BBMP Election : ಕೋರ್ಟ್​​ ಸೂಚನೆ ಬೆನ್ನಲ್ಲೇ ಡಿ ಲಿಮಿಟೇಷನ್ ಕರುಡು ಸರ್ಕಾರಕ್ಕೆ ಸಲ್ಲಿಸಿದ ಪಾಲಿಕೆ !

ಎಂಟು ವಾರಗಳ ಒಳಗಾಗಿ ಡಿಲಿಮಿಟೆಡಷನ್ ಪಟ್ಟಿ ಸಿದ್ದ ಮಾಡಬೇಕೆಂಬ ಕೋರ್ಟ್ ಸೂಚನೆಯ ಬೆನ್ನಲ್ಲೇ ಪಾಲಿಕೆ ಕರಡು ಸಿದ್ದ ಪಡಿಸಿದ್ದು, ಡಿಲಿಮಿಟೇಷನ್ ವರದಿಯನ್ನ ಇಂದು ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ.‌

ಬಿಬಿಎಂಪಿ

ಬಿಬಿಎಂಪಿ

  • Share this:
ಬಹುನಿರೀಕ್ಷಿತ  ಬಿಬಿಎಂಪಿ ಚುನಾವಣೆಗೆ (BBMP Election) ಸುಪ್ರೀಂ ಕೋರ್ಟ್ (Supreme Court) ಗ್ರೀನ್ ಸಿಗ್ನಲ್ ನೀಡಿದ ಹಿನ್ನಲೆ ಪಾಲಿಕೆಯಲ್ಲಿ ಚುನಾವಣಾ ಚಟುವಟಿಕೆಗಳು ಗರಿಕೆದರಿವೆ.‌ ಡಿ ಲಿಮಿಟೇಷನ್ ಸಂಬಂಧ ಈಗಾಗಲೇ ಕರಡು ಸಿದ್ದವಾಗಿದ್ದು, ಪಾಲಿಕೆ ವತಿಯಿಂದ  ಸರ್ಕಾರಕ್ಕೆ (Karnataka Govt) ವರದಿ ಸಲ್ಲಿಕೆಯಾಗಿದೆ. ಡಿಲಿಮಿಟೇಷನ್  ವರದಿಯ ಅಂಶಗಳೇನು, ಯಾವೆಲ್ಲಾ ಮಾನದಂಡಗಳ‌ ಮೇಲೆ ಡಿಲಿಮಿಟೇಷನ್ ಮಾಡಲಾಗಿದೆ ಎಂಬುದರ ಡೀಟೆಲ್ಸ್ ಇಲ್ಲಿದೆ.  ಬಿಬಿಎಂಪಿ ಚುನಾವಣೆ  ಸಂಬಂಧ ಸುಪ್ರೀಂ ಆದೇಶ ಬಂದಿದ್ದೆ ತಡ ಪಾಲಿಕೆಯಲ್ಲಿ ಹಲವು ಕಾರ್ಯಗಳು ಆರಂಭವಾಗಿವೆ.‌ ‌ಎಂಟು ವಾರಗಳ ಒಳಗಾಗಿ ಡಿಲಿಮಿಟೆಡಷನ್ ಪಟ್ಟಿ ಸಿದ್ದ ಮಾಡಬೇಕೆಂಬ ಕೋರ್ಟ್ ಸೂಚನೆಯ ಬೆನ್ನಲ್ಲೇ ಪಾಲಿಕೆ ಕರಡು ಸಿದ್ದ ಪಡಿಸಿದ್ದು, ಡಿಲಿಮಿಟೇಷನ್ ವರದಿಯನ್ನ ಇಂದು ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ.‌  ವಾರ್ಡ್ ಮರುವಿಂಗಡಣೆ ಸಂಬಂಧ, ಮುಖ್ಯ ಆಯುಕ್ತರು, ಆಡಳಿತಾಧಿಕಾರಿ ಹಾಗೂ ಕಂದಾಯ ಇಲಾಖೆಯ ವಿಶೇಷ ಆಯುಕ್ತರನ್ನೊಳಗೊಂಡ ಕಮಿಟಿ  ಸಂಪೂರ್ಣ ಕರಡು ಸಿದ್ದಪಡಿಸಿದ್ದು ರಾಜ್ಯ ಸರ್ಕಾರದ ಮುಂದಿಟ್ಟಿದೆ.

ಯಾವ ಮಾನದಂಡಗಳ‌ ಮೇಲೆ ಡಿಲಿಮಿಟೇಷನ್ ಮಾಡಲಾಗಿದೆ ಎಂಬುದನ್ನ ನೋಡೊದಾದ್ರೆ...

198 ವಾರ್ಡ್ ಗಳನ್ನು 243 ವಾರ್ಡ್ ಗಳಾಗಿ ಪುನರ್ ವಿಂಗಡಣೆ ಮಾಡಲಾಗದೆ.‌ 2011 ರ ಜನಗಣತಿ ಆಧರಾದ ಮೇಲೆ ಡಿಲಿಮಿಟೇಷನ್ ಪ್ರಕ್ರಿಯೆ ನಡೆದಿದೆ. ಒಂದು ವಾರ್ಡ್ ಗೆ ಸರಾಸರಿ 35 ಸಾವಿರ ಜನಸಂಖ್ಯೆ ನಿಗಧಿಯಾಗಿದೆ. ಒಟ್ಟು ಬಿಬಿಎಂಪಿ ವ್ಯಾಪ್ತಿಯಲ್ಲಿ  86 ಲಕ್ಷ ಮತದಾರರನ್ನು ಗುರುತಿಸಲಾಗಿದೆ. ಮೊದಲ ಬಾರಿಗೆ  50 - 50 ಮಹಿಳಾ ಮೀಸಲಾತಿಗೆ ಅವಕಾಶ ಕೊಡಲಾಗಿದೆ.

ಇದನ್ನೂ ಓದಿ: Rajya Sabha Election: ಸಿದ್ದರಾಮಯ್ಯ ಭೇಟಿ ಮಾಡಿದ ಜೆಡಿಎಸ್ ನಿಯೋಗ; ರಾಜ್ಯಸಭಾ ಚುನಾವಣೆಗೆ ರಣತಂತ್ರ

ಹೌದು, ಪಾಲಿಕೆ  198 ಇದ್ದ ವಾರ್ಡ್ಗನ್ನ  243 ವಾರ್ಡ್ ಗೆ ಏರಿಕೆ ಮಾಡಿ  ಸರ್ಕಾರಕ್ಕೆ  ವರದಿ ನೀಡಿದ್ದು, ಈ ವರದಿಗೆ  ‌ಸರ್ಕಾರದ ಅನುಮೋದನೆ ಸಿಕ್ಕ ನಂತರ ಸಾರ್ವಜನಿಕರ ಮುಂದಿಡಲಿದೆ.‌ ವಾರ್ಡ್ ವಿಂಗಡಣೆ ಪಟ್ಟಿ ಸಂಬಂಧ ಸಾರ್ವಜನಿಕ ಆಕ್ಷೇಪಣೆಗೆ ಒಂದು ವಾರ ಕಾಲಾವಕಾಶ ನೀಡಲಿದೆ.‌ ಗಡಿ ಗುರುತಿಸಿರುವ ಬಗ್ಗೆ ಸಲಹೆ ಅಭಿಪ್ರಾಯ ಪಡೆಯಲಿದೆ.‌ ನಂತರ ಅಂತಿಮ ಪಟ್ಟಿ ಸಿದ್ದವಾದ ಬಳಿಕ ಚುನಾವಣಾ ಪ್ರಕ್ರಿಯೆ ಆರಂಭವಾಗಲಿದೆ.‌ ಡಿ ಲಿಮಿಟೇಷನ್ ವರದಿ ಸಂಬಂಧ ಪಾಲಿಕೆಯ ಮಾಜಿ ನಾಯಕರು ಪ್ರತಿಕ್ರಿಯೆ ನೀಡಿದ್ದು ಆದಷ್ಟು ಬೇಗ ಬಿಬಿಎಂಪಿ ಚುನಾವಣೆ ನಡೆಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯಪ್ರವೃತ್ತವಾಗಲಿ ಅಂತಾರೆ ಅಬ್ದುಲ್ ವಾಜೀದ್.

ಕಾಂಗ್ರೆಸ್ ಮಣಿಸಲು ಮುಂದಾಗಿರುವ ಬಿಜೆಪಿ

ಒಟ್ಟಾರೆ ನೆನೆಗುದಿಗೆ ಬಿದ್ದಿದ್ದ ಪಾಲಿಕೆ‌ ಚುನಾವಣೆ ಅಖಾಡ ಕ್ರಮೇಣವಾಗಿ ರಂಗೇರಲು ಶುರುವಾಗಿದೆ. ಹೌದು, ಅಂತೂ ವಾರ್ಡ್ ಪುನರ್ ವಿಂಗಡಣೆ ವರದಿ ಸಿದ್ದವಾಗುವ  ಮೂಲಕ ಚುನಾವಣಾ ಕಾರ್ಯ ಚುರುಕಾಗಿದ್ದು, ಬಿಬಿಎಂಪಿ ವರದಿಗೆ ಸರ್ಕಾರ, ಜನಪ್ರತಿನಿಧಿಗಳು ಹಾಗೂ  ಸಾರ್ವಜನಿಕರು ಏನ್ ಹೇಳ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ. ಆದರೆ ಡಿ ಲಿಮಿಟೇಷನ್ ಮಾಡಿ ಕಾಂಗ್ರೆಸ್ ಮಣಿಸಲು ಮುಂದಾಗಿರುವ ಬಿಜೆಪಿಗೆ ಈ ಕರುಡು ಇಷ್ಟವಾಗುತ್ತೋ ಇಲ್ಲವೋ ಎಂಬುವುದು ಕುತೂಹಲಕಾರಿ ಸಂಗತಿಯಾಗಿದೆ.

bbmpಗೆ ಛೀಮಾರಿ 

ರಾಜಧಾನಿ ಬೆಂಗಳೂರಿಗೆ ಕಳಂಕ ತಂದೊಡ್ಡಿರುವುದರಲ್ಲಿ ಗುಂಡಿಗಳದ್ದು ಸಿಂಹಪಾಲು. ಗುಂಡಿಗಳನ್ನು ಸಂಪೂರ್ಣ ಮುಚ್ಚಿತ್ತಿವಿ ಅಂತ ಬಿಬಿಎಂಪಿ ಅಧಿಕಾರಿಗಳು ಬೆಳಿಗ್ಗೆಯಾದ್ರೆ ಸುಳ್ಳು ಹೇಳುತ್ತಾ ಕಾಲಕಾಳೆಯುತ್ತಾರೆ. ಬಿಬಿಎಂಪಿಯ ಈ ನಡೆಯಿಂದ ರೋಸಿಹೋಗಿದ್ದ ಜನರು ವರ್ಷಗಳ ಹಿಂದೆಯೇ ನ್ಯಾಯಾಲಯದ ಕದ ತಟ್ಟಿದ್ದರು. ಇದೀಗ ಹೈಕೋರ್ಟ್ ಅಯುಕ್ತರಿಗೆ ಛೀಮಾರಿ ಹಾಕಿ ಗುಂಡಿ ಮುಚ್ಚುತ್ತೀರಾ ಇಲ್ವಾ ಎಂದು ಖಡಕ್ ಆಗಿ ಕೇಳಿದೆ. ಹೈ ಕೋರ್ಟ್ ಕೆಂಡಾಮಂಡಲವಾಗಿದ್ದೇ ತಡ ಬಿಬಿಎಂಪಿ ಅಯುಕ್ತರು ಇಂದು ಬೆಳಿಗ್ಗೆನೇ ಪಾಲಿಕೆ ಕೇಂದ್ರ ಕಛೇರಿಯಲ್ಲಿ ಸುದ್ಧಿಗೋಷ್ಟಿ ನಡೆಸಿ ಇದೇ ತಿಂಗಳ 6ರ ಒಳಗೆ ಬೆಂಗಳೂರಿನ ಎಲ್ಲಾ ರಸ್ತೆಗಳ ಗುಂಡಿ ಮುಚ್ಚುತ್ತಿವಿ ಅಂತ ಮತ್ತೆ ಭರವಸೆ ನೀಡಿದ್ರು.
Published by:Kavya V
First published: