• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Dengue: ಒಂದೆಡೆ ಕೋವಿಡ್ ಅಬ್ಬರ, ಮತ್ತೊಂಡೆದೆ ಡೆಂಗ್ಯೂ ಜ್ವರ; ಎರಡರ ಮಧ್ಯೆ ರಾಜ್ಯದ ಜನ ತತ್ತರ!

Dengue: ಒಂದೆಡೆ ಕೋವಿಡ್ ಅಬ್ಬರ, ಮತ್ತೊಂಡೆದೆ ಡೆಂಗ್ಯೂ ಜ್ವರ; ಎರಡರ ಮಧ್ಯೆ ರಾಜ್ಯದ ಜನ ತತ್ತರ!

ಡೆಂಗ್ಯೂ ಪ್ರಕರಣ ಏರಿಕೆ

ಡೆಂಗ್ಯೂ ಪ್ರಕರಣ ಏರಿಕೆ

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಡೆಂಗ್ಯೂ ಪ್ರಕರಣಗಳು ಏರಿಕೆಯಾಗುತ್ತಿದೆ. ಕೊರೋನಾ ಅಬ್ಬರದ ನಡುವೆ ಡೆಂಗ್ಯೂ ಏರಿಕೆ ಆಗುತ್ತಿರೋದ್ರಿಂದ ಜನ ಆತಂಕಕ್ಕೆ ಒಳಗಾಗಿದ್ದಾರೆ. ಈ ತಿಂಗಳ 10ರವರೆಗೆ ರಾಜ್ಯದಲ್ಲಿ 1,838 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ ಅಂತ ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.

ಮುಂದೆ ಓದಿ ...
  • Share this:

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ (Covid) ಸೋಂಕಿತರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದೆ. ಅದರಲ್ಲೂ ಬೆಂಗಳೂರಿಗೆ (Bengaluru) ಅಗ್ರಪಾಲು ಇದೆ. ಕಳೆದ 10 ದಿನದಲ್ಲಿ ಸೋಂಕಿನ ಪ್ರಮಾಣ ಮೂರು ಪಟ್ಟು ಹೆಚ್ಚಾಗಿದೆ. ಅಲ್ಲದೇ ಕಳೆದ ಏಳು ದಿನಗಳಲ್ಲಿ‌ ಒಟ್ಟು 2,845 ಪಾಸಿಟಿವ್ ಪ್ರಕರಣಗಳು (Positive Case) ದಾಖಲಾಗಿವೆ ಎಂದು ಬಿಬಿಎಂಪಿ ಅಧಿಕಾರಿಗಳು (BBMP Officers) ತಿಳಿಸಿದ್ದಾರೆ. ಇನ್ನು ಕೊರೋನಾ (Corona) ಅಬ್ಬರದ ನಡುವೆಯೇ ಡೆಂಗ್ಯೂ (Dengue) ಕೂಡ ಜಾಸ್ತಿಯಾಗುತ್ತಿದೆ. ರಾಜ್ಯ ಆರೋಗ್ಯ ಇಲಾಖೆಯ (State Health Department) ಅಂಕಿ-ಅಂಶಗಳ ಪ್ರಕಾರ ಈ ತಿಂಗಳ 10ರವರೆಗೆ ರಾಜ್ಯದಲ್ಲಿ 1,838 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಡೆಂಗ್ಯೂ ಪ್ರಕರಣ ಶೇಕಡಾ 50ರಷ್ಟು ಏರಿಕೆಯಾಗಿದೆ.


ಡೆಂಗ್ಯೂ ಪ್ರಕರಣ ಏರಿಕೆ


ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಡೆಂಗ್ಯೂ ಪ್ರಕರಣಗಳು ಏರಿಕೆಯಾಗುತ್ತಿದೆ. ಕೊರೋನಾ ಅಬ್ಬರದ ನಡುವೆ ಡೆಂಗ್ಯೂ ಏರಿಕೆ ಆಗುತ್ತಿರೋದ್ರಿಂದ ಜನ ಆತಂಕಕ್ಕೆ ಒಳಗಾಗಿದ್ದಾರೆ. ಈ ತಿಂಗಳ 10ರವರೆಗೆ ರಾಜ್ಯದಲ್ಲಿ 1,838 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ ಅಂತ ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.


ಮಳೆಯಿಂದ ಜಾಸ್ತಿಯಾದ ಡೆಂಗ್ಯೂ ಪ್ರಕರಣ


ರಾಜ್ಯದಲ್ಲಿ ಈಗಾಗಲೇ ಮಳೆಗಾಲ ಶುರುವಾಗಿದೆ. ಹೀಗಾಗಿ ಸಾಮಾನ್ಯವಾಗಿ ಎಲ್ಲೆಡೆ ಇತರೇ ಸಾಂಕ್ರಾಮಿಕ ರೋಗದ ಜೊತೆಗೆ ಡೆಂಗ್ಯೂ ಕೂಡ ಶುರುವಾಗಿದೆ. ಮುಂಗಾರು ಆರಂಭವಾಗುತ್ತಿದಂತೆಯೇ ಈಡಿಸ್‌ ಸೊಳ್ಳೆ ನಿಂತ ಶುದ್ಧ ನೀರಿನಲ್ಲಿ ಮೊಟ್ಟೆ ಇಟ್ಟು ಸಂತಾನೋತ್ಪತ್ತಿ ಆರಂಭಿಸುತ್ತದೆ. ಈ ಸೊಳ್ಳೆ ಕಚ್ಚಿದರೆ ಡೆಂಗೆ ಜ್ವರ ಕಾಣಿಸಿಕೊಳ್ಳುತ್ತದೆ.


ಇದನ್ನೂ ಓದಿ: Covid19: ಎಚ್ಚರ, ಎಚ್ಚರ, ಬೆಂಗಳೂರಲ್ಲಿ ಜೋರಾಗಿದೆ ಕೊರೊನಾ ಅಬ್ಬರ; ಮಾಸ್ಕ್ ಮರೆಯದಿರಿ ಎಂದ್ರು ಮಿನಿಸ್ಟರ್


ಮೂರು ಹಂತಗಳಲ್ಲಿ ಹರಡುವ ಡೆಂಗ್ಯೂ


ಇದು ಹಗಲು ಹೊತ್ತಿನಲ್ಲಿ ಕಚ್ಚುವ ಸೊಳ್ಳೆ. ಸಂಗ್ರಹಿಸಿಟ್ಟ ತಿಳಿ ನೀರಿನಲ್ಲಿ ಮೊಟ್ಟೆ ಇಟ್ಟು ಸಂತಾನೋತ್ಪತ್ತಿ ಮಾಡುತ್ತದೆ. ಈ ಜ್ವರವು ಸಾಮಾನ್ಯ ಜ್ವರ, ಡೆಂಗೆ ಹೆಮೊರೈಜಿನ್ ಅಂದರೆ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುವುದು ಮತ್ತು ಡೆಂಗೆ ಶಾಕ್‌ ಸಿಂಡ್ರೋಮ್‌ ಅಂದರೆ ದೇಹದಲ್ಲಿ ರಕ್ತ ಸ್ರಾವವಾಗಿ ರೋಗಿ ಗಂಭೀರ ಹಂತಕ್ಕೆ ತಲುಪುವ ಸಾಧ್ಯತೆಗಳಿರುವ ಹಂತಗಳಲ್ಲಿ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ರೋಗಿಗೆ ರಕ್ತ ನೀಡುವುದು ಅನಿವಾರ್ಯವಾಗುತ್ತದೆ.


ರಾಜ್ಯಾದ್ಯಂತ ಡೆಂಗ್ಯೂ ಪ್ರಕರಣ ಏರಿಕೆ


ಈಗಾಗಲೇ ಮುಂಗಾರು ಮಳೆ ಆರಂಭವಾಗಿರುವುದರಿಂದ ರಾಜ್ಯಾದ್ಯಂತ ಡೆಂಗ್ಯೂ ಶುರುವಾಗಿದೆ. ಈ ಪೈಕಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿಯೇ ಡೆಂಗೂ ಪ್ರಕರಣಗಳು ಅಧಿಕವಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಇದುವರೆಗೆ 388 ಪ್ರಕರಣಗಳು ವರದಿಯಾಗಿದವೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಉಡುಪಿ 217 ಕೇಸ್, ಮೈಸೂರು 171 ಕೇಸ್, ಚಿತ್ರದುರ್ಗ 105 ಕೇಸ್ ಕೊಪ್ಪಳದಲ್ಲಿ 94 ಪ್ರಕರಣಗಳು ವರದಿಯಾಗಿವೆ.


ಸೋಂಕು ನಿಯಂತ್ರಣಕ್ಕೆ ಸರ್ಕಾರದ ಕ್ರಮ


ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಈಗಾಗಲೇ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.  ಈಡಿಸ್‌ ಸೊಳ್ಳೆ ಸಂತಾನೋತ್ಪತ್ತಿಯನ್ನು ತಗ್ಗಿಸುವ ನಿಟ್ಟಿನಲ್ಲಿ ವಹಿಸಬೇಕಾದ ಕ್ರಮಗಳ ಬಗ್ಗೆ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಹಾಯಕರಿಂದ ಗ್ರಾಮೀಣ ಮತ್ತು ನಗರ ಪ್ರದೇಶಗಳ ಜನರಲ್ಲಿ ಪ್ರತಿನಿತ್ಯ ಜಾಗೃತಿ ಮೂಡಿಸುವಂತೆ ಸೂಚಿಸಲಾಗಿದೆ.


ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣ ಏರಿಕೆ


ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಿವೆ. ಬಿಬಿಎಂಪಿ  ಕೋವಿಡ್ ವರದಿಯ ಪ್ರಕಾರ, ಕಳೆದ ಏಳು ದಿನಗಳಲ್ಲಿ‌ ಒಟ್ಟು 2,845 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ನಿನ್ನೆ ಒಂದೇ ದಿನದಲ್ಲಿ 429 ಜನರಿಗೆ ಸೋಂಕು ತಗುಲಿದೆ. 


ಇದನ್ನೂ ಓದಿ: Explained: ಜಸ್ಟಿನ್ ಬೀಬರ್‌ಗೆ ಬಂದಿರುವ ರಾಮ್ಸೆ ಹಂಟ್​ ಸಿಂಡ್ರೋಮ್​ ಎಂದರೇನು? ಈ ಕಾಯಿಲೆಯ ಲಕ್ಷಣಗಳೇನು?


10 ವಾರ್ಡ್‌ಗಳಲ್ಲಿ ಕೋವಿಡ್ ಅಬ್ಬರ


ಬಿಬಿಎಂಪಿ ವ್ಯಾಪ್ತಿಯ ಹತ್ತು ವಾರ್ಡ್‌ಗಳಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಹೆಚ್ಚಾಗಿದೆ. ಈ ಪೈಕಿ ಮಹಾದೇವಪುರ ಮತ್ತು ಬೊಮ್ಮನಹಳ್ಳಿ ವಲಯ ವ್ಯಾಪ್ತಿಯ ವಾರ್ಡ್​ಗಳಲ್ಲಿ ಅಧಿಕ ಜನರು ಸೋಂಕಿಗೆ ತುತ್ತಾಗಿದ್ದಾರೆ. ಈ ವ್ಯಾಪ್ತಿಯಲ್ಲಿನ ವಾರ್ಡ್​ಗಳಲ್ಲಿ ಅತ್ಯಧಿಕ ಜನಸಂಖ್ಯೆ ಇದ್ದು ಹಾಗೂ ಕೋವಿಡ್ ಭೀತಿ ಕಡಿಮೆಯಾದಾಗಿನಿಂದ ಈವರೆಗೆ ಸರ್ಕಾರದ ಮಾರ್ಗಸೂಚಿ ಪಾಲಿಸದಿರುವುದು ಸೋಂಕು ಹೆಚ್ಚಳಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ.

top videos
    First published: