• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Murugha Swamy: ಮುರುಘಾ ಸ್ವಾಮಿ ವಿರುದ್ಧದ 2ನೇ ಪೋಕ್ಸೋ ಕೇಸ್​; ಚಾರ್ಜ್​ಶೀಟ್​ನಲ್ಲಿಯ ಸ್ಫೋಟಕ ಮಾಹಿತಿ ಬಹಿರಂಗ

Murugha Swamy: ಮುರುಘಾ ಸ್ವಾಮಿ ವಿರುದ್ಧದ 2ನೇ ಪೋಕ್ಸೋ ಕೇಸ್​; ಚಾರ್ಜ್​ಶೀಟ್​ನಲ್ಲಿಯ ಸ್ಫೋಟಕ ಮಾಹಿತಿ ಬಹಿರಂಗ

ಮುರುಘಾ ಸ್ವಾಮಿ

ಮುರುಘಾ ಸ್ವಾಮಿ

ಮಠದ ಹಾಸ್ಟೆಲ್‌ನಲ್ಲಿದ್ದ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ದೃಢವಾಗಿದೆ ಮಕ್ಕಳು‌ & ಕುಟುಂಬಸ್ಥರ ಅನುಕಂಪ, ಗೌರವ ಗಳಿಸಿ ಅವರ ಮೇಲೆ ದೌರ್ಜನ್ಯ ಮಾಡಿರುತ್ತಾರೆ ಎಂದು ಉಲ್ಲೇಖವಾಗಿದೆ.

  • Share this:

ಚಿತ್ರದುರ್ಗ: ಚಿತ್ರದುರ್ಗದ ಮುರುಘಾ ಸ್ವಾಮಿ (Murugha Swamy) ವಿರುದ್ಧ ದಾಖಲಾಗಿದ್ದ 2ನೇ ಪೋಕ್ಸೋ ಪ್ರಕರಣ (POCSO Case) ತನಿಖೆ ನಡೆಸಿರುವ ಚಿತ್ರದುರ್ಗ ಗ್ರಾಮಾಂತರ ಪೊಲೀಸರು (Chitradurga Police) ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್​​​ಶೀಟ್​​​ನಲ್ಲಿ (Charge sheet) ಏನಿದೆ ಅಂತ ಅಧಿಕೃತ ಮಾಹಿತಿ ಹೊರ ಬಂದಿದೆ. ಮುರುಘಾ ಸ್ವಾಮಿ ವಿರುದ್ಧ 2ನೇ ಪೋಕ್ಸೋ ಪ್ರಕರಣ ದಾಖಲಾಗಿ ಮೂರು ತಿಂಗಳು ಕೆಳೆದಿದ್ದು, ತನಿಖಾಧಿಕಾರಿ ಗ್ರಾಮಾಂತರ ಠಾಣೆ ಪಿಐ ಬಾಲಚಂದ್ರ ನಾಯ್ಕ್ (PI Balachandra Naik) ಜನವರಿ 10ಕ್ಕೆ ಚಿತ್ರದುರ್ಗ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಚಾರ್ಜ್​​​ಶೀಟ್​​ಗೆ ನ್ಯಾಯಾಲಯ ಅಧಿಕೃತ ನಂಬರ್ ನೀಡಿದೆ.  ಬಳಿಕ ಮುರುಘಾ ಸ್ವಾಮಿ ಪರ ವಕೀಲರು ಚಾರ್ಜ್​​​​ಶೀಟ್ ಕಾಪಿ ಪಡೆದಿದ್ದು ಅದರಲ್ಲಿ ಏನೆಲ್ಲಾ ಇದೆ ಅನ್ನೋದು ಬಹಿರಂಗವಾಗಿದೆ.


ಅಕ್ಟೋಬರ್ 13ರಂದು ದಾಖಲಾಗಿದ್ದ ಪೋಕ್ಸೋ ಪ್ರಕರಣದಲ್ಲಿ ಮುರುಘಾ ಸ್ವಾಮಿ ಸೇರಿ 7ಜನರ ವಿರುದ್ಧ ಆರೋಪ‌‌ ಕೇಳಿ ಬಂದಿತ್ತು. ಅದರಲ್ಲಿ ಎ1 ಮುರುಘಾಮಠದ ಮುರುಘಾ ಸ್ವಾಮಿ, ಎ2 ವಾರ್ಡನ್ ರಶ್ಮಿ, ಎ3 ಮಠದ ಉತ್ತರಾಧಿಕಾರಿ (ಬಸವಾದಿತ್ಯ), ಎ4 ಮ್ಯಾನೇಜರ್ ಪರಮಶಿವಯ್ಯ, ಎ5 ವಕೀಲ‌ ಗಂಗಾಧರ್, ಎ6 ಮುರುಘಾಶ್ರೀ ಸಹಾಯಕ ಮಹಾಲಿಂಗ, ಎ7 ಅಡುಗೆಭಟ್ಟ ಕರಿಬಸಪ್ಪ ವಿರುದ್ಧ ಮೈಸೂರಿನ ನಜರಾಬಾದ್ ಠಾಣೆಯಲ್ಲಿ ದೂರು ದಾಖಲಾಗಿತ್ತು.


details in 761 page chargesheet filed against Murugha Matha seer vtc mrq
ಮುರುಘಾ ಸ್ವಾಮಿ


ಮೈಸೂರಿನಿಂದ ಚಿತ್ರದುರ್ಗಕ್ಕೆ ಕೇಸ್​ ವರ್ಗಾವಣೆ


ಬಳಿಕ‌ ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ದೂರು ವರ್ಗಾವಣೆ ಆಗಿತ್ತು. ಅದರಲ್ಲಿ ಮಠದ ಅಡುಗೆ ಸಹಾಯಕಿ ಮಠದ ಹಾಸ್ಟೆಲ್​​​ನಲ್ಲಿದ್ದ ತನ್ನ ಇಬ್ಬರು ಮಕ್ಕಳು, ಮತ್ತಿಬ್ಬರು ಮಕ್ಕಳು ಸೇರಿ ನಾಲ್ವರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ದೂರು ದಾಖಲಿಸಿದ್ದರು.


761 ಪುಟಗಳ ಚಾರ್ಜ್​ಶೀಟ್​


ದೂರು ಆಧರಿಸಿ ತನಿಖೆ ನಡೆಸಿರುವ ಪೊಲೀಸರು, ಇದೀಗ 761 ಪುಟಗಳ ಎ ಮತ್ತು ಬಿ ಎರಡು ಭಾಗವಾಗಿ ಚಾರ್ಜ್​​​ಶೀಟ್ ಸಲ್ಲಿಕೆ ಮಾಡಿದ್ದು, ಮಠದ ಹಾಸ್ಟೆಲ್‌ನಲ್ಲಿದ್ದ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ದೃಢವಾಗಿದೆ ಮಕ್ಕಳು‌ & ಕುಟುಂಬಸ್ಥರ ಅನುಕಂಪ, ಗೌರವ ಗಳಿಸಿ ಅವರ ಮೇಲೆ ದೌರ್ಜನ್ಯ ಮಾಡಿರುತ್ತಾರೆ ಎಂದು ಉಲ್ಲೇಖವಾಗಿದೆ.


details in 761 page chargesheet filed against Murugha Matha seer vtc mrq
ಮುರುಘಾ ಸ್ವಾಮಿ


ಯಾವ ಸೆಕ್ಷನ್ ಅಡಿ ಪ್ರಕರಣ ದಾಖಲು?


ಹಾಸ್ಟೆಲ್ ವಾರ್ಡನ್ ರಶ್ಮಿ ಮೂಲಕ ಮಕ್ಕಳನ್ನು ಕೊಠಡಿಗೆ ಕರೆಸಿಕೊಂಡು ಮತ್ತು ಭರಿಸುವ ಚಾಕ್ಲೆಟ್ (ನಶೆ ಪದಾರ್ಥ ಮಿಶ್ರಿತ ಆಹಾರ) ನೀಡಿ ಲೈಂಗಿಕ ದೌರ್ಜನ್ಯ ಎಂದು  ಕಲಂ 376(C), 376(2)(n), 376(AB), 376(3),  r/w 34 ಐಆರ್​​ಪಿಸಿ & u/s 5(L), 6,7 POCSO Act -2012 & sec : 3(f) , 7 ಧಾರ್ಮಿಕ‌ ಕೇಂದ್ರ ದುರ್ಬಳಕೆ 1988 & sec 77 Juvenile Justice Act 2015, ಸೆಕ್ಷನ್ ಹಾಕಲಾಗಿದೆ.




ಇನ್ನೂ ಸಂತ್ರಸ್ತರು ಸಿಆರ್​​ಪಿಸಿ 161, 164 ಹೇಳಿಕೆ ಆಧಾರದ ಮೇಲೆ ಚಾರ್ಜ್​​​ಶೀಟ್ ಸಲ್ಲಿಸಿರುವ ಪೊಲೀಸರು, ಎ1 ಮುರುಘಾ ಸ್ವಾಮಿ, ಎ2 ವಾರ್ಡನ್ ರಶ್ಮಿ ವಿರುದ್ಧ ಆರೋಪಪಟ್ಟಿ ಹಾಕಿದ್ದಾರೆ. ಅಲ್ಲದೇ ಕಲಂ 173 (8) ಸಿಆರ್​​ಪಿಸಿ ಅಡಿಯಲ್ಲಿ ತನಿಖೆ ಮುಂದುವರೆದಿದೆ ಎಂದು ಮಾಹಿತಿ ನೀಡಲಾಗಿದೆ.


ಇದನ್ನೂ ಓದಿ: Murugha Swamy Case: ಚಾರ್ಜ್​​ಶೀಟ್​ ಸಲ್ಲಿಕೆ, ಔಷಧಿ ಬೆರೆಸಿದ ಸೇಬು ನೀಡಿ ದೌರ್ಜನ್ಯ; ಮಕ್ಕಳಿಗೆ ಕೊಲೆ ಬೆದರಿಕೆ


ಕೌಂಟರ್  ಬ್ಲಾಸ್ಟ್​ ಕೇಸ್


ದೂರಿನಲ್ಲಿ ನಾಲ್ವರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಇದ್ದು ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು ದೃಢಪಟ್ಟಿಲ್ಲ. ಮುರುಘಾ ಸ್ವಾಮಿ ವಿರುದ್ಧ ಪಿತೂರಿ ಕೇಸ್ ಕೌಂಟರ್ ಬ್ಲಾಸ್ಟ್ ಕೇಸ್ ಎಂದು ಕಂಡು ಬರುತ್ತದೆ. ಬಾಕಿ ತನಿಖೆ ಪೂರ್ಣಗೊಳಿಸಿ ಅಂತಿಮ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗುವುದು ಎಂದು ಉಲ್ಲೇಖ ಮಾಡಿದ್ದಾರೆ.

Published by:Mahmadrafik K
First published: