• Home
  • »
  • News
  • »
  • state
  • »
  • Omicron Variants: ಮಹಾರಾಷ್ಟ್ರದಲ್ಲಿ ಒಮಿಕ್ರಾನ್ BQ.1 ತಳಿ ಪತ್ತೆ; ಕರ್ನಾಟಕದಲ್ಲಿ ಎಚ್ಚರಿಕೆಯ ಮಾರ್ಗಸೂಚಿ ಪ್ರಕಟ

Omicron Variants: ಮಹಾರಾಷ್ಟ್ರದಲ್ಲಿ ಒಮಿಕ್ರಾನ್ BQ.1 ತಳಿ ಪತ್ತೆ; ಕರ್ನಾಟಕದಲ್ಲಿ ಎಚ್ಚರಿಕೆಯ ಮಾರ್ಗಸೂಚಿ ಪ್ರಕಟ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಇನ್ನು ದೀಪಾವಳಿ ಹಬ್ಬ ಮತ್ತು ಕನ್ನಡ ರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ಸಾರ್ವಜನಿಕರು ಗುಂಪು ಸೇರುವ ಸಾಧ್ಯತೆಗಳು ಅಧಿಕವಾಗಿರುವುದರಿಂದ ಕೊರೊನಾ ಹರಡುವ ಸಾಧ್ಯತೆ ಹೆಚ್ಚಾಗಿದೆ.

  • News18 Kannada
  • Last Updated :
  • Karnataka, India
  • Share this:

ಪಕ್ಕದ ಮಹಾರಾಷ್ಟ್ರದಲ್ಲಿ (Maharashtra) ಒಮಿಕ್ರಾನ್ ರೂಪಾಂತರಿ (Omicron Variants) BQ.1 ತಳಿ ಪತ್ತೆ ಹಿನ್ನೆಲೆ ರಾಜ್ಯದಲ್ಲಿ ಕಟ್ಟೆಚ್ಚರವಹಿಸಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ.  ದೀಪಾವಳಿ ಹಬ್ಬ ಕನ್ನಡ ರಾಜ್ಯೋತ್ಸವ ಹಬ್ಬದ ಹಿನ್ನೆಲೆ ಎಲ್ಲೆಡೆ ಜನಸಂದಣಿ ಹೆಚ್ಚಾಗಲಿದ್ದು, ಮುನ್ನೆಚ್ಚರಿಕೆ (Precaution) ಅಗತ್ಯವಿದೆ. ಜ್ವರ, ಕೆಮ್ಮು, ನೆಗಡಿ, ಶೀತ ಲಕ್ಷಣ ಇರುವವರಿಗೆ ಟೆಸ್ಟ್ ಕಡ್ಡಾಯ ಮಾಡಲಾಗಿದೆ. ಉಸಿರಾಟದ ಸಮಸ್ಯೆ ಇರುವವರ ಮೇಲೆ ಹೆಚ್ಚಿನ ನಿಗಾ ಅಗತ್ಯ. ಅಲ್ಲದೇ ಏರ್ ಕಂಡೀಷನ್ ಇರುವ ಜಾಗ, ಒಳಾಂಗಣ ಪ್ರದೇಶ, ಆರೋಗ್ಯ ಸಂಸ್ಥೆಗಳಲ್ಲಿ ಮಾಸ್ಕ್ (Mask) ಕಡ್ಡಾಯವಾಗಿ ಹಾಕಲು ಸೂಚಿಸಲಾಗಿದೆ. ಬೂಸ್ಟರ್ ಡೋಸ್ ಪಡೆಯಲು ಬಾಕಿ ಇರುವವರು ಕಡ್ಡಾಯವಾಗಿ ಲಸಿಕೆ ಪಡೆಯಬೇಕು. ಉಳಿದಂತೆ CAB ನಿಯಮವನ್ನು ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ (Public Event) ಕಡ್ಡಾಯವಾಗಿ ಪಾಲನೆ ಮಾಡ್ಬೇಕಿದೆ.


ಆರೋಗ್ಯ ಸಚಿವ ಸುಧಾಕರ್ ಟ್ವೀಟ್​ 


ಈ ಕುರಿತು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಟ್ವೀಟ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇನ್ನು ದೀಪಾವಳಿ ಹಬ್ಬ ಮತ್ತು ಕನ್ನಡ ರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ಸಾರ್ವಜನಿಕರು ಗುಂಪು ಸೇರುವ ಸಾಧ್ಯತೆಗಳು ಅಧಿಕವಾಗಿರುವುದರಿಂದ, ಈ ಸಲಹಾ ಪತ್ರವನ್ನು ಹೊರಡಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.


ರೋಗ ಹರಡದಂತೆ ಮಾರ್ಗಸೂಚಿ ಪಾಲಿಸಿ


ದೀಪಾವಳಿ ಹಬ್ಬ, ಕನ್ನಡ ರಾಜ್ಯೋತ್ಸವ ಸೇರಿದಂತೆ ಇತರ ಸಂಭ್ರಮಾಚರಣೆಗಳಲ್ಲಿ ಹೆಚ್ಚಿನ ಜನರು ಸೇರುವ ಸಾಧ್ಯತೆ ಇದೆ. ಇದರಿಂದ ವೈರಸ್ ವೇಗವಾಗಿ ಹರಡುವ ಹಾಗೂ ಅಪಾಯ ತಂದೊಡ್ಡುವ ಸಾಧ್ಯತೆ ಇದೆ. ಮಾಸ್ಕ್, ಸಾಮಾಜಿಕ ಅಂತರ, ಶುಚಿತ್ವ ಕಾಪಾಡಿಕೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ ಸೂಚಿಸಲಾಗಿದೆ. ಜ್ವರ, ಕೆಮ್ಮು ಸೇರಿದಂತೆ ಯಾವುದೇ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ತೆರಳಿ ತಪಾಸಣೆ ನಡೆಸಬೇಕು. ತಕ್ಷಣವೇ ಆಂಟಿ ಜೆನ್ ಪರೀಕ್ಷೆ, ಆರ್‌ಟಿಪಿಸಿಆರ್, ಕೋವಿಡ್ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು.


ಕಡ್ಡಾಯವಾಗಿ ಮಾಸ್ಕ್ ಧರಿಸಲು ಸೂಚನೆ


ಪಾಸಿಟೀವ್ ಇದ್ದಲ್ಲಿ ಪ್ರತ್ಯೇಕವಾಗಿ ಇದ್ದು, ಚಿಕಿತ್ಸೆ ಪಡೆಯಬೇಕು. ಉಸಿರಾಟದ ಸಮಸ್ಯೆ ಇದ್ದಲ್ಲಿ ತಕ್ಷಣವೇ ಸ್ಥಳೀಯ ಅಸ್ಪತ್ರೆಯಲ್ಲಿ ಆರೈಕೆ ಪಡೆಯಲು ಸೂಚಿಸಲಾಗಿದೆ. ಎಸಿ ಇರುವ ಒಳಾಂಗಣ ಪ್ರದೇಶ, ಹೆಚ್ಚಿನ ಜನಸಂದಣಿ ಇರುವ ಪ್ರದೇಶ, ಸಾರ್ವಜನಿಕ ಸ್ಥಳ, ಸಾರಿಗೆ,
ಆರೋಗ್ಯ ಕೇಂದ್ರಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಲು ಸೂಚಿಸಲಾಗಿದೆ. ಹಬ್ಬಗಳನ್ನು ಹೊರಾಗಂಣದಲ್ಲಿ ಆಚರಿಸಲು ಕೋರಲಾಗಿದೆ.


ಇದನ್ನೂ ಓದಿ: Corona Virus: ಕೋವಿಡ್‌, ಓಮಿಕ್ರಾನ್‌ನಂತೆ ಬರಲಿದೆ ಭಯಾನಕ ವೈರಸ್! 80% ಮರಣ ಪ್ರಮಾಣ ಹೊಂದಿದೆಯಂತೆ ಈ ತಳಿ!


ಬೂಸ್ಟರ್ ಡೋಸ್ ಲಸಿಕೆ ಪಡೆಯಲು ಮನವಿ


ಜನ ದಟ್ಟಣೆಯಿಂದ ದೂರವಿರಲು ತಿಳಿಸಲಾಗಿದೆ. ಎಲ್ಲರೂ ಬೂಸ್ಟರ್ ಡೋಸ್ ಲಸಿಕೆ ಪಡೆಯಲು ಮನವಿ ಮಾಡಲಾಗಿದೆ. ಇತರ ಆರೋಗ್ಯ ಸಮಸ್ಯೆ
ಎದುರಿಸುತ್ತಿರುವವರು ಹಾಗೂ ಚಿಕಿತ್ಸೆಯಲ್ಲಿರುವವರು ವೈದ್ಯರ ಜೊತೆ ಸಮಾಲೋಚಿಸಿ ಬೂಸ್ಟರ್ ಡೋಸ್ ಲಸಿಕೆ ಪಡೆಯಲು ಸೂಚಿಸಲಾಗಿದೆ. ಸಾರ್ವಜನಿಕ ಪ್ರದೇಶದಲ್ಲಿ ಉಗುಳುವುದು ನಿಷೇಧಿಸಲಾಗಿದೆ. ಪಟಾಕಿ ಸಿಡಿಸುವುದರಿಂದ ದೂರವಿರಲು ಸೂಚಿಸಲಾಗಿದೆ.


ಇದನ್ನೂ ಓದಿ: Explained: ವಿದೇಶಗಳನ್ನು ಕಂಗೆಡಿಸುತ್ತಿರುವ ಮಂಕಿಪಾಕ್ಸ್! ಏನಿದು ಕಾಯಿಲೆ? ಇದರ ಲಕ್ಷಣಗಳೇನು?


ಒಮಿಕ್ರಾನ್​ ಉಪತಳಿಯಿಂದ ಸಿಂಗಾಪುರದಲ್ಲಿ 5ನೇ ಅಲೆ!


ಒಮಿಕ್ರಾನ್ ವೈರಾಣುವಿನ ಉಪತಳಿಯಾಗಿರುವ ‘ಎಕ್ಸ್‌ಬಿಬಿ’ ದ್ವೀಪ ರಾಷ್ಟ್ರ ಸಿಂಗಾಪುರದಲ್ಲಿ 5ನೇ ಕೋವಿಡ್‌ ಅಲೆ ಸೃಷ್ಟಿಗೆ ಕಾರಣವಾಗಿದೆ. ರೋಗ ನಿರೋಧಕ ಶಕ್ತಿಯನ್ನು ಭೇದಿಸುವ ಸಾಮರ್ಥ್ಯವನ್ನು ‘ಎಕ್ಸ್‌ಬಿಬಿ’ ಹೊಂದಿರುವ ಕಾರಣ ಸಿಂಗಾಪುರದಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ನವೆಂಬರ್‌ ಮಧ್ಯಭಾಗದ ವೇಳೆಗೆ 5ನೇ ಅಲೆ ತನ್ನ ಪರಾಕಾಷ್ಠೆಯ ಮಟ್ಟತಲುಪಬಹುದು ಎಂದು ಆರೋಗ್ಯ ಸಚಿವ ಒಂಗ್‌ ಯೆ ಕುಂಗ್‌ ತಿಳಿಸಿದ್ದಾರೆ. ಈ ಅಲೆ ತುತ್ತ ತುದಿಗೆ ತಲುಪಿದಾಗ ಪ್ರತಿದಿನ 15 ಸಾವಿರ ಪ್ರಕರಣಗಳು ವರದಿಯಾಗಬಹುದು. ಈ ಅಲೆ ಅಲ್ಪಾವಧಿಗೆ ಇರಲಿದ್ದು, ತೀಕ್ಷಣತೆ ಹೊಂದಿರುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Published by:ಪಾವನ ಎಚ್ ಎಸ್
First published: