ಸಾಹಿತ್ಯ ಜಾತ್ರೆಯಲ್ಲಿ ವಿಶಿಷ್ಟ ಫೇಸ್​ಬುಕ್ ಪುಸ್ತಕದಂಗಡಿ...!

ಸಾಹಿತಿಗಳಾದ ಚಂದ್ರಶೇಖರ ಆಲೂರು, ಚಿದಂಬರ ನರೇಂದ್ರ, ಬಿ.ವಿ ಭಾರತಿ ಸೇರಿದಂತೆ ಸುಮಾರು ಸಾವಿರಕ್ಕೂ ಹೆಚ್ಚು ಫೇಸ್​ಬುಕ್ ಕವಿಗಳ ಪುಸ್ತಕಗಳನ್ನ ಪ್ರದರ್ಶನಕ್ಕೆ ಇಟ್ಟಿದ್ದಾರೆ.

G Hareeshkumar | news18
Updated:January 5, 2019, 8:25 PM IST
ಸಾಹಿತ್ಯ ಜಾತ್ರೆಯಲ್ಲಿ ವಿಶಿಷ್ಟ ಫೇಸ್​ಬುಕ್ ಪುಸ್ತಕದಂಗಡಿ...!
ಸಾಂದರ್ಭಿಕ ಚಿತ್ರ
  • News18
  • Last Updated: January 5, 2019, 8:25 PM IST
  • Share this:
ಧಾರವಾಡ ( ಜ.05) :  ವಿದ್ಯಾಕಾಶಿ ಧಾರವಾಡದಲ್ಲಿ ನಡೆಯುತ್ತಿರುವ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನೂರಾರು ಪುಸ್ತಕ ಮಳಿಗೆಗಳು ಪುಸ್ತಕ ಪ್ರೇಮಿಗಳನ್ನ ಕೈಬಿಸಿ ಕರೆಯುತ್ತಿವೆ. ಆದರೆ ಇದರಲ್ಲಿ ಫೇಸ್​ಬುಕ್ ಪುಸ್ತಕದಂಗಡಿ ಎಂಬ ಮಳಿಗೆ ಎಲ್ಲರ ಜನಾಕರ್ಷಿಣಿಯವಾಗಿದೆ.

ಕಳೆದ ಸಮ್ಮೇಳನಲ್ಲಿ ಫೇಸ್​ಬುಕ್ ಕವಿಗಳು, ಸಾಹಿತಿಗಳು ಕವಿ-ಸಾಹಿತಿಗಳಲ್ಲ, ಫೇಸ್‌ಬುಕ್ ಬರಹಗಾರರು ಬರಹಗಾರರಲ್ಲ ಎಂಬ ಹೇಳಿಕೆಯನ್ನು ಹಿರಿಯ ಸಾಹಿತಿಯೊಬ್ಬರು ನೀಡಿದ್ದರು. ಹೇಳಿಕೆ ವಿರುದ್ಧ ಮೌನ ಪ್ರತಿಭಟಿಸುವ ನಿಟ್ಟಿನಲ್ಲಿ ಈ ಫೇಸ್​ಬುಕ್ ಪುಸ್ತಕದಂಗಡಿಯನ್ನು ಧಾರವಾಡದ ರಾಜಕುಮಾರ ಮಡಿವಾಳರ ಎಂಬುವವರು ಈ ಪುಸ್ತಕ ಸಂಗ್ರಹ ಮಳಿಗೆ ನಿರ್ಮಾಣ ಮಾಡಿದ್ದಾರೆ ಎನ್ನಲಾಗಿದೆ.

 ಇದನ್ನೂ ಓದಿ : ಮತ್ತೆ ಕನ್ನಡ ಮೇಷ್ಟ್ರಾದ ಸಿದ್ದರಾಮಯ್ಯ; ಶಾಲಾ ಮಕ್ಕಳಿಗೆ ಕನ್ನಡ ಪಾಠ

ಇದರಲ್ಲಿ ಸಾಹಿತಿಗಳಾದ ಚಂದ್ರಶೇಖರ ಆಲೂರು, ಚಿದಂಬರ ನರೇಂದ್ರ, ಬಿ.ವಿ ಭಾರತಿ ಸೇರಿದಂತೆ ಸುಮಾರು ಸಾವಿರಕ್ಕೂ ಹೆಚ್ಚು ಫೇಸ್​ಬುಕ್ ಕವಿಗಳ ಪುಸ್ತಕಗಳನ್ನ ಪ್ರದರ್ಶನಕ್ಕೆ ಇಟ್ಟಿದ್ದಾರೆ. ಜೊತೆಗೆ ಕವಿ ಕುಮಾರವ್ಯಾಸ ಧಾರವಾಡ ಜಿಲ್ಲೆಯವರಾದರೂ ವೇದಿಕೆ, ಮಹಾದ್ವಾರ, ಮಂಟಪ ಇದ್ಯಾವುದಕ್ಕೂ ಕುಮಾರವ್ಯಾಸರ ಹೆಸರು ಬಳಸಿಕೊಂಡಿಲ್ಲ. ಇದನ್ನ ಖಂಡಿಸಿ ಇದೇ ಫೇಸ್​ಬುಕ್ ಪುಸ್ತಕದಂಗಡಿಯಲ್ಲಿ ಬುಕ್ ರ‍್ಯಾಕ್ ನಿರ್ಮಿಸಿ ಅದರ ಮೂಲಕ ಮೌನ ಪ್ರತಿಭಟನೆಗೆ ಮುಂದಾಗಿದ್ದಾರೆ.

ಮಳಿಗೆಯ ಮೊದಲ ಸಾಲಿನಲ್ಲಿ ಕುಮಾರ ವ್ಯಾಸನ ಪುಸ್ತಕಗಳನ್ನಿಟ್ಟು ಆಕ್ರೋಶ ವ್ಯಕ್ತಪಡಿಸಿದರು. ಫೇಸ್​ಬುಕ್ ಕವಿಗಳು ಕವಿಗಳಲ್ಲ, ಸಾಹಿತಿಗಳಲ್ಲ ಎಂಬ ಹೇಳಿಕೆ ವಿರುದ್ಧ ಹುಟ್ಟಿಕೊಂಡ ಮಳಿಗೆ. ಸಾಹಿತ್ಯದಲ್ಲಿ ಭಿನ್ನಾಭಿಪ್ರಾಯಗಳು ಬೇಡ ಎಂಬುದು ಇವರ ಆಸೆಯಾಗಿದೆ.

ಇದನ್ನೂ ಓದಿ :  ಸಾಹಿತ್ಯ ಸಮ್ಮೇಳನದಲ್ಲಿ ಇಂಗ್ಲೀಷ್ ವರ್ಸಸ್ ಕನ್ನಡ; ಸಿಎಂ ವರ್ಸಸ್ ಚಂಪಾ


Loading...

 
First published:January 5, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...