Hubballi: ಮಳೆ ಹಾನಿ ಪ್ರದೇಶ ಭೇಟಿ ವಿಳಂಬ; ಪ್ರಶ್ನಿಸಿದ ಪತ್ರಕರ್ತರ ಮೇಲೆ ಸಚಿವ ಹಾಲಪ್ಪ ಗರಂ

ರಾಜ್ಯದೆಲ್ಲೆಡೆ ಮಳೆಯಾಗಿ ಜನ ಸಂಕಷ್ಟ ಎದುರಿಸುತ್ತಿದ್ದಾರೆ. ಸ್ವತಃ ಮುಖ್ಯಂತ್ರಿಗಳೇ ರಾಜ್ಯ ಪ್ರವಾಸ ಆರಂಭಿಸಿ ಎರಡು ದಿನಗಳಾಗುತ್ತಿದೆ. ಆದರೆ ಜಿಲ್ಲಾ ಉಸ್ತುವಾರಿಗಳು ಮಾತ್ರ ಬರಬೇಕೊ ಬೇಡವೋ ಅನ್ನೋ ರೀತಿಯಲ್ಲಿ ಬರುತ್ತಿದ್ದಾರೆ. ಹೀಗೆ ಬಂದ ಹಾಲಪ್ಪ ಅವರನ್ನು ಪ್ರಶ್ನಿಸಿದ ಪರ್ತಕರ್ತರ ಮೇಲೆಯೇ ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಚಿವ ಹಾಲಪ್ಪ ಆಚಾರ್​

ಸಚಿವ ಹಾಲಪ್ಪ ಆಚಾರ್​

  • Share this:
ಹುಬ್ಬಳ್ಳಿ (ಜು. 13) ; ರಾಜ್ಯಾದ್ಯಂತ ಮಳೆ ಬಿಟ್ಟೂ ಬಿಡದೆ ಬರುತ್ತಿದೆ. ಧಾರವಾಡ (Dharwad) ಜಿಲ್ಲೆಯಲ್ಲಿಯೂ ಕಳೆದ ಹಲವು ದಿನಗಳಿಂದ ಮಳೆಯಾಗುತ್ತಿದ್ದು, ನೂರಾರು ಮನೆಗಳ ಕುಸಿತವಾಗಿದೆ. ಜನ ತೀವ್ರ ಸಂಕಷ್ಟದಲ್ಲಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು (District Incharge Minister) ಮಾತ್ರ ಬೇಕು ಬೇಡ ಅನ್ನೋ ರೀತಿಯಲ್ಲಿ ಇಂದು ಜಿಲ್ಲೆಗೆ ಭೇಟಿ ನೀಡಿದ್ದಾರೆ. ಅದೂ ಸಹ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommi),  ಜಿಲ್ಲಾ ಉಸ್ತುವಾರಿಗಳಿಗೆ ಆಯಾ ಜಿಲ್ಲೆಗೆ ತೆರಳುಂತೆ ಸೂಚಿಸಿದ ನಂತರ ಬಂದಿದ್ದಾರೆ. ಈ ಕುರಿತು ಪ್ರಶ್ನಿಸಿದ ಪತ್ರಕರ್ತರ ಮೇಲೆಯೇ ಸಚಿವ ಹಾಲಪ್ಪ ಆಚಾರ್ (Halappa Achar) ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಳೆ ಬಂದರೂ ತಡವಾಗಿ ಜಿಲ್ಲಾ ಪ್ರವಾಸ ಮಾಡಿದ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಳೆ ಹಾನಿಗೆ ತುತ್ತಾದ ಪ್ರದೇಶಕ್ಕೆ ಭೇಟಿ ನೀಡಿ ನಂತರ ಅಧಿಕಾರಿಗಳ ಸಭೆ ಮಾಡಿದ ಹಾಲಪ್ಪ, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಈ ವೇಳೆ ತಡವಾಗಿ ಬಂದಿದ್ದನ್ನು ಪ್ರಶ್ನಿಸಿದ್ದಕ್ಕೆ, ನನಗೆ ಧಾರವಾಡ ಜಿಲ್ಲಾ ಉಸ್ತುವಾರಿ ತೊಡಕಾಗಿಲ್ಲ. ಜವಾಬ್ದಾರಿ ಹೊತ್ತುಕೊಂಡು ಮೇಲೆ ಅದನ್ನು ಅರಿತೇ ಕೆಲಸ ಮಾಡ್ತೇನೆ.

ಪ್ರತಿ ದಿನ ಇಲ್ಲಿಯೇ ಬಂದು ಕೆಲಸ ಮಾಡಬೇಕೆಂದಿಲ್ಲ ಎಂದು ಆಚಾರ್ ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೀತೇನೆ, ಅಂತಹ ಸಂದರ್ಭ ಬಂದಾಗ ಬರ್ತೇನೆ. ಈ ರೀತಿಯ ಪ್ರಸಂಗ ಬಂದಾಗ ಎಲ್ಲವನ್ನೂ ಬಿಟ್ಟು ಬರ್ತೇನೆ. ನಿನ್ನೆ ರಾತ್ರಿಯೇ ಬಂದು, ಇಂದು ಬೆಳಿಗ್ಗೆ ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ಕೊಟ್ಟಿದ್ದೇನೆ ಎಂದರು. ಆಯಾ ಜಿಲ್ಲೆಯವರಿಗೆ ಜಿಲ್ಲಾ ಉಸ್ತುವಾರಿ ಕೊಡೋದು ದೊಡ್ಡವರಿಗೆ ಬಿಟ್ಟ ವಿಚಾರ. ಅದರ ಬಗ್ಗೆ ನಾನು ಏನೂ ಮಾತನಾಡೋಲ್ಲ ಎಂದರು.

ಇದನ್ನೂ ಓದಿ: PSI Recruitment Scam: ವಿಧಾನಸೌಧ ವ್ಯಾಪಾರ ಸೌಧವಾಗಿದೆ; ಸರ್ಕಾರಕ್ಕೆ ಪ್ರಿಯಾಂಕ್ ಖರ್ಗೆ ಪ್ರಶ್ನೆಗಳ ಸುರಿಮಳೆ

ಇದಕ್ಕೂ ಮುಂಚೆ ಸಭೆಯ ನಡೆಯುವ ಸಂದರ್ಭದಲ್ಲಿ ಅಧಿಕಾರಿಗಳ ವಿರುದ್ಧ ಹಾಲಪ್ಪ ಸಿಡಿಮಿಡಿಗೊಂಡರು. ಮನೆ ಕಳೆದುಕೊಂಡವರಿಗೆ ಪರಿಹಾರ ಕೊಡಲು ವಿಳಂಬವಾಗಿರೋ ಸಂಬಂಧ ಅತೃಪ್ತಿ ವ್ಯಕ್ತಪಡಿಸಿದರು. ಪರಿಹಾರ ಕೊಡೋಕೆ ವಿಳಂಬ ಏಕೆ ಮಾಡ್ತೀರಿ ಅಂತ ಪ್ರಶ್ನಿಸಿದಅವರು, ಎರಡು – ಮೂರು ದಿನಗಳಲ್ಲಿ ಪರಿಹಾರ ಮನೆಗೆ ಮುಟ್ಟಿಸುವಂತೆ ತಾಕೀತು ಮಾಡಿದರು. ಮಳೆ ಮುಂದುವರಿಯೋ ಸಾಧ್ಯತೆಗಳಿರೋ ಹಿನ್ನೆಲೆಯಲ್ಲಿ ಮುಂದೆಯೂ ಮಳೆ ಬರೋ ಸಾಧ್ಯತೆ ಇದೆ. ಮುಂಜಾಗ್ರತಾ ಕ್ರಮವಾಗಿ ಕೇಂದ್ರ ತೆರೆಯಲು ಜಾಗ ಗುರುತಿಸುವಂತೆ ಸೂಚಿಸಿದ್ದೇನೆ.

ಪುನರ್ವಸತಿ ಕೇಂದ್ರ ತೆಗೆಯಲು ಸ್ಥಳ ಗುರುತಿಸಲು ಸೂಚಿಸಲಾಗಿದೆ. ಪ್ರತಿ ಕ್ಷೇತ್ರಕ್ಕೆ ನೋಡಲ್ ಅಧಿಕಾರಿ ನೇಮಕಕ್ಕೆ ಮಾಡುಲುವಂಸೆ ಸಲಹೆ ನೀಡಿದ್ದೇನೆ. ಮಳೆಗಾಗಿ ಪರಿಹಾರ ಕಲ್ಪಿಸಲು ನೋಡಲ್ ಅಧಿಕಾರಿಗಳ ನೇಮಕ ಮಾಡಲಾಗುತ್ತಿದೆ. ಜಿಲ್ಲೆಯ ಏಳೂ ಕ್ಷೇತ್ರದಲ್ಲಿ ಜೂನ್ ತಿಂಗಳಲ್ಲಿ ಮಳೆಗೆ ಬಿದ್ದ ಮನೆಗಳಿಗೆ ಮೂರು ದಿನಗಳಲ್ಲಿ ಪರಿಹಾರ ಕೊಡಲಾಗುವುದು ಎಂದರು.

ಹಾನಿಗೀಡಾದ ಪ್ರದೇಶಕ್ಕೆ ಹಾಲಪ್ಪ ಭೇಟಿ

ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಮಳೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ಹುಬ್ಬಳ್ಳಿ ತಾಲ್ಲೂಕಿನ ವರೂರು ಮತ್ತಿತರ ಕಡೆ ಭೇಟಿ ನಿಡಿದ ಹಾಲಪ್ಪ ಆಚಾರ್, ಮಳೆಯಿಂದ ಬಿದ್ದ ಮನೆಗಳ ವೀಕ್ಷಣೆ ಮಾಡಿದರು. ಗ್ರಾಮಸ್ಥರಿಂದ ಮಾಹಿತಿ ಪಡೆದರು. ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಹಾಲಪ್ಪ ಆಚಾರ್, ಧಾರವಾಡ ಜಿಲ್ಲೆಯಲ್ಲಿ 157 ಮನೆಗಳು ಭಾಗಶಃ ಕುಸಿದಿವೆ. ಹಾನಿ ಸಂಭವಿಸಿ ಕಡೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಒಂದೆರಡು ದಿನದಲ್ಲಿ ಅವರಿಗೆ ಪರಿಹಾರ ಕೊಡಲಾಗುವುದು. ಎನ್ ಡಿಆರ್ ಎಫ್ ನಿಯಮದ ಜೊತೆ ರಾಜ್ಯ ಸರ್ಕಾರದಿಂದಲೂ ಪರಿಹಾರ ಕೊಡಲಾಗುತ್ತೆ. 5 ಲಕ್ಷ ರೂಪಾಯಿವರೆಗೂ ಪರಿಹಾರ ಕೊಡೋಕೆ ಅವಕಾಶವಿದೆ. ಜುಲೈ ತಿಂಗಳಲ್ಲಿ ಬಿದ್ದ ಮನೆಗಳಿಗೆ ಮಾತ್ರ ಈ ಪರಿಹಾರ ಸಿಗಲಿದೆ. ಅದಕ್ಕಿಂತ ಮುಂಚೆ ಬಿದ್ದುಹೋದ ಮನೆಗಳಿಗೆ ಎನ್ ಡಿ ಆರ್ ಎಫ್ ನಿಯಮದ ಅಡಿ ಪರಿಹಾರ ಕೊಡಲಾಗಿದೆ ಎಂದು ಹಾಲಪ್ಪ ಆಚಾರ್ ತಿಳಿಸಿದ್ದಾರೆ.

ಇದನ್ನೂ ಓದಿ: Siddaramotsava: ಸಭೆಗೆ ಬಾರದ ಡಿಕೆ ಶಿವಕುಮಾರ್​ಗೆ ಸಿದ್ದು ಆಪ್ತರ ಟಾಂಗ್; ವೇದಿಕೆ ಮೇಲೆಯೇ ತಿರುಗೇಟು ಕೊಟ್ರು ಡಿಕೆಶಿ ಬ್ರದರ್​

ಕಿಮ್ಸ್ ಗೂ ಭೇಟಿ ನೀಡಿದ ಹಾಲಪ್ಪ

ಮನೆ ಬಿದ್ದು ತೀವ್ರಗಾಯಗೊಂಡ ಮಹಿಳೆಯನ್ನು ಹುಬ್ಬಳ್ಳಿ ಕಿಮ್ಸ್ ಅಸ್ಪತ್ರೆಗೆ ದಾಖಲಿಸಲಾಗಿದೆ. ಕುಂದಗೋಳ ತಾಲ್ಲೂಕು ಯಲಿವಾಳ ಗ್ರಾಮದಲ್ಲಿ ಘಟನೆ ನಡೆದಿತ್ತು. ಕಾಶವ್ವ (62 ) ಎಂಬ ಮಹಿಳೆಗೆ ಗಂಭೀರ ಗಾಯವಾಗಿತ್ತು. ಈ ಹಿನ್ನೆಲೆಯಲ್ಲಿ ಮಹಿಳೆಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.  ಈ ಹಿನ್ನೆಲೆಯಲ್ಲಿ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್, ಗಾಯಾಳು ಮಹಿಳೆಯ ಆರೋಗ್ಯ ವಿಚಾರಿಸಿದರು. ಸಮರ್ಪಕ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದ ಹಾಲಪ್ಪ, ಚಿಕಿತ್ಸೆ ನೀಡುವಲ್ಲಿ ಯಾವುದೇ ಲೋಪಗಳಾಗದಂತೆ ತಾಕೀತು ಮಾಡಿದರು.
Published by:Pavana HS
First published: