• Home
  • »
  • News
  • »
  • state
  • »
  • Private Bus: ಹಬ್ಬದ ನೆಪದಲ್ಲಿ ಪ್ರಯಾಣಿಕರಿಂದ ಹಣ ವಸೂಲಿಗಿಳಿದ್ರೆ ಲೈಸನ್ಸ್ ರದ್ದು; ಸಚಿವ ಶ್ರೀರಾಮುಲು ಖಡಕ್ ಎಚ್ಚರಿಕೆ

Private Bus: ಹಬ್ಬದ ನೆಪದಲ್ಲಿ ಪ್ರಯಾಣಿಕರಿಂದ ಹಣ ವಸೂಲಿಗಿಳಿದ್ರೆ ಲೈಸನ್ಸ್ ರದ್ದು; ಸಚಿವ ಶ್ರೀರಾಮುಲು ಖಡಕ್ ಎಚ್ಚರಿಕೆ

ಸಚಿವ ಶ್ರೀರಾಮುಲು

ಸಚಿವ ಶ್ರೀರಾಮುಲು

ದೀಪಾವಳಿ ಹಬ್ಬಕ್ಕೆ ಸಾಲು ಸಾಲು ರಜೆಗಳು ಇರುವ ಹಿನ್ನೆಲೆ ಸಾಕಷ್ಟು ಜನರು ಊರಿನತ್ತ ಹೋಗುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ಬಸ್ಸುಗಳ ಮಾಲೀಕರು ಬಸ್ಸು ಟಿಕೆಟ್ ದರವನ್ನು ಬೇಕಾಬಿಟ್ಟಿ ಹೆಚ್ಚಿಸಿದ್ದಾರೆ.

  • Share this:

Bengaluru private bus ticket price hike for deepavali
ರಜೆ ಹಿನ್ನೆಲೆ ಹಬ್ಬಕ್ಕೆಂದು ಜನರು ತಮ್ಮ ಊರುಗಳತ್ತ ತೆರಳಿದ್ದಾರೆ. ಆದ್ರೆ ಊರಿಗೆ ಹೋಗಲು ಬಂದವರು ಬಸ್ ನಿಲ್ದಾಣಗಳಲ್ಲಿ ಟಿಕೆಟ್ ರೇಟ್ ಕೇಳಿ ಶಾಕ್ ಆಗಿದ್ದಾರೆ.


Private bus ticket fare hike Bus rush and traffic jam in Bengaluru pvn
ಎರಡು ದಿನದ ಹಿಂದೆ 600 -700 ಇದ್ದಂತಹ ಟಿಕೆಟ್ ದರ ಈಗ ಡಬಲ್ ಆಗಿದೆ. ಟ್ರಾವೆಲ್ಸ್ ಮಾಲೀಕರು 2000 ದಿಂದ 5000 ರೂಪಾಯಿ ಹೆಚ್ಚಳ ಮಾಡಿದ್ದಾರೆ.


ಹುಬ್ಬಳ್ಳಿ – ಬೆಳಗಾವಿ ಟಿಕೆಟ್ ದರ 5 ಸಾವಿರಕ್ಕೆ ಏರಿಸಲಾಗಿದೆ. ಖಾಸಗಿ ಬಸ್ ಮಾಲೀಕರು ಹಬ್ಬದ ನೆಪದಲ್ಲಿ ಹಗಲು ದರೋಡೆಗೆ ಇಳಿದಿದ್ದಾರೆ ಪ್ರಯಾಣಿಕರು ಆಕ್ರೋಶ ಹೊರ ಹಾಕಿದ್ದಾರೆ.


minister sriramulu targets congress over Agnipath protest
ಹಬ್ಬದ ನೆಪದಲ್ಲಿ ಖಾಸಗಿ ಬಸ್ಗಳು ಸೇರಿದಂತೆ ಇತರೆ ಪ್ರಯಾಣಿಕರ ವಾಹನಗಳು ಪ್ರಯಾಣಿಕರಿಂದ ಹೆಚ್ಚು ಹಣ ವಸೂಲಿ ಮಾಡಿದರೆ ಅವರ ಪರವಾನಗಿ ರದ್ದುಪಡಿಸಲಾಗುವುದು ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಎಚ್ಚರಿಕೆ ನೀಡಿದರು.


[caption id="attachment_870390" align="alignnone" width="525"] ಖಾಸಗಿಯವರು ಯಾವುದೇ ಕಾರಣಕ್ಕೂ ಹೆಚ್ಚಿಗೆ ಪ್ರಯಾಣ ಶುಲ್ಕ ಪಡೆಯುವಂತಿಲ್ಲ. ಇದರ ಮೇಲೆ ನಿಗಾ ಇಡಲು ಟಾಸ್ಕ್​ ಪೋರ್ಸ್ ರಚಿಸಲಾಗಿದೆ ಎಂದು ಹೇಳಿದ್ದಾರೆ.

[/caption]


BMTC Driver Cum Conductor Suicide in Raichur mrq
ನವೆಂಬರ್ 20ರಂದು ಬಳ್ಳಾರಿಯಲ್ಲಿ ರಾಜ್ಯ ಬಿಜೆಪಿ ಎಸ್ಟಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಕಲ್ಯಾಣ ಕರ್ನಾಟಕದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದವರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಬಳ್ಳಾರಿಯಲ್ಲಿ ಸಮಾವೇಶ ಆಯೋಜಿಸಲಾಗಿದೆ.


transport minister sriramulu said dk shivakumar is brand ambassador to corruption pvn
ಪಕ್ಷದ ರಾಷ್ಟ್ರೀಯ ನಾಯಕರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಾಲ್ಗೊಳ್ಳುವರು. ಸಮಾವೇಶದಿಂದ ಬಿಜೆಪಿಗೆ ರಾಜಕೀಯವಾಗಿ ಅನುಕೂಲವಾಗಲಿದೆ ಎಂದು ತಿಳಿಸಿದರು.

Published by:ಪಾವನ ಎಚ್ ಎಸ್
First published: