ಕೊಡಗಿನ ವಿವಾದಕ್ಕೆ ಸಚಿವೆ ನಿರ್ಮಲಾ ಸೀತಾರಾಮನ್​ ಸ್ಪಷ್ಟನೆ; ಮುಂದುವರಿದ ರಾಜ್ಯ-ಕೇಂದ್ರ ಸಚಿವರ ಟೀಕಾಪ್ರಹಾರ

news18
Updated:August 25, 2018, 9:32 PM IST
ಕೊಡಗಿನ ವಿವಾದಕ್ಕೆ ಸಚಿವೆ ನಿರ್ಮಲಾ ಸೀತಾರಾಮನ್​ ಸ್ಪಷ್ಟನೆ; ಮುಂದುವರಿದ ರಾಜ್ಯ-ಕೇಂದ್ರ ಸಚಿವರ ಟೀಕಾಪ್ರಹಾರ
news18
Updated: August 25, 2018, 9:32 PM IST
ನ್ಯೂಸ್​18 ಕನ್ನಡ

ಬೆಂಗಳೂರು (ಆ. 25): ಕೊಡಗಿನ ನೈಸರ್ಗಿಕ ದುರಂತಕ್ಕಿಂತ ರಾಜಕೀಯ ಪ್ರತಿಷ್ಠೆಯೇ ಜಾಸ್ತಿಯಾಗಿದೆ. ಮಡಿಕೇರಿಯಲ್ಲಿ ರಕ್ಷಣಾಮಂತ್ರಿ ನಿರ್ಮಲಾ ಸೀತಾರಾಮನ್ ಮಾಡಿಕೊಂಡಿದ್ದ ಸಿಟ್ಟು ಈಗ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ನಿರ್ಮಲಾ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿರುವುದರಿಂದ ರಕ್ಷಣಾ ಸಚಿವರೇ ಸ್ಪಷ್ಟನೆ ಕೊಟ್ಟಿದ್ದಾರೆ. ಇತ್ತ ಸಚಿವ ಸಾರಾ ಮಹೇಶ್ ಮತ್ತೆ ಎದಿರೇಟು ನೀಡಿದ್ದಾರೆ.

ಸಚಿವ ಸಾ.ರಾ.ಮಹೇಶ್ ಅವರ ಟೀಕೆಯು ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಯ ಘನತೆಗೆ ಚ್ಯುತಿ ಉಂಟುಮಾಡುವಂತಹುದಾಗಿದೆ. ಹಾನಿಗೀಡಾದ ಪ್ರದೇಶಗಳ ಭೇಟಿ ನಂತರ ನೆರೆಯಿಂದ ತೀವ್ರ ತೊಂದರೆಗೊಳಗಾದ ನಿವೃತ್ತ ಸೈನಿಕರೊಂದಿಗೆ ರಕ್ಷಣಾ ಮಂತ್ರಿಗಳು ಸಂವಾದ ನಡೆಸುವಾಗ ಅದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಆಕ್ಷೇಪ ವ್ಯಕ್ತಪಡಿಸಿದರು.

ಅಧಿಕಾರಿಗಳೊಂದಿಗೆ ಸಭೆಯನ್ನು ಮೊದಲು ನಡೆಸಬೇಕು ಎನ್ನುವುದು ಅವರ ವಾದವಾಗಿತ್ತು. ತಕ್ಷಣ ಆ ಸಭೆ ನಿಲ್ಲಿಸಿ ಅಧಿಕಾರಿಗಳ ಸಭೆಗೆ ಹೋಗಬೇಕೆಂದು ಒತ್ತಾಯಿಸಿದರು. ಆಗ ಪರಿಸ್ಥಿತಿಯನ್ನು ಅರಿತ ರಕ್ಷಣಾ ಮಂತ್ರಿಗಳು ಮತ್ತಷ್ಟು ಗೊಂದಲ ಉಂಟಾಗುವುದನ್ನು ತಪ್ಪಿಸಲು ಆ ಸಭೆಯನ್ನು ಸ್ಥಗಿತಗೊಳಿಸಿ ಅಧಿಕಾರಿಗಳ ಸಭೆಗೆ ತೆರಳಿದರು. ರಕ್ಷಣಾ ಮಂತ್ರಿಗಳು ಪತ್ರಿಕಾಗೋಷ್ಠಿಯಲ್ಲಿ ಪರಿವಾರ ಎಂದು ಉಲ್ಲೇಖಿಸಿದ್ದನ್ನು ತಪ್ಪಾಗಿ ವ್ಯಾಖ್ಯಾನಿಸಿರುವುದು ಗಮನಕ್ಕೆ ಬಂದಿದೆ. ರಕ್ಷಣಾ ಇಲಾಖೆಯ 4 ವಿಭಾಗಗಳಲ್ಲಿ ನಿವೃತ್ತ ಸೈನಿಕರ ಕಲ್ಯಾಣವೂ ಒಂದು. ರಕ್ಷಣಾ ಇಲಾಖೆಯ ಪರಿವಾರದಲ್ಲಿ ನಿವೃತ್ತ ಸೈನಿಕರು ಸೇರಿರುತ್ತಾರೆ ಎಂದು ನಿರ್ಮಲಾ ಸೀತಾರಾಮನ್​ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಟ್ವಿಟ್ಟರ್​ನಲ್ಲಿ ಸ್ಪಷ್ಟನೆಯ ಪತ್ರವನ್ನು ಲಗತ್ತಿಸಿದ್ದಾರೆ.

 ಸಾ.ರಾ. ಮಹೇಶ್​ ಟೀಕೆ:
ಕೇಂದ್ರ ರಕ್ಷಣಾ ಸಚಿವರ ಸ್ಪಷ್ಟನೆಗೆ ಸಚಿವ ಸಾ.ರಾ. ಮಹೇಶ್ ಕೂಡ ತಿರುಗೇಟು ಕೊಟ್ಟಿದ್ದಾರೆ. ನಿರ್ಮಲಾ ಸೀತಾರಾಮನ್ ಸಿಟ್ಟು ಮಾಡಿಕೊಂಡಿದ್ದರೂ ಸುಮ್ಮನಿದ್ದೆ. ನಾನು ಸಿಟ್ಟು ಮಾಡಿಕೊಂಡಿದ್ದರೆ ಏನಾಗುತ್ತಿತ್ತು? ನಿರ್ಮಲಾ ಸೀತಾರಾಮನ್​ ಹಿಂಭಾಗಿನಿಂದ ರಾಜಕಾರಣಕ್ಕೆ ಬಂದವರು. ಹಾಗಾಗಿ ನಿರ್ಮಲಾ ಸೀತಾರಾಮನ್​ ಈ ರೀತಿ ಆಡುತ್ತಾರೆ ಎಂದು ಟೀಕಿಸಿದ್ದಾರೆ.
First published:August 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ