ಬೆಂಗಳೂರು; ಇಂದು 2019-20ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಈ ಬಾರಿ ಕೊರೋನಾ ಆತಂಕದ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲಾಗಿತ್ತು. ಇದೀಗ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ಒಟ್ಟು ಶೇ.71.80 ಫಲಿತಾಂಶ ಬಂದಿದೆ. ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಫಲಿತಾಂಶ ಬಿಡುಗಡೆ ಮಾಡಿದ್ದಾರೆ.
ಈ ಬಾರಿಯ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ಹಾಗೂ ವಿಷಯವಾರು ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ವಿವರ ಇಲ್ಲಿದೆ.
ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ವಿವರ
- 625 ಅಂಕ ಪಡೆದವರು- 06 ವಿದ್ಯಾರ್ಥಿಗಳು- ಕಳೆದ ವರ್ಷ 02
- 624 ಅಂಕ ಪಡೆದವರು 11 ವಿದ್ಯಾರ್ಥಿಗಳು- ಕಳೆದ ವರ್ಷ 11
- 623 ಅಂಕ ಪಡೆದವರು 43 ವಿದ್ಯಾರ್ಥಿಗಳು- ಕಳೆದ ವರ್ಷ 19
- 622 ಅಂಕ ಪಡೆದವರು 56 ವಿದ್ಯಾರ್ಥಿಗಳು ಕಳೆದ ವರ್ಷ-39
- 621 ಅಂಕ ಪಡೆದವರು 68 ವಿದ್ಯಾರ್ಥಿಗಳು- ಕಳೆದ ವರ್ಷ 43
- 620 ಅಂಕ ಪಡೆದವರು 117 ವಿದ್ಯಾರ್ಥಿಗಳು- ಕಳೆದ ವರ್ಷ 56
ವಿಷಯವಾರು ಅತಿ ಹೆಚ್ಚು ಅಂಕ ಗಳಿಸಿದವರು
- ಪ್ರಥಮ ಭಾಷೆ – 125 ಅಂಕ ಪಡೆದವರು 8995 ವಿದ್ಯಾರ್ಥಿಗಳು- ಕಳೆದ ವರ್ಷ– 8620
- ದ್ವಿತೀಯ ಭಾಷೆ- 100 ಅಂಕ ಪಡೆದವರು 6044 ವಿದ್ಯಾರ್ಥಿಗಳು- ಕಳೆದ ವರ್ಷ -3404
- ತೃತೀಯ ಭಾಷೆ- 100 ಅಂಕ ಪಡೆದವರು 21745 ವಿದ್ಯಾರ್ಥಿಗಳು- ಕಳೆದ ವರ್ಷ - 8138
- ಗಣಿತ 100 ಅಂಕ ಪಡೆದವರು 1796 ವಿದ್ಯಾರ್ಥಿಗಳು– ಕಳೆದ ವರ್ಷ- 1626
- ವಿಜ್ಞಾನ 100 ಅಂಕ ಪಡೆದವರು 910 ವಿದ್ಯಾರ್ಥಿಗಳು- ಕಳೆದ ವರ್ಷ 226
- ಸಮಾಜ ವಿಜ್ಞಾನ 100 ಅಂಕ ಪಡೆದವರು 4171 ವಿದ್ಯಾರ್ಥಿಗಳು- ಕಳೆದ ವರ್ಷ 3141
ಇದನ್ನು ಓದಿ: Karnataka KSEEB SSLC Result 2020: ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ; ರಿಸಲ್ಟ್ ನೋಡಲು ಇಲ್ಲಿ ಕ್ಲಿಕ್ ಮಾಡಿ
ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟವಾದ ಬಳಿಕ ಫಲಿತಾಂಶವನ್ನು ನೀವು kseeb.kar.nic.in ಅಥವಾ
karresults.nic.in. ವೆಬ್ಸೈಟ್ನಲ್ಲಿ ವೀಕ್ಷಿಸಬಹುದು. ಇದಷ್ಟೇ ಅಲ್ಲದೆ,
examresults.net ಮತ್ತು
indiaresults.com ವೆಬ್ಸೈಟ್ನಲ್ಲಿ ಕೂಡ ರಿಸಲ್ಟ್ ನೋಡಬಹುದು.