Bengaluru: ಅಮ್ಮನ ಬರ್ತ್​ಡೇಗೆ ವಿಶ್ ಮಾಡೋಕೆ ಮೊಬೈಲ್ ಕೊಡಲಿಲ್ಲ! ವಿದ್ಯಾರ್ಥಿ ಆತ್ಮಹತ್ಯೆ

ಬಾಲಕ ಜೂನ್ 11ರಂದು ತನ್ನ ತಾಯಿಗೆ ಕರೆ ಮಾಡಿ ಶುಭಾಶಯ ಕೋರಲು ಮೊಬೈಲ್ ಫೋನ್‌ಗಾಗಿ ವಾರ್ಡನ್‌ಗೆ ವಿನಂತಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ವಾರ್ಡನ್ ಫೋನ್ ಕೊಟ್ಟಿರಲಿಲ್ಲ ಎನ್ನಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು(ಜೂ.13) ಅಮ್ಮ-ಅಪ್ಪನನ್ನು ಬಿಟ್ಟು ಹಾಸ್ಟೆಲ್​ನಲ್ಲಿ (Hostel) ಉಳಿದುಕೊಂಡು ಕಲಿಯುವ ವಿದ್ಯಾರ್ಥಿಗಳು (Students) ಎಲ್ಲದಕ್ಕೂ ನಿರ್ಭಂದಗಳನ್ನು ಅನುಭವಿಸುತ್ತಾರೆ. ಕಾಲೇಜು, ಶಾಲೆ, ಅಥವಾ ಹಾಸ್ಟೆಲ್​ಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗಾಗಿ ಈ ರೀತಿಯ ನಿಯಮಗಳನ್ನು (Rules) ಮಾಡಿರಲಾಗುತ್ತದೆ. ಬಹಳಷ್ಟು ಸಲ ಈ ನಿರ್ಬಂಧಗಳು ಮಕ್ಕಳಿಗೆ ತೊಂದರೆ ಎನಿಸಿದರೂ ಬಹಳಷ್ಟು ಸಲ ಇದು ಗುಣವೂ ಹೌದು. ಆದರೆ ಇಲ್ಲೊಂದು ಪ್ರಕರಣದಲ್ಲಿ ಹಾಸ್ಟೆಲ್ ರೂಲ್ಸ್​ನಿಂದಾಗಿ 14 ವರ್ಷದ ಬಾಲಕ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ನಡೆದಿದೆ. ಬೆಂಗಳೂರಿನ (Bengaluru) ಹೊಸಕೋಟೆಯ ಶಾಲಾ ಹಾಸ್ಟೆಲ್‌ನಲ್ಲಿ 14 ವರ್ಷದ ಬಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಹದಿಹರೆಯದ ಬಾಲಕ ಜೂನ್ 11ರಂದು ತನ್ನ ತಾಯಿಗೆ ಕರೆ ಮಾಡಿ ಶುಭಾಶಯ ಕೋರಲು ಮೊಬೈಲ್ ಫೋನ್‌ಗಾಗಿ ವಾರ್ಡನ್‌ಗೆ ವಿನಂತಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ವಾರ್ಡನ್ ಫೋನ್ ಕೊಟ್ಟಿರಲಿಲ್ಲ ಎನ್ನಲಾಗಿದೆ.

ಇದಲ್ಲದೆ, ಬಾಲಕನ ಕುಟುಂಬ ಸದಸ್ಯರು ಅವರನ್ನು ಸಂಪರ್ಕಿಸಲು ಹಲವು ಬಾರಿ ಪ್ರಯತ್ನಿಸಿದಾಗ, ಅವರು ಮಾತನಾಡಲು ಅವಕಾಶ ನೀಡದ ಕಾರಣ ಅವರಿಗೆ ಮಾತನಾಡಲು ಸಾಧ್ಯವಾಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಇದರಿಂದ ಮನನೊಂದ ಬಾಲಕ ಶನಿವಾರ ಮಧ್ಯರಾತ್ರಿ ಮೊದಲು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅವರು ತಿಳಿಸಿದ್ದಾರೆ.

ಸಹ ವಿದ್ಯಾರ್ಥಿಗಳು ಮೃತದೇಹ ನೋಡಿ ಶಾಕ್

ಭಾನುವಾರ ಬೆಳಗ್ಗೆ ಹಾಸ್ಟೆಲ್‌ನಲ್ಲಿದ್ದ ಇತರೆ ವಿದ್ಯಾರ್ಥಿಗಳು ಬಾಲಕ ಶವವನ್ನು ಕಂಡು ಹಾಸ್ಟೆಲ್ ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದಾರೆ. ಬಾಲಕನ ಪೋಷಕರು ದಿನದ ನಂತರ ಹಾಸ್ಟೆಲ್ ತಲುಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.

ಫೆಬ್ರವರಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ಮತ್ತೊಬ್ಬ ಬಾಲಕ

ಪ್ರತಿಷ್ಠಿತ ಆಸ್ಪತ್ರೆಯ ವೈದ್ಯ ದಂಪತಿಯ ಒಬ್ಬನೇ ಮಗನ ಹೆಸರು ಆದಿತ್ಯ ಪಾಟೀಲ್. ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಕಮ್ಮಸಂದ್ರ ಸಮೀಪದ ಡ್ಯಾಡಿಸ್ ಬಡಾವಣೆ ಗಾರ್ಡನ್ ಅಪಾರ್ಟ್ಮೆಂಟ್ ನ ಐದನೇ ಮಹಡಿಯ ತೆರೆಸ್ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಬಾಲಕ. ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯೊಂದರಲ್ಲಿ ವೈದ್ಯರಾಗಿರುವ ಶರಣು ಪಾಟೀಲ್ ಮತ್ತು ಮಮತಾ ಅವರ ಏಕೈಕ ಪುತ್ರ ಆದಿತ್ಯ ಪಾಟೀಲ್.

ಬೇಗೂರು ಸಮೀಪದ ಟ್ರಿಮಿಸ್ ಶಾಲೆಯಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಆದಿತ್ಯನಿಗೆ ಕಳೆದ ಎರಡು ದಿನಗಳಿಂದ ತರಗತಿ ಪರೀಕ್ಷೆ ನಡೆಯುತ್ತಿತ್ತು. ಇಂದು ಸಹ ಒಂದು ಗಂಟೆಗೆ ಪರೀಕ್ಷೆಗೆ ಹಾಜರಾಗಬೇಕಿತ್ತು. ಈ ನಡುವೆ ಆತ್ಮಹತ್ಯೆಗೆ ಶರಣಾಗಿದ್ದು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.

ಇದನ್ನೂ ಓದಿ: Minister Munirathna: ಸಚಿವ ಮುನಿರತ್ನ ವಿರುದ್ಧ ವಿದ್ಯಾರ್ಥಿಗಳಿಂದ ದೂರು; ಯಾಕೆ ಗೊತ್ತಾ?

ರೂಮಿನಲ್ಲೇ ಕುಳಿತು ಓದಿಕೊಳ್ಳುತ್ತಿದ್ದನು. ಯಾವುದೇ ಕೆಟ್ಟ ಅಭ್ಯಾಸ ಇರಲಿಲ್ಲ. ಚಿಕ್ಕ ಮಗುವಿನಿಂದ ನೋಡಿದ್ದೆವೆ. ಹೊರಗಡೆ ಹೋಗಬೇಕಾದರು ಹೇಳಿ ಹೋಗುತ್ತಿದ್ದರು. ಅಪ್ಪ ಅಮ್ಮ ಮಗನನ್ನು ಬೈಯ್ಯುವಂತರಲ್ಲ. ಮೊಬೈಲ್ ವಿಚಾರವಾಗಿ ಯಾವುದೇ ಜಗಳ ಸಹ ನಡೆದಿಲ್ಲ. ಶಾಲೆಗೆ ಕರೆದೊಯ್ಯಲು ಕಾರು ಬಂದಾಗ ಐದು ನಿಮಿಷ ರೆಡಿಯಾಗುತ್ತೆನೆ ಎಂದು ಅಂಗಡಿಗೆ ಹೋಗಿ ಬರುವುದಾಗಿ ಹೇಳಿ ಹೋದವನು ಬಾರದ ಲೋಕಕ್ಕೆ ಹೋಗಿದ್ದಾನೆ ಎಂದು ಮನೆ ಕೆಲಸದಾಕೆ ರತ್ನಮ್ಮ ತಿಳಿಸಿದ್ದಾರೆ.

ಪ್ರಪೋಸ್ ಡೇ ಇದೆಯಾ ಸಂಬಂಧ..?

ಸದ್ಯ ಘಟನಾ ಸ್ಥಳಕ್ಕೆ ಆನೇಕಲ್ ಉಪವಿಭಾಗದ ಡಿವೈಎಸ್ಪಿ ಮಲ್ಲೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಂದಹಾಗೆ ಪರೀಕ್ಷೆ ಹಿನ್ನೆಲೆ ಕಳೆದ ಒಂದು ತಿಂಗಳಿಂದ ಆದಿತ್ಯನ ಪೋಷಕರು ಮೊಬೈಲ್ ನೀಡಿರಲಿಲ್ಲ. ಹಾಗಾಗಿ ಕಳೆದ ಒಂದು ತಿಂಗಳಿನಿಂದ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದೆ. ಜೊತೆಗೆ ಇಂದು ಪ್ರಪೋಸ್ ಡೇ ಆಗಿದ್ದು, ಕಾಕತಾಳೀಯವಾಗಿ ಇಂದೇ ಆದಿತ್ಯ ಆತ್ಮಹತ್ಯೆ ಮಾಡಿಕೊಂಡಿಕೊಂಡಿರುವುದರಿಂದ ಯಾವುದಾದರೂ ಹುಡುಗಿಗೆ ಪ್ರಾಪೊಸ್ ಮಾಡಿ ಒಪ್ಪದಿದ್ದಾಗ ಆತ್ಮಹತ್ಯೆ ಮಾಡಿಕೊಂಡನಾ ಎಂಬ ಶಂಕೆ ಮೂಡುತ್ತಿದ್ದು, ಪೊಲೀಸರ ತನಿಖೆಯಿಂದ ಆದಿತ್ಯನ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬರಬೇಕಿದೆ.
Published by:Divya D
First published: