• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಟ್ರಕ್​​-ಸ್ಕೂಟರ್​ ನಡುವೆ ಭೀಕರ ಅಪಘಾತ: ಹೆಲ್ಮೆಟ್​ ಹಾಕದೇ ಗಾಡಿ ಓಡಿಸುತ್ತಿದ್ದ ವಿದ್ಯಾರ್ಥಿನಿ ಸಾವು

ಟ್ರಕ್​​-ಸ್ಕೂಟರ್​ ನಡುವೆ ಭೀಕರ ಅಪಘಾತ: ಹೆಲ್ಮೆಟ್​ ಹಾಕದೇ ಗಾಡಿ ಓಡಿಸುತ್ತಿದ್ದ ವಿದ್ಯಾರ್ಥಿನಿ ಸಾವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಡ್ರೈವಿಂಗ್ ಲೈಸನ್ಸ್ ಇಲ್ಲದ ರೇಷ್ಮಾ, ವಾಹನ ಚಾಲನೆ ಮಾಡುವಾಗ ಹೆಲ್ಮೆಟ್ ಸಹ ಹಾಕಿರಲಿಲ್ಲ. ಇದೇ ಆಕೆಯ ಸಾವಿಗೆ ಕಾರಣವಾಗಿದೆ ಎನ್ನುತ್ತಾರೆ ಪೊಲೀಸರು.

  • Share this:

    ದ್ವಿಚಕ್ರ ವಾಹನ ಚಾಲನೆ ಮಾಡುವಾಗ ಹೆಲ್ಮೆಟ್ ಹಾಗೂ ಡ್ರೈವಿಂಗ್ ಲೈಸನ್ಸ್ ಕಡ್ಡಾಯ ಎಂದು ಸಾರಿಗೆ ಇಲಾಖೆ ಹೇಳಿದರೂ ಅನೇಕರು ಅದನ್ನು ಪಾಲಿಸೋದಿಲ್ಲ. ಹೆಲ್ಮೆಟ್ ಹಾಕದೇ ವಾಹನ ಚಲಾಯಿಸುತ್ತಾರೆ. ಕೆಲವರ ಹತ್ತಿರ ಡ್ರೈವಿಂಗ್ ಲೈಸೆನ್ಸ್ ಸಹ ಇರೋದಿಲ್ಲ. ಇಂತಹ ಸಂದರ್ಭದಲ್ಲಿ ಅಪಘಾತವಾಗುವ ಸಾಧ್ಯತೆ ಹೆಚ್ಚಿರುತ್ತದೆ.


    ಅಂತಹುದೇ ಒಂದು ಘಟನೆ ಇದೀಗ ಪಕ್ಕದ ರಾಜ್ಯ ತೆಲಂಗಾಣದ ಹೈದರಾಬಾದ್ನಲ್ಲಿ ನಡೆದಿದೆ. ಶನಿವಾರ ರಾತ್ರಿ ಟ್ರಕ್ ಮತ್ತು ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಎಂ ರೇಷ್ಮಾ (20) ಎನ್ನುವ ದಂತ ವಿಜ್ಞಾನ ಓದುತ್ತಿದ್ದ ವಿದ್ಯಾರ್ಥಿನಿ ಅಕಾಲಿಕ ಸಾವನ್ನಪ್ಪಿದ್ದಾಳೆ.


    ಆಂಧ್ರಪ್ರದೇಶದ ಕಡಪ ಜಿಲ್ಲೆಯವಳಾದ ಎಂ ರೇಷ್ಮಾ, ಕರ್ನಾಟಕದ ಕಲಬುರಗಿಯಲ್ಲಿರುವ ಎಚ್ಕೆಇಎಸ್ ನಿಜಲಿಂಗಪ್ಪ ದಂತ ವಿಜ್ಞಾನ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಕಳೆದ ಶುಕ್ರವಾರ ತನ್ನ ಸ್ನೇಹಿತರನ್ನು ಭೇಟಿ ಮಾಡೋಕೆ ಅಂತ ತೆಲಂಗಾಣದ ಹೈದರಾಬಾದ್ಗೆ ಹೊರಟ ರೇಷ್ಮಾ ಮತ್ತೆ ಸಿಕ್ಕಿದ್ದು ಶವವಾಗಿ.


    ಶುಕ್ರವಾರ ಹೈದರಾಬಾದ್ ತಲುಪಿದ ರೇಷ್ಮಾ, ಶನಿವಾರ ರಾತ್ರಿ ತನ್ನ ಸ್ನೇಹಿತರೊಂದಿಗೆ ಸಿನಿಮಾ ನೋಡೋಕೆ ಪ್ಲಾನ್ ಮಾಡಿದ್ದಾರೆ. ಸ್ನೇಹಿತರಾದ ಶ್ರೀಜಾ, ಮಮತಾ, ಅಜಯ್ ಸಿಂಗ್ ಮತ್ತು ಶ್ರವಣ್ ಕುಮಾರ್ ಅವರು ರಾತ್ರಿ ಶೋ ನೋಡೋಕೆ ಒಪ್ಪಿದ್ದಾರೆ. ಸ್ನೇಹಿತರೆಲ್ಲ ಜೊತೆ ಸೇರಿ ರೇಷ್ಮಾ ಮದೀನಗುಡದ ಜಿಎಸ್ಎಂ ಮಾಲ್ನಲ್ಲಿ ಶನಿವಾರ ರಾತ್ರಿ ಸಿನಿಮಾ ನೋಡಿದ್ದಾರೆ.


    ಪಿಎಫ್ ಬಳಕೆದಾರರ ಗಮನಕ್ಕೆ: ಏಪ್ರಿಲ್ 1ರಿಂದ ತೆರಿಗೆ ನಿಯಮಗಳು ಬದಲಾವಣೆ


    ರಾತ್ರಿ 11:40ರ ಸುಮಾರಿಗೆ ಸಿನಿಮಾ ಮುಗಿಸಿಕೊಂಡು ವಾಪಸ್ ಕೆಪಿಎಚ್ಬಿ ಕಡೆಗೆ ಬರುವಾಗ ರೇಷ್ಮಾ ತಾನೇ ಸ್ಕೂಟರ್ ಓಡಿಸೋಕೆ ಮುಂದಾಗಿದ್ದಾಳೆ. ಅಜಯ್ ಕಡೆಯಿಂದ ಸ್ಕೂಟರ್ ಕೀ ತೆಗೆದುಕೊಂಡು ಸ್ಕೂಟರ್ ಸ್ಟಾರ್ಟ್ ಮಾಡಿದ್ದಾಳೆ. ಡ್ರೈವಿಂಗ್ ಲೈಸನ್ಸ್ ಇಲ್ಲದ ರೇಷ್ಮಾ, ವಾಹನ ಚಾಲನೆ ಮಾಡುವಾಗ ಹೆಲ್ಮೆಟ್ ಸಹ ಹಾಕಿರಲಿಲ್ಲ. ಇದೇ ಆಕೆಯ ಸಾವಿಗೆ ಕಾರಣವಾಗಿದೆ ಎನ್ನುತ್ತಾರೆ ಪೊಲೀಸರು.


    ಹೈದರಾಬಾದ್ನ ಮುಖ್ಯ ರಸ್ತೆಯ ಎಚ್ಎಂಡಬ್ಲ್ಯುಎಸ್ ವಾಟರ್ ಟ್ಯಾಂಕ್ ಬಳಿ ಬರುವಾಗ, ರೇಷ್ಮಾ ಹಿಂದೆ ಒಂದು ದೊಡ್ಡ ಲಾರಿ ಬಂದಿದೆ. ಲಾರಿ ಡ್ರೈವರ್ ಈಕೆಯ ಸ್ಕೂಟರ್ ಅನ್ನು ಓವರ್ಟೇಕ್ ಮಾಡುವ ಭರದಲ್ಲಿ ವೇಗವಾಗಿ ಬಂದಿದ್ದಾನೆ. ಆಗ ರೇಷ್ಮಾ ಭಯ ಬಿದ್ದು ತನ್ನ ಡ್ರೈವಿಂಗ್ ನಿಯಂತ್ರಣ ಕಳೆದುಕೊಂಡು ಕೆಳಗೆ ಬಿದ್ದಿದ್ದಾಳೆ. ಅದೇ ಸಮಯದಲ್ಲಿ ಲಾರಿ ಆಕೆಯ ಮೇಲೆ ಹಾಯ್ದು ಹೋಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.


    ಪೊಲೀಸರು ಈ ಕೇಸ್ ಕುರಿತು ಮತ್ತಷ್ಟು ತನಿಖೆ ನಡೆಸಿದಾಗ, ಸ್ಕೂಟರ್ ಮಾಲಿಕ ಅಜಯ್ ಕುಮಾರ್ ಎನ್ನುವುದು ಗೊತ್ತಾಗಿದೆ. ಅಲ್ಲದೇ ಅಜಯ್ ರೇಷ್ಮಾ ಬಳಿ ವಾಹನ ಚಾಲನಾ ಪರವಾನಿಗೆ ಇರೋದನ್ನು ಖಚಿತಪಡಿಸಿಕೊಳ್ಳದೆ ಸ್ಕೂಟರ್ ನೀಡಿದ್ದಾನೆ ಎಂದು ತಿಳಿದು ಬಂದಿದೆ. ಇದರ ಜೊತೆಗೆ ರೇಷ್ಮಾ ಕೂಡ ಹೆಲ್ಮೆಟ್ ಧರಿಸಿರಲಿಲ್ಲ. ಹೀಗಾಗಿ ಅಜಯ್ ಕುಮಾರ್ ಮೇಲೆ ಐಪಿಸಿ ಸೆಕ್ಷನ್ 304 (ii) ಹಾಗೂ ಟ್ರಕ್ ಡ್ರೈವರ್ ಕೃಷ್ಣಾ ಎನ್ನುವವನ ಮೇಲೆ ಐಪಿಸಿ ಸೆಕ್ಷನ್ 304-ಎ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.



    ಲಾರಿ ಡ್ರೈವರ್ ಸ್ಥಳದಿಂದ ತಪ್ಪಿಸಿಕೊಂಡಿದ್ದು ಆತನ ಹುಡುಕಾಟಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

    Published by:Latha CG
    First published: