Ganesha Festival: ಶಾಲೆಯಲ್ಲಿ ಗಣಪತಿ ಕೂರಿಸಿದರೆ ಮುಸ್ಲಿಮರ ಹಬ್ಬಕ್ಕೂ ಅವಕಾಶ ಕೊಡಿ! ಮುಸ್ಲಿಂ ಸಂಘಟನೆಗಳ ಆಗ್ರಹ

ಹಿಜಾಬ್, ಪಠ್ಯ ಪರಿಷ್ಕರಣೆ , ಭಗವದ್ಗೀತೆ ಕಾಂಟ್ರವರ್ಸಿ ಆದ್ಮೇಲೆ ಇದೀಗ ಗಣೇಶ ಮೂರ್ತಿ ಪ್ರತಿಷ್ಠಾಪನೆ ವಿವಾದ ಮುನ್ನೆಲೆಗೆ ಬಂದಿದ್ದು, ಮತ್ತೆ ಶಾಲೆ- ಕಾಲೇಜುಗಳಲ್ಲಿ ಧರ್ಮ ದಂಗಲ್ ಶುರುವಾಗಿದೆ.‌

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು: ರಾಜ್ಯದಲ್ಲಿ ಇದೀಗ ಧರ್ಮ ದಂಗಲ್‌ಗೆ ಹೊಸ ವಿಚಾರ ಸೇರ್ಪಡೆಯಾಗಿದೆ.‌ ಗಣೇಶ ಹಬ್ಬದ (Ganesha Festival) ಹೆಸರಿನಲ್ಲಿ ಶಿಕ್ಷಣ ಇಲಾಖೆ (Education Department) ಹೊಸ ಕಾಂಟ್ರವರ್ಸಿ (Controversy) ಹುಟ್ಟಿ ಹಾಕಿದೆ. ಶಿಕ್ಷಣ ಸಚಿವರ (Educational Minister) ಆ ಒಂದು ಹೇಳಿಕೆಗೆ ಪರೋಕ್ಷವಾಗಿ ವಕ್ಫ್ ಬೋರ್ಡ್ (Waqf Board) ಟಾಂಗ್ ನೀಡಿದ್ದು, ಹಲವು ಬೇಡಿಕೆಗಳನ್ನು (Demands) ಶಿಕ್ಷಣ ಸಚಿವರ ಮುಂದೆ ಇಟ್ಟಿದೆ. ‌ ಶಿಕ್ಷಣ ಸಚಿವರು ಸರ್ಕಾರಿ ಶಾಲೆಗಳಲ್ಲಿ (Government Schools) ಗಣಪತಿ ಕೂರಿಸಲು ಅವಕಾಶ ನೀಡುತ್ತೇವೆ ಎಂಬ ಹೇಳಿಕೆಗೆ ವಾಕ್ ವಕ್ಫ್ ಬೋರ್ಡ್ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.‌ ಗಣೇಶ ಮೂರ್ತಿ ಕೂರಿಸಲು ಅವಕಾಶ ನೀಡಿದರೆ, ಮುಸ್ಲಿಂ ಹಬ್ಬಗಳ (Muslim Festivals) ಆಚರಣೆಗೂ ಅವಕಾಶ ನೀಡುವಂತೆ ಆಗ್ರಹಿಸಿದೆ.

ಹೊಸ ವಿವಾದಕ್ಕೆ ಮುನ್ನುಡಿ ಬರೆದ ಶಿಕ್ಷಣ ಸಚಿವ  ಬಿ.ಸಿ. ನಾಗೇಶ್

ಹಿಜಾಬ್, ಪಠ್ಯ ಪರಿಷ್ಕರಣೆ , ಭಗವದ್ಗೀತೆ ಕಾಂಟ್ರವರ್ಸಿ ಆದ್ಮೇಲೆ ಇದೀಗ ಗಣೇಶ ಮೂರ್ತಿ ಪ್ರತಿಷ್ಠಾಪನೆ ವಿವಾದ ಮುನ್ನೆಲೆಗೆ ಬಂದಿದ್ದು, ಮತ್ತೆ ಶಾಲೆ- ಕಾಲೇಜುಗಳಲ್ಲಿ ಧರ್ಮ ದಂಗಲ್ ಶುರುವಾಗಿದೆ.‌ ಶಿಕ್ಷಣ ಸಚಿವರು ಶಾಲೆಗಳಲ್ಲಿ ಗಣಪತಿ ಕೂರಿಸಲು ಅವಕಾಶ ನೀಡುತ್ತೇವೆ ಎಂಬ ಹೇಳಿಕೆಗೆ ವಾಕ್ ವಕ್ಫ್ ಬೋರ್ಡ್ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.‌ ಹೌದು, ಶಿಕ್ಷಣ ಸಚಿವ ಬಿಸಿ ನಾಗೇಶ್ ಎಲ್ಲಾ ಶಾಲೆಗಳಲ್ಲಿ ಗಣೇಶನ ಮೂರ್ತಿ ಕೂರಿಸಲು ಅವಕಾಶ ಕೊಡುತ್ತೇವೆ ಎಂದು ಹೇಳಿರೋದು ಈಗ ಮತ್ತೊಂದು ಸುತ್ತಿನ ವಿವಾದಕ್ಕೆ ಕಾರಣವಾಗಿದೆ.

“ಗಣೇಶೋತ್ಸವಕ್ಕೆ ಅವಕಾಶ ಕೊಟ್ರೆ, ಮುಸ್ಲಿಮ್ ಹಬ್ಬಕ್ಕೂ ಅವಕಾಶಕ್ಕೆ ನೀಡಿ”

ಇದಕ್ಕೆ ಪ್ರತಿಯಾಗಿ ಟಾಂಗ್ ಕೊಟ್ಟಿರುವ ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸ‌ಅದಿ ಶಿಕ್ಷಣ ಸಚಿವರ ಈ ತೀರ್ಮಾನವನ್ನು ಸ್ವಾಗತಿಸುತ್ತೇವೆ. ಆದರೆ ಮುಸ್ಲಿಮರ ಧಾರ್ಮಿಕ ಹಬ್ಬಗಳಿಗೂ ಶಿಕ್ಷಣ ಸಚಿವರು ಅವಕಾಶ ಮಾಡಿ ಕೊಡಬೇಕು ಎಂದು ಹೇಳಿದ್ದಾರೆ. ಅಲ್ಲದೆ ಇದರ ಜೊತೆಗೆ ಶಿಕ್ಷಣ ಸಚಿವ ಬಿಸಿ ನಾಗೇಶ್ ಮುಂದಕ್ಕೆ ಹಲವು ಬೇಡಿಕೆಗಳನ್ನು ಇಟ್ಟಿದ್ದಾರೆ.

ಇದನ್ನೂ ಓದಿ: Bengaluru Rent Home: ಮುಸ್ಲಿಂ ಆಗಿದ್ದಕ್ಕೆ ಬೆಂಗಳೂರಲ್ಲಿ ಬಾಡಿಗೆಮನೆ ಸಿಕ್ಕಿಲ್ಲ; ವೈರಲ್ ಆಯ್ತು ಟ್ವೀಟ್

ವಕ್ಫ್ ಬೋರ್ಡ್ ಬೇಡಿಕೆಗಳು ಏನು?

ಮುಸ್ಲಿಂ ಧಾರ್ಮಿಕ ಹಬ್ಬಗಳ ಆಚರಣೆಗೂ ಅವಕಾಶ ಮಾಡಿಕೊಡಬೇಕು, ಎಲ್ಲಾ ಧರ್ಮದ ಮಕ್ಕಳಿಗೂ ಸಮಾನ ಅವಕಾಶ ಸಿಗಬೇಕು, ಗಣೇಶ್ ಹಬ್ಬದಂತೆ ಈದ್ ಮಿಲಾದ್ ಹಬ್ಬದ ಆಚರಣೆಗೂ ಅವಕಾಶ ಕೊಡಬೇಕು, ನಮಾಜ್‌ಗೆ ಪ್ರತ್ಯೇಕ ಕೊಠಡಿ ಮೀಸಲಿಡುವಂತೆ ಸರ್ಕಾರಕ್ಕೆ ಮನವಿ ಮಾಡಿದೆ. ಇನ್ನು ಪ್ರತಿ ಮಕ್ಕಳಿಗೂ ಧರ್ಮದ ಕುರಿತು ಅರಿವು ಮೂಡಿಸಬೇಕು, ನೈತಿಕ ಶಿಕ್ಷಣ ಅಡಿ ಧಾರ್ಮಿಕ ಪಾಠ ಮಕ್ಕಳಿಗೆ ನೀಡಬೇಕು, ಇಸ್ಲಾಮಿಕ್ ಆಚರಣೆಗೂ ಕೂಡಾ ಅವಕಾಶ ಕೊಡಬೇಕು ಅಂತ ಮನವಿ ಮಾಡಿದೆ.

ಸರ್ಕಾರದ ಮುಂದೆ ವಕ್ಫ್ ಬೋರ್ಡ್ ಮನವಿ

ಹಿಜಾಬ್ ವಿವಾದ ಆದಾಗಲೂ ನಾವು ಒಂದು ವಿಷಯ ಸ್ಪಷ್ಟ ಪಡಿಸಿದ್ದೇವೆ. ಧಾರ್ಮಿಕ‌ ವಿಚಾರಗಳನ್ನು ತಿಳಸೋ ಮೂಲಕ ಅಪನಂಬಿಕೆ ಹೋಗಲಾಡಿಸಬೇಕು.‌ ಎಲ್ಲಾ ಧಾರ್ಮಿಕ ಆಚರಣೆಗಳಿಗೂ ಅವಕಾಶ ಮಾಡಿಕೊಡಬೇಕು. ಗಣೇಶೋತ್ಸವಕ್ಕೆ ಅವಕಾಶ ಕೊಟ್ಟ ರೀತಿಯಲ್ಲೇ ಮುಸ್ಲಿಮರ ಹಬ್ಬಕ್ಕೂ ಅವಕಾಶ ಮಾಡಿಕೊಡಬೇಕು ಎಂಬುವುದು ವಕ್ಫ್ ಬೋರ್ಡ್ ಅಧ್ಯಕ್ಷರ ವಾದ.

ಇದನ್ನೂ ಓದಿ: Kolar: ಆರು ವರ್ಷದ ಪ್ರೀತಿ, ಮದುವೆ ಮನೆಗೆ ಬರಬೇಕಿದ್ದ ವರ ನಾಪತ್ತೆ, ಕಾರಣವೇನು ಗೊತ್ತಾ?

ಒಟ್ಟಾರೆ ಶಿಕ್ಷಣ ಸಚಿವರು ಶಾಲೆಗಳಲ್ಲಿ ಗಣೇಶ ಹಬ್ಬ ಆಚರಣೆಗೆ ಹೇಳಿಕೆಗೆ ಪರ, ವಿರೋಧ ಚರ್ಚೆ ಆಗ್ತಿದ್ದು, ಮತ್ತೆ ಇದು ರಾಜ್ಯಾದ್ಯಂತ ಕೋಲಾಹಲ ಸೃಷ್ಟಿಸುವ ಸಾಧ್ಯತೆ ಇದೆ.
Published by:Annappa Achari
First published: