Mysore Forest: ರೆಸಾರ್ಟ್ ನಿರ್ಮಾಣಕ್ಕೆ ಮೈಸೂರು ಅರಸರು ನಿರ್ಮಿಸಿದ ಅರಣ್ಯ ನಾಶ; ಕಂಡು ಕಾಣದಂತೆ ವರ್ತಿಸುತ್ತಿರುವ ಅಧಿಕಾರಿಗಳು

ಹೀಗೆ ಪರಿಸರ ನಾಶ ಮಾಡುತ್ತಿದ್ದರೆ ನಮ್ಮ ಮುಂದಿನ ಪೀಳಿಗೆಯವರಿಗೆ ಅರಣ್ಯಗಳೆ ಇರುವುದಿಲ್ಲ ಎಂಬುದು ವಾಸ್ತವ ಸಂಗತಿ ಆಗಿದೆ. ಮೈಸೂರು ಅರಸರು 1920 ರಲ್ಲಿ ನಿರ್ಮಿಸಿದ ಅರಣ್ಯವನ್ನು ದಿನಕ್ಕೊಂದು ತಲೆ ಎತ್ತುತ್ತಿರುವ ರೆಸಾರ್ಟ್‌ಗಳು ಮತ್ತು ಹೋಂಸ್ಟೇಗಳು ಹಂತ ಹಂತವಾಗಿ ನಾಶಗೊಳಿಸುತ್ತಿವೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಪ್ರಸ್ತುತ ದಿನಮಾನಗಳಲ್ಲಿ ಅರಣ್ಯನಾಶ (Deforestation) ಹೆಚ್ಚಾಗುತ್ತಿದೆ ಎಂದು ಹೇಳಬಹುದು. ಮನುಷ್ಯನು ತನ್ನ ಸ್ವಾರ್ಥಕ್ಕಾಗಿ ಅರಣ್ಯನಾಶದಂತಹ ಕೃತ್ಯಗಳಿಗೆ ಕಾರಣವಾಗುತ್ತಿದ್ದಾನೆ. ಆದರೆ ಹಳೆ ಕಾಲದವರು ನೈಸರ್ಗಿಕ ಸಂಪನ್ಮೂಲಗಳನ್ನು (Natural resource) ಕಡಿಮೆ ಮಟ್ಟದಲ್ಲಿ ಬಳಸುವುದರ ಜೊತೆಗೆ ಮರ-ಗಿಡಗಳನ್ನು ಹೆಚ್ಚು ಬೆಳೆಸುತ್ತಿದ್ದರು. ಆ ಕಾರಣದಿಂದಲೇ ಇಂದಿಗೂ ನಾವು ಅರಣ್ಯಗಳನ್ನು (Forest) ನೋಡುತ್ತಿದ್ದೇವೆ. ಹೀಗೆ ಪರಿಸರ ನಾಶ ಮಾಡುತ್ತಿದ್ದರೆ ನಮ್ಮ ಮುಂದಿನ ಪೀಳಿಗೆಯವರಿಗೆ ಅರಣ್ಯಗಳೆ ಇರುವುದಿಲ್ಲ ಎಂಬುದು ವಾಸ್ತವ ಸಂಗತಿ ಆಗಿದೆ. ಮೈಸೂರು ಅರಸರು (Kings of Mysore) 1920 ರಲ್ಲಿ ನಿರ್ಮಿಸಿದ ಅರಣ್ಯವನ್ನು ದಿನಕ್ಕೊಂದು ತಲೆ ಎತ್ತುತ್ತಿರುವ ರೆಸಾರ್ಟ್‌ಗಳು (Resorts) ಮತ್ತು ಹೋಂಸ್ಟೇಗಳು (Homestay) ಹಂತ ಹಂತವಾಗಿ ನಾಶಗೊಳಿಸುತ್ತಿವೆ.

ಸಕಲೇಶಪುರದ ಕೆಲವು ಭಾಗಗಳಲ್ಲಿ ನಾಯಿಕೊಡೆಗಳಂತೆ ಹುಟ್ಟಿಕೊಂಡ ಈ ರೆಸಾರ್ಟ್‌ಗಳು ಮತ್ತು ಹೋಂಸ್ಟೇಗಳು, ಅರಣ್ಯಗಳಿಗೆ 1920ರಲ್ಲಿ ನೀಡಲಾಗಿರುವ ಶಾಸನಬದ್ಧ ಕಾಯಿದೆಯನ್ನು ಮರೆತು ಅರಣ್ಯನಾಶವನ್ನು ಮಾಡಿ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುತ್ತಿವೆ.

ಅರಣ್ಯ ಭೂಮಿಯನ್ನು ಖಾಸಗಿಯವರಿಗೆ ಬಿಟ್ಟುಕೊಡುತ್ತಿರುವ ಕಂದಾಯ ಇಲಾಖೆ

ಫೆಬ್ರವರಿ 5, 1920 ರಂದು, ಮೈಸೂರು ರಾಜಪ್ರಭುತ್ವ ರಾಜ್ಯವು 7,938 ಎಕರೆ ಮತ್ತು 38 ಗುಂಟೆಗಳನ್ನು ಮುರ್ಕಣ್ಣುಗುಡ್ಡ ಪ್ರದೇಶವನ್ನು ‘ರಾಜ್ಯ ಅರಣ್ಯ’ ಎಂದು ಘೋಷಿಸಿ, ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿತು. ಈ ಪ್ರದೇಶದಲ್ಲಿ ಕ್ಷಿಪ್ರಗತಿಯಲ್ಲಿ ಭೂ ಬಳಕೆಯು ಬದಲಾವಣೆ ಹೊಂದುತ್ತಿರುವ ಕುರಿತು ಪರಿಶೀಲನೆ ನಡೆಸಿದ ಅರಣ್ಯಾಧಿಕಾರಿಗಳು, ಕಂದಾಯ ಇಲಾಖೆಯು ಜಿಲ್ಲಾ ಮಟ್ಟದಲ್ಲಿ ಅರಣ್ಯ ಭೂಮಿಯನ್ನು ಖಾಸಗಿಯವರಿಗೆ ಬಿಟ್ಟುಕೊಡುತ್ತಿರುವುದು ಬೆಳಕಿಗೆ ಬಂದಿದೆ.

ಒಟ್ಟಿನಲ್ಲಿ ಎಷ್ಟು ಜಾಗವನ್ನು ಖಾಸಗೀಕರಣ?

ಇದರ ವಿಚಾರವಾಗಿ, ಕಳೆದ ತಿಂಗಳು ಸಕಲೇಶಪುರದ ಸಹಾಯಕ ಆಯುಕ್ತರಿಗೆ ಪತ್ರ ಬರೆದಿರುವ, ಹಾಸನದ ಅರಣ್ಯ ಸಂಚಾರಿ ದಳದ ಅರಣ್ಯ ಉಪ ಸಂರಕ್ಷಣಾಧಿಕಾರಿ ಎನ್. ರವೀಂದ್ರ ಕುಮಾರ್ ಅವರು ಮುರ್ಕಣ್ಣು ಗುಡ್ಡ ಪ್ರದೇಶದಲ್ಲಿ ಅಕ್ರಮವಾಗಿ ಅರಣ್ಯವನ್ನು ಖಾಸಗಿಯವರಿಗೆ ಬಿಟ್ಟುಕೊಡಲಾಗುತ್ತಿದೆ ಎಂದು ಗಂಭಿರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: Chitradurga News: ಪ್ರೀತಿಸಿದ ಯುವತಿಯನ್ನು ಮದುವೆ ಆಗಲು ಅಡ್ಡಿ ಬಂದ ಚಿಕ್ಕಪ್ಪನ ಹೆಣ ಕೆಡವಿದ ಚಿತ್ರಲಿಂಗ

ಈ ಪತ್ರದಲ್ಲಿ “ಕಂದಾಯ ಇಲಾಖೆಯು 1,511 ಎಕರೆಗೂ ಹೆಚ್ಚು ಜಾಗವನ್ನು ಅಕ್ರಮವಾಗಿ ಖಾಸಗಿಯವರಿಗೆ ನೀಡಿದೆ. ಅರಣ್ಯ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 2 ರಲ್ಲಿ ಇರುವ ಅರಣ್ಯ ಮಂಜೂರಾತಿ, ಜಮೀನುಗಳ ವಿಭಜನೆ, ಹೊಸ ಸರ್ವೆ ನಂಬರ್‌ಗಳ ರಚನೆ ಇವುಗಳ ಸ್ಪಷ್ಟ ಉಲ್ಲಂಘನೆಯಾಗಿದೆ'' ಎಂದು ಪತ್ರದಲ್ಲಿ ರವೀಂದ್ರ ಉಲ್ಲೇಖಿಸಿದ್ದಾರೆ.

25ಕ್ಕೂ ಹೆಚ್ಚು ರೆಸಾರ್ಟ್‌ಗಳು ಮತ್ತು ಹೋಂಸ್ಟೇಗಳ ನಿರ್ಮಾಣ

ಈ ಅರಣ್ಯ ಭೂಮಿಯ ಅಭಿವೃದ್ಧಿ ಹೇಗೆ ನಡೆದಿದೆ ಎಂದು ಪರಿಶೀಲಿಸಲು ಈ ಭೂಪ್ರದೇಶವನ್ನು ಟ್ರ್ಯಾಕ್ ಮಾಡಲು ಪ್ರಾರಂಭಿಸಿದ ವಿಭಾಗದ ಅಧಿಕಾರಿಗಳು, ಅಧಿಸೂಚಿತ ಅರಣ್ಯ ಭೂಮಿಯಲ್ಲಿ 25ಕ್ಕೂ ಹೆಚ್ಚು ರೆಸಾರ್ಟ್‌ಗಳು ಮತ್ತು ಹೋಂಸ್ಟೇಗಳು ಕಂಡು ಬಂದಿರುವುದು ಬೆಳಕಿಗೆ ಬಂದಿದೆ.

ಅಕ್ರಮ ವಿದ್ಯುತ್ ಸರಬರಾಜು

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿಯು (ಸೆಸ್ಕ್) ಅರಣ್ಯ ಸಂರಕ್ಷಣಾ ಕಾಯ್ದೆಯಡಿ ತೆರವು ಮಾಡದೇ ಪಿಲ್ಲರ್‌ಗಳನ್ನು ನಿರ್ಮಿಸಿದ ಅಕ್ರಮ ಸಂಸ್ಥೆಗಳಿಗೆ ಅಕ್ರಮವಾಗಿ ವಿದ್ಯುತ್ ಸರಬರಾಜು ಮಾಡಿದೆ ಎಂಬ ವಿಚಾರ ತಿಳಿದು ಬಂದಿದೆ.

ಇದರ ಕುರಿತು ಸೆಸ್ಕ್‌ನ ಅಧಿಕಾರಿಯೊಬ್ಬರಿಗೆ ವನ್ಯಜೀವಿಗಳಿಗೆ ಹಾನಿಯಾಗುವ ಹಿನ್ನೆಲೆಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಅರಣ್ಯಾಧಿಕಾರಿಗಳು ತಿಳಿಸಿದಾಗ, ಅಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ನಮಗೆ ತಿಳಿದು ಬಂದಿರುವ ಹಿನ್ನೆಲೆಯಲ್ಲಿ ರೆಸಾರ್ಟ್‌ಗಳು ಮತ್ತು ಹೋಂಸ್ಟೇಗಳಿಗೆ ನೋಟಿಸ್‌ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:  Timber Smugglers: ಸ್ಲೀಪರ್ ಬಸ್ ನಲ್ಲಿ ತೇಗದ ಮರ ಕಳ್ಳಸಾಗಾಣಿಕೆ; ಅಸಲಿ ಜೀವನದ ‘ಪುಷ್ಪಾ’ ಬಗ್ಗೆ ಅಧಿಕಾರಿಯ ಫನ್ನಿ ಟ್ವೀಟ್

ಅರಣ್ಯದಲ್ಲಿ ಅನುಮತಿ ಇಲ್ಲದೆ ವಿದ್ಯುತ್‌ ಕಂಬಗಳನ್ನು ನಿರ್ಮಿಸಿರುವ ಕುರಿತು ಕೇಳಲಾದ ಪ್ರಶ್ನೆಗೆ, ಇದರ ಬಗ್ಗೆ ನಮಗೆ ಯಾವುದೇ ಮಾಹಿತಿ ಇದ್ದಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ. ಈ ಅರಣ್ಯ ಪ್ರದೇಶದಲ್ಲಿ ದಶಕಕ್ಕೂ ಹೆಚ್ಚು ಕಾಲದಿಂದ ಹೆಚ್ಚಿನ ಅಕ್ರಮಗಳು ನಡೆಯುತ್ತಿವೆ ಎಂದು ಅರಣ್ಯಾಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಅಕ್ರಮಗಳಿಗೆ  ಕಾರಣವಾದವರಿಗೆ ಶಿಕ್ಷೆ ನೀಡುವುದಾಗಿ ಆಶ್ವಾಸನೆ 

“ನಾವು ಈಗ ಈ ಅಕ್ರಮವನ್ನು ಪತ್ತೆ ಹಚ್ಚಿ, ಅರಣ್ಯ ನಾಶಕ್ಕೆ ಸಂಬಂಧಪಟ್ಟ ಎಲ್ಲ ಮಾಹಿತಿಗಳನ್ನು ವಿಸ್ತಾರವಾಗಿ ಅಧ್ಯಯನ ಮಾಡಿ, ಈ ಅಕ್ರಮಗಳಿಗೆ ನೇರವಾಗಿ ಕಾರಣವಾದವರಿಗೆ ತಕ್ಕ ಶಿಕ್ಷೆ ಕೊಡಿಸುತ್ತೇವೆ” ಎಂದು ಅವರು ಹೇಳಿದರು. ಕೊನೆಯದಾಗಿ ಹೇಳಬೇಕೆಂದರೆ, ಈ ಅರಣ್ಯಗಳು ಮನುಷ್ಯರಿಗೆ ಜೀವಗಾಳಿಯನ್ನು ನೀಡುವುದರಿಂದ ಇವುಗಳನ್ನು ಹೆಚ್ಚೆಚ್ಚು ಬೆಳೆಸೋಣವೇ ಹೊರತು ನಾಶ ಮಾಡುವುದು ಬೇಡ ಎಂಬುದು ಪ್ರತಿ ಮನುಷ್ಯನಿಗೂ ಇರಬೇಕಾದ ಸಾಮಾಜಿಕ ಜವಬ್ದಾರಿ ಆಗಿದೆ.
Published by:Ashwini Prabhu
First published: