ಈ ತಿಂಗಳೊಳಗೆ ಸಚಿವ ಸಂಪುಟ ವಿಸ್ತರಣೆ; ಡಿಸಿಎಂ ಅಶ್ವಥ್​ನಾರಾಯಣ

ಯಾರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂದು ಮುಖ್ಯಮಂತ್ರಿ ಅವರು ನಿರ್ಧರಿಸಲಿದ್ದಾರೆ. ಈ ಬಗ್ಗೆ ನಾನು ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ ಈ ತಿಂಗಳ ಅಂತ್ಯದೊಳಗೆ ಸಂಪುಟ ವಿಸ್ತರಣೆಯಾಗಲಿದೆ ಎಂದಷ್ಟೇ ಹೇಳಬಹುದು

ಡಿಸಿಎಂ ಅಶ್ವತ್ಥ್ ನಾರಾಯಣ.

ಡಿಸಿಎಂ ಅಶ್ವತ್ಥ್ ನಾರಾಯಣ.

  • Share this:
ಮೈಸೂರು (ಜ.23): ಬಹುದಿನಗಳಿಂದ ಎದುರು ನೋಡುತ್ತಿರುವ ಸಚಿವ ಸಂಪುಟ ವಿಸ್ತರಣೆ ಕಾರ್ಯವನ್ನು ಈ ತಿಂಗಳೊಳಗೆ ಮಾಡಲಾಗುವುದು. ಮುಖ್ಯಮಂತ್ರಿಗಳು ವಿದೇಶದಿಂದ ವಾಪಸ್ಸಾದ ಬಳಿಕ ಸಚಿವ ಸ್ಥಾನದ ಬಗ್ಗೆ ನಿರ್ಧರಿಸಿದ್ದಾರೆ ಎಂದು ಉಪ ಮುಖ್ಯಮಂತ್ರಿ ಅಶ್ವಥ್​ ನಾರಾಯಣ ತಿಳಿಸಿದರು. 

ಸುತ್ತೂರಿನ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾದ ಸಂದರ್ಭದಲ್ಲಿ ಮಾತನಾಡಿದ ಅವರು, ಯಾರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂದು ಮುಖ್ಯಮಂತ್ರಿ ಅವರು ನಿರ್ಧರಿಸಲಿದ್ದಾರೆ. ಈ ಬಗ್ಗೆ ನಾನು ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ ಈ ತಿಂಗಳ ಅಂತ್ಯದೊಳಗೆ ಸಂಪುಟ ವಿಸ್ತರಣೆಯಾಗಲಿದೆ ಎಂದಷ್ಟೇ ಹೇಳಬಹುದು ಎಂದರು.

ಉಪಚುನಾವಣೆ ಬಳಿಕ ಸಂಪುಟ ವಿಸ್ತರಣೆ ಕಾರ್ಯ ನೆನಗುದಿಗೆ ಬಿದ್ದಿತು. ಧನುರ್ಮಾಸದ ಬಳಿಕ ಈ ಕಾರ್ಯಕ್ಕೆ ಚಾಲನೆ ಸಿಗಲಿದೆ ಎನ್ನಲಾಗಿತ್ತು. ಆದರೆ, ಧನುರ್ಮಾಸ ಮುಗಿದ ಬಳಿಕ ಹೈ ಕಮಾಂಡ್​ ಭೇಟಿಗೆ ಮುಂದಾದ ಬಿಎಸ್​ವೈಗೆ ಈ ಕುರಿತು ಚರ್ಚಿಸಲು ಅವಕಾಶ ಸಿಗಲಿಲ್ಲ.

ಇದನ್ನು ಓದಿ: ಸಿಎಎ ಕುರಿತು ಬಿಜೆಪಿ ನಾಯಕರಿಂದ ಮುಜುಗರದ ಹೇಳಿಕೆ; ಕಟೀಲ್​ಗೆ ಚಾಟಿ ಬೀಸಿದ ಹೈ ಕಮಾಂಡ್​​

ಇನ್ನು ಅಮಿತ್​ ಶಾ ರಾಜ್ಯಕ್ಕೆ ಬಂದಾಗಲೇ ಈ ಕುರಿತು ಚರ್ಚಿಸುವುದಾಗಿ ಅವರು ತಿಳಿಸಿದ್ದರು. ಆದರೆ, ಈ ವೇಳೆ ಈ ಕುರಿತು ಮಾತುಕತೆ ಅಸಾಧ್ಯವಾಗಿತ್ತು. ಇದಾದ ಬಳಿಕ ಸಿಎಂ ಕೂಡ ದಾವೂಸ್​ ಕಡ ಪ್ರಯಾಣ ಬೆಳೆಸಿದ್ದರು. ಇಲ್ಲಿಂದ ಮರಳಿದ ಬಳಿಕ ನೂತನ ಬಿಜೆಪಿ ಶಾಸಕರ ಒತ್ತಡ ಮತ್ತಷ್ಟು ಹೆಚ್ಚಲಿದ್ದು, ಈ ಹಿನ್ನೆಲೆ ಈ ಕಾರ್ಯಕ್ಕೆ ಮೊದಲು ಸಿಎಂ ಮುಂದಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
First published: