• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Hubballi: ಪಿಎಫ್, ಗ್ರ್ಯಾಚುಟಿಗಾಗಿ ಅಲೆದಾಟ: ಪ್ರಧಾನಿ ಮೋದಿಗೆ ಪತ್ರ ಬರೆದ ನಿವೃತ್ತ ಸಾರಿಗೆ ನೌಕರ!

Hubballi: ಪಿಎಫ್, ಗ್ರ್ಯಾಚುಟಿಗಾಗಿ ಅಲೆದಾಟ: ಪ್ರಧಾನಿ ಮೋದಿಗೆ ಪತ್ರ ಬರೆದ ನಿವೃತ್ತ ಸಾರಿಗೆ ನೌಕರ!

 ಇಲಾಖೆಯ ನಡುವಳಿಕೆಯಿಂದ ಬೇಸತ್ತು ಸಾರಿಗೆ ನಿವೃತ್ತ ನೌಕರನೋರ್ವ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದಾನೆ. ಅಷ್ಟಕ್ಕೂ ಏನಿದು ನಿವೃತ್ತ ನೌಕರನ ಕಥೆ ಅಂತೀರಾ ಈ ಸ್ಟೋರಿ ಓದಿ.

ಇಲಾಖೆಯ ನಡುವಳಿಕೆಯಿಂದ ಬೇಸತ್ತು ಸಾರಿಗೆ ನಿವೃತ್ತ ನೌಕರನೋರ್ವ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದಾನೆ. ಅಷ್ಟಕ್ಕೂ ಏನಿದು ನಿವೃತ್ತ ನೌಕರನ ಕಥೆ ಅಂತೀರಾ ಈ ಸ್ಟೋರಿ ಓದಿ.

ಇಲಾಖೆಯ ನಡುವಳಿಕೆಯಿಂದ ಬೇಸತ್ತು ಸಾರಿಗೆ ನಿವೃತ್ತ ನೌಕರನೋರ್ವ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದಾನೆ. ಅಷ್ಟಕ್ಕೂ ಏನಿದು ನಿವೃತ್ತ ನೌಕರನ ಕಥೆ ಅಂತೀರಾ ಈ ಸ್ಟೋರಿ ಓದಿ.

  • Share this:

ಹುಬ್ಬಳ್ಳಿ(ಮಾ.13): ಸಾರಿಗೆ ಇಲಾಖೆ (Transport Depatment) ಒಂದಲ್ಲ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರೋ ಇಲಾಖೆ. ಕಳೆದ ಕೆಲ ದಿನಗಳಿಂದ ಇಲಾಖೆ ನೌಕರರ ಸಂಬಳ ವಿಚಾರವಾಗಿ ಸಾಕಷ್ಟು ಸುದ್ದಿಯಲ್ಲಿತ್ತು. ಮತ್ತೆ ಸಾರಿಗೆ ಇಲಾಖೆ ನೌಕರರು ಮುಷ್ಕರಕ್ಕೂ ರೆಡಿಯಾಗಿದ್ದಾರೆ. ಸರ್ಕಾರ ಸೌರಿಗೆ ಇಲಾಖೆ ನೌಕರರ ಬೇಡಿಕೆ ಈಡೇರಿಸೋದಿರಲಿ, ಇಲಾಖೆಯಲ್ಲಿ ಕೆಲಸ ಮಾಡಿ ನಿವೃತ್ತರಾದವರಿಗೂ ಗ್ರ್ಯಾಚುಟಿ (Gratuity) ಹಣ ಕೊಟ್ಟಿಲ್ಲ. ಇದೀಗ ಇಲಾಖೆಯ ನಡುವಳಿಕೆಯಿಂದ ಬೇಸತ್ತು ಸಾರಿಗೆ ನಿವೃತ್ತ ನೌಕರನೋರ್ವ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದಾನೆ. ಅಷ್ಟಕ್ಕೂ ಏನಿದು ನಿವೃತ್ತ ನೌಕರನ ಕಥೆ ಅಂತೀರಾ ಈ ಸ್ಟೋರಿ ಓದಿ.


ಹುಬ್ಬಳ್ಳಿಯ ಗೋಕುಲ್ ರಸ್ತೆಯ ಕಿರ್ಲೋಸ್ಕರ್ ಲೇಔಟ್ ನ ನಿವಾಸಿ ಹನಮಂತ ಆರ್ ಅಂಕುಶ್ ತನಗೆ ಸಿಗಬೇಕಾದ ಗ್ರ್ಯಾಚುಟಿ ಹಣ ನೀಡದ ಸಾರಿಗೆ ಇಲಾಖೆ ಅಧಿಕಾರಿಗಳ ವಿರುದ್ದ ರೋಸಿ ಹೋಗಿದ್ದಾನೆ. 36 ವರ್ಷಗಳಿಂದ ಸಾರಿಗೆ ಇಲಾಖೆಯಲ್ಲಿ ಕೆಲಸ ಮಾಡಿ ಕಳೆದ ವರ್ಷ ನಿವೃತ್ತರಾಗಿರೋ ಹನಮಂತನಿಗೆ ಇಲಾಖೆಯಿಂದ ಬರಬೇಕಾದ ಗ್ರ್ಯಾಚುಟಿ ಹಾಗೂ ರಜೆ ನಗದೀಕರಣದ ಸುಮಾರು 18 ಲಕ್ಷ ಹಣ ಬಂದಿಲ್ಲ.


ಇದನ್ನೂ ಓದಿ: Emotional Story: ಐಸಿಯುನಲ್ಲಿರುವ ಅಮ್ಮನ ಜೊತೆ ಹಾಡು ಹೇಳಿ, ಹೋಳಿ ಆಡಿದ ಮಗಳು; ಎಂಥವರಿಗಾದ್ರೂ ಹೃದಯ ಕರಗದೇ ಇರದು!


ಹುಬ್ಬಳ್ಳಿಯ ಸಾರಿಗೆ ಇಲಾಖೆ ಅಧಿಕಾರಿಗಳ ಬಳಿ ಅಲೆದಾಡಿ ಅಲೆದಾಡಿ ಸುಸ್ತಾಗಿರೋ ಹನಮಂತ ಇದೀಗ ಮೋದಿ ಅವರಿಗೆ ಪತ್ರ ಬರೆದಿದ್ದಾನೆ. 18 ಲಕ್ಷದಲ್ಲಿ ನನಗೆ 6.5 ಲಕ್ಷ ಅವಶ್ಯಕತೆ ಇದೆ ಹಣ ಕೊಡಿ ಎಂದು ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಮಾನವೀಯತೆ ಆಧಾರದ ಮೇಲೆ ತನಗೆ ಸಿಗಬೇಕಾದ ಹಣಕ್ಕೆ ಮೋದಿ ಹಾಗೂ ಸಿಎಮ್ ಬಸವರಾಜ ಬೊಮ್ಮಾಯಿಗೆ ಹನಮಂತ ಪತ್ರ ಬರೆದಿದ್ದಾರೆ. ನಿವೃತ್ತಿಯಾದ ಬಳಿಕ ಹನಮಂತಗೆ ಜೀವನ ನಡೆಸೋದು ತುಂಬಾ ಕಷ್ಟವಾಗಿದೆ. ಅಲ್ದೆ ಕಿವಿ ಆಪರೇಶನ್ ಹಾಗೂ ಮಕ್ಕಳ ಶಿಕ್ಷಣಕ್ಕಾಗಿ ಹಣದ ಅವಶ್ಯಕತೆ ಇದೆ. ಇದೇ ಕಾರಣಕ್ಕೆ ಹುಬ್ಬಳ್ಳಿ ಸಾರಿಗೆ ಇಲಾಖೆ ವ್ಯವಸ್ಥಾಪಕ ನಿರ್ದೇಶಕ ಭರತ್ ಗೆ ಹನಮಂತ ಅಂಕುಶ್ ಹಲವಾರು ಬಾರಿ ಹಣ ಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಆದ್ರೆ ಇದುವರೆಗೂ ನಯಾಪೈಸೆ ಹಣ ಬಿಡುಗಡೆ ಮಾಡಿಲ್ಲ. ಅಲ್ಲದೇ ಸಾರಿಗೆ ಇಲಾಖೆ ಸಾಲದಲ್ಲಿದೆ ಎಂದು ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ. ಇದರಿಂದ ರೋಸಿಹೋದ ಹನಮಂತ ಅಂಕುಶ್ ಪ್ರದಾನಿ ಮೋದಿಗೆ ಪತ್ರ ಬರೆದು ಹಣ ನೀಡುವಂತೆ ವ್ಯವಸ್ಥಾಪಕ ನಿರ್ದೇಶಕರಿಗೆ ನಿರ್ದೇಶನ ನೀಡಲು ನಿಮಗೆ ಶಿರಸಾಸ್ಟಂಗ ನಮಸ್ಕಾರ ಎಂದು ಹನಮಂತ ಮನವಿ ಮಾಡಿಕೊಂಡಿದ್ದಾರೆ.


ಇದನ್ನೂ ಓದಿ: Weight Loss: ತೂಕ ನಷ್ಟಕ್ಕೆ ಕ್ರಿಯೇಟಿವ್ ಆರ್ಟ್ ಥೆರಪಿ ಪ್ರಯೋಜನಕಾರಿ; ಬೊಜ್ಜು ಯಾವಾಗಪ್ಪಾ ಕರಗುತ್ತೆ ಅನ್ನೋರಿಗೆ ಇಲ್ಲಿಗೆ ಉತ್ತರ!


ಹನಂಮತ ಕಳೆದ 36 ವರ್ಷಗಳಿಂದ ಹುಬ್ಬಳ್ಳಿಯ ಸಾರಿಗೆ ವಿಭಾಗೀಯ ಕಚೇರಿಯಲ್ಲಿ ಕೆಲಸ ಮಾಡಿ ಕಳೆದ ವರ್ಷ ನಿವೃತ್ತರಾಗಿದ್ದಾರೆ. ಒಂದು ವರ್ಷದಿಂದ ನಿತ್ಯವೂ ಕಚೇರಿಗೆ ಅಲೆದಾಡಿ ಅಲೆದಾಡಿ ಚಪ್ಪಲಿ ಸವೆಸಿದ್ದೇ ಬಂತು, ಆತನಿಗೆ ಸಿಗಬೇಕಾದ 18 ಲಕ್ಷದಲ್ಲಿ ನಯಾಪೈಸೆಯೂ ಸಿಕ್ಕಿಲ್ಲ. ತಾನುಕೆಲಸ ಮಾಡಿದ ಸೇವಾವಧಿಯಲ್ಲಿ ಗ್ರ್ಯಾಚುಟಿ ಹಾಗೂ ರಜೆ ನಗದೀಕರಣದ ಒಟ್ಟು 18 ಲಕ್ಷ ಹಣ ಹನಮಂತ ಗೆ ಸಿಗಬೇಕಾಗಿದೆ. ಆದ್ರೆ ಅಧಿಕಾರಿಗಳು ಹಣ ಕೇಳಿದಾಗೊಮ್ಮೆ ಇಲಾಖೆಯೆ ಸಾಲದಲ್ಲಿದೆ ಎಂದು ಹೇಳುತ್ತಿದ್ದಾರೆ.


ಇದು ಹನಮಂತ ಅವರ ಒಬ್ಬರ ಕಥೆ ಅಂದುಕೊಳ್ಳಬೇಡಿ NWKSRTC ವ್ಯಾಪ್ತಿಯ ಒಟ್ಟು 1764 ಜನ ನಿವೃತ್ತ ನೌಕರರಿಗೆ ಸಾರಿಗೆ ಇಲಾಖೆ ಹಣ ನೀಡಬೇಕಾಗಿದೆ. 2021 ರಿಂದ 2023 ರ ವರೆಗೂ ಸುಮಾರು 240 ಕೋಟಿಗೂ ಅಧಿಕ ಹಣ ಸಾರಿಗೆ ಇಲಾಖೆ ಬಾಕಿ ಉಳಿಸಿಕೊಂಡಿದೆ. ಹಂತ ಹಂತವಾಗಿ ನಿವೃತ್ತಿ ನೌಕರರಿಗೆ ಪಿಎಫ್, ಗ್ರ್ಯಾಚುಟಿ ಕೊಡಲಾಗುವುದು ಎಂದು ಎನ್.ಡಬ್ಲ್ಯು.ಕೆ.ಆರ್.ಟಿ.ಸಿ. ಎಂ.ಡಿ. ಭರತ್ ತಿಳಿಸಿದ್ದಾರೆ.  ಹೀಗಾಗಿ NWKSRTC ವ್ಯಾಪ್ತಿಯ 1764 ಜನ ನಿವೃತ್ತ ನೌಕರರು ಅಕ್ಷರಶಃ ಬೀದಿಗೆ ಬಿದ್ದ ಪರಿಸ್ಥಿತಿಯಲ್ಲಿದ್ದಾರೆ.


.ಒಟ್ಟಾರೆ ಸಾರಿಗೆ ಇಲಾಖೆ ಆರ್ಥಿಕ ಸಂಕಷ್ಟದ ನೆಪ ಹೇಳಿ ನಿವೃತ್ತ ನೌಕರರ ಜೀವನದ ಜೊತೆ ಚೆಲ್ಲಾಟ ಆಡ್ತಿದೆ. ಪ್ರಧಾನಿಗೆ ಪತ್ರ ಬರೆದರೂ ಸಂಕಷ್ಟದಲ್ಲಿರೋ ನಿವೃತ್ತ ನೌಕರನಿಗೆ ಸಹಾಯ ಸಿಕ್ಕಿಲ್ಲ. ಸರ್ಕಾರವೂ ಸಾರಿಗೆ ಇಲಾಖೆ ಕೆಲಸ ಮಾಡಿಸಿಕೊಂಡು ನಡು ನೀರಿನಲ್ಲಿ ಕೈಬಿಟ್ಟಿದೆ ಎಂಬ ಮಾತು ಕೇಳಿಬಂದಿದ್ದು, ಈಗಲಾದ್ರೂ ಸಂಬಂಧಪಟ್ಟವರು ಇತ್ತ ಗಮನಹರಿಸಬೇಕಿದೆ.


-ಶಿವರಾಮ ಅಸುಂಡಿ, ನ್ಯೂಸ್​ 18 ಕನ್ನಡ

Published by:Precilla Olivia Dias
First published: