ದೆಹಲಿ ಹೈಕೋರ್ಟ್​​ನಲ್ಲಿ ಡಿಕೆಶಿ ತಾಯಿ, ಪತ್ನಿ ಅರ್ಜಿ ವಿಚಾರಣೆ ಡಿ. 11ಕ್ಕೆ ಮುಂದೂಡಿಕೆ

ವಯಸ್ಸಾಗಿರುವವರು ಹೊರತುಪಡಿಸಿ ಉಳಿದವರು ದೆಹಲಿಗೆ ವಿಚಾರಣೆಗೆ ಬರಬಹುದಲ್ಲವಾ ಎಂದು ಪ್ರಶ್ನಿಸಿದ ನ್ಯಾಯಮೂರ್ತಿಗಳು, ಆರೋಪಿಗಳ ಜೊತೆ ಸಮಾಲೋಚನೆ ನಡೆಸುವಂತೆ ವಕೀಲರಿಗೆ ಸೂಚನೆ ನೀಡಿದರು.

news18
Updated:December 4, 2019, 2:13 PM IST
ದೆಹಲಿ ಹೈಕೋರ್ಟ್​​ನಲ್ಲಿ ಡಿಕೆಶಿ ತಾಯಿ, ಪತ್ನಿ ಅರ್ಜಿ ವಿಚಾರಣೆ ಡಿ. 11ಕ್ಕೆ ಮುಂದೂಡಿಕೆ
ಡಿಕೆ ಶಿವಕುಮಾರ್ ತಾಯಿ, ಪತ್ನಿ ಉಷಾ
  • News18
  • Last Updated: December 4, 2019, 2:13 PM IST
  • Share this:
ನವದೆಹಲಿ(ಡಿ. 04): ಡಿಕೆಶಿ ವಿರುದ್ಧದ ಅಕ್ರಮ ಹಣ ವಹಿವಾಟು ಪ್ರಕರಣದಲ್ಲಿ ಇಡಿ ಸಮನ್ಸ್ ಪ್ರಶ್ನಿಸಿ ಅವರ ತಾಯಿ ಗೌರಮ್ಮ ಮತ್ತು ಹೆಂಡತಿ ಉಷಾ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಡಿ. 11ಕ್ಕೆ ಮುಂದೂಡಿದೆ. ಇಂದು ಎರಡೂ ಕಡೆಯ ವಾದ ಪ್ರತಿವಾದಗಳನ್ನು ಆಲಿಸಿದ ನ್ಯಾಯಮೂರ್ತಿಗಳು ವಿಚಾರಣೆಯನ್ನು ಒಂದು ವಾರದ ಬಳಿಕ ಮುಂದುವರಿಸಲು ನಿರ್ಧರಿಸಿದರು.

ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದವರು ದೆಹಲಿಯ ತಮ್ಮ ಮುಖ್ಯಕಚೇರಿಗೆ ಬಂದು ವಿಚಾರಣೆಗೆ ಹಾಜರಾಗುವಂತೆ ಡಿಕೆಶಿ ಅವರ ತಾಯಿ, ಹೆಂಡತಿ ಮತ್ತಿತರರಿಗೆ ಸಮನ್ಸ್ ನೀಡಿತ್ತು. ಈ ಸಮನ್ಸ್ ರದ್ದುಗೊಳಿಸಿ ಎಂದು ಕೋರಿ ಅವರು ದೆಹಲಿ ಹೈಕೋರ್ಟ್​​ನಲ್ಲಿ ಅರ್ಜಿ ಸಲ್ಲಿಸಿದ್ಧಾರೆ. ದೆಹಲಿಯ ಬದಲು ಬೆಂಗಳೂರಿನ ಇಡಿ ಕಚೇರಿಯಲ್ಲೇ ತಮ್ಮ ವಿಚಾರಣೆ ನಡೆಯಲಿ ಎಂದು ಗೌರಮ್ಮ, ಉಷಾ ಮತ್ತು ಆಂಜನೇಯ ಅವರು ಮನವಿ ಮಾಡಿಕೊಂಡಿದ್ಧಾರೆ.

ಇದನ್ನೂ ಓದಿ: ಕೆಪಿಎಲ್ ಮ್ಯಾಚ್ ಫಿಕ್ಸಿಂಗ್: ಕೋಚ್ ಸುಧೀಂದ್ರ ಶಿಂಧೆ ಬಂಧನ; ಅಪ್ರೂವರ್ ಆಗುವಂತೆ ತಪ್ಪಿತಸ್ಥ ಆಟಗಾರರಿಗೆ ಪೊಲೀಸ್ ಆಯುಕ್ತ ಕಿವಿಮಾತು

ಇಂದು ನಡೆದ ವಿಚಾರಣೆಯಲ್ಲಿ ಇಡಿ ಪರ ಅಮಿತ್ ಮಹಾಜನ್ ಮತ್ತು ಕಕ್ಷಿದಾರರ ಪರವಾಗಿ ಮಯಂಕ್ ಜೈನ್ ವಾದ ಮಂಡಿಸಿದರು. ಮಹಿಳೆಯರನ್ನು ಠಾಣೆಗೆ ಕರೆದು ವಿಚಾರಣೆ ನಡೆಸುವಂತಿಲ್ಲ ಎಂದು ಗೌರಮ್ಮ, ಉಷಾ ಪರ ವಕೀಲರು ವಾದಿಸಿದರು.

ಇವರ ವಿಚಾರಣೆಗೆ ಇಡಿ ಕಚೇರಿಗೆ ಕರೆದಿದ್ಧೇವೆ. ಠಾಣೆಗೆ ಕರೆದಿಲ್ಲ. ಹಲವು ಪ್ರಕರಣಗಳಲ್ಲಿ ಮಹಿಳೆಯರನ್ನು ವಿಚಾರಣೆ ನಡೆಸಲಾಗಿದೆ. ಐಪಿಎಸಿ 160ರ ಪ್ರಕಾರ ಮಹಿಳೆಯರನ್ನು ನೇರವಾಗಿ ಬಂಧಿಸುವಂತಿಲ್ಲ. ಆದರೆ, ಅನುಮಾನ ಬಂದರೆ ಬಂಧಿಸುವ ಅಧಿಕಾರ ಪೊಲೀಸರಿಗೆ ಇದೆ. ಅಧಿಕಾರಿಗಳು ಸಮನ್ಸ್ ನೀಡಿಯೇ ಬಂಧಿಸುತ್ತಾರೆ. ಸಮನ್ಸ್ ಇಲ್ಲದೇ ನೇರವಾಗಿ ಬಂಧಿಸುವುದಿಲ್ಲ. ಅಧಿಕಾರಿಗಳಿಗೆ ತನಿಖೆ ಬಗ್ಗೆ ತೃಪ್ತಿ ಇರಬೇಕು. ಅದಕ್ಕಾಗಿ ಪ್ರಕರಣದ ಸಂಬಂಧಿತರನ್ನು ತನಿಖೆ ಮಾಡಲೇಬೇಕು ಎಂದು ಇಡ ಪರ ವಕೀಲರು ವಿವರ ನೀಡಿದರು.

ಇದನ್ನೂ ಓದಿ: ಕರ್ನಾಟಕ ಉಪ ಚುನಾವಣೆ; ಜಿದ್ದಾಜಿದ್ದಿ ಹೋರಾಟಕ್ಕೆ ಸಿದ್ದವಾದ ಹೊಸಕೋಟೆ; ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್​ ಸರ್ಪಗಾವಲು

ವಿಚಾರಣೆಗೆ ಹಾಜರಾಗಲು ತಮ್ಮ ಕಕ್ಷಿದಾರರಿಗೆ ಏನು ಸಮಸ್ಯೆ ಎಂದು ನ್ಯಾಯಮೂರ್ತಿಗಳು ಕೇಳಿದಾಗ ವಕೀಲ ಮಯಂಕ್ ಜೈನ್ ವಯಸ್ಸಿನ ಕಾರಣ ನೀಡಿದರು.ಡಿಕೆಶಿ ತಾಯಿ ಗೌರಮ್ಮ ಅವರಿಗೆ 86 ವರ್ಷ ವಯಸ್ಸಾಗಿದೆ. ಹೆಂಡತಿ ಉಷಾ ಅವರು 56 ವರ್ಷದ ಗೃಹಿಣಿಯಾಗಿದ್ದು ಕುಟುಂಬ ನಿರ್ವಹಣೆಯ ಜವಾಬ್ದಾರಿ ಇದೆ. ಮತ್ತೊಬ್ಬ ಆರೋಪಿ ಆಂಜನೇಯ ಅವರ ಅತ್ತೆ ಮಾವಗೆ 75 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿದೆ. ಹೀಗಾಗಿ ದೆಹಲಿಗೆ ಬರಲು ಸಾಧ್ಯವಾಗುವುದಿಲ್ಲ ಎಂದು ಕಕ್ಷಿದಾರರ ಪರ ವಕೀಲರು ವಾದ ಮಂಡನೆ ಮಾಡಿದರು.

ವಯಸ್ಸಾಗಿರುವವರು ಹೊರತುಪಡಿಸಿ ಉಳಿದವರು ದೆಹಲಿಗೆ ವಿಚಾರಣೆಗೆ ಬರಬಹುದಲ್ಲವಾ ಎಂದು ಪ್ರಶ್ನಿಸಿದ ನ್ಯಾಯಮೂರ್ತಿಗಳು, ಆರೋಪಿಗಳ ಜೊತೆ ಸಮಾಲೋಚನೆ ನಡೆಸುವಂತೆ ವಕೀಲರಿಗೆ ಸೂಚನೆ ನೀಡಿದರು. ವಿಚಾರಣೆಯನ್ನು ಡಿ. 11ಕ್ಕೆ ಮುಂದೂಡಿದರು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published:December 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading