ದೆಹಲಿಯಲ್ಲಿ ಸರ್​ ಎಂ. ವಿಶ್ವೇಶ್ವರಯ್ಯ ಹೆಸರಿನ ಮೆಟ್ರೋ ನಿಲ್ದಾಣ ಉದ್ಘಾಟನೆ

news18
Updated:August 6, 2018, 1:54 PM IST
ದೆಹಲಿಯಲ್ಲಿ ಸರ್​ ಎಂ. ವಿಶ್ವೇಶ್ವರಯ್ಯ ಹೆಸರಿನ ಮೆಟ್ರೋ ನಿಲ್ದಾಣ ಉದ್ಘಾಟನೆ
news18
Updated: August 6, 2018, 1:54 PM IST
 

ಧರಣೀಶ್​ ಬೂಕನಕೆರೆ, ನ್ಯೂಸ್​ 18 ಕನ್ನಡ

ದೆಹಲಿ (ಆ.6): ಕನ್ನಡಿಗರಿಗೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೊರುತ್ತಿದೆ ಎಂಬ ಆರೋಪ ಹಲವಾರು ವರ್ಷಗಳಿಂದ ಕೇಳಿ ಬರುತ್ತಿದೆ. ಇದೇ ಉದ್ದೇಶದಿಂದ  ದೆಹಲಿಯ ಮೆಟ್ರೋ ನಿಲ್ದಾಣಕ್ಕೆ  ಸರ್ ಎಂ ವಿಶ್ವೇಶ್ವರಯ್ಯ ಹೆಸರು ನಿಗದಿ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದ ಕನ್ನಡಿಗರ ಕೂಗಿಗೆ ಕೊನೆಗೂ ಕೇಂದ್ರ ಮನ್ನಣೆ ನೀಡಿದೆ.

ಕನ್ನಡಿಗರ ಮನವಿಗೆ ಸ್ಪಂದಿಸಿದ ಕೇಂದ್ರ ಸರ್ಕಾರ ದೆಹಲಿ ಕರ್ನಾಟಕ ಸಂಘದ ಮುಂಭಾಗವಿರುವ ಮೋತಿ ಬಾಗ್ ಮೆಟ್ರೋ ನಿಲ್ದಾಣಕ್ಕೆ ವಿಶ್ವೇಶ್ವರಯ್ಯ ಹೆಸರು ನಾಮಕರಣ ಮಾಡಿದೆ.  ಈ ನಿಲ್ದಾಣನವನ್ನು ಕೇಂದ್ರ ನಗರಾಭಿವೃದ್ಧಿ ಇಲಾಖೆ ರಾಜ್ಯ ಸಚಿವ ಹರ್ದೀಪ್​ ಸಿಂಗ್, ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ , ಕೇಂದ್ರ ಸಚಿವ ಅನಂತಕುಮಾರ್ ಉದ್ಘಾಟಿಸಿದರು.

ಜಗತ್ತು ಕಂಡ ಅಪ್ರತಿಮ ವಿಜ್ಞಾನಿ ಸರ್ ಎಂ ವಿಶ್ವೇಶ್ವರಯ್ಯ ಅವರ ಹೆಸರು ನಿಗದಿಯಾಗಿರುವುದು ಕನ್ನಡಿಗರಿಗೆ ಸಂತಸ ನೀಡಿದೆ.  ಮೆಟ್ರೋ ಪಿಂಕ್​ ಲೈನ್​ನಲ್ಲಿ ಈ ನಿಲ್ದಾಣ ಬರಲಿದೆ.  ಈಗಾಗಲೇ ದೆಹಲಿ ಮೆಟ್ರೋ ನಿಲ್ದಾಣಕ್ಕೆ ನೇತಾಜಿ ಸುಭಾಷ್ ಚಂದ್ರ ಬೋಸ್, ಜವಾಹರಲಾಲ್ ನೆಹರು ಸೇರಿದಂತೆ ಹಲವು ಗಣ್ಯರ ಹೆಸರನ್ನು ಇಡಲಾಗಿದೆ. ಈ ಸಾಲಿಗೆ ಕನ್ನಡಿಗರಾದ ಸರ್. ಎಂ. ವಿಶ್ವೇಶ್ವರಯ್ಯನವರ ಹೆಸರು ಸೇರ್ಪಡೆಯಾಗಿರುವು ಕನ್ನಡಿಗರಲ್ಲಿ ಹರ್ಷ ಮೂಡಿಸಿದೆ. 

ಕನ್ನಡಿಗರ ಭಾವನೆಗೆ ಬೆಲೆ ಸಿಕ್ಕಿದೆ

ಮೆಟ್ರೋ ನಿಲ್ದಾಣಕ್ಕೆ ಕನ್ನಡಿಗರಾದ ವಿಶ್ವೇಶ್ವರಯ್ಯ ಅವರ ಹೆಸರು ಇಡುವ ಮೂಲಕ ಎಲ್ಲಾ ಜನರಿಗೂ ವಿಶ್ವೇಶ್ವರಯ್ಯ ಅವರನ್ನು ಪರಿಚಯಿಸಿದಂತಾಗುತ್ತದೆ. ಇದರಿಂದಾಗಿ ರಾಜ್ಯದ ಜನರ ಭಾವನೆಗೆ  ಬೆಲೆ ಸಿಕ್ಕಿದೆ. ಈ ಮೂಲಕ ಕನ್ನಡಿಗರ  ವಿಚಾರಗಳನ್ನು ದೆಹಲಿಯಲ್ಲಿ ಬಿಂಬಿಸಲು ಸಾಧ್ಯವಾಗಿದೆ.
Loading...

ದೆಹಲಿ ಮೆಟ್ರೋದಲ್ಲಿ ಪ್ರತಿ ದಿನ 35 ಲಕ್ಷ ಜನ ಓಡಾಡುತ್ತಾರೆ. ಈ ಮೂಲಕ ಅವರಿಗೂ ಕೂಡ ಕನ್ನಡಿಗರಾದ ವಿಶ್ವೇಶ್ವರಯ್ಯ ಅವರನ್ನು ಪರಿಚಯಿಸಿದಂತಾಗುತ್ತದೆ. ದೆಹಲಿ ಕರ್ನಾಟಕ ಸಂಘದ ಪ್ರಯತ್ನದಿಂದ ಈ ಕೆಲಸ ಆಗಿದೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ನೂತನ ವಿಶ್ವೇಶ್ವರಯ್ಯ ಮೆಟ್ರೋ ನಿಲ್ದಾಣಕ್ಕೆ ಭೇಟಿಕೊಟ್ಟ ವೇಳೆ ಪ್ರತಿಕ್ರಿಯಿಸಿದ್ದಾರೆ.
First published:August 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...