ಕುಂದಾ ನಗರಿಯಲ್ಲಿ ದಸರಾ ಹಬ್ಬದ ಪ್ರಯುಕ್ತ ದುರ್ಗಾ ಮಾತಾ ದೌಡ..! ದೌಡನಲ್ಲಿ ಪಾಲ್ಗೊಳ್ಳುವ ಸಾವಿರಾರು ಜನ..!

G Hareeshkumar | news18
Updated:October 12, 2018, 7:55 PM IST
ಕುಂದಾ ನಗರಿಯಲ್ಲಿ ದಸರಾ ಹಬ್ಬದ ಪ್ರಯುಕ್ತ ದುರ್ಗಾ ಮಾತಾ ದೌಡ..! ದೌಡನಲ್ಲಿ ಪಾಲ್ಗೊಳ್ಳುವ ಸಾವಿರಾರು ಜನ..!
  • News18
  • Last Updated: October 12, 2018, 7:55 PM IST
  • Share this:
- ಚಂದ್ರಕಾಂತ ಸುಗಂಧಿ, ನ್ಯೂಸ್ 18 ಕನ್ನಡ 

ಬೆಳಗಾವಿ (ಅ.12) :  ಕುಂದಾ ನಗರಿ ಬೆಳಗಾವಿಯಲ್ಲಿ ನಾಡ ಹಬ್ಬ ದಸರಾವನ್ನು ವಿಭೀನ್ನವಾಗಿ ಆಚರಣೆ ಮಾಡಲಾಗುತ್ತದೆ. ನವರಾತ್ರಿಯ 9 ದಿನಗಳ ಕಾಲ ನಗರದ ವಿವಿಧ ಪ್ರದೇಶಗಳಲ್ಲಿ ದುರ್ಗಾ ಮಾತಾ ದೌಡ್ ವಿಶೇಷವಾಗಿ ಗಮನ ಸೆಳೆಯುತ್ತದೆ. ಧರ್ಮ ಜಾಗೃತಿಯ ಉದ್ದೇಶದಿಂದ ನಡೆಯುವ ದೌಡನಲ್ಲಿ ಸಾವಿರಾರು ಜನ ಪಾಲ್ಗೊಳ್ಳುತ್ತಾರೆ

ತಲೆಗೆ ಕೇಸರಿ ಪೇಟ ಸುತ್ತಿ ಕೈಯಲ್ಲಿ ಖಡ್ಗ ಹಿಡಿದು ಸಾಗುವ ಸಾವಿರಾರು ಜನ. ಓಡುತ್ತ ಜೈ ಭವಾನಿ, ಜೈ ಶಿವಾಜಿ, ಹರ ಹರ ಮಹಾದೇವ ಎಂಬ ಘೋಷಣೆ. ಜನರ ಸಾಗರ ಓಡುವ ರಸ್ತೆ ಯುದ್ದಕ್ಕು ರಂಗೋಲಿ, ಹೂಗಳಿಂದ ಅಲಂಕಾರ. ಇದು ಕುಂದಾನಗರಿ ಬೆಳಗಾವಿಯಲ್ಲಿ ನವರಾತ್ರಿ ಅಂಗವಾಗಿ ನಡೆಯುವ ದುರ್ಗಾ ಮಾತಾ ದೌಡ್ ವಿಶೇಷವಾಗಿದೆ. ಬೆಳಗಾವಿಯಲ್ಲಿ ಎರಡು ದಶಕಗಳಿಂದ ದುರ್ಗಾ ಮಾತಾ ದೌಡ್ ವಿಶೇಷವಾಗಿ ಆಚರಣೆ ಮಾಡಲಾಗುತ್ತದೆ. ನವರಾತ್ರಿ

ಒಂಬತ್ತು ದಿನಗಳ ಕಾಲ ಬೆಳಗ್ಗೆ 5 ರಿಂದ 8 ಗಂಟೆಯ ವರೆಗೆ ದೌಡ್ ನಡೆಯುತ್ತದೆ. ಶಿವ ಪ್ರತಿಷ್ಠಾನದ ಹಿಂದುಸ್ತಾನದ ಸಂಸ್ಥಾಪಕ ಸಂಭಾಜೀರಾವ ಭೀಡೆ ಗುರೂಜಿ ಅವರ ಪ್ರೇರಣೆಯಿಂದ ದೌಡ್ ಕಾರ್ಯಕ್ರಮ ಆರಂಭಗೊಂಡಿದೆ. ಮೊದಲು ಕೇವಲ 25 ಭಕ್ತರಿಂದ ಆರಂಭವಾದ ದೌಡನಲ್ಲಿ ಇಂದು ಸಾವಿರಾರು ಜನ ಪಾಲ್ಗೊಳ್ಳುತ್ತಾರೆ. ಇಂದು ಶಹಾಪುರ ಶಿವಾಜಿ ಗಾರ್ಡನ್ ನಿಂದ ಆರಂಭವಾಗಿ ಅನಗೋಳದ ಮಹಾಲಕ್ಷ್ಮೀ ಮಂದರಿದ ವರೆಗೆ ದೌಡ್ ನಡೆಯಿತು. ಪ್ರತಿದಿನ ಸುಮಾರು 5-10 ಕಿ.ಮೀ ದೌಡ್ ನಡೆಯುತ್ತದೆ. ಸತನಾತ ಪರಂಪರೆ ಉಳಿಸುವ ಉದ್ದೇಶದ ಜತೆಗೆ ನವರಾತ್ರಿ ಹಿನ್ನೆಲೆಯಲ್ಲಿ ಶಕ್ತಿ ದೇವರ ಆರಾಧೆನೆಯ ಹಿನ್ನೆಲೆಯಲ್ಲಿ ದೌಡ್ ನಡೆಯುತ್ತದೆ. ಎಲ್ಲರನ್ನು ಒಂದುಗುಡಿಸವ ದೃಷ್ಠೀಯಿಂದ ದೌಡ್ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತದೆ ಎನ್ನುತ್ತಾರೆ ದೌಡ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಭಕ್ತ ಅವಿನಾಶ್ ಶಿರೋಳ

ಇನ್ನು ನವರಾತ್ರಿಯ 9ದಿನಗಳ ಕಾಲ ನಗರದ ವಿವಿಧ ಪ್ರದೇಶದಲ್ಲಿ ದೌಡ್ ಆಯೋಜನೆ ಮಾಡಲಾಗುತ್ತದೆ. ದೌಡ್ ಸಾಗುವ ಮಾರ್ಗವನ್ನು ಅಲಂಕಾರ ಮಾಡಲಾಗುತ್ತದೆ. ರಂಗೋಲಿ, ಹೂಗಳಿಂದ ಅಲಂಕರಿಸಿ ಕೇಸರಿ ಧ್ವಜಗಳನ್ನು ಕಟ್ಟಲಾಗುತ್ತದೆ. ಇನ್ನೂ ನಗರದ ವಿವಿಧ ಕಡೆಗಳಲ್ಲಿ ಪ್ರತಿಷ್ಠಾಪಿಸಿರುವ ದುರ್ಗಾ ಮೂರ್ತಿಯನ್ನು ಅದ್ಧೂರಿಯಾಗಿ ಶೃಂಗರಿಸಲಾಗುತ್ತದೆ. ದೌಡ್ ನಲ್ಲಿ ಓಡುತ್ತ ಸಾಗುವ ಸಾವಿರಾರು ಭಕ್ತರಿಗೆ ಮಹಿಳೆಯರು ಆರತಿ ಬೆಳಗಿ ಸ್ವಾಗತಿಸುತ್ತಾರೆ. ಪುಟ್ಟ ಮಕ್ಕಳು ಛತ್ರಪತಿ ಶಿವಾಜಿ ವೇಷಭೂಷನ ಧರಿಸಿ ಸಂಭ್ರಮಿಸುತ್ತಾರೆ.

ಇನ್ನೂ ದೌಡ್ ಕಾರ್ಯಕ್ರಮದಲ್ಲಿ ಪಾಲ್ಗೊಳುವ ಭಕ್ತರಿಗೆ ಕೆಲವು ನಿಯಮಗಳನ್ನು ಪಾಲಿಸಬೇಕು. ತಂಡದ ಮುಂದಾಳತ್ವ ವಹಿಸುವವರು ಕೈಯಲ್ಲಿ ಕತ್ತಿ ಹಾಗೂ ಕೇಸರಿ ಧ್ವಜ ಹಿಡಿಯಬೇಕು. ದೌಡ್ ಪಾಲ್ಗೊಳ್ಳುವವರು ಬಿಳಿ ಬಣ್ಣದ ಬಟ್ಟೆ ಧರಿಸಿ, ತಲೆಗೆ ಕೇಸರಿ ಪೇಟ್ ಸುತ್ತಿರಬೇಕು. ಇನ್ನೂ ಯಾವುದೇ ರಾಜಕೀಯ ಅಥವಾ ಸಂಘಟನೆಯ ಶರ್ಟ್ ಗಳಿಗೆ ಇಲ್ಲಿ ಅವಕಾಶವಿಲ್ಲ. ಒಟ್ಟಾರೆ ಯುವ ಸಮೂದಾಯಕ್ಕೆ ಧರ್ಮದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಡೆಯುದ ದೌಡ್ ಅತ್ಯಂತ ವಿಶೀಷ್ಠವಾಗಿದೆ. ದೌಡ್ ನಲ್ಲಿ ಮಹಿಳೆಯರು ಮಕ್ಕಳು ಹಾಗೂ ಯುವಕರ ಎನ್ನುವ ಭೇದವಿಲ್ಲದೆ ಎಲ್ಲರೂ ಪಾಲ್ಗೊಂಡು ಸಂಭ್ರಮಿಸುವುದು ಹೆಮ್ಮೆಯ ಸಂಗತಿ ಎನ್ನುವುದು ಭಕ್ತರ ಅಭಿಪ್ರಾಯವಾಗಿದೆ.

ದಸರಾ ಜಂಬೂಸವಾರಿ; ಅಂಬಾರಿ ಹೊತ್ತಿರುವ ಆನೆಗಳ ಬಗ್ಗೆ ನಿಮಗೆಷ್ಟು ಗೊತ್ತು:?

 

 

 
First published:October 12, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading