ಡಿಕೆ ಶಿವಕುಮಾರ್ ತಾಯಿ, ಪತ್ನಿ ಅರ್ಜಿ ವಿಚಾರಣೆ ಡಿ. 4ಕ್ಕೆ ಮುಂದೂಡಿಕೆ

ಇಡಿ ತನಿಖೆ ನಡೆಸುತ್ತಿರುವ ಈ ಪ್ರಕರಣದಲ್ಲಿ ದೆಹಲಿಗೆ ಹೋಗಿ ವಿಚಾರಣೆ ಎದುರಿಸಲು ಸಾಧ್ಯವಾಗುವುದಿಲ್ಲ. ಬೆಂಗಳೂರಿನಲ್ಲೇ ಇಡಿ ವಿಚಾರಣೆಗೆ ಅವಕಾಶ ಮಾಡಿಕೊಡಿ ಎಂದು ಗೌರಮ್ಮ ಮತ್ತು ಉಷಾ ಅವರು ದೆಹಲಿ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು.

news18
Updated:November 26, 2019, 1:46 PM IST
ಡಿಕೆ ಶಿವಕುಮಾರ್ ತಾಯಿ, ಪತ್ನಿ ಅರ್ಜಿ ವಿಚಾರಣೆ ಡಿ. 4ಕ್ಕೆ ಮುಂದೂಡಿಕೆ
ಡಿಕೆಶಿ ತಾಯಿ ಗೌರಮ್ಮ ಮತ್ತು ಹೆಂಡತಿ ಉಷಾ
  • News18
  • Last Updated: November 26, 2019, 1:46 PM IST
  • Share this:
ನವದೆಹಲಿ(ನ. 26): ಡಿಕೆ ಶಿವಕುಮಾರ್ ಅವರ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಅವರ ತಾಯಿ ಗೌರಮ್ಮ ಮತ್ತು ಹೆಂಡತಿ ಉಷಾ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಡಿ. 4ಕ್ಕೆ ಮುಂದೂಡಿದೆ. ಇವತ್ತು ನಡೆದ ವಿಚಾರಣೆಯ ವೇಳೆ, ವಾದ ಮಂಡನೆಗೆ ಸಮಯಾವಕಾಶ ಬೇಕೆಂದು ಜಾರಿ ನಿರ್ದೇಶನಾಲಯದ ಪರ ವಕೀಲರು ಮನವಿ ಮಾಡಿಕೊಂಡರು. ಇದಕ್ಕೆ ಸ್ಪಂದಿಸಿದ ನ್ಯಾ| ಬ್ರಿಜೇಶ್ ಸೇಠಿ ನೇತೃತ್ವದ ಹೈಕೋರ್ಟ್ ನ್ಯಾಯಪೀಠವು ಇಡಿ ವಕೀಲರಿಗೆ ಡಿ. 4ರವರೆಗೂ ಅವಕಾಶ ಮಾಡಿಕೊಟ್ಟಿದೆ.

ಇಡಿ ತನಿಖೆ ನಡೆಸುತ್ತಿರುವ ಈ ಪ್ರಕರಣದಲ್ಲಿ ದೆಹಲಿಗೆ ಹೋಗಿ ವಿಚಾರಣೆ ಎದುರಿಸಲು ಸಾಧ್ಯವಾಗುವುದಿಲ್ಲ. ಬೆಂಗಳೂರಿನಲ್ಲೇ ಇಡಿ ವಿಚಾರಣೆಗೆ ಅವಕಾಶ ಮಾಡಿಕೊಡಿ ಎಂದು ಗೌರಮ್ಮ ಮತ್ತು ಉಷಾ ಅವರು ದೆಹಲಿ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ಪ್ರತಿಯಾಗಿ ತಾನು ಪ್ರತಿವಾದ ಮಾಡಲು ಇಡಿ ಸಮಯಾವಕಾಶ ಕೋರಿದೆ.

ಇದನ್ನೂ ಓದಿ: ಅಮ್ಮ ಇಲ್ಲ, ಅಪ್ಪ ಕುಡಿತದ ದಾಸ, ಪಾಳುಬಿದ್ದ ಮನೆಯಲ್ಲೇ ವಾಸ; ಅಕ್ಕ-ತಂಗಿಯ ಮನಕರಗುವ ಕಥೆ ಇದು..!

ಈ ಪ್ರಕರಣದಲ್ಲಿ ಹಲವು ದಿನಗಳ ಕಾಲ ಇಡಿ ಕಸ್ಟಡಿಯಲ್ಲಿದ್ದು ಡಿಕೆಶಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ಧಾರೆ. ಅವರ ವೃದ್ಧ ತಾಯಿ, ಸಹೋದರ, ಪತ್ನಿ, ಮಗಳು ಹಾಗೂ ಇತರ ಅನೇಕ ಆಪ್ತರನ್ನು ದೆಹಲಿಗೆ ಕರೆಸಿಕೊಂಡು ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸಿದೆ. ಪದೇ ಪದೇ ತಮಗೆ ದೆಹಲಿಗೆ ಬರಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಬೆಂಗಳೂರಿನಲ್ಲೇ ತಮ್ಮನ್ನು ವಿಚಾರಣೆ ನಡೆಸಲಿ ಎಂಬುದು ಡಿಕೆಶಿ ತಾಯಿ ಗೌರವಮ್ಮ ಅವರ ಮನವಿ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: November 26, 2019, 1:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading