ತೇಜಸ್​​ ಯುದ್ದ ವಿಮಾನದಲ್ಲಿ ಹಾರಾಟ ನಡೆಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ತೇಜಸ್ ನಾಲ್ಕುವರೆ ತಲೆಮಾರಿನ ಲಘು ಸಮರ ವಿಮಾನವಾಗಿದ್ದು, ಇದನ್ನು ಸರ್ಕಾರಿ ಏರೋಸ್ಪೇಸ್ ಬೆಹೆಮೊಥ್ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಅಭಿವೃದ್ಧಿಪಡಿಸಿದೆ.

G Hareeshkumar | news18-kannada
Updated:September 19, 2019, 11:05 AM IST
ತೇಜಸ್​​ ಯುದ್ದ ವಿಮಾನದಲ್ಲಿ ಹಾರಾಟ ನಡೆಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ತೇಜಸ್‌ ಯುದ್ದ ವಿಮಾನದಲ್ಲಿ ರಕ್ಷಣ ಸಚಿವ ರಾಜನಾಥ್ ಸಿಂಗ್
  • Share this:
ಬೆಂಗಳೂರು(ಸೆ.19) : ದೇಶಿಯವಾಗಿ ಅಭಿವೃದ್ದಿಪಡಿಸಿರುವ ಲಘು ಸಮರ ವಿಮಾನ (ಎಲ್‌ಸಿಎ) ತೇಜಸ್‌ನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾರಾಟ ನಡೆಸಿದರು. ರಕ್ಷಣಾ ಸಚಿವರೊಬ್ಬರು ಇದೇ ಮೊದಲ ಬಾರಿಗೆ ಸಂಪೂರ್ಣ ದೇಶಿ ನಿರ್ಮಿತ ಲಘು ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಕೀರ್ತಿಗೆ ಪಾತ್ರರಾದರು.

ಬೆಳಿಗ್ಗೆ 8:30ರಿಂದ 9 ಗಂಟೆ ವೆರೆಗೆ ತೇಜಸ್ ಯುದ್ಧ ವಿಮಾನದ ಬಗ್ಗೆ ರಕ್ಷಣಾ ಸಚಿವರಿಗೆ ಪೈಲೆಟ್ ಗಳಿಂದ ತೇಜಸ್ ಕುರಿತು ಮಾಹಿತಿ ನೀಡುವರು. ಬೆಳಗ್ಗೆ 9 ರಿಂದ 9:30 ರ ತನಕ ಅರ್ಧ ಗಂಟೆಗಳ ಕಾಲ ಆಕಾಶದಲ್ಲಿ ತೇಜಸ್ ಯುದ್ಧ ವಿಮಾನದಲ್ಲಿ ಕೂತು ಹಾರಾಟ ನಡೆಸುವರು.

ತೇಜಸ್ ನಾಲ್ಕುವರೆ ತಲೆಮಾರಿನ ಲಘು ಸಮರ ವಿಮಾನವಾಗಿದ್ದು, ಇದನ್ನು ಸರ್ಕಾರಿ ಏರೋಸ್ಪೇಸ್ ಬೆಹೆಮೊಥ್ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಅಭಿವೃದ್ಧಿಪಡಿಸಿದೆ. ಕಳೆದ ಶುಕ್ರವಾರ ಗೋವಾದಲ್ಲಿ ಇದರ ನಿರ್ಣಾಯಕ ಪರೀಕ್ಷೆ ನಡೆಸಲಾಗಿತ್ತು ಇದು ವಿಮಾನವಾಹಕ ನೌಕೆಯಿಂದ ತೇಜಸ್ ತನ್ನ ಕಾರ್ಯಾಚರಣೆ ನಡೆಸಲು ಕೇವಲ ಇನ್ನು ಒಂದು ಹೆಜ್ಜೆಯಷ್ಟೇ ಮಾತ್ರ ಬಾಕಿಯಿದೆ.

ಇದನ್ನೂ ಓದಿ : ರಾಜಕೀಯವಲ್ಲ. ಇದೊಂದು ಸಹಜ ಭೇಟಿ; ಪ್ರಧಾನಿ ಮೋದಿ ಜೊತೆ ಮಮತಾ ಮಾತುಕತೆ 

ಭಾರತೀಯ ನೌಕಾಪಡೆಗಾಗಿಯೇ ಇದನ್ನು ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ತೇಜಸ್ ಯುದ್ಧ ವಿಮಾನ ತಯಾರಿಕಾ ಸರಣಿಯ ಒಂದು ಭಾಗವಾಗಿದೆ.ಯಶಸ್ವಿಯಾಗಿ ಕಾರ್ಯಗತಗೊಳಿಸುವ ಮೂಲಕ ಭಾರತೀಯ ನೌಕೆ ವಿಕ್ರಮಾದಿತ್ಯದಲ್ಲಿ ತೇಜಸ್ ಸಮರ ವಿಮಾನ ಮುಂದಿನ ಕಾರ್ಯಾಚರಣೆ ನಡೆಸಲು ಈ ಮೂಲಕ ಹಾದಿ ಸುಗಮವಾಗಲಿದೆ ಎಂದೂ ಇಲಾಖೆ ಹೇಳಿಕೆ ತಿಳಿಸಿದೆ.

ತರಬೇತಿ ಉದ್ದೇಶಕ್ಕಾಗಿ 2 ಸೀಟ್ ಗಳನ್ನು ಹೊಂದಿರೋ ತೇಜಸ್ ಲಘು ಯುದ್ಧ ವಿಮಾನವು ಗಂಟೆಗೆ 1350 ಕಿಮೀ ವೇಗದಲ್ಲಿ ಹಾರಾಡುತ್ತದೆ. 40 ತೇಜಸ್ ಲಘು ಯುದ್ದ ವಿಮಾನದ ಪೈಕಿ ಭಾರತೀಯ ವಾಯುಪಡೆಗೆ 16 ವಿಮಾನಗಳನ್ನು ನೀಡಲಾಗಿದೆ. ಒಂದು ವಿಮಾನ ಮೌಲ್ಯ 300 ಕೋಟಿ ರೂ. ತೇಜಸ್ ಲಘು ಯುದ್ಧ ವಿಮಾನಕ್ಕೆ ಬಳಸುವ ಇಂಜಿನ್ ಅಮೇರಿಕಾ ದೇಶದ್ದು, ರಾಡಾರ್ ಇಸ್ರೇಲ್ ನದ್ದು, ಕಾರ್ಬನ್ ಫೈಬರ್‌ನಿಂದ ನಿರ್ಮಿಸಿದ ಲಘುಯುದ್ಧ ವಿಮಾನವು  12 ಟನ್ ತೂಕ ಹೊಂದಿದೆ. ವಿಮಾನದ ರೆಕ್ಕೆಯ ಉದ್ದ 8.2 ಮೀಟರ್, ಒಟ್ಟು ಎತ್ತರ 4.4 ಮೀಟರ್, R-73 ಏರ್ ಟು ಏರ್ ಕ್ಷಿಪಣಿ ಅಳವಡಿಸಬಹುದು ಯುದ್ಧಾಸ್ತ್ರಗಳನ್ನು ಈ ತೇಜಸ್‌ನಲ್ಲಿ ತೆಗೆದುಕೊಂಡು ಹೋಗಬಹುದಾಗಿದೆ.

First published: September 19, 2019, 8:30 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading