ಉ.ಕ.ದ ಅಭಿವೃದ್ಧಿ ಬಗ್ಗೆ ಚರ್ಚಿಸದ ಅಧಿವೇಶನ ಸಂಪೂರ್ಣ ವಿಫಲ - ವಾಟಾಳ್ ನಾಗರಾಜ್

ಸುವರ್ಣ ಸೌಧ ಮುಂಭಾಗ ರೊಟ್ಟಿಯನ್ನ ಉಚಿತವಾಗಿ ಹಂಚುವ ಮೂಲಕ ಪ್ರತಿಭಟನೆ ನಡೆಸಿದ ವಾಟಾಳ್ ನಾಗರಾಜ್ ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಚರ್ಚಿಸದೇ ಸಂಪೂರ್ಣ ವಿಫಲವಾಗಿದೆ. ಯಾರು ಪ್ರಾಮಾಣಿಕವಾಗಿ ಮಾತಾಡಿಲ್ಲ ಎಂದರು.

G Hareeshkumar | news18
Updated:December 19, 2018, 9:34 PM IST
ಉ.ಕ.ದ ಅಭಿವೃದ್ಧಿ ಬಗ್ಗೆ ಚರ್ಚಿಸದ ಅಧಿವೇಶನ ಸಂಪೂರ್ಣ ವಿಫಲ - ವಾಟಾಳ್ ನಾಗರಾಜ್
ಸಾಂದರ್ಭಿಕ ಚಿತ್ರ
  • News18
  • Last Updated: December 19, 2018, 9:34 PM IST
  • Share this:
- ಕೃಷ್ಣ ಜಿ.ವಿ

ಬೆಳಗಾವಿ (ಡಿ.19) : ಬೆಳಗಾವಿ ಚಳಿಗಾಲ ಅಧಿವೇಶನ ಸಂಪೂರ್ಣ ವಿಫಲವಾಗಿದೆ. ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕದ ಕುರಿತು ಸಮಗ್ರ ಚರ್ಚೆ ಆಗಿಲ್ಲಾ. ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿರುವುದನ್ನ ವಿರೋಧಿಸಿ ಕನ್ನಡ ಹೋರಾಟಗಾರ ವಾಟಾಳ್​ ನಾಗರಾಜ್​ ಪ್ರತಿಭಟನೆ ನಡೆಸಿದರು

ಸುವರ್ಣ ಸೌಧದ ಮುಂಭಾಗ ರೊಟ್ಟಿಯನ್ನ ಉಚಿತವಾಗಿ ಹಂಚುವ ಮೂಲಕ ಪ್ರತಿಭಟನೆ ನಡೆಸಿದ ವಾಟಾಳ್ ನಾಗರಾಜ್ 'ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಚರ್ಚಿಸದೇ ಸಂಪೂರ್ಣ ವಿಫಲವಾಗಿದೆ. ಯಾರು ಪ್ರಾಮಾಣಿಕವಾಗಿ ಮಾತಾಡಿಲ್ಲ ಎಂದರು.

ಇದನ್ನು ಓದಿ :  ಪ್ರತ್ಯೇಕ ಉ.ಕ. ಕೂಗನ್ನು ವಿರೋಧಿಸಿ ವಾಟಾಳ್​ ನಾಗರಾಜ್​ ಪ್ರತಿಭಟನೆ

ಅಖಂಡ ಕರ್ನಾಟಕ ಎಲ್ಲರಿಗೂ ಬೇಕಾಗಿದೆ. ಕರ್ನಾಟಕ ಏಕೀಣಕ್ಕಾಗಿ ಮಹನೀಯರು ಹೋರಾಟ ನಡೆಸಿದ್ದಾರೆ. 3 ಕೋಟಿ ಜನ ಹೊರಗುಳಿದ್ದಿದ್ದಾರೆ. ರಾಜ್ಯದ ಹೊರಗಿರುವ ಕನ್ನಡಿಗರ ಜೀವನವನ್ನು ನೋಡಬೇಕು. ಕರ್ನಾಟಕವನ್ನು ವಿಭಜಿಸುವ ತಂತ್ರ ನಡೆಯುತ್ತಿದೆ ಎಂದು ಕಿಡಿಕಾರಿದರು.

ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಉತ್ತರ ಕರ್ನಾಟಕವನ್ನು ಕಡೆಗಣಿಸಿದ್ದಾರೆ. ಬಿಜೆಪಿಯವರು ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ. ಇಷ್ಟು ದಿನ ಮಹದಾಯಿ ವಿಚಾರವಾಗಿ ಯಾಕೆ ಮಾತನಾಡಲಿಲ್ಲ. ಉತ್ತರ ಕರ್ನಾಟಕ ಜನರ ನೋವು ನಿಮಗೆ ಗೊತ್ತಾಗಲ್ವಾ..? ರಾಜ್ಯ ಇಬ್ಬಾಗ ಮಾಡಿದರೆ  ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸುವರ್ಣ ಸೌಧದ ಮುಂಭಾಗದಲ್ಲಿ ಪೊಲೀಸರನ್ನ ನೋಡಿದರೆ ಪಾಕಿಸ್ತಾನ ಬಾರ್ಡರ್ ಇದ್ದ ಹಾಗೆ ಕಾಣುತ್ತಿದೆ. ರೊಟ್ಟಿ ಹಂಚಿ ಪ್ರತಿಭಟನೆ ನಡೆಸುತ್ತಿದ್ದ ವಾಟಾಳ್ ನಾಗರಾಜ್ ರನ್ನು ಪೊಲೀಸರು ವಶಕ್ಕೆ ಪಡೆದರು.ಇದನ್ನು ಓದಿ :  ಉತ್ತರ ಕರ್ನಾಟಕಕ್ಕೆ ಉಪ ಮುಖ್ಯಮಂತ್ರಿ ಸ್ಥಾನ ನೀಡಿ : ವಾಟಾಳ್ ನಾಗರಾಜ್ ಒತ್ತಾಯ

First published: December 19, 2018, 9:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading