ನಾಗರ ಪಂಚಮಿಯಂದು ದಿಟ ನಾಗರಕ್ಕೆ ಹಾಲೆರೆದು ಪೂಜೆ – ಭಕ್ತಿಯಲ್ಲಿ ಮಿಂದೆದ್ದ ಹುಲೇಕಲ್ ಕುಟುಂಬ

ಕಳೆದ 35 ವರ್ಷಗಳಿಂದ ನಿರಂತರವಾಗಿ ಉರಗ ಸಂತತಿಯ ಸಂರಕ್ಷಣೆಯ ಬಗ್ಗೆ ವಿಶೇಷ ಕಾಳಜಿಯನ್ನು ತೋರುತ್ತ ಬಂದಿರುವುದು ಪ್ರಶಾಂತ್ ಹುಲೇಕಲ್ ಕುಟುಂಬ ಪ್ರತಿ ನಾಗರ ಪಂಚಮಿ ಹಬ್ಬವನ್ನು ನಾಗ ಸಂತತಿಯ ಬಗ್ಗೆ ಸಂದೇಶ ಸಾರುವ ಸಂದರ್ಭವನ್ನಾಗಿ ಬಳಸಿಕೊಳ್ಳುತ್ತಿದೆ. ಕುಟುಂಬದ ಹಿರಿಯ ಹಾವಿನ ಸುರೇಶಣ್ಣ ಮರಣದ ಬಳಿಕ ಅವರ ಮಕ್ಕಳಾದ ಪ್ರಶಾಂತ, ಪ್ರಕಾಶ ಹಾಗೂ ಪ್ರಣವ್​​ ನಿಜವಾದ ಹಾವಿಗೆ ಪೂಜೆ ಸಲ್ಲಿಸಿ ನಾಗಪಂಚಮಿ ಆಚರಣೆ ಮಾಡುತ್ತಿದ್ದಾರೆ.

G Hareeshkumar | news18
Updated:August 5, 2019, 8:30 PM IST
ನಾಗರ ಪಂಚಮಿಯಂದು ದಿಟ ನಾಗರಕ್ಕೆ ಹಾಲೆರೆದು ಪೂಜೆ – ಭಕ್ತಿಯಲ್ಲಿ ಮಿಂದೆದ್ದ ಹುಲೇಕಲ್ ಕುಟುಂಬ
ದಿಟ ನಾಗರ ಹಾವಿಗೆ ಹಾಲೆರೆದ ಕುಟುಂಬ
  • News18
  • Last Updated: August 5, 2019, 8:30 PM IST
  • Share this:
ಶಿರಸಿ (ಆ.05): ಕಲ್ಲ ನಾಗರ ಕಂಡರೆ ಹಾಲನೆರೆ ಎಂಬರು ದಿಟದಿ ನಾಗರ ಕಂಡರೆ ಕೊಲ್ಲೆಂಬರೈಯ್ಯಾ ಎನ್ನುವ ಶರಣರ ನುಡಿ ಇಲ್ಲಿ ಸುಳ್ಳಾಗಿದೆ. ನಾಗರ ಪಂಚಮಿ ಹಿನ್ನೆಲೆಯಲ್ಲಿ ಉರಗ ಪ್ರೇಮಿಯೊಬ್ಬರು ದಿಟ ನಾಗರಕ್ಕೆ ಹಾಲೆರೆದು ಪೂಜೆ ಸಲ್ಲಿಸಿದ್ದಾರೆ. ಭುಸುಗುಟ್ಟುವ ನಾಗರ ಹಾವಿನ ಆರ್ಭಟದ ನಡುವೆ ಯಾವುದೇ ಭಯವಿಲ್ಲದ ಭಕ್ತಿಯ ವಾತಾವರಣದಲ್ಲಿ ನಾಗ ಪೂಜೆ ನೆರವೇರಿದೆ.

ಉರಗ ಲೋಕದ ವೈಶಿಷ್ಟ್ಯ ಹಾಗೂ ಪ್ರಾಮುಖ್ಯತೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶ ಇವರದ್ದು. ಈ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಪ್ರಶಾಂತ್ ಹುಲೇಕಲ್ ಕುಟುಂಬದ ಸದಸ್ಯರು ಪ್ರತಿ ವರ್ಷದಂತೆ ಈ ಬಾರಿ ಕೂಡ ನಿಜ ನಾಗರಹಾವಿಗೆ ಹಾಲೆರೆದು ಪಂಚಮಿ ಹಬ್ಬವನ್ನು ಆಚರಿಸಿದರು. ಪ್ರತಿ ವರ್ಷ ಒಂದು ನಾಗರಹಾವನ್ನ ಪೂಜೆ ಮಾಡುತ್ತಿದ್ದ ಪ್ರಶಾಂತ್ ಕುಟುಂಬ ಈ ಭಾರಿ ಎರಡು ನಾಗರ ಹಾವುಗಳನ್ನ ತಂದು ಪೂಜೆ ಸಲ್ಲಿಸಿರೋದು ವಿಶೇಷ.

ನಿಜವಾದ ನಾಗರಕ್ಕೆ ಹಾಲೆರೆದು ಹುಲೇಕಲ್ ಕುಟುಂಬ

ಕಳೆದ 35 ವರ್ಷಗಳಿಂದ ನಿರಂತರವಾಗಿ ಉರಗ ಸಂತತಿಯ ಸಂರಕ್ಷಣೆಯ ಬಗ್ಗೆ ವಿಶೇಷ ಕಾಳಜಿಯನ್ನು ತೋರುತ್ತ ಬಂದಿರುವುದು ಪ್ರಶಾಂತ್ ಹುಲೇಕಲ್ ಕುಟುಂಬ ಪ್ರತಿ ನಾಗರ ಪಂಚಮಿ ಹಬ್ಬವನ್ನು ನಾಗ ಸಂತತಿಯ ಬಗ್ಗೆ ಸಂದೇಶ ಸಾರುವ ಸಂದರ್ಭವನ್ನಾಗಿ ಬಳಸಿಕೊಳ್ಳುತ್ತಿದೆ. ಕುಟುಂಬದ ಹಿರಿಯ ಹಾವಿನ ಸುರೇಶಣ್ಣ ಮರಣದ ಬಳಿಕ ಅವರ ಮಕ್ಕಳಾದ ಪ್ರಶಾಂತ, ಪ್ರಕಾಶ ಹಾಗೂ ಪ್ರಣವ್​​ ನಿಜವಾದ ಹಾವಿಗೆ ಪೂಜೆ ಸಲ್ಲಿಸಿ ನಾಗಪಂಚಮಿ ಆಚರಣೆ ಮಾಡುತ್ತಿದ್ದಾರೆ.

ವಿಷದ ಹಲ್ಲುಗಳಿರುವ ಸರ್ಪಗಳನ್ನು ಮನೆಯೊಳಗೆ ಪ್ರತಿಷ್ಠಾಪಿಸಿ ಇತರರು ಕಲ್ಲು ನಾಗರಗಳಿಗೆ ಹಾಲೆರೆದು ಪೂಜೆ ಮಾಡುವ ಪದ್ದತಿ ಅನುಸರಿಸುತ್ತಿದ್ದಾರೆ. ಇನ್ನು ಪ್ರಶಾಂತ್ ಪತ್ನಿ, ಮಗಳು ಹಾಗೂ ಮಗ ಕೂಡ ನಿಜ ಹಾವನ್ನ ಕಂಡು ಭಯ ಪಡದೆ ಪೂಜೆ ಸಲ್ಲಿಸೋದು ನಿಜಕ್ಕೂ ಆಶ್ಚರ ಪಡುವಂತದ್ದು.

ಮನೆಯ ಸದಸ್ಯರೆಲ್ಲ ಸೇರಿ ಹೂವು, ಅಕ್ಷತೆ ಹಾಕಿ ಆರತಿ ಬೆಳಗಿ ನಾಗಪಂಚಮಿ ಆಚರಿಸುತ್ತಾರೆ. ಹುಲೇಕಲ್ ಕುಟುಂಬದ ಪ್ರಶಾಂತ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಹಾವುಗಳನ್ನು ಹಾಗೂ ಅಪಾಯದಲ್ಲಿರುವ ಹಾವನ್ನು ರಕ್ಷಿಸಿ ಕಾಡಿಗೆ ಬಿಟ್ಟು ಬರುವ ಕಾಯಕ ನಿರಂತರವಾಗಿ ಮಾಡುತ್ತಿದ್ದಾರೆ. ಎಲ್ಲಿ, ಯಾವುದೇ ಸಂದರ್ಭದಲ್ಲಿ ದೂರವಾಣಿ ಕರೆ ಬಂದರೂ ತಕ್ಷಣ ದೌಡಾಯಿಸಿ ಎಂತಹ ಘಟ ಸರ್ಪವನ್ನಾದರೂ ಸರಾಗವಾಗಿ ಚೀಲದಲ್ಲಿ ತುಂಬಿ ಕಾಡಿಗೆ ಮರಳಿಸುತ್ತಾರೆ.

ಇದನ್ನೂ ಓದಿ : ಮಲೆನಾಡಿನಲ್ಲಿ ಮುಂದುವರೆದ ಮಳೆ ಆರ್ಭಟ; ಕೊಡಗಿನಲ್ಲಿ ಇಂದಿನಿಂದ ಆರೆಂಜ್​ ಆಲರ್ಟ್​​
Loading...

ಅರಣ್ಯ ಇಲಾಖೆಯವರೂ ಹೆಚ್ಚಾಗಿ ಹಾವಿನ ರಕ್ಷಣೆ ಸನ್ನಿವೇಶ ಎದುರಾದರೆ ನೆನಪಿಸಿಕೊಳ್ಳುವುದು ಪ್ರಶಾಂತ ಅವರನ್ನೇ. ಕೆಲವು ವರ್ಷದಿಂದಲೂ ಕಾಡಿಗೆ ಹೋಗಿ ಹಾವು ಹಿಡಿದು ಪೂಜೆ ಸಲ್ಲಿಸುತ್ತಿದ್ದ ಬರುತ್ತಿದ್ದ ಪ್ರಶಾಂತ್ ಕುಟುಂಬ ಇದೀಗ ಮನೆಯಲ್ಲೆ ಹಾವು ತಂದು ಪೂಜೆ ಮಾಡಿದ್ದಾರೆ. ಅಲ್ಲದೆ ನಿಜ ನಾಗನಿಗೆ ಪೂಜೆ ಮಾಡೋದನ್ನ ಕಂಡು ಸ್ಥಳೀಕರು ಕೂಡ ಸಂತೋಷ ಪಟ್ಟಿದ್ದಾರೆ. ಸಾಮಾನ್ಯವಾಗಿ ಕಲ್ಲಿನ ಹಾವಿನ ಪೂರ್ತಿಗೆ ಪೂಜೆ ಸಲ್ಲಿಸುತ್ತಿದ್ದ ಸಾರ್ವಜನಿಕರು ನಿಜ ನಾಗನಿಗೆ ಪೂಜೆ ಸಲ್ಲಿಸಿ ಸಂತೋಷ ಪಟ್ಟಿದ್ದಾರೆ.

ನಾಗರ ಪಂಚಮಿ ಹಬ್ಬದಂದು ಕಳೆದ ಒಂಬತ್ತು ವರ್ಷದಿಂದ ನಿಜ ನಾಗರ ಪೂಜೆ ಮಾಡುತ್ತಿರುವ ಪ್ರಶಾಂತ್ ಕುಟುಂಬ ಇದನ್ನೆ ಮುಂದುವರೆಸುವ ಪ್ರಯತ್ನ ಮಾಡುತ್ತಿದೆ.  ನಿಜ ಹಾವನ್ನ ಕಂಡು ಭಯ ಪಡೋ ಅದೆಷ್ಟೋ ಮಂದಿಗೆ ಪ್ರಶಾಂತ್ ಹುಲೆಕಲ್ ಕುಟುಂಬ ಮಾದರಿಯಾಗಿದೆ.

First published:August 5, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...