ಬೆಂಗಳೂರು(ಫೆ.04): ಇಂದು ಎಚ್ ಎ ಎಲ್ ಸಿಎಂಡಿ ಆರ್ ಮಾಧವನ್ ಅವರು ಪತ್ರಿಕಾ ಗೋಷ್ಠಿ ನಡೆಸಿ ಮಾಹಿತಿ ನೀಡಿದರು. ವಹಿವಾಟು ಹೆಚ್ಚಿಸಿಕೊಳ್ಳುವ ಉದ್ದೇಶ ಈ ಬಾರಿ ಪ್ರಮುಖವಾಗಿದೆ. ದೇಸೀ ತಯಾರಿಕೆಗೆ ಹೆಚ್ಚು ಒತ್ತು ಕೊಡಲಾಗಿದೆ. ಎಚ್ಎಎಲ್ ತನ್ನ ಡಿಸೈನ್ ಮತ್ತು ತಯಾರಿಕೆಗೆ ಪ್ರಾಮುಖ್ಯತೆ ನೀಡಿದೆ. ಏರೋ ಇಂಡಿಯಾದಲ್ಲಿ ಉತ್ತಮ ವಹಿವಾಟಿನ ಮಾತುಕತೆ ಆಗಿದೆ. ಎಚ್ ಎ ಎಲ್ ಉತ್ಪನ್ನಗಳಿಗೆ ಒಳ್ಳೆ ಬೇಡಿಕೆ ಬಂದಿದೆ. ಈಗಾಗಲೇ ಇರುವ ತಂತ್ರಜ್ಞಾನಗಳನ್ನು ಅಪ್ ಗ್ರೇಡ್ ಮಾಡಿದ್ದೇವೆ. ಕೋವಿಡ್ ನಿಂದ ಮೊದಲ ತ್ರೈಮಾಸಿಕ ಬಹಳ ದುರ್ಬಲವಾಗಿತ್ತು. ಈಗ ಉತ್ತಮವಾಗಿ ಸುಧಾರಿಸಿಕೊಂಡಿದ್ದೇವೆ ಎಂದರು.
ಎಚ್ಎಎಲ್ 16 ಎಲ್ಸಿಎ ಗಳ ಬೃಹತ್ ಆರ್ಡರ್ ಪಡೆದಿದೆ. ಇದು 36 ಸಾವಿರ ಕೋಟಿಯ ಆರ್ಡರ್ ಆಗಿದೆ. ಇನ್ನು ಎಚ್ಎಎಲ್ 36 ತಿಂಗಳ ನಂತರ ಮೊದಲ ಆರ್ಡರ್ ಡೆಲಿವರಿ ಮಾಡಿದೆ. ಮೊದಲು ಎರಡು ಎಲ್ ಸಿ ಎ, ನಂತರ 6 ವರ್ಷಗಳಲ್ಲಿ ಉಳಿದ ಎಲ್ ಸಿ ಎ ಡೆಲಿವರಿ ಆಗಲಿದೆ. ಗರಿಷ್ಠ 9 ವರ್ಷ ಸಮಯದೊಳಗೆ ಅಷ್ಟೂ ಡೆಲಿವರಿ ಆಗಲಿದೆ. 2024ರಲ್ಲಿ ಎಚ್ಎಎಲ್ ಮೊದಲನೇ ಆರ್ಡರ್ ನೀಡಲಿದೆ. ಕ್ಯಾಟ್ಸ್ ಗೆ ಪ್ರಾಥಮಿಕ ಹಂತದಲ್ಲಿ 400 ಕೋಟಿ ರೂಪಾಯಿ ಹೂಡಿಕೆ ಮಾಡಲಾಗಿದೆ ಎಂದು ಹೇಳಿದರು.
Gold Price Today: ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ಬೆಲೆ; ಬೆಳ್ಳಿ ದರದಲ್ಲಿ ಇಳಿಕೆ
ಎಚ್ಎಎಲ್ ಏರ್ ಫೋರ್ಸ್ ಗೆ 83 ತೇಜಸ್ ವಿಮಾನಗಳನ್ನು ನೀಡುತ್ತಿದೆ. ರಕ್ಷಣಾ ಇಲಾಖೆಯು ತೇಜಸ್ ರಫ್ತಿಗೆ ಅನುಮತಿ ನೀಡಿದೆ. ಸೌತ್ ಈಸ್ಟ್ ಏಷ್ಯಾ ದೇಶಗಳು ತೇಜಸ್ ಕೊಳ್ಳಲು ಆಸಕ್ತಿ ತೋರಿವೆ. ಮತ್ತೊಂದು ತೇಜಸ್ ತಯಾರಿಕಾ ಘಟಕ ಆರಂಭಿಸಿಲು ಎಚ್ ಎ ಎಲ್ ಚಿಂತನೆ ಮಾಡಿದೆ. ಎಚ್ ಎ ಎಲ್ ತಯಾರಿಸಿರುವ ಎಲ್ ಯು ಎಚ್ (ಲೈಟ್ ಯುಟಿಲಿಟಿ ಹೆಲಿಕಾಪ್ಟರ್) ಗಳ 12 ಹೆಲಿಕಾಪ್ಟರ್ ಗಳಿಗೆ ಆರ್ಡರ್ ಬಂದಿದೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ