ಪಾನಮತ್ತನಾಗಿ ಮಲಗಿ ರೋಗಿ ಸಾವಿಗೆ ಕಾರಣರಾದ ವೈದ್ಯನ ಮೇಲೆ ತನಿಖೆ

ಜಿಲ್ಲೆಯ ಅಜ್ಜಂಪುರದ ಸಮುದಾಯ ಕೇಂದ್ರದಲ್ಲಿ ವೈದ್ಯರಾಗಿ ಕೆಲಸ ನಿರ್ವಹಿಸುತ್ತಿದ್ದ ಡಾ ಚೆನ್ನಕೇಶವಲು ಕುಡಿದು ಆಸ್ಪತ್ರೆಯಲ್ಲಿಯೇ ಬೆತ್ತಲಾಗಿ ಮಲಗಿದ್ದಾರೆ. ಈ ವೇಳೆ ಆಸ್ಪತ್ರೆಗೆ ಚಿಕಿತ್ಸೆಗೆ ಬಂದ ಮಹಿಳೆ ಹೆಬ್ಬೂರಿನ ಪುಟ್ಟಪ್ಪ ಸೂಕ್ತ ಚಿಕಿತ್ಸೆ ಸಿಗದೇ ಸಾವನ್ನಪ್ಪಿದ್ದರು

Seema.R | news18-kannada
Updated:March 2, 2020, 4:58 PM IST
ಪಾನಮತ್ತನಾಗಿ ಮಲಗಿ ರೋಗಿ ಸಾವಿಗೆ ಕಾರಣರಾದ ವೈದ್ಯನ ಮೇಲೆ ತನಿಖೆ
ಪ್ರಾತಿನಿಧಿಕ ಚಿತ್ರ
  • Share this:
ಚಿಕ್ಕಮಗಳೂರು(ಫೆ. 02): ಕೆಲಸದ ವೇಳೆ ಸಮುದಾಯ ಆಸ್ಪತ್ರೆ ಕೇಂದ್ರದಲ್ಲಿಯೇ ಕುಡಿದು ಮಲಗಿ, ರೋಗಿಯ ಸಾವಿಗೆ ಕಾರಣರಾಗಿದ್ದರೆನ್ನಲಾದ ವೈದ್ಯನ ವಿರುದ್ಧ ಆರೋಗ್ಯ ಇಲಾಖೆ ತನಿಖೆ ನಡೆಸಲು ಆದೇಶಿಸಿದೆ.

ಜಿಲ್ಲೆಯ ಅಜ್ಜಂಪುರದ ಸಮುದಾಯ ಕೇಂದ್ರದಲ್ಲಿ ವೈದ್ಯರಾಗಿ ಕೆಲಸ ನಿರ್ವಹಿಸುತ್ತಿದ್ದ ಡಾ ಚೆನ್ನಕೇಶವಲು ಕುಡಿದು ಆಸ್ಪತ್ರೆಯಲ್ಲಿಯೇ ಬೆತ್ತಲಾಗಿ ಮಲಗಿದ್ದಾರೆ. ಈ ವೇಳೆ ಆಸ್ಪತ್ರೆಗೆ ಚಿಕಿತ್ಸೆಗೆ ಬಂದ ಮಹಿಳೆ ಹೆಬ್ಬೂರಿನ ಪುಟ್ಟಮ್ಮ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ್ದರು.

ವೈದ್ಯರ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎಂದು ರೋಗಿಯ ಸಂಬಂಧಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಆಸ್ಪತ್ರೆ ಮುಂದೆ ಧರಣಿ ನಡೆಸಿದರು. ಈ ಘಟನೆ ಬಳಿಕ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್​ ಮಲ್ಲಿಕಾರ್ಜುನಪ್ಪ, ಈ ಕುರಿತು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಘಟನೆ ಬಳಿಕ ವೈದ್ಯರ ನಿರ್ಲಕ್ಷ್ಯದ  ಕುರಿತು ಪೊಲೀಸರು ಯಾವುದೇ ದೂರು ದಾಖಲಿಸಿಲ್ಲ. ಅಲ್ಲದೇ ವೃದ್ಧೆಯ ಸಾವಿಗೆ ಕೂಡ ವೈದ್ಯರು ಕಾರಣವಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.

ಇದನ್ನು ಓದಿ: ವೇದಿಕೆ ಮೇಲೆ ಹೆಜ್ಜೆ ಹಾಕಿದ ಪುಟಾಣಿಗಳು; ಯೋಧರ ಮಕ್ಕಳ ಸೂಪರ್ ಡಾನ್ಸ್ ವೈರಲ್​

ಇನ್ನು ವೈದ್ಯ ಚನ್ನಕೇಶವರನ್ನು ರಜೆ ಮೇಲೆ ಕಳುಹಿಸಲಾಗಿದ್ದು. ತನಿಖೆ ಬಳಿಕ ಕ್ರಮಕ್ಕೆ ಮುಂದಾಗಲಾಗುವುದು ಎಂದು ತಾಲೂಕು ವೈದ್ಯಾಧಿಕಾರಿ ತಿಳಿಸಿದ್ದಾರೆ.
First published: March 2, 2020, 4:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading