ದೆಹಲಿ ಕೋಮು ಗಲಭೆ ಪೂರ್ವ ನಿಯೋಜಿತವೇ?; ಗೃಹ ಸಚಿವ ಅಮಿತ್ ಶಾ ವಿರುದ್ಧ ಅನುಮಾನ ವ್ಯಕ್ತಪಡಿಸಿರುವ ಕಾಂಗ್ರೆಸ್

ಸಿಎಎ ಹೋರಾಟದ ನೆಪದಲ್ಲಿ ಕಳೆದ ಸೋಮವಾರ ಈಶಾನ್ಯ ದೆಹಲಿಯಲ್ಲಿ ಆರಂಭವಾದ ಕೋಮು ದಳ್ಳುರಿ ಅಕ್ಷರಶಃ ಇಡೀ ದೇಶವನ್ನೇ ನಡುಗಿಸಿತ್ತು. ಕಳೆದ ಒಂದು ವಾರಗಳ ಕಾಲ ದೆಹಲಿ ಅಕ್ಷರಶಃ ಯಾರ ಅಂಕೆಗೂ ನಿಲುಕದಂತಾಗಿತ್ತು. ಗಲಭೆಯಿಂದಾಗಿ ಪರಿಸ್ಥಿತಿ ಸರ್ಕಾರದ ಕೈಮೀರಿತ್ತು. ಈ ಗಲಭೆಯಲ್ಲಿ ಕನಿಷ್ಟ 50ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರೆ, 200ಕ್ಕೂ ಹೆಚ್ಚು ಜನ ತೀವ್ರ ಗಾಯಕ್ಕೊಳಗಾಗಿದ್ದಾರೆ.

ದೆಹಲಿ ಹಿಂಸಾಚಾರದ ದೃಶ್ಯ.

ದೆಹಲಿ ಹಿಂಸಾಚಾರದ ದೃಶ್ಯ.

  • Share this:
ಬೆಂಗಳೂರು (ಮಾರ್ಚ್ 01); ದೆಹಲಿ ಕೋಮು ಗಲಭೆಗೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಕೇಂದ್ರ ಸರ್ಕಾರ ಮತ್ತು ಗೃಹ ಸಚಿವ ಅಮಿತ್ ಶಾ ಮೀನಾಮೇಷ ಎಣಿಸುತ್ತಿರುವುದನ್ನು ನೋಡಿದರೆ ದೆಹಲಿ ಹಿಂಸಾಚಾರ ಪೂರ್ವ ನಿಯೋಜಿತವೇ? ಎಂಬ ಅನುಮಾನ ಮೂಡುತ್ತಿದೆ ಎಂದು ಕಾಂಗ್ರೆಸ್ ರಾಜ್ಯ ಘಟಕ ತನ್ನ ಟ್ವಿಟ್ ಖಾತೆಯಲ್ಲಿ ಟೀಕಾ ಪ್ರಹಾರ ನಡೆಸಿದೆ.

ಸಿಎಎ ಹೋರಾಟದ ನೆಪದಲ್ಲಿ ಕಳೆದ ಸೋಮವಾರ ಈಶಾನ್ಯ ದೆಹಲಿಯಲ್ಲಿ ಆರಂಭವಾದ ಕೋಮು ದಳ್ಳುರಿ ಅಕ್ಷರಶಃ ಇಡೀ ದೇಶವನ್ನೇ ನಡುಗಿಸಿತ್ತು. ಕಳೆದ ಒಂದು ವಾರಗಳ ಕಾಲ ದೆಹಲಿ ಅಕ್ಷರಶಃ ಯಾರ ಅಂಕೆಗೂ ನಿಲುಕದಂತಾಗಿತ್ತು. ಗಲಭೆಯಿಂದಾಗಿ ಪರಿಸ್ಥಿತಿ ಸರ್ಕಾರದ ಕೈಮೀರಿತ್ತು. ಈ ಗಲಭೆಯಲ್ಲಿ ಕನಿಷ್ಟ 50ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರೆ, 200ಕ್ಕೂ ಹೆಚ್ಚು ಜನ ತೀವ್ರ ಗಾಯಕ್ಕೊಳಗಾಗಿದ್ದಾರೆ.

ಆದರೆ, ಈ ಘಟನೆ ಸಂಭವಿಸಿ ಒಂದು ವಾರವಾದರೂ ಸಹ ಕೇಂದ್ರ ಸರ್ಕಾರ ಸೂಕ್ತ ವಿಚಾರಣೆಗೆ ಆದೇಶಿಸಿಲ್ಲ. ಈ ಕುರಿತು ತನ್ನ ಟ್ವಿಟರ್ ಖಾತೆಯಲ್ಲಿ ಟೀಕಿಸಿರುವ ರಾಜ್ಯ ಪ್ರಾದೇಶಿಕ ಕಾಂಗ್ರೆಸ್, “ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು ಗೃಹ ಸಚಿವ ಅಮಿತ್ ಶಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ಗುಪ್ತಚರ ಇಲಾಖೆಯ ವೈಫಲ್ಯ, ದೆಹಲಿ ಪೊಲೀಸರ ಕಾರ್ಯ ಕ್ಷಮತೆಯ ಬಗ್ಗೆ ತನಿಖೆಗೆ ಆದೇಶಿಸಿಲ್ಲ.ಗಲಭೆಯ ಬಗ್ಗೆ ಉನ್ನತ ಮಟ್ಟದ ತನಿಖೆಗೂ ಕ್ರಮ ಕೈಗೊಂಡಿಲ್ಲ. ಹಾಗಿದ್ದರೆ, ಈ ಗಲಭೆ ಪೂರ್ವ ಯೋಜಿತವೇ?" ಎಂಬ ಗುರುತರ ಆರೋಪವನ್ನು ಮುಂದಿಟ್ಟಿದೆ. ಆದರೆ, ಕಾಂಗ್ರೆಸ್ ಪಕ್ಷದ ಈ ಆರೋಪಕ್ಕೆ ಬಿಜೆಪಿ ನಾಯಕರು ಯಾವ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

ಇದನ್ನೂ ಓದಿ : ರಾಹುಲ್ ಗಾಂಧಿ ಮತ್ತೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗುವುದನ್ನು ನೋಡಲು ಅನೇಕರು ಕಾತರರಾಗಿದ್ದಾರೆ; ಶಶಿ ತರೂರ್​
First published: