ದೆಹಲಿ ಹೈಕೋರ್ಟ್​ನಿಂದ ಇಂದು ಡಿಕೆಶಿ ಜಾಮೀನು ಅರ್ಜಿ ತೀರ್ಪು ಪ್ರಕಟ; ಶಿವಕುಮಾರ್​ಗೆ ಸಿಗಲಿದೆಯಾ ರಿಲೀಫ್?

ದೆಹಲಿ ಹೈಕೋರ್ಟ್ ಜಾಮೀನು ನೀಡಿದರೆ ಡಿಕೆಶಿ ಅವರು ಕುಟುಂಬದೊಂದಿಗೆ ದೀಪಾವಳಿ ಸಂಭ್ರಮಾಚರಿಸಬಹುದು. ಒಂದು ವೇಳೆ ಜಾಮೀನು ನಿರಾಕರಿಸಿದರೆ, ಅವರು ಈ ತಿಂಗಳು ಪೂರ್ತಿ ಜೈಲಿನಲ್ಲೇ ಇರಬೇಕಾಗುತ್ತದೆ.

HR Ramesh | news18-kannada
Updated:October 23, 2019, 7:27 AM IST
ದೆಹಲಿ ಹೈಕೋರ್ಟ್​ನಿಂದ ಇಂದು ಡಿಕೆಶಿ ಜಾಮೀನು ಅರ್ಜಿ ತೀರ್ಪು ಪ್ರಕಟ; ಶಿವಕುಮಾರ್​ಗೆ ಸಿಗಲಿದೆಯಾ ರಿಲೀಫ್?
ಡಿ.ಕೆ.ಶಿವಕುಮಾರ್
HR Ramesh | news18-kannada
Updated: October 23, 2019, 7:27 AM IST
ನವದೆಹಲಿ: ಅಕ್ರಮ ಹಣ ಪತ್ತೆ ಪ್ರಕರಣ ಸಂಬಂಧ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಜಾಮೀನು ಅರ್ಜಿಯ ತೀರ್ಪು ಇಂದು ಹೊರಬೀಳಲಿದೆ. ಡಿಕೆಶಿ ಅವರಿಗೆ ದೆಹಲಿ ಹೈಕೋರ್ಟ್​ ಜಾಮೀನು ನೀಡುತ್ತದೆಯೋ ಇಲ್ಲವೋ ಎಂಬ ಕುತೂಹಲ ಮೂಡಿದೆ. 

ಇ.ಡಿ. ವಿಶೇಷ ನ್ಯಾಯಾಲಯ ಡಿಕೆಶಿ ಜಾಮೀನು ಅರ್ಜಿಯನ್ನು ವಜಾ ಮಾಡಿದ ಹಿನ್ನೆಲೆಯಲ್ಲಿ ಡಿಕೆಶಿ ಪರ ವಕೀಲರು ದೆಹಲಿ ಹೈಕೋರ್ಟ್​ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸುರೇಶ್ ಕುಮಾರ್ ಅವರು ಅ.17ರಂದು ತೀರ್ಪನ್ನು ಇಂದಿಗೆ ಕಾಯ್ದಿರಿದ್ದರು. ಇಂದು ಮಧ್ಯಾಹ್ನ 2.30ಕ್ಕೆ ತೀರ್ಪು ಹೊರಬೀಳಲಿದೆ.

ದೆಹಲಿ ಹೈಕೋರ್ಟ್ ಜಾಮೀನು ನೀಡಿದರೆ ಡಿಕೆಶಿ ಅವರು ಕುಟುಂಬದೊಂದಿಗೆ ದೀಪಾವಳಿ ಸಂಭ್ರಮಾಚರಿಸಬಹುದು. ಒಂದು ವೇಳೆ ಜಾಮೀನು ನಿರಾಕರಿಸಿದರೆ, ಅವರು ಈ ತಿಂಗಳು ಪೂರ್ತಿ ಜೈಲಿನಲ್ಲೇ ಇರಬೇಕಾಗುತ್ತದೆ.

ಇಂದು ದೆಹಲಿ ನ್ಯಾಯಾಲಯ ನೀಡುವ ತೀರ್ಪು ವ್ಯತಿರಿಕ್ತವಾಗಿ ಬಂದರೆ ಇಂದೇ ಸುಪ್ರೀಂ ಕೋರ್ಟಿಗೆ ಹೋಗುವುದು ಅಸಾಧ್ಯ. ಏಕೆಂದರೆ ಮಧ್ಯಾಹ್ನ 2.30ಕ್ಕೆ ತೀರ್ಪು ಬರುವುದರಿಂದ ಅಂದೇ ಸುಪ್ರೀಂಕೋರ್ಟ್​ಗೆ ಹೋಗಿ ಜಾಮೀನು ಅರ್ಜಿ ಸಲ್ಲಿಸಲು ತಡವಾಗುತ್ತದೆ. ಹೀಗಾಗಿ ಗುರುವಾರ ಅರ್ಜಿ ಸಲ್ಲಿಸಬಹುದು. ಸುಪ್ರೀಂಕೋರ್ಟ್​ನಲ್ಲಿ ಶುಕ್ರವಾರ ಹೊಸ ಪ್ರಕರಣದ ವಿಚಾರಣೆ  ನಡೆಯುವುದು ಅಸಾಧ್ಯ. ಶನಿವಾರದಿಂದ ಅಕ್ಟೋಬರ್ 31ರವರೆಗೂ ಸುಪ್ರೀಂ ಕೋರ್ಟಿಗೆ ರಜೆ. ಒಂದು ವೇಳೆ ಇಂದು ದೆಹಲಿ ಹೈಕೋರ್ಟ್​ನಿಂದ ಜಾಮೀನು ನಿರಾಕರಣೆಯಾದರೆ ಡಿಕೆಶಿ ಮುಂದಿನ ತಿಂಗಳವರೆಗೂ ಜೈಲಿನಲ್ಲೇ  ಕಳೆಯಬೇಕಿದೆ.

ಇದನ್ನು ಓದಿ: ನನ್ನ ಮನೆಗೆ ಐಟಿ ರೇಡ್ ಆದರೆ ಯಡಿಯೂರಪ್ಪರ ದಾಖಲೆಗಳು ಸಿಗುತ್ತವೆ: ಕುಮಾರಸ್ವಾಮಿ

First published:October 23, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...