ದೆಹಲಿ ಹೈಕೋರ್ಟ್​ನಲ್ಲಿ ಡಿಕೆಶಿ ತಾಯಿ ಮತ್ತು ಹೆಂಡತಿ ಅರ್ಜಿ ವಿಚಾರಣೆ ನ. 4ಕ್ಕೆ ಮುಂದೂಡಿಕೆ

ಅಕ್ಟೋಬರ್ 31ರೊಳಗೆ ಅಂದರೆ ನಾಳೆಯೊಳಗೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯವು ಗೌರಮ್ಮ ಮತ್ತು ಉಷಾ ಅವರಿಗೆ ಸಮನ್ಸ್ ನೀಡಿತ್ತು. ಆದರೆ, ತಮಗೆ ಸಮನ್ಸ್ ತಲುಪಿಲ್ಲ ಎಂಬುದು ಇವರಿಬ್ಬರ ಹೇಳಿಕೆಯಾಗಿದೆ.


Updated:October 30, 2019, 11:52 AM IST
ದೆಹಲಿ ಹೈಕೋರ್ಟ್​ನಲ್ಲಿ ಡಿಕೆಶಿ ತಾಯಿ ಮತ್ತು ಹೆಂಡತಿ ಅರ್ಜಿ ವಿಚಾರಣೆ ನ. 4ಕ್ಕೆ ಮುಂದೂಡಿಕೆ
ಡಿಕೆಶಿ ತಾಯಿ ಗೌರಮ್ಮ ಮತ್ತು ಹೆಂಡತಿ ಉಷಾ
  • Share this:
ನವದೆಹಲಿ(ಅ. 30): ಇಡಿ ಸಮನ್ಸ್ ರದ್ದು ಕೋರಿ ಡಿಕೆ ಶಿವಕುಮಾರ್ ಅವರ ತಾಯಿ ಗೌರಮ್ಮ ಮತ್ತು ಹೆಂಡತಿ ಉಷಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ದೆಹಲಿ ಉಚ್ಚ ನ್ಯಾಯಾಲಯ ನವೆಂಬರ್ 4ಕ್ಕೆ ಮುಂದೂಡಿದೆ. ಇಂದು ನಡೆದ ವಿಚಾರಣೆಯ ವೇಳೆ, ಡಿಕೆಶಿ ತಾಯಿ ಮತ್ತು ಹೆಂಡತಿ ಅವರಿಗೆ ಇಡಿ ಸಮನ್ಸ್ ಇನ್ನೂ ತಲುಪಿಲ್ಲ ಎಂದು ಅವರ ಪರ ವಕೀಲರು ಹೇಳಿದ ಹಿನ್ನೆಲೆಯಲ್ಲಿ ಹೈಕೋರ್ಟ್ ವಿಚಾರಣೆ ಮುಂಡೂಡುವ ಈ ನಿರ್ಧಾರ ಕೈಗೊಂಡಿದೆ.

ಅಕ್ಟೋಬರ್ 31ರೊಳಗೆ ಅಂದರೆ ನಾಳೆಯೊಳಗೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯವು ಗೌರಮ್ಮ ಮತ್ತು ಉಷಾ ಅವರಿಗೆ ಸಮನ್ಸ್ ನೀಡಿತ್ತು. ಆದರೆ, ತಮಗೆ ಸಮನ್ಸ್ ತಲುಪಿಲ್ಲ ಎಂಬುದು ಇವರಿಬ್ಬರ ಹೇಳಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಮತ್ತೆ ಹೊಸದಾಗಿ ಸಮನ್ಸ್ ನೀಡುವಂತೆ ನ್ಯಾಯಾಲಯವು ಜಾರಿ ನಿರ್ದೇಶನಾಲಯಕ್ಕೆ ಸೂಚಿಸಿತು. ಈಗಾಗಲೇ ಸಮನ್ಸ್ ನೀಡಲಾಗಿದ್ದು, ಹೊಸ ಸಮನ್ಸ್ ಅಗತ್ಯವಿಲ್ಲ ಎಂದು ಇಡಿ ಪರ ವಕೀಲರು ತಿಳಿಸಿದರು. ಹಾಗಾದರೆ ಸ್ವಲ್ಪ ಸಮಯ ಕಾಯಿರಿ, ಅವರಿಬ್ಬರಿಗೂ ಸಮನ್ಸ್ ತಲುಪಬಹುದು ಎಂದು ಹೇಳಿದ ನ್ಯಾ| ಬ್ರಿಜೇಶ್ ಸೇಠಿ ನೇತೃತ್ವದ ನ್ಯಾಯಪೀಠವು ವಿಚಾರಣೆಯನ್ನು ಅ. 4ಕ್ಕೆ ಮುಂದೂಡಿತು.

ಇದನ್ನೂ ಓದಿ: ಮಾಜಿ ಲೋಕಾಯುಕ್ತ ನ್ಯಾ| ವೆಂಕಟಾಚಲ ನಿಧನ

ಈ ಮುಂಚೆಯೂ ಜಾರಿ ನಿರ್ದೇಶನಾಲಯವು ಹೈಕೋರ್ಟ್ ನಿರ್ದೇಶನದ ಮೇರೆಗೆ ಹೊಸದಾಗಿ ಸಮನ್ಸ್ ನೀಡಿತ್ತು. ಅಕ್ಟೋಬರ್ 31ರೊಳಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಈ ಸಮನ್ಸ್ ತಮಗೆ ತಲುಪಿಲ್ಲ ಎಂಬುದು ಡಿಕೆಶಿ ತಾಯಿ ಮತ್ತು ಹೆಂಡತಿ ಅವರು ಹೇಳುತ್ತಿದ್ದಾರೆ.

85 ವರ್ಷ ವಯಸ್ಸಿನ ಗೌರಮ್ಮ ವಿಚಾರಣೆಗಾಗಿ ದೆಹಲಿಗೆ ಬರಲು ಸಾಧ್ಯವಿಲ್ಲ. ಸಿಆರ್​ಪಿಎಫ್​ 160ನೇ ವಿಧಿ ಪ್ರಕಾರ ಪುರುಷರನ್ನು ಮಾತ್ರ ಪೋಲಿಸ್ ಠಾಣೆಯಲ್ಲಿ ವಿಚಾರಣೆ ನಡೆಸಬೇಕು. ಮಹಿಳೆಯರನ್ನು ಠಾಣೆಯಲ್ಲಿ ವಿಚಾರಣೆ ನಡೆಸುವ ಬಗ್ಗೆ ಕಾನೂನಿನಲ್ಲಿ ಹೇಳಿಲ್ಲ ಎಂದು ಗೌರಮ್ಮ ಮತ್ತು ಉಷಾ ಪರ ವಕೀಲರು ಈ ಹಿಂದಿನ ವಿಚಾರಣೆ ವೇಳೆ ವಾದ ಮಾಡಿದ್ದರು.

(ವರದಿ: ಧರಣೀಶ್ ಬೂಕನಕೆರೆ)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: October 30, 2019, 11:26 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading