ದೆಹಲಿ ಹಿಂಸಾಚಾರ ಪೂರ್ವ ನಿಯೋಜಿತ ಕೃತ್ಯ, ಹೀಗಾಗಿ ಭದ್ರತಾ ವೈಫಲ್ಯ ಎನ್ನಲಾಗದು; ಗೋವಿಂದ ಕಾರಜೋಳ

ಮಹದಾಯಿ ನೀರನ್ನು ಸದ್ಬಳಕೆ ಮಾಡಿಕೊಳ್ಳಲು ಕ್ರಿಯಾ ಯೋಜನೆ ರೂಪಿಸುತ್ತೇವೆ. ಬೇಕಾದ ಅನುದಾನ ಕಾಲಕಾಲಕ್ಕೆ ಕೊಡಲು ವ್ಯವಸ್ಥೆ ಮಾಡಲಾಗುತ್ತದೆ ಮತ್ತು ನಮ್ಮ ರಾಜ್ಯಕ್ಕೆ ಹಂಚಿಕೆಯಾದ ನೀರನ್ನು ನಾವು ಸಂಪೂರ್ಣವಾಗಿ ಬಳಕೆ ಮಾಡಿಕೊಳ್ಳುತ್ತೇವೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ.

ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ.

  • Share this:
ಬಾಗಲಕೋಟೆ (ಫೆಬ್ರವರಿ 28); ದೆಹಲಿ ಹಿಂಸಾಚಾರ ಪೂರ್ವ ನಿಯೋಜಿತ ಕೃತ್ಯ ಹೀಗಾಗಿ ಇದರಲ್ಲಿ ಕೇಂದ್ರ ಸರ್ಕಾರದ ಭದ್ರತಾ ವೈಫಲ್ಯ ಇದೆ ಮತ್ತು ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕು ಎನ್ನುವ ವಾದದಲ್ಲಿ ಯಾವುದೇ ಹುರುಳಿಲ್ಲ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅಭಿಪ್ರಾಯಪಟ್ಟಿದ್ದಾರೆ.

ದೆಹಲಿ ಗಲಭೆ ಕುರಿತು ಇಂದು ಬಾಗಲಕೋಟೆಯಲ್ಲಿ ಮಾತನಾಡಿರುವ ಗೋವಿಂದ ಕಾರಜೋಳ, “ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯ ನಂತರದ ಕಾಲದಲ್ಲೂ ಈ ದೇಶದಲ್ಲಿ ಹಲವಾರು ಗಲಭೆಗಳು ನಡೆದಿವೆ. ಅನೇಕ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಆದರೆ, ದೆಹಲಿ ಗಲಭೆಯನ್ನು ಭದ್ರತಾ ವೈಫಲ್ಯ ಎಂದು ಹೇಳಲಾಗದು. ಏಕೆಂದರೆ ಇದು ಪೂರ್ವ ನಿಯೋಜಿತ ಕೃತ್ಯ ಹೀಗಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡುವ ಪ್ರಮೇಯವೇ ಇಲ್ಲ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದೇ ಸಂದರ್ಭದಲ್ಲಿ ಕಳಸ ಬಂಡೂರಿ ಯೋಜನೆಯ ಕುರಿತು ಮಾತನಾಡಿರುವ ಅವರು, “ಮಹದಾಯಿ ನದಿ ನೀರು ಹಂಚಿಕೆಯ ಕುರಿತು ಸುಪ್ರೀಂ ಕೋರ್ಟ್ ಆದೇಶ ಬಂದು ಕೆಲವೇ ಗಂಟೆಗಳಲ್ಲಿ ನೋಟಿಫಿಕೇಷನ್ ಹೊರಡಿಸಲಾಗಿದೆ. ಕುಡಿಯೋ ನೀರು, ಜಲವಿದ್ಯುತ್,ಹಾಗೂ ಕಳಸಾ ಬಂಡೂರಿ ನಾಲೆಗೆ ನೀರು ಹಂಚಿಕೆ ಆಗಿದೆ.

ಹೀಗಾಗಿ ಮಹದಾಯಿ ನೀರನ್ನು ಸದ್ಬಳಕೆ ಮಾಡಿಕೊಳ್ಳಲು ಕ್ರಿಯಾ ಯೋಜನೆ ರೂಪಿಸುತ್ತೇವೆ. ಬೇಕಾದ ಅನುದಾನ ಕಾಲಕಾಲಕ್ಕೆ ಕೊಡಲು ವ್ಯವಸ್ಥೆ ಮಾಡಲಾಗುತ್ತದೆ ಮತ್ತು ನಮ್ಮ ರಾಜ್ಯಕ್ಕೆ ಹಂಚಿಕೆಯಾದ ನೀರನ್ನು ನಾವು ಸಂಪೂರ್ಣವಾಗಿ ಬಳಕೆ ಮಾಡಿಕೊಳ್ಳುತ್ತೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

(ವರದಿ-ರಾಚಪ್ಪ ಬನ್ನಿದಿನ್ನಿ)

ಇದನ್ನೂ ಓದಿ : ಸಾಲಮನ್ನಾ ಯೋಜನೆಗೆ ಇತಿಶ್ರೀ ಹಾಡಲು ಮುಂದಾದ ಸರ್ಕಾರ; ಪ್ರಸ್ತುತ ವರ್ಷದಲ್ಲಿ 1.10 ಲಕ್ಷ ರೈತರಿಗೆ ಕೋಕ್
First published: