ಕೃಷ್ಣಮಠಕ್ಕೆ ನಿರ್ಮಲಾ ಸೀತಾರಾಮನ್​​ ಭೇಟಿ: ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂದ ರಕ್ಷಣಾ ಸಚಿವೆ

ಉಡುಪಿ ಜೊತೆ ನನಗೆ ಒಂದನೇ ವರ್ಷದಿಂದ ನಂಟು ಇದೆ. ಕೊಲ್ಲೂರು, ಕೃಷ್ಣಮಠದ ಜೊತೆ ನಿರಂತರ ಸಂಪರ್ಕವಿದೆ. ಮಠದ ಬ್ರಹ್ಮಕಲಶೋತ್ಸವದಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಪಲಿಮಾರು ಶ್ರೀಗಳಿಗೆ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದರು.

ನಿರ್ಮಲಾ ಸೀತಾರಾಮನ್​​

ನಿರ್ಮಲಾ ಸೀತಾರಾಮನ್​​

  • News18
  • Last Updated :
  • Share this:
ಉಡುಪಿ,(ಮಾ.26): ಇಂದು ಮಧ್ಯಾಹ್ನ 12.15 ಕ್ಕೆ ಸಂಸದೆ ಶೋಭಾ ಕರಂದ್ಲಾಜೆ ನಾಮಪತ್ರ ಸಲ್ಲಿಸಲಿದ್ದಾರೆ. ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಪತ್ರ ಸಲ್ಲಿಸಲಿದ್ದು, ಶೋಭಾಗೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​ ಸಾಥ್​ ನೀಡಲಿದ್ದಾರೆ. ಹೀಗಾಗಿ ನಿನ್ನೆ ರಾತ್ರಿ ನಿರ್ಮಲಾ ಉಡುಪಿಗೆ ಆಗಮಿಸಿದ್ದಾರೆ.

ಇಂದು ಉಡುಪಿಯ ಕೃಷ್ಣಮಠದಲ್ಲಿ ಕೃಷ್ಣನ ದರ್ಶನ ಮಾಡಿ, ಪಲಿಮಾರು ಶ್ರೀಗಳ ಆಶೀರ್ವಾದ ಪಡೆದಿದ್ದಾರೆ. ಈ ವೇಳೆ ಪಲಿಮಾರು ಶ್ರೀಗಳ ಮುಂದೆ ರಕ್ಷಣಾ ಸಚಿವೆ ಮನವಿಯೊಂದನ್ನು ಇಟ್ಟಿದ್ದಾರೆ. 'ಆಧ್ಯಾತ್ಮಿಕ ಶ್ರೀಗಳಲ್ಲಿ ನನ್ನ ಲೌಕಿಕ ವಿನಂತಿ ಇದೆ. ಈ ಬಾರಿ ಕೃಷ್ಣನಲ್ಲಿ ದೇಶಕ್ಕಾಗಿ ಪ್ರಾರ್ಥಿಸಬೇಕು. ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗಬೇಕು. ದೇಶ ಸುರಕ್ಷಿತರ ಕೈಯಲ್ಲಿರುವಂತೆ ದೇವರಲ್ಲಿ ಪ್ರಾರ್ಥಿಸಿ, ಮತ್ತೆ ಬಿಜೆಪಿ ಸರ್ಕಾರ ರಚನೆಯಾಗುವಂತೆ ಆಶೀರ್ವದಿಸಿ' ಎಂದು ಕೃಷ್ಣಮಠದಲ್ಲಿ ಪರ್ಯಾಯ ಪಲಿಮಾರು ಸ್ವಾಮೀಜಿ ಬಳಿ ನಿರ್ಮಲಾ ಸೀತಾರಾಮನ್ ವಿನಂತಿ ಮಾಡಿಕೊಂಡರು.

ರಾತ್ರೋರಾತ್ರಿ ಅಖಾಡಕ್ಕಿಳಿದ ತೇಜಸ್ವಿ ಸೂರ್ಯ; ಬಿಜೆಪಿ ಆಯ್ಕೆ ಹಿಂದಿನ ಲೆಕ್ಕಾಚಾರವಾದರೂ ಏನು?

ಉಡುಪಿ ಜೊತೆ ನನಗೆ ಒಂದನೇ ವರ್ಷದಿಂದ ನಂಟು ಇದೆ. ಕೊಲ್ಲೂರು, ಕೃಷ್ಣಮಠದ ಜೊತೆ ನಿರಂತರ ಸಂಪರ್ಕವಿದೆ. ಮಠದ ಬ್ರಹ್ಮಕಲಶೋತ್ಸವದಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಪಲಿಮಾರು ಶ್ರೀಗಳಿಗೆ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದರು.

ವಿಂಗ್​ ಕಮಾಂಡರ್​ ಅಭಿನಂದನ್​ ಅವರನ್ನು ಉಡುಪಿಗೆ ಕಳುಹಿಸಿಕೊಡಿ, ಕೃಷ್ಣಮಠದಲ್ಲಿ ಅವರಿಗೆ ಗೌರವಾರ್ಪಣೆ ಮಾಡಬೇಕು. ನಮಗೆ ಅಭಿನಂದನ್​​ ಅವರ ಪರಾಕ್ರಮ ಬಹಳ ಮೆಚ್ಚುಗೆಯಾಗಿದೆ ಎಂದು ಪಲಿಮಾರು ಶ್ರೀಗಳು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​ ಬಳಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನಿರ್ಮಲಾ ಸೀತಾರಾಮನ್​, ಕಾನೂನಾತ್ಮಕ ಅಡೆ-ತಡೆ ಇಲ್ಲದಿದ್ದರೆ ಕಳುಹಿಸಿಕೊಡುತ್ತೇವೆ. ರಕ್ಷಣಾ ಇಲಾಖೆಗೆ ಒಂದು ಪತ್ರ ಬರೆಯಿರಿ ಎಂದರು.

First published: