ಚಾಮರಾಜನಗರ: ವರುಣಾ (Varuna) ಮತ್ತು ಚಾಮರಾಜನಗರ (Chamarajanagar) ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿರುವ ಸಚಿವ ವಿ ಸೋಮಣ್ಣ (Minister V Somanna) ಅನಾರೋಗ್ಯದ ನಡುವೆಯೂ ಬರುಸಿನ ಪ್ರಚಾರ (Election Campaign) ನಡೆಸುತ್ತಿದ್ದಾರೆ. ಕಡಿಮೆ ರಕ್ತದೊತ್ತಡದಿಂದಾಗಿ ಸೋಮಣ್ಣ ಅವರಿಗೆ ಪ್ರಚಾರದ ವೇಳೆ ತಲೆ ಸುತ್ತು ಕಾಣಿಸಿಕೊಂಡಿತ್ತು. ಕೂಡಲೇ ಚಾಮರಾಜನಗರ ಕೋಡಿಮೊಳೆ ಗ್ರಾಮದಲ್ಲಿ ಚಿಕಿತ್ಸೆ ಕೊಡಿಸಲಾಯ್ತು. ಸುಮಾರು 20 ನಿಮಿಷ ವಿಶ್ರಾಂತಿ ಬಳಿಕ ಮತ್ತೆ ಚುನಾವಣಾ ಪ್ರಚಾರಕ್ಕೆ ವಿ ಸೋಮಣ್ಣ ಸೇರಿಕೊಂಡರು. ಎರಡೂ ಕ್ಷೇತ್ರಗಳಲ್ಲಿ ನಿರಂತರವಾಗಿ ಬಿಸಿಲಿನಲ್ಲಿ ಪ್ರಚಾರ ನಡೆಸುತ್ತಿರೋ ಕಾರಣ ವಿ ಸೋಮಣ್ಣ ಬಸವಳಿದಂತೆ ಕಂಡರು.
ಚಿಕಿತ್ಸೆ ಪಡೆದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ವಿ ಸೋಮಣ್ಣ, ನಾನು ಆರಾಮಾಗಿದ್ದೇನೆ. ಸ್ವಲ್ಪ ಲೊ ಬಿಪಿ ಆಗಿದ್ದರಿಂದ ತಲೆ ಸುತ್ತು ಬಂತು. ಹಾಗಾಗಿ ಸ್ವಲ್ಪ ಸಮಯ ಕಾರ್ನಲ್ಲಿ ಕುಳಿತು 20 ನಿಮಿಷ ವಿಶ್ರಾಂತಿ ಪಡೆದುಕೊಂಡೆ.
ದೈಹಿಕವಾಗಿ ಬಳಲಿದ್ದೇನೆ
ವೈದ್ಯರು ಬಂದು ತಪಾಸಣೆ ಮಾಡಿದ್ದು, ರಕ್ತದೊತ್ತಡ 70 ಕ್ಕೆ ಇಳಿದಿತ್ತು. ನಾನು ಸುಮ್ನೆ ಕುಳಿತುಕೊಳ್ಳುವವನು ಅಲ್ಲ.ನಿನ್ನೆ ರಾತ್ರಿ ಸಭೆ ಮುಗಿಸಿ ಮಲಗಿದಾಗ 4 ಗಂಟೆ ಆಗಿತ್ತು. ದೈಹಿಕವಾಗಿ ಬಳಲಿದ್ದೇನೆ ಎಂದರು.
ಎಫ್ಐಆರ್ ದಾಖಲಾಗಿದ್ದಕ್ಕೆ ಪ್ರತಿಕ್ರಿಯೆ
ಇನ್ನು ಆಡಿಯೋ ಸಂಬಂಧ ಎಫ್ಐಆರ್ ದಾಖಲಾಗಿರೋದಕ್ಕೆ ಪ್ರತಿಕ್ರಿಯಿಸಿದ ವಿ.ಸೋಮಣ್ಣ, ಇದೆಲ್ಲಾ ವ್ಯವಸ್ಥಿತ ಪಿತೂರಿ ಎಂದು ಆರೋಪಿಸಿದರು.ಚುನಾವಣೆ ಆಯೋಗ ಈಗಾಗಲೇ ಕ್ರಮ ತೆಗೆದುಕೊಂಡಿದೆ. ಚುನಾವಣೆ ಬಂದಾಗ ಇಂತಹದ್ದೆಲ್ಲಾ ಮಾಡ್ತಾರೆ. ಇದಕ್ಕೂ ನಂಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: DK Shivakumar ಮುಂದೆ ರಾಹುಲ್ ಗಾಂಧಿ ಹೇಳಿದ ಮಾತನ್ನ ರಿವೀಲ್ ಮಾಡಿದ ಅಮಿತ್ ಶಾ!
ತನಿಖೆ ಎದುರಿಸಲು ಸಿದ್ಧವಾಗಿದ್ದೇನೆ . ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಆಗ್ತಾನೆ ಇರುತ್ತೆ. ಪ್ರಭಾವಿಗಳ ಮೇಲೆ ಇಂತಹದ್ದೆಲ್ಲಾ ಇದ್ದಿದ್ದೆ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ