೀಲರು ನನ್ನ ಬಳಿ ಈಗ 10 ಸಾವಿರ ಹಣ ಇಲ್ಲ 5 ಸಾವಿರ ಇದೆ ಬನ್ನಿ ಕೊಡುತ್ತೇನೆ ಎಂದು ಕರೆಸಿದ್ದಾರೆ. ಹಣದಾಸೆಗೆ ಹಿಂದೆ ಮುಂದೆ ಯೋಚಿಸಿದ ಆರೋಪಿಗಳು ವಕೀಲರು ಹೇಳಿದ ಜಾಗಕ್ಕೆ ಹೋಗಿದ್ದಾರೆ.

ಇದನ್ನೂ ಓದಿ: Crime News: ರಾಬರ್ಟ್ ಚಿತ್ರದ ಫೈರಸಿ ಮಾರಾಟ ಮಾಡುತ್ತಿದ್ದ ವ್ಯಕ್ತಿ ಸೆರೆ

ಈ ನಡುವೆ ಆರೋಪಿಗಳು ಬರುತ್ತಿರುವ ಮಾಹಿತಿಯನ್ನ ವಕೀಲ ಮಹಂತೇಶ್ ಪೊಲೀಸರಿಗೆ ತಿಳಿಸಿದ ಹಿನ್ನೆಲೆ ಪೊಲೀಸರು ಮಹಂತೇಶ್ ತಿಳಿಸಿದ ಜಾಗಕ್ಕೆ ಬಂದು ಆರೋಪಿಗಳ ಬಂಧಿಸಿ ಜೈಲಿಗಟ್ಟಿದ್ದಾರೆ. ಬಂದಿತರಿಂದ 50 ಸಾವಿರ ನಗದು, ಮೊಬೈಲ್ ಹಾಗೂ ಮಾರಕಾಸ್ತ್ರ ಗಳನ್ನ ವಶಕ್ಕೆ ಪಡೆಯಲಾಗಿದೆ.

ಒಟ್ಟಾರೆ ಶಾರ್ಟ್ ಟೈಮ್‌ನಲ್ಲಿ ಹಣ ಮಾಡಿ ಶೋಕಿ ಜೀವನ ಮಾಡ ಬಯಸಿದ ಸ್ನೇಹಿತರು ಸದ್ಯ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾರೆ. ವಕೀಲರ ಚಾಣಾಕ್ಷತನ ಹಾಗೂ ಪೊಲೀಸರ ಸಮಯ ಪ್ರಜ್ಞೆಯಿಂದ ಇಬ್ಬರು ಆರೋಪಿಗಳು ಕಂಬಿ ಎಣಿಸುವಂತಾಗಿದೆ.
Published by: MAshok Kumar
First published: March 14, 2021, 8:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories