ನೋಟು ಅಮಾನ್ಯೀಕರಣ ವಿಫಲ ಪ್ರಯತ್ನ; ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಯಶವಂತ ಸಿನ್ಹಾ

news18
Updated:August 29, 2018, 10:39 PM IST
ನೋಟು ಅಮಾನ್ಯೀಕರಣ ವಿಫಲ ಪ್ರಯತ್ನ; ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಯಶವಂತ ಸಿನ್ಹಾ
news18
Updated: August 29, 2018, 10:39 PM IST
ನ್ಯೂಸ್ 18 ಕನ್ನಡ

ಬೆಂಗಳೂರು (ಆ. 29): ನೋಟು ಅಮಾನ್ಯೀಕರಣದ ನಂತರ ವಾಸ್ತವವಾಗಿ ಎಷ್ಟು ಹಳೆಯ ನೋಟುಗಳು ವಾಪಸ್ ಬಂದಿವೆ ಎಂಬ ಬಗ್ಗೆ ರಿಸರ್ವ್​ ಬ್ಯಾಂಕ್ ಸುಳ್ಳು ಹೇಳುತ್ತಿದೆ. ಶೇ. 98.5ರಷ್ಟು ಹಳೆಯ ನೋಟು ವಾಪಸ್ ಬಂದಿದೆ ಎನ್ನುತ್ತಿದೆ. ಆದರೆ, ವಾಸ್ತವವನ್ನು ಪ್ರಕಟಿಸದಂತೆ ರಿಸರ್ವ್​ ಬ್ಯಾಂಕ್ ಮೇಲೆ ಕೇಂದ್ರ ಸರ್ಕಾರ ಒತ್ತಡ ಹೇರಿದೆ ಎಂದು ಮಾಜಿ ಕೇಂದ್ರ ಸಚಿವ ಯಶವಂತ ಸಿನ್ಹಾ ಹೇಳಿಕೆ ನೀಡಿದ್ದಾರೆ.

2019ರ ಲೋಕಸಭಾ ಚುನಾವಣೆ ಮುಕ್ತಾಯವಾಗಿ ಹೊಸ ಸರ್ಕಾರ ಬರುವವರೆಗೆ ವಾಪಸ್ಸಾದ ಹಳೆಯ ನೋಟುಗಳ ನಿಖರ ಮಾಹಿತಿಯನ್ನು ಆರ್ ಬಿಐ ಪ್ರಕಟಿಸುವುದಿಲ್ಲ. ನೋಟು ಅಮಾನ್ಯೀಕರಣ ಶೇ 100ಕ್ಕೆ 100ರಷ್ಟು ವಿಫಲವಾಗಿದೆ. ಈ ದೇಶದ ಒಬ್ಬ ಸರ್ವಾಧಿಕಾರಿ ಕೈಗೊಂಡ ತಪ್ಪು ನಿರ್ಧಾರದ ಫಲವಿದು. ಆ ವ್ಯಕ್ತಿ ನಿಜವಾಗಲೂ ನೈತಿಕತೆ ಹೊಂದಿದ್ದರೆ ಅಮಾನ್ಯೀಕರಣ ವಿಫಲವಾದ ಕಾರಣಕ್ಕೆ ಅಂದೇ ನೈತಿಕ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸಬೇಕಿತ್ತು ಎಂದು ನರೇಂದ್ರ ಮೋದಿಯವರ ವಿರುದ್ಧ ಸಿನ್ಹಾ ವಾಗ್ದಾಳಿ ನಡೆಸಿದ್ದಾರೆ.

ಜಿಎಸ್​ಟಿ ವಿಷಯದಲ್ಲಿ 4 ವರ್ಷದಲ್ಲಿ 310ಕ್ಕೂ ಹೆಚ್ಚು ತಿದ್ದುಪಡಿ ಮಾಡಲಾಗಿದೆ. ಕರೆಂಟೇ ಇಲ್ಲದ ಜಾರ್ಖಂಡ್​ನಂತಹ ರಾಜ್ಯದಲ್ಲಿ ವ್ಯಾಪಾರಿಗಳು ಆನ್​ಲೈನ್ ಮೂಲಕ ತೆರಿಗೆ ಪಾವತಿ ಮಾಡಬೇಕು ಎಂಬುದು ಈ ಶತಮಾನದ ದೊಡ್ಡ ಜೋಕ್. ದೋಷಯುಕ್ತ ಜಿಎಸ್ ಟಿ ಸಿದ್ದಪಡಿಸಿ ಜಾರಿಗೊಳಿಸಿದ ಪರಿಣಾಮ ಅಸಂಘಟಿತ ಮತ್ತು ಸಣ್ಣ ವ್ಯಾಪಾರಿಗಳು ತೊಂದರೆ ಅನುಭವಿಸುವಂತಾಗಿದೆ ಎಂದು ಯಶವಂತ ಸಿನ್ಹಾ ಟೀಕಿಸಿದ್ದಾರೆ.
First published:August 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...