ಅನರ್ಹ ಶಾಸಕ ಪ್ರತಾಪ್​​​ ಗೌಡ ಪಾಟೀಲ್ ವಿರುದ್ದ ಮತ್ತೊಂದು ಪ್ರಕರಣ ದಾಖಲು

ಎಂಇಪಿ ಪಕ್ಷದಿಂದ ಸ್ಪರ್ಧಿಸಿದ್ದ ಬಾಬು ನಾಯಕ ಎಂಬುವವರು ಇದೇ ವಿಷಯಕ್ಕೆ ಹೈಕೋರ್ಟ್​​ ನಲ್ಲಿ ಪ್ರಕರಣ ದಾಖಲಿಸಿದ್ದಾರೆ. ಜನವರಿ 3 ರಂದು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದು, ಫೆಬ್ರವರಿ 3 ರಂದು ವಿಚಾರಣೆ ನಡೆಯಲಿದೆ.

news18-kannada
Updated:January 22, 2020, 12:40 PM IST
ಅನರ್ಹ ಶಾಸಕ ಪ್ರತಾಪ್​​​ ಗೌಡ ಪಾಟೀಲ್ ವಿರುದ್ದ ಮತ್ತೊಂದು ಪ್ರಕರಣ ದಾಖಲು
ಪ್ರತಾಪ್ ಗೌಡ ಪಾಟೀಲ್
  • Share this:
ರಾಯಚೂರು(ಜ.22) : ಸಮ್ಮಿಶ್ರ ಸರಕಾರದಲ್ಲಿ ರಾಜೀನಾಮೆ ನೀಡಿ ಹೊರಬಂದ  ಅನರ್ಹಗೊಂಡ ಶಾಸಕರ ಕ್ಷೇತ್ರದಲ್ಲಿ ಚುನಾವಣೆ ನಡೆಯಿತು, ಆದರೆ, ಅದರಲ್ಲಿ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಇರುವ ಮಸ್ಕಿ, ರಾಜರಾಜೇಶ್ವರಿ ನಗರದ ಉಪಚುನಾವಣೆ ನಡೆಯಲಿಲ್ಲ. ಇದಕ್ಕೆ ಅಭ್ಯರ್ಥಿಗಳು ಚುನಾವಣೆ ಅಕ್ರಮ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ 2018 ರಲ್ಲಿ ಕಾಂಗ್ರೆಸ್​​ ನಿಂದ ಸ್ಪರ್ಧಿಸಿದ್ದ ಪ್ರತಾಪಗೌಡ ಪಾಟೀಲ್ ಅಮೆರಿಕಾದಲ್ಲಿರುವ ಅವರ ಮಗಳು ಹಾಗೂ ಅಳಿಯ ಮತದಾನ ಮಾಡಿದ್ದಾರೆ, 500ಕ್ಕೂ ಅಧಿಕ ಮರಣ ಹೊಂದಿದವರ ಮತ ಹಾಕಿಸಿಕೊಂಡಿದ್ದಾರೆ ಎಂದು ಕಲಬುರ್ಗಿ ಹೈಕೋರ್ಟ್​​​ನಲ್ಲಿ ಅಂದು ಬಿಜೆಪಿಯಿಂದ ಸ್ಪರ್ಧಿಸಿದ್ದ ಬಸನಗೌಡ ತುರ್ವಿಹಾಳ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು, ಆದರೆ ಯಡಿಯೂರಪ್ಪ ಸಿಎಂ ಆಗುತ್ತಿದಂತೆ ಬಸನಗೌಡರ ಮೇಲೆ ಒತ್ತಡ ಹಾಕಿ ನ್ಯಾಯಾಲಯದಲ್ಲಿದ್ದ ಪ್ರಕರಣ ವಾಪಸ್ಸು ಪಡೆಯಲು ನ್ಯಾಯಲಯಕ್ಕೆ ಅರ್ಜಿ ಹಾಕಿಸಿದ್ದಾರೆ.

ಈ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿರುವಾಗಲೇ ಎಂಇಪಿ ಪಕ್ಷದಿಂದ ಸ್ಪರ್ಧಿಸಿದ್ದ ಬಾಬು ನಾಯಕ ಎಂಬುವವರು ಇದೇ ವಿಷಯಕ್ಕೆ ಹೈಕೋರ್ಟ್​​ ನಲ್ಲಿ ಪ್ರಕರಣ ದಾಖಲಿಸಿದ್ದಾರೆ. ಜನವರಿ 3 ರಂದು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದು, ಫೆಬ್ರವರಿ 3 ರಂದು ವಿಚಾರಣೆ ನಡೆಯಲಿದೆ.

ಇದನ್ನೂ ಓದಿ : ಮಂಗಳೂರು ಬಾಂಬ್ ಪ್ರಕರಣದ ನಂತರ ರಾಜ್ಯದಲ್ಲಿ ಹೈ ಅಲರ್ಟ್ - ಐತಿಹಾಸಿಕ ಗೋಳಗುಮ್ಮಟಕ್ಕೆ ನಾಮಕಾವಸ್ತೆ ಭದ್ರತೆ

ಈ ಮಧ್ಯೆ ನ್ಯೂಸ್ 18 ನೊಂದಿಗೆ ಮಾತನಾಡಿದ ಬಾಬು ನಾಯಕ ಬಸನಗೌಡ ನಾನು ಸೇರಿಯೇ ಪ್ರಕರಣ ದಾಖಲಿಸಿದ್ದವು, ಆದರೆ ಬಸನಗೌಡರಿಗೆ ಬಿಜೆಪಿಯಿಂದ ತುಂಗಭದ್ರಾ ಕಾಡಾ ಹಾಗೂ 100 ಕೋಟಿ ರೂಪಾಯಿ ಅನುದಾನ ನೀಡಲು, ಪ್ರತಾಪ್​​​ ಗೌಡ ವೈಯಕ್ತಿಕ ಹಣ ಪಡೆದಿದ್ದಾರೆ. ಅಲ್ಲದೆ ಅವರು ಸಚಿವರಾದ ನಂತರ ಅಭಿವೃದ್ಧಿ ಕಾಮಗಾರಿಗಳಲ್ಲಿ ಅರ್ಧದಷ್ಟು ಪಾಲು ಎಂಬ ಮಾತುಕತೆಯಾಗಿದೆ ಎಂದು ಆರೋಪಿಸಿದ್ದಾರೆ.

ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುತ್ತಿರುವದರಿಂದ ಮಸ್ಕಿ ವಿಧಾನಸಭಾ ಚುನಾವಣೆಯು ಇನ್ನಷ್ಟು ವಿಳಂಭವಾಗಲಿದೆ ಎನ್ನಲಾಗಿದೆ.
First published:January 22, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading