ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಶಿಕ್ಷಕನ ಬಂಧನ

Latha CG | news18
Updated:November 22, 2018, 11:39 AM IST
ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಶಿಕ್ಷಕನ ಬಂಧನ
ಪ್ರಾತಿನಿಧಿಕ ಚಿತ್ರ
  • News18
  • Last Updated: November 22, 2018, 11:39 AM IST
  • Share this:
-ಬಸವರಾಜು,

ಕೊಪ್ಪಳ,(ನ.22):  ಇದು ರಾಜ್ಯದಲ್ಲಿಯೇ ನಾಚಿಕೆಗೇಡಿನ ಪ್ರಕರಣ. ಶಿಕ್ಷಕ ಸಮುದಾಯವೇ ತಲೆತಗ್ಗಿಸುವಂತಹ ವಿಷಯ.  ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡಿ, ಅವರ ಭವಿಷ್ಯವನ್ನು ರೂಪಿಸುವ ಶಿಕ್ಷಕನೇ ಇಂತಹ ಕೆಲಸ ಮಾಡಿರುವುದು ನಾಡಿಗೆ ಅವಮಾನವೇ ಸರಿ.

ಕೊಪ್ಪಳದ ಯಲಬುರ್ಗಾ ತಾಲೂಕಿನ ಗದಗೇರಿ ಗ್ರಾಮದ ಕಿರಿಯ ಪ್ರಾಥಮಿಕ ಬಾಲಕಿಯರ ಶಾಲೆಯಲ್ಲಿ ಶಿಕ್ಷಕನಾಗಿ  ಕಾರ್ಯನಿರ್ವಹಿಸುತ್ತಿರುವ ಶಶಿಧರಯ್ಯ ಹಿರೇಮಠ ವಿದ್ಯಾರ್ಥಿನಿಯರಿಗೆ  ಪಾಠ ಹೇಳಿಕೊಡುವ ಬದಲು ಲೈಂಗಿಕ ಕಿರುಕುಳ ನೀಡಿದ್ದಾನೆ. ಬಾಲಕಿಯರಿಗೆ ತನ್ನ ಮೊಬೈಲ್​ನಲ್ಲಿ ಅರೆನಗ್ನ ಚಿತ್ರಗಳನ್ನು ತೋರಿಸಿ,  ಅಶ್ಲೀಲ ಭಾಷೆ ಬಳಸಿ ಕಿರುಕುಳ ನೀಡುತ್ತಿದ್ದ ಎಂದು ತಿಳಿದುಬಂದಿದೆ.

ಇದನ್ನೂ ಓದಿ:ಗುರುಗ್ರಾಮದಲ್ಲಿ 3 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ; ಆರೋಪಿಯ ಬಂಧನ

2017 ರ ಅವಧಿಯಲ್ಲಿ ಶಶಿಧರಯ್ಯ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂಬ ದೂರುಗಳು ಕೇಳಿಬಂದಿದ್ದವು. ವಿದ್ಯಾರ್ಥನಿಯರ ದೂರು ಸಂಗ್ರಹಿಸಿ ಸಿಡಬ್ಲೂಸಿ ಮುಖ್ಯಸ್ಥ ನಿಲೋಪರ್​ ರಾಂಪುರೆ ಬಿಇಓ ಗೆ ಶಿಕ್ಷಕನ ವಿರುದ್ಧ ಪತ್ರ ಬರೆದಿದ್ದರು. ಅಷ್ಟೇ ಅಲ್ಲದೇ ಶಿಕ್ಷಕನ ವಿರುದ್ಧ ಮಕ್ಕಳ ಪೋಷಕರು ಪ್ರತಿಭಟನೆಯನ್ನೂ ಸಹ ಮಾಡಿದ್ದರು.  ಆಗ ಶಿಕ್ಷಕನನ್ನು ಒಂದು ದಿನಕ್ಕೆ ಮಾತ್ರ ಅಮಾನತು ಮಾಡಿ, ನಂತರ ಚಿಕ್ಕಮ್ಯಾಗೇರಿ ಸ.ಕಿ.ಪ್ರಾ.ಬಾಲಕಿಯರ ಶಾಲೆಗೆ ವರ್ಗಾವಣೆ ಮಾಡಲಾಗಿತ್ತು.

ಇದನ್ನೂ ಓದಿ: ದೆಹಲಿಯಲ್ಲಿ 3 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ, ಬರ್ಬರ ಕೊಲೆ

ಅಲ್ಲಿಯೂ ಸಹ 4 ಮತ್ತು 5 ನೇ ತರಗತಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತ ವಿದ್ಯಾರ್ಥಿನಿಯರು ತಮ್ಮ ಪಾಲಕರ ಗಮನಕ್ಕೆ ತಂದಿದ್ದರು.  ಶಿಕ್ಷಕ ಶಶಿಧರಯ್ಯನ ವಿರುದ್ಧ ರಾಜ್ಯ ಮಕ್ಕಳ ಆಯೋಗ ದೂರು ನೀಡಿತ್ತು. ಯಲಬುರ್ಗಾ ಠಾಣೆಯಲ್ಲಿ ಸೆಪ್ಟೆಂಬರ್​ 20 ರಂದು ಪ್ರಕರಣ ದಾಖಲಾಗಿತ್ತು.ಈಗ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ನಾಲ್ಕು ದಿನಗಳ ಹಿಂದೆಯೇ ಶಿಕ್ಷಕ ಶಶಿಧರಯ್ಯ ಹಿರೇಮಠನನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಆರೋಪಿ ಪೊಲೀಸರ ವಶದಲ್ಲಿದ್ದು, ತನಿಖೆ ಕೈಗೊಂಡಿದ್ದಾರೆ.

ಇದನ್ನೂ ನೋಡಿ:

First published:November 22, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading