• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Karnataka Election Date 2023: ಚುನಾವಣಾ ನೀತಿ ಸಂಹಿತೆ ಅಂದ್ರೆ ಏನು? ಜಾರಿಯಾದ ನಂತ್ರ ಏನೆಲ್ಲಾ ಮಾಡಬಾರದು?

Karnataka Election Date 2023: ಚುನಾವಣಾ ನೀತಿ ಸಂಹಿತೆ ಅಂದ್ರೆ ಏನು? ಜಾರಿಯಾದ ನಂತ್ರ ಏನೆಲ್ಲಾ ಮಾಡಬಾರದು?

ಮಾದರಿ ಚುನಾವಾಣೆ ನೀತಿ ಸಂಹಿತೆ ಅಂದ್ರೆ ಏನು? (ಸಾಂದರ್ಭಿಕ ಚಿತ್ರ

ಮಾದರಿ ಚುನಾವಾಣೆ ನೀತಿ ಸಂಹಿತೆ ಅಂದ್ರೆ ಏನು? (ಸಾಂದರ್ಭಿಕ ಚಿತ್ರ

Election Code Of Conduct: ಚುನಾವಣೆಗೆ ದಿನಾಂಕ (Election Dates) ಘೋಷಣೆ ಆದ ದಿನದಿಂದ ಹಿಡಿದು, ಮತ ಎಣಿಕೆ ಮುಗಿಯೋವರೆಗೆ ಈ ನೀತಿ ಸಂಹಿತೆ ಜಾರಿಯಲ್ಲಿ ಇರುತ್ತದೆ. ಈ ನೀತಿ ಸಂಹಿತೆ ಅಂದ್ರೆ ಏನು? ನಿಯಮಗಳು ಏನು ಎಂಬುದರ ಮಾಹಿತಿ ಇಲ್ಲಿದೆ.

 • News18 Kannada
 • 4-MIN READ
 • Last Updated :
 • Karnataka, India
 • Share this:

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ (Karnataka Election 2023) ಇಂದು ದಿನಾಂಕ ಘೋಷಣೆಯಾಗಿಲಿದೆ. ದಿನಾಂಕ ಘೋಷಣೆಯಾದ ಬೆನ್ನಲ್ಲೇ ರಾಜ್ಯದಲ್ಲಿ ಚುನಾವಣೆ ನೀತಿ ಸಂಹಿತೆ (Election Code Of Conduct) ಜಾರಿಯಾಗಲಿದೆ. ನೀತಿ ಸಂಹಿತೆ ಜಾರಿಯಾದ ಸಮಯದಿಂದ ಸರ್ಕಾರ, ರಾಜಕಾರಣಿಗಳಿಗೆ ಹಲವು ನಿರ್ಬಂಧಗಳನ್ನು ವಿಧಿಸಲಾಗುತ್ತದೆ. ಚುನಾವಣೆಗೆ ದಿನಾಂಕ (Election Dates) ಘೋಷಣೆ ಆದ ದಿನದಿಂದ ಹಿಡಿದು, ಮತ ಎಣಿಕೆ ಮುಗಿಯೋವರೆಗೆ ಈ ನೀತಿ ಸಂಹಿತೆ ಜಾರಿಯಲ್ಲಿ ಇರುತ್ತದೆ. ಈ ನೀತಿ ಸಂಹಿತೆ ಅಂದ್ರೆ ಏನು? ನಿಯಮಗಳು ಏನು ಎಂಬುದರ ಮಾಹಿತಿ ಇಲ್ಲಿದೆ.


ಈ ನೀತಿ ಸಂಹಿತೆ ಸರ್ಕಾರ, ಆಡಳಿತ ಸೇರಿದಂತೆ ಹಲವು ಕಡೆಗಳಿಗೆ ಅನ್ವಯ ಆಗಲಿದೆ. ಆಡಳಿತ, ವಿರೋಧ ಪಕ್ಷ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳೂ ಚುನಾವಣಾ ನೀತಿ ಸಂಹಿತೆ ವ್ಯಾಪ್ತಿಗೆ ಬರುತ್ತವೆ. ಸರ್ಕಾರದ ಎಲ್ಲಾ ಇಲಾಖೆಗಳು, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ನಿಗಮ ಮಂಡಳಿಗಳು, ಸ್ಥಳೀಯ ಪೌರ ಸಂಸ್ಥೆಗಳು, ಸರ್ಕಾರದಿಂದ ಹಣಕಾಸಿನ ನೆರವನ್ನ ಪಡೆಯುವ ಸಂಸ್ಥೆಗಳು ಹಾಗೂ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಚುನಾವಣಾ ನೀತಿ ಸಂಹಿತೆ ವ್ಯಾಪ್ತಿಗೆ ಬರುತ್ತವೆ.


ನೀತಿ ಸಂಹಿತೆ ಜಾರಿಯಾದ ನಂತ್ರ ಏನೆಲ್ಲಾ ಮಾಡಬಾರದು?


*ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ ಸರ್ಕಾರ ಹೊಸ ಯೋಜನೆ ಘೋಷಿಸುವಂತಿಲ್ಲ.


*ಹೊಸ ಕಾರ್ಯಕ್ರಮಗಳ ಅನುಷ್ಠಾನ ಮಾಡುವಂತಿಲ್ಲ.


*ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ಮಾಡುವಂತಿಲ್ಲ.


*ಹೊಸ ಯೋಜನೆಗೆ ಹಣ ನೀಡುವಂತಿಲ್ಲ.


*ಹೊಸ ಟೆಂಡರ್ ಕರೆಯುವಂತಿಲ್ಲ. ಈಗಾಗಲೇ ಕರೆದಿದ್ದ ಟೆಂಡರ್ ಫೈನಲ್ ಕೂಡಾ ಮಾಡುವ ಹಾಗಿಲ್ಲ.


*ಎಲ್ಲಕ್ಕಿಂತಾ ಮುಖ್ಯವಾಗಿ ಸಚಿವರು, ಶಾಸಕರು ಸರ್ಕಾರಿ ವಾಹನ ಬಳಸುವಂತಿಲ್ಲ ಅಧಿಕಾರಿಗಳ ಜೊತೆ ಸಭೆ ನಡೆಸುವಂತಿಲ್ಲ. ಸರ್ಕಾರಿ ವಸತಿ ಗೃಹ ಬಳಸುವಂತಿಲ್ಲ.


*ಬೆಳಗ್ಗೆ 6 ರಿಂದ ರಾತ್ರಿ 10ರವರೆಗೆ ಮಾತ್ರ ಧ್ವನಿವರ್ಧಕ ಬಳಕೆ ಮಾಡಬೇಕು.


*ಮಂದಿರ, ಮಸೀದಿ, ಚರ್ಚ್ ಸೇರಿದಂತೆ ಯಾವುದೇ ಧಾರ್ಮಿಕ ಸ್ಥಳಗಳು ಚುನಾವಣಾ ಪ್ರಚಾರಕ್ಕೆ ಬಳಕೆ ಆಗಬಾರದು. ಧರ್ಮ - ಜಾತಿ ವಿಷಯಾಧಾರಿತವಾಗಿ ಮತ ಕೇಳುವಂತೆಯೇ ಇಲ್ಲ.


*ಒಂದ್ಸಲ ಚುನಾವಣ ನೀತಿ ಸಂಹಿತೆ ಜಾರಿಯಾದ ಬಳಿಕ ಸರ್ಕಾರದ ಬಳಿ ಇರೋ ಹಲವಾರು ಅಧಿಕಾರಗಳು ಕಡಿತಗೊಳ್ಳುತ್ತವೆ.


ನೀತಿ ಸಂಹಿತೆ ಜಾರಿಯಾದ್ರೂ ಒಂದಿಷ್ಟು ವಿನಾಯ್ತಿ


ನೀತಿ ಸಂಹಿತೆ ವೇಳೆ ಕೆಲವೊಂದಷ್ಟು ವಿನಾಯ್ತಿ ಇರಲಿದೆ. ಅಭಿವೃದ್ಧಿ ಕಾಮಗಾರಿಯಲ್ಲಿ ಕೆಲವೊಂದು ವಿನಾಯ್ತಿ ನೀಡಲಾಗುತ್ತದೆ.


ನೀರಾವರಿ, ಲೋಕೋಪಯೋಗಿ ಸೇರಿದಂತೆ ಈಗಾಗಲೇ ಕೆಲವೊಂದು ಯೋಜನೆಗಳ ಕಾರ್ಯ ಪ್ರಗತಿಯಲ್ಲಿದ್ದರೆ ಅವುಗಳನ್ನು ಮುಂದುವರಿಸಬಹುದು. ನೀತಿ ಸಂಹಿತೆ ಪ್ರಕಾರ ಯಾವುದೇ ಅಡ್ಡಿ ಇಲ್ಲ.ಇದಲ್ಲದೆ ಮಧ್ಯಾಹ್ನದ ಬಿಸಿಯೂಟ ಸೇರಿದಂತೆ ಯಾವೆಲ್ಲಾ ಯೋಜನೆಗಳು ಈಗಾಗಲೇ ಜಾರಿಯಲ್ಲಿ ಇದ್ಯೋ ಅವೆಲ್ಲ ಕಾರ್ಯಕ್ರಮಗಳನ್ನೂ ಮುಂದುವರೆಸಬಹುದು. ಈ ಕಾರ್ಯಕ್ರಮಗಳಿಗೆ ಹೊಸ ಫಲಾನುಭವಿಗಳನ್ನ ಆಯ್ಕೆ ಮಾಡುವಂತಿಲ್ಲ.
ಇನ್ನು ಸಚಿವರು ಬೆಂಗಳೂರನ್ನು ಬಿಟ್ಟು ಹೊರಗಡೆ ಹೋಗೋದಕ್ಕೆ ಚುನಾವಣಾ ಆಯೋಗದ ಅನುಮತಿ ಪಡೆಯಲೇಬೇಕು. ಸಚಿವರು, ಶಾಸಕರಿಗೆ ಕೆಲವೊಂದು ವಿನಾಯ್ತಿಗಳೂ ಇವೆ. ಬರ ಮತ್ತು ಪ್ರವಾಹ ಪರಿಸ್ಥಿತಿಯ ಪರಿಶೀಲನೆ ನಡೆಸೋದಕ್ಕೆ ಚುನಾವಣಾ ಆಯೋಗ ಅಡ್ಡಿ ಮಾಡಲ್ಲ. ಪರಿಹಾರ ಬಿಡುಗಡೆ ಮಾಡೋದಕ್ಕೂ ಅಡ್ಡ ಬರಲ್ಲ.


ಕುಡಿಯುವ ನೀರು ಪೂರೈಕೆ ಮಾಡೋದಕ್ಕೆ, ಗೋಶಾಲೆ ತೆರೆಯೋದಕ್ಕೂ ನೀತಿ ಸಂಹಿತೆ ಅಡ್ಡಿ ಆಗಲ್ಲ. ಆದ್ರೆ, ಎಲ್ಲದಕ್ಕೂ ಚುನಾವಣಾ ಆಯೋಗದ ಅನುಮತಿ ಬೇಕೇ ಬೇಕು. ಇನ್ನು ಸೇತುವೆ, ರಸ್ತೆ ಸೇರಿದಂತೆ ಯಾವುದೇ ಕಾಮಗಾರಿ ಕೆಲಸ ಪೂರ್ಣ ಆಗಿದ್ದರೆ ಅಧಿಕಾರಿಗಳು ಉದ್ಘಾಟನೆ ಮಾಡಬಹುದು, ಸಾರ್ವಜನಿಕರ ಸೇವೆಗೆ ಅರ್ಪಣೆ ಮಾಡಬಹುದು.


ಇದನ್ನೂ ಓದಿ:  Rahul Gandhi: ಸಂಸದ ಸ್ಥಾನದಿಂದ ಅನರ್ಹಗೊಂಡ ರಾಹುಲ್‌ ಗಾಂಧಿ; ಯಾವೆಲ್ಲಾ ಸರ್ಕಾರಿ ಸೌಲಭ್ಯಗಳನ್ನು ಕಳೆದುಕೊಳ್ಳುತ್ತಾರೆ?


ಸಿಎಂಗೆ ಕೆಲವು ಅಧಿಕಾರಗಳು

top videos


  ಮುಖ್ಯಮಂತ್ರಿಗಳಿಗೆ ಕೆಲವು ಅಧಿಕಾರಗಳು ಮುಂದುವರಿಯಲಿವೆ. ಆದರೆ ಆದೇಶ ಮಾಡುವ, ಸಹಿ ಹಾಕುವ, ಸರ್ಕಾರಿ ಕಾರ್ಯಕ್ರಮ ಕರೆಯುವ, ಭಾಗವಹಿಸುವ ಅಧಿಕಾರ ಇರಲ್ಲ. ಸಿಎಂ ಸರ್ಕಾರಿ ಕಾರನ್ನು ತಮ್ಮ ಕಚೇರಿ, ವಿಧಾನಸೌಧಕ್ಕೆ ಬಳಸಬೇಕು. ಜಿಲ್ಲಾ ಪ್ರವಾಸ, ಪ್ರಚಾರ ಗಳಿಗೆ ಸರ್ಕಾರಿ ವಾಹನ ಬಳಕೆ ನಿರ್ಬಂಧ ಇರಲಿದೆ.

  First published: