• Home
  • »
  • News
  • »
  • state
  • »
  • Camera Theft: ರೀಲ್ಸ್​ ಮಾಡೋ ಹುಚ್ಚಿಗೆ ಕಳ್ಳತನಕ್ಕಿಳಿದ ಸ್ಟೂಡೆಂಟ್! ಮದುವೆ ಮನೆಯಲ್ಲಿ ಕ್ಯಾಮೆರಾ ಕದ್ದ ಖರ್ತನಾಕ್!

Camera Theft: ರೀಲ್ಸ್​ ಮಾಡೋ ಹುಚ್ಚಿಗೆ ಕಳ್ಳತನಕ್ಕಿಳಿದ ಸ್ಟೂಡೆಂಟ್! ಮದುವೆ ಮನೆಯಲ್ಲಿ ಕ್ಯಾಮೆರಾ ಕದ್ದ ಖರ್ತನಾಕ್!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕ್ಯಾಮೆರಾ ಖರೀದಿಗೆ ಅಗತ್ಯವಿರುವ ಹಣ ಪ್ರಜ್ವಲ್​ ಬಳಿ ಇರಲಿಲ್ಲ. ಹೀಗಾಗಿ, ಕ್ಯಾಮೆರಾ ಕಳ್ಳತನ ಮಾಡಲು ಅನೇಕ ಬಾರಿ ಪ್ಲಾನ್​ ಮಾಡಿದ್ದನಂತೆ. ಮದುವೆ ನಡೆಯುತ್ತಿದ್ದ ಮಂಟಪಕ್ಕೆ ಹೋಗಿ ಕ್ಯಾಮೆರಾ ಕದ್ದಿದ್ದಾನೆ.

  • News18 Kannada
  • Last Updated :
  • Karnataka, India
  • Share this:

ಬೆಂಗಳೂರು (ನ.11): ಇತ್ತೀಚಿಗೆ ಸೂಲ್ಕ್​, ಕಾಲೇಜು ವಿದ್ಯಾರ್ಥಿಗಳು (Collage Student) ಸೋಶಿಯಲ್​ ಮೀಡಿಯಾದಲ್ಲಿ ಫುಲ್​ ಆಕ್ಟೀವ್​ ಇರ್ತಾರೆ. ಇನ್ನು ಕೆಲವರಿಗೆ ಈ ರೀಲ್ಸ್ ಅಂಡ್​ ಶಾರ್ಟ್ಸ್ (Reals And Shorts)​ ಮಾಡೋ ಹವ್ಯಾಸ ಇರುತ್ತದೆ. ರೀಲ್ಸ್​ ಮಾಡೋ ಹುಚ್ಚಿಗೆ ಇಲ್ಲೊಬ್ಬ ವಿದ್ಯಾರ್ಥಿ ಕಳ್ಳತನಕ್ಕೆ ಇಳಿದಿದ್ದಾನೆ. ಡಿಗ್ರಿ ಓದುತ್ತಿದ್ದ ವಿದ್ಯಾರ್ಥಿ (Student) ಕ್ಯಾಮೆರಾ (Camera) ಕದ್ದು ಸಿಕ್ಕಿಬಿದ್ದಿದ್ದಾನೆ. ರೀಲ್ಸ್​ ವಿಡಿಯೋ ಮಾಡಲು ಶೂಟಿಂಗ್​ಗಾಗಿ ಕ್ಯಾಮೆರಾ ಹಾಗೂ ಇತರೆ ವಸ್ತುಗಳನ್ನು ಪ್ರಜ್ವಲ್​ (Prajwal) ಕಳ್ಳತನ ಮಾಡುತ್ತಿದ್ದ, ಇದೀಗ ಯಶವಂತಪುರ ಠಾಣೆ ಪೊಲೀಸರು ಆತನನ್ನು ಬಂಧಿಸಿ (Arrest) ವಿಚಾರಣೆಗೊಳಪಡಿಸಿದ್ದಾರೆ.


ರೀಲ್ಸ್​ ಮಾಡಲು ಕಳ್ಳತನಕ್ಕಿಳಿದ ಪ್ರಜ್ವಲ್​


ಬೆಂಗಳೂರಿನ ಪ್ರಜ್ವಲ್, ಕಾಲೇಜೊಂದರಲ್ಲಿ ಡಿಗ್ರಿ ಓದುತ್ತಿದ್ದ. ಈತನಿಗೆ ಸಿಕ್ಕಪಟ್ಟೆ ರೀಲ್ಸ್​ ಮಾಡೋ ಹವ್ಯಾಸವಿತ್ತು. ಇನ್‌ಸ್ಟಾಗ್ರಾಂ ಹಾಗೂ ಯೂಟ್ಯೂಬ್‌ ಸೋಶಿಯಲ್ ಮೀಡಿಯದಲ್ಲಿ ಆರೋಪಿ ಪ್ರಜ್ವಲ್ ತನ್ನದೇ ಖಾತೆ ಹೊಂದಿದ್ದ. ರೀಲ್ಸ್ ಹಾಗೂ ಶಾರ್ಟ್ಸ್ ವಿಡಿಯೊಗಳನ್ನು ಆರಂಭದಲ್ಲಿ ಮೊಬೈಲ್‌ನಲ್ಲಿ ಚಿತ್ರೀಕರಿಸಿ ಅಪ್‌ಲೋಡ್ ಮಾಡುತ್ತಿದ್ದ. ಆದರೆ, ವಿಡಿಯೊ ಗುಣಮಟ್ಟ ಚೆನ್ನಾಗಿಲ್ಲವೆಂದು ಹಲವರು ಕಾಮೆಂಟ್ ಮಾಡುತ್ತಿದ್ದರು. ಹೀಗಾಗಿ, ಹೊಸ ಕ್ಯಾಮೆರಾ ಖರೀದಿಸಲು ಆರೋಪಿ ಮುಂದಾಗಿದ್ದ.
ಮದುವೆ ಮಂಟಪದಲ್ಲಿ ಕ್ಯಾಮೆರಾ ಕದ್ದ


ಆದ್ರೆ ಕ್ಯಾಮೆರಾ ಖರೀದಿಗೆ ಅಗತ್ಯವಿರುವ ಹಣ ಪ್ರಜ್ವಲ್​ ಬಳಿ ಇರಲಿಲ್ಲ. ಹೀಗಾಗಿ, ಕ್ಯಾಮೆರಾ ಕಳ್ಳತನ ಮಾಡಲು ಅನೇಕ ಬಾರಿ ಪ್ಲಾನ್​ ಮಾಡಿದ್ದನಂತೆ. ಮದುವೆ ನಡೆಯುತ್ತಿದ್ದ ಮಂಟಪವೊಂದಕ್ಕೆ ಸಂಬಂಧಿಕರ ಸೋಗಿನಲ್ಲಿ ಹೋಗಿದ್ದ ಆರೋಪಿ, ಅಲ್ಲಿ ಕ್ಯಾಮೆರಾಮ್ಯಾನ್  ಬಳಿ ಇದ್ದ​ ಕ್ಯಾಮೆರಾ ಕದ್ದು ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದರು.


ಕ್ಯಾಮೆರಾ ಬಾಕ್ಸ್ ಕಿತ್ತುಕೊಂಡು ಎಸ್ಕೇಪ್​


ಮದುವೆ ಮಂಟಪದಲ್ಲಿ ಅಷ್ಟೇ ಅಲ್ಲ ಫ್ಲಿಪ್‌ಕಾರ್ಟ್‌ ಜಾಲತಾಣದಲ್ಲಿ ಹೊಸ ಕ್ಯಾಮೆರಾವನ್ನು ಆರೋಪಿ ಬುಕ್​ ಮಾಡಿದ್ದ. ಕ್ಯಾಮೆರಾ ನೀಡುವುದಕ್ಕಾಗಿ ಡೆಲಿವರಿ ಬಾಯ್, ಸೆ. 27ರಂದು ನಿಗದಿತ ವಿಳಾಸಕ್ಕೆ ತೆರಳಿದ್ದಾರೆ, ಅವರನ್ನು ಭೇಟಿಯಾಗಿದ್ದ ಆರೋಪಿ, ಕ್ಯಾಮೆರಾ ಬಾಕ್ಸ್ ಕಿತ್ತುಕೊಂಡು ಹಣ ನೀಡದೇ ಸ್ಥಳದಿಂದ ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ. ಕಳ್ಳತನದ ಸಂಬಂಧ ಡೆಲಿವರಿ ಬಾಯ್ ದೂರು ನೀಡಿದ್ದರು. ಸಿಸಿಟಿವಿ ಕ್ಯಾಮೆರಾ ದೃಶ್ಯ ಆಧರಿಸಿ ತನಿಖೆ ಕೈಗೊಂಡಾಗ ಆರೋಪಿ ಸಿಕ್ಕಿಬಿದ್ದಿದ್ದಾನೆ.


ಆರೋಪಿ ಬಳಿ ಕದ್ದಿದ್ದ ವಸ್ತು ಜಪ್ತಿ


ಫ್ಲಿಪ್‌ಕಾರ್ಟ್ ಜಾಲತಾಣದ ಡೆಲಿವರಿ ಬಾಯ್ ನೀಡಿದ್ದ ದೂರು ಆಧರಿಸಿ ಪ್ರಜ್ವಲ್‌ನನ್ನು ಬಂಧಿಸಲಾಗಿದೆ. ₹ 3.68 ಲಕ್ಷ ಮೌಲ್ಯದ 2 ಕ್ಯಾಮೆರಾ, ಲೆನ್ಸ್ ಹಾಗೂ ಆ್ಯಪಲ್ ಕಂಪನಿಯ ಎರಡು ಇಯರ್ ಪಾಡ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.


degree Student camera theft to make reels and shorts pvn
ಸಾಂದರ್ಭಿಕ ಚಿತ್ರ


ಇದನ್ನೂ ಓದಿ: Kanakadasa Jayanti: ಗೋಮೂತ್ರದಿಂದ ಈದ್ಗಾ ಮೈದಾನ ಶುದ್ಧೀಕರಣ ಮಾಡಿ ಕನಕ ಜಯಂತಿ ಆಚರಿಸಿದ ಮುತಾಲಿಕ್!


ಸಿನಿಮಾ ಚಿತ್ರೀಕರಣದ ಜಾಗದಲ್ಲೂ ಕಳ್ಳತನ


ಪ್ರಜ್ವಲ್​ ಗುಣಮಟ್ಟದ ಕ್ಯಾಮೆರಾಗಾಗಿ ಸಿನಿಮಾ ಚಿತ್ರೀಕರಣದ  ಬಸವನಗುಡಿ ಠಾಣೆ ವ್ಯಾಪ್ತಿಯ ಪ್ರದೇಶವೊಂದರಲ್ಲಿ ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ಸ್ಥಳಕ್ಕೆ ಹೋಗಿದ್ದ ಆರೋಪಿ, ಚಿತ್ರೀಕರಣಕ್ಕೆ ಅಗತ್ಯವಿದ್ದ ಹಲವು ವಸ್ತುಗಳನ್ನು ಕದ್ದಿದ್ದನೆಂಬುದು ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದರು.


ಹೊಸ ರೀತಿಯಲ್ಲಿ ಗುಣಮಟ್ಟದ ರೀಲ್ಸ್ ಹಾಗೂ ಶಾರ್ಟ್ಸ್ ವಿಡಿಯೊ ಮಾಡುವ ಉದ್ದೇಶಕ್ಕಾಗಿ ಕ್ಯಾಮೆರಾ ಕಳ್ಳತನ ಮಾಡಿದ್ದಾಗಿ ಆರೋಪಿ ಹೇಳಿಕೆ ನೀಡಿದ್ದಾನೆ ಎಂದು ಪೊಲೀಸರು ಹೇಳಿದರು. ಇನ್ನು ಈ ರೀಲ್ಸ್​ ಮಾಡುವ ಹುಚ್ಚಿಗೆ ಬಿದ್ದ ಪ್ರಜ್ವಲ್ ಇದೀಗ ಕಂಬಿ ಎಣಿಸುವಂತಾಗಿದೆ.

Published by:ಪಾವನ ಎಚ್ ಎಸ್
First published: